ದುನಿಯಾ ವಿಜಯ್‌ ಹಾಗೂ ಎರಡನೇ ಪತ್ನಿ ಕೀರ್ತಿ ದಾಂಪತ್ಯ ಜೀವನದಲ್ಲಿ ಬಿರುಕು.. ಕಾರಣವೇನು ಗೊತ್ತಾ..

0 views

ದುನಿಯಾ ವಿಜಯ್‌ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟು ಒಂದು ಹಂತಕ್ಕೆ ಬಂದು ನಿಂತ ಕಲಾವಿದ ಎಂದರೆ ತಪ್ಪಾಗಲಾರದು.. ದುನಿಯಾ ಸಿನಿಮಾ ಮೂಲಕ ಸ್ಟಾರ್‌ ಆದ ದುನಿಯಾ ವಿಜಯ್‌ ಅವರು ಸಾಕಷ್ಟು ಹಿಟ್‌ ಸಿನಿಮಾಗಳನ್ನು ನೀಡಿದರು.. ನಂತರದ ದಿನಗಳಲ್ಲಿ ಕೆಲವೊಂದು ಸೋಲುಗಳನ್ನು ಕಂಡ ನಂತರ ತಮ್ಮದೇ ನಿರ್ದೇಶನದ ಸಲಗ ಸಿನಿಮಾದ ಮೂಲಕ ಭರ್ಜರಿಯಾಗಿ ಕಂಬ್ಯಾಕ್‌ ಮಾಡಿದರು.. ಇನ್ನು ಇತ್ತ ದುನಿಯಾ ವಿಜಯ್‌ ಅವರು ಒಂದು ಸಮಯದಲ್ಲಿ ತಮ್ಮ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ತಮ್ಮ ವ್ಯಯಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸುದ್ದಿಯಾಗಿದ್ದೂ ಉಂಟು.. ಮೊದಲ ಪತ್ನಿ ನಾಗರತ್ನ ಅವರು ಮಾದ್ಯಮದ ಮುಂದೆ ಬಂದು ಕೀರ್ತಿ ಹಾಗೂ ವಿಜಯ್‌ ಅವರ ವಿಚಾರ ತಿಳಿಸಿ ಕಣ್ಣೀರಿಟ್ಟಿದ್ದರು.. ಇನ್ನು ದುನಿಯಾ ವಿಜಯ್‌ ಅವರ ಹೆಸರು ಈ ಹಿಂದೆ ಕೆಲವೊಂದು ನಟಿಯರ ಹೆಸರಿನ ಜೊತೆ ಕೇಳಿ ಬಂದಿತ್ತಾದರೂ 2014 ರಿಂದ ಕೀರ್ತಿ ಅವರ ಜೊತೆಗೆ ದುನಿಯಾ ವಿಜಯು ಅವರು ವಾಸ ಮಾಡುತ್ತಿದ್ದರು.. ಕೀರ್ತಿ ಅವರನ್ನು ಎರಡನೇ ಮದುವೆಯಾಗಿರುವುದಾಗಿಯೂ ಕೀರ್ತಿ ಅವರು ಹೇಳಿಕೊಂಡಿದ್ದರು..

ಇನ್ನು ಇತ್ತ ನಾಗರತ್ನ ಅವರಿಗೂ ಸಹ ಒಂದು ಮನೆಯನ್ನು ನೀಡಿದ್ದು ಅವರು ಮಕ್ಕಳೊಂದಿಗೆ ಬೇರೆ ವಾಸ ಮಾಡುತ್ತಿದ್ದರು.. ಆದರೆ ಮಕ್ಕಳು ಮಾತ್ರ ಯಾವುದೇ ಕಟ್ಟಿಲ್ಲದೇ ಅಪ್ಪನ ಜೊತೆ ಬೇಕೆಂದರೆ ಅಪ್ಪನ ಮನೆಯಲ್ಲಿ ಹಾಗೂ ಅಮ್ಮನ ಜೊತೆ ಬೇಕೆಂದರೆ ಅಮ್ಮನ ಮನೆಯಲ್ಲಿ ವಾಸವಿದ್ದರು.. ಇನ್ನು ಮಗ ಸಾಮ್ರಾಟ್‌ ಕೂಟ ಅಪ್ಪನ ಜೊತೆಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಗೂ ಸಹ ಕಾಲಿಡುವ ತಯಾರಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ದುನಿಯಾ ವಿಜಯ್‌ ಅವರ ಎರಡನೇ ಪತ್ನಿ ಕೀರ್ತಿ ಅವರು ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಆಕ್ಟೀವ್‌ ಇದ್ದು ವಿಜಯ್‌ ಅವರ ಜೊತೆಗಿನ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಿದ್ದರು.. ವಿಜಯ್‌ ಅವರ ಸಿನಿಮಾ ವಿಚಾರದ ಅಪ್ಡೇಟ್‌ ಗಳನ್ನು ಕೂಡ ಕೀರ್ತಿ ಅವರು ನೀಡುತ್ತಿದ್ದರು.. ಆದರೆ ಈಗ ಪ್ರೀತಿಸಿ ಜೊತೆಗಿದ್ದ ಕೀರ್ತಿ ಹಾಗೂ ವಿಜಯ್‌ ಅವರು ದೂರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಸಾಕಷ್ಟು ಕಾರಣಗಲೂ ಇದೆ..

ಹೌದು ಕೀರ್ತಿ ಅವರು ಮೂಲತಃ ಮಾಡೆಲ್‌ ಆಗಿದ್ದು ಐಟಿ ಕಂಪನಿಯಲ್ಲಿ ಕೆಲಸದಲ್ಲಿಯೂ ಸಹ ಇದ್ದರು.. ನಂತರ ಚಿತ್ರರಂಗಕ್ಕೆ ಕಾಲಿಟ್ಟ ಕೀರ್ತಿ ಒಂದಿಷು ಸಿನಿಮಾಗಳನ್ನು ಸಹ ಮಾಡಿ ನಂತರ ವಿಜಯ್‌ ಅವರ ಜೊತೆ ಪ್ರೀತಿಸಿ ಮದುವೆಯಾಗಿ ಚಿತ್ರರಂಗದಿಂದ ದೂರ ಸರಿದರು.. ಆದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ರೀಲ್ಸ್‌ ಗಳು ವೀಡಿಯೋಗಳು.. ಹೀಗೆ ತಮ್ಮ ಹಾಗೂ ವಿಜಯ್‌ ಅವರ ಅಭಿಮಾನಿಗಳ ಜೊತೆ ಸಾಕಷ್ಟು ಒಡನಾಟದಲ್ಲಿದ್ದರು.. ಆದರೆ ಈಗ ಇದ್ದಕ್ಕಿದ್ದ ಹಾಗೆ ವಿಜಯ್‌ ಅವರಿಂದ ಕೀರ್ತಿ ಅವರು ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ.. ಇಒದಕ್ಕೆ ಮುಖ್ಯ ಕಾರಣ ದುನಿಯಾ ವಿಜಯ್‌ ಅವರ ಜೊತೆ ಇರಲು ಶುರು ಮಾಡಿದ ನಂತರ ಕೀರ್ತಿ ವಿಜಯ್‌ ಅಫಿಷಿಯಲ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರನ್ನು ಬರೆದುಕೊಂಡಿದ್ದರು.. ಆದರೆ ಈಗ ಇದ್ದಕಿದ್ದ ಹಾಗೆ ವಿಜಯ್‌ ಅವರ ಹೆಸರನ್ನು ತೆಗೆದು ಹಾಕಿದ್ದು ಕೀರ್ತಿ ಪಟ್ಟಾಡಿ ಎಂದು ಬದಲಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ವಿಜಯ್‌ ಅವರ ಫೋಟೋಗಳನ್ನು ಡಿಲೀಟ್‌ ಮಾಡಿದ್ದಾರೆ..

ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಕೀರ್ತರಿ ಅವರು ವಿಜಯ್‌ ರಿಂದ ದೂರಾಗಿದ್ದಾರೆ ಎಂದು.. ಬಾಸ್‌ ಜೊತೆಗಿನ ಫೋಟೋ ಹಾಕಿ ಎಂದು ಕೇಳಿಕೊಂಡಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೀರ್ತಿ ಅವರು ಹಾಕುವೆ ಎಂದು ಸುಮ್ಮನಾಗುತ್ತಿದ್ದಾರೆ.. ಇನ್ನು ಇತ್ತ ದುನಿಯಾ ವಿಜಯ್‌ ಅವರೂ ಕೂಡ ಮೊದಲೆಲ್ಲಾ ಸಿನಿಮಾ ಕಾರ್ಯಕ್ರಮವಾಗಲಿ ಅಥವಾ ಬೇರೆ ಕಲಾರ್ಯಕ್ರಮವಾಗಲಿ ಕೀರ್ತಿ ಅವರ ಜೊತೆಯೇ ತೆರಳುತ್ತಿದ್ದರು.. ಆದರೆ ಈಗ ತಮ್ಮ ಹೆಣ್ಣು ಮಕ್ಕಳು ಹಾಗೂ ಮಗ ಸಾಮ್ರಾಟ್‌ ಜೊತೆಯೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಕೀರ್ತಿ ಅವರಿಂದ ವಿಜಯ್‌ ಅಂತರ ಕಾಯ್ದುಕೊಂಡಿರೋದು ನಿಜ ಎನ್ನವಂತೆ ಮಾಡಿದೆ..