ದಾಂಪತ್ಯ ಜೀವನಕ್ಕೆ ಕಾಲಿಟ್ಟ ನನ್ನರಸಿ ರಾಧೆ ಧಾರಾವಾಹಿಯ ನಟಿ.. ಹುಡುಗ ಯಾರು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಮದುವೆ ಸಮಾರಂಭಗಳು ನೆರವೇರುತ್ತಿದ್ದು ಸಧ್ಯ ಇದೀಗ ನನ್ನರಸಿ ಧಾರಾವಾಹಿಯ ನಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು ಸಧ್ಯ ಕನ್ನಡದ ಟಾಪ್ ಹತ್ತು ಧಾರಾವಾಹಿಗಳಲ್ಲಿ ಒಂದಾಗಿರುವ ನನ್ನರಸಿ ರಾಧೆ ಕಳೆದ ಒಂದೂವರೆ ವರ್ಷದಿಂದ ಪ್ರಸಾರವಾಗುತ್ತಿದ್ದು ತಿರುವಿನ ಘಟ್ಟದಲ್ಲಿ ಬಂದು ನಿಂತಿದೆ.. ಇತ್ತ ಇಂಚರ ಇಹಲೋಕ ತ್ಯಜಿಸಿದಳೆಂದು ಕಳೆದ ಒಂದು ವಾರದಿಂದ ತೋರಿಸಿದ್ದು ಇನ್ನೇನು ನಾಯಕಿಯೇ ಇಲ್ಲದ ಮೇಲೆ ಧಾರಾವಾಹಿ ಮುಕ್ತಾಯ ಎಂದು ಕೊಂಡಿದ್ದ ಪ್ರೇಕ್ಷಕ ಮಹಾಶಯನಿಗೆ ಇದೀಗ ಮತ್ತೆ ಇಂಚರ ಬದುಕಿರುವುದಾಗಿ ತೋರಿಸುತ್ತಿದ್ದು ಈ ಕಾಲಕ್ಕೆ ಧಾರಾವಾಹಿ ಮುಗಿಯುವುದಿಲ್ಲವೆಂದು ಖಚಿತವಾಗಿದ್ದು ಎಲ್ಲಾ ಧಾರಾವಾಹಿಗಳಂತೆ ಈ ಧಾರಾವಾಹಿಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಸಹ ಆಗಾಗ ಆಗುತ್ತಿರುತ್ತದೆ..

ಇನ್ನು ಇದನ್ನೆಲ್ಲಾ ಹೊರತುಪಡಿಸಿ ನೋಡುವುದಾದರೆ ನನ್ನರಸಿ ರಾಧೆ ಧಾರಾವಾಹಿಯ ಕಲಾವಿದರು ಈ ಧಾರಾವಾಹಿ ಮೂಲಕ ಸಾಕಷ್ಟು ಪ್ರಖ್ಯಾತಿ ಪಡೆದರು.. ನಟ ನಟಿ‌ ಮಾತ್ರವಲ್ಲದೇ ಸಹ ಕಲಾವಿದರೂ ಸಹ ಈ ಧಾರಾವಾಹಿಯ ಮೂಲಕ ಯಶಸ್ಸು ಪಡೆದಿದ್ದು ಜನರು ಧಾರಾವಾಹಿ ಹೆಸರಿನ ಮೂಲಕ ಗುರುತಿಸುವುದು ವಿಶೇಷ.. ಇನ್ನು ಇದೀಗ ಇದೇ ಧಾರಾವಾಹಿಯ ನಟಿ ವಿಹಾರಿಕಾ ಅವರು ನೂತನ ಜೀವನಕ್ಕೆ ಕಾಲಿಟ್ಟಿದ್ದು ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ನಿನ್ನೆ ಇವರ ಮದುವೆ ಸಮಾರಂಭ ನೆರವೇರಿದೆ.. ಹೌದು ವಿಹಾರಿಕಾ ಕೈಹಿಡಿದ ಹುಡುಗನೂ ಸಹ ನಟನಾಗಿದ್ದು ಇದೀಗ ತಾರಾ ಜೋಡಿ ಒಂದಾಗಿದೆ..

ಅದರಲ್ಲೂ ಇಬ್ಬರೂ ಸಹ ಕಲಾವಿದರಾದರೂ ಇಬ್ಬರು ಮದುವೆಯಾಗಿದ್ದು ಮಾತ್ರ ಟಿಂಡರ್ ಎನ್ನುವ ಮ್ಯಾಟ್ರಿಮೋನಿ ಸೈಟ್ ಮೂಲಕ.. ಹೌದು ಇತ್ತ ವಿಹಾರಿಕಾಗೆ ಕಳೆದ ನಾಲ್ಕು ವರ್ಷದಿಂದ ಮನೆಯಲ್ಲಿ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದ ಕಾರಣ ಸ್ವತಃ ವಿಹಾರಿಕಾ ಅವರೇ ಟಿಂಡರ್ ನಲ್ಲಿ ತಮ್ಮ ಪ್ರೊಫೈಲ್ ಹಾಕಿದ್ದು ಸೀರಿಯಸ್ ರಿಲೇಶನ್ ಶಿಪ್ ಬೇಕು ಎಂದು ಬರೆದುಕೊಂಡಿದ್ದರು.. ಇತ್ತ ಕಿರಣ್ ಬಗಾಡೆ ಸಹ ಹುಡುಗಿ ಹುಡುಕುತ್ತಿದ್ದು ಅವರೂ ಸಹ ಟಿಂದರ್ ನಲ್ಲಿ ಸೀರಿಯಸ್ ರಿಲೇಶನ್ ಶಿಪ್ ಬೇಕೆಂದು ಹಾಕಿಕೊಂಡಿದ್ದರು.. ನಂತರ ಇಬ್ಬರೂ ಪರಸ್ಪರ ಮೆಸೆಜ್ ಮಾಡಿಕೊಂಡು ಮಾತನಾಡಿ ನಂತರ ಮದುವೆ ವರೆಗೂ ಬಂದು ನಿಂತಿದ್ದಾರೆ.. ಇತ್ತ ಎರಡೂ ಕುಟುಂಬವೂ ಸಹ ಈ ಮದುವೆಗೆ ಸಮ್ಮತಿಸಿ ನಿನ್ನೆ ಈ ತಾರಾ ಜೋಡಿಯ ಮದುವೆ ಸಮಾರಂಭ ನೆರವೇರಿದೆ..

ನನ್ನರಸಿ ರಾಧೆ ಧಾರಾವಾಹಿಯಲ್ಲಿ ಶಿವಾನಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಹಾರಿಕ ಜಿಮ್ ಟ್ರೇನರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.. ಇನ್ನು ಇವರ ಕೈ ಹಿಡಿದ ಕಿರಣ್ ಬಗಾಡೆ ಯಾರು.. ಕಿರಣ್ ಸಹ ನಟನಾಗಿದ್ದು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.. ಹೌದು ಕೆಲ ಧಾರಾವಾಹಿಗಳು ಹಾಗೂ ಸಧ್ಯ ಮಾರ್ಟಿನ್ ರಾಮಾರ್ಜುನ ಬಿಲ್ ಗೇಟ್ಸ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಸಹ ನಟನಾಗಿ ಅಭಿನಯಿಸುತ್ತಿದ್ದಾರೆ.. ಇದರ ಜೊತೆಗೆ ಖಾಸಗಿ ಕಂಪನಿಯೊಂದರಲ್ಲಿಯೂ ಕಿರಣ್ ಕೆಲಸ ಮಾಡುತ್ತಿದ್ದಾರೆ.. ಇನ್ನು ಕಿರಣ್ ಬಗಾಡೆ ಮೂಲತಃ ಕೊಪ್ಪಳದವರಾಗಿದ್ದು ಇವರ ಸಹೋದರ ಕೂಡ ನಿರ್ದೇಶಕರಾಗಿದ್ದು ಸಿನಿಮಾ ಕುಟುಂಬದವರೇ ಆಗಿದ್ದಾರೆ..

ಇನ್ನು ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ನಟಿ ವಿಹಾರಿಕಾ ಇಬ್ಬರೂ ಒಂದೇ ರಂಗದವರಾಗಿದ್ದು ಮದುವೆಯಾಗಿದ್ದು ಬಹಳ ಖುಷಿ ಕೊಟ್ಟಿದೆ.. ಮದುವೆಯ ನಂತರವೂ ನಟನೆಯನ್ನು ಮುಂದುವರೆಸುವೆ.. ನನಗೆ ಟಿಂಡರ್ ಮೂಲಕ ಕಿರಣ್ ಸಿಕ್ಕರು.. ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ.. ಕಂಕಣಬಲ ಯಾವಾಗ ಕೂಡಿ ಬರುತ್ತದೆ ಹೇಳಲಾಗದು.. ಸಧ್ಯ ನಮ್ಮಿಬ್ಬರ ಮದುವೆ ನಡೆದಿದ್ದು ಎರಡೂ ಕುಟುಂಬ ಸಂತೋಷವಾಗಿದೆ ಎಂದಿದ್ದಾರೆ.. ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದ್ದು ಸಧ್ಯ ನಿನ್ನೆ ಮದುವೆ ಸಮಾರಂಭ ನೆರವೇರಿದ್ದು ವಿಹಾರಿಕ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..