ದುನಿಯಾ ವಿಜಯ್ ವಿಚಾರದಲ್ಲಿ ಪತ್ನಿ ಕೀರ್ತಿ ತೆಗೆದುಕೊಂಡ ನಿರ್ಧಾರ ನೋಡಿ..

0 views

ದುನಿಯಾ ವಿಜಯ್ ಸಧ್ಯ ಸಲಗ ಸಿನಿಮಾ ಸಕ್ಸಸ್ ನ ಸಂತೋಷದಲ್ಲಿದ್ದು ಇದೀಗ ತೆಲುಗು ಸಿನಿಮಾ ಇಂಡಸ್ಟ್ರಿಗೂ ಕಾಲಿಟ್ಟಿದ್ದಾರೆ.. ಹೌದು ಸಲಗ ಸಿನಿಮಾ ಯಶಸ್ಸಿನ ನಂತರ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ನಿಂದ ಅವಕಾಶ ಒದಗಿ ಬಂದಿದ್ದು ಬಾಲಯ್ಯ ಅವರ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದು ಈ ಮೂಲಕ ಮೊದಲ ಬಾರಿಗೆ ತೆಲುಗು ಸಿನಿಮಾ ಇಂಡಸ್ಟ್ರಿಗೆ ದುನಿಯಾ ವಿಜಯ್ ಅವರು ಕಾಲಿಡುತ್ತಿದ್ದು ಅದಕ್ಕೆ ಬೇಕಾದ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆನ್ನಬಹುದು.. ಆದರೆ ಇತ್ತ ಈ ನಡುವೆ ದುನಿಯಾ ವಿಜಯ್ ಅವರ ಎರಡನೇ ಪತ್ನಿ ಕೀರ್ತಿ ಅವರು ನಿರ್ಧಾರವೊಂದನ್ನು ತೆಗೆದುಕೊಂಡು ಆ ಕೆಲಸಗಳಲ್ಲಿಯೇ ಬ್ಯುಸಿ ಆಗಿದ್ದಾರೆ..

ಹೌದು ಎಲ್ಲರಿಗೂ ತಿಳಿದಿರುವಂತೆ ನಾಗರತ್ನ ಹಾಗೂ ದುನಿಯಾ ವಿಜಯ್ ಅವರ ನಡುವೆ ನಡೆದ ಕೆಲ ಘಟನೆಗಳ ನಂತರ ಕೀರ್ತಿ ಅವರು ವಿಜಯ್ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದ್ದು ಇಬ್ಬರೂ ಕೆಲ ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸುವ ನಿರ್ಧಾರ ಮಾಡಿದ್ದು ವಿಜಯ್ ಅವರ ಮಗ ಸಾಮ್ರಾಟ್ ಸಹ ಕೀರ್ತಿ ಅವರೊಟ್ಟಿಗೆಯೇ ಇದ್ದು ಮಗನಂತೆ ನೋಡಿಕೊಳ್ಳುತ್ತಿರುವುದು ಒಳ್ಳೆಯ ವಿಚಾರ.. ಇನ್ನು ಕೆಲ ತಿಂಗಳ ಹಿಂದಷ್ಟೇ ಕಳೆದ ವರ್ಷ ದುನಿಯಾ ವಿಜಯ್ ಅವರು ತಮ್ಮ ತಂದೆ ತಾಯಿ ಇಬ್ಬರನ್ನೂ ಸಹ ಕಳೆದುಕೊಳ್ಳುವಂತಾಯಿತು.. ಅದಕ್ಕೂ ಮುನ್ನ ಬಹಳಷ್ಟು ಅನಾರೋಗ್ಯದಿಂದ ಬಳಲುತ್ತಿದ್ದ ದುನಿಯಾ ವಿಜಯ್ ಅವರ ತಂದೆ ತಾಯಿ ಇಬ್ಬರ ಆರೈಕೆಯನ್ನೂ ಸಹ ಕೀರ್ತಿ ಅವರು ಮಾಡಿದ್ದು ಈ ಬಗ್ಗೆ ದುನಿಯಾ ವಿಜಯ್ ಅವರು ಹಿಂದೊಮ್ಮೆ ಹೇಳಿಕೊಂಡಿದ್ದೂ ಉಂಟು..

ಇನ್ನು ವಿಜಯ್ ಅವರ ಅಪ್ಪ ಅಮ್ಮನ ಕೊನೆ ಕಾರ್ಯಗಳ ವೇಳೆ ಹಾಗೂ ಸಮಾಧಿಯ ಬಳಿಯ ಪೂಜೆಯ ವೇಳೆ ಎಲ್ಲಾ ಸಮಯದಲ್ಲಿಯೂ ಕೀರ್ತಿ ವಿಜಯ್ ಅವರ ಜೊತೆಯೇ ಇದ್ದು ಎಲ್ಲವನ್ನು ನೆರವೇರಿಸಿದ್ದರು..ಇನ್ನು ಇತ್ತ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲ ವರ್ಷಗಳಿಂದ ಸಾಕಷ್ಟು ಸಿನಿಮಾ ಮಾಡಿದರೂ ಸಹ ದುನಿಯಾ ವಿಜಯ್ ಅವರು ನಿರೀಕ್ಷೆ ಮಾಡಿದಂತಹ ದೊಡ್ಡ ಮಟ್ಟದ ಯಶಸ್ಸನ್ನು ಯಾವ ಸಿನಿಮಾನೂ ನೀಡಿರಲಿಲ್ಲ.. ಇತ್ತ ನಿರ್ದೇಶನದಲ್ಲಿಯೂ ಆಸಕ್ತಿ ಇದ್ದ ದುನಿಯಾ ವಿಜಯ್ ಸಲಗ ಸಿನಿಮಾ ನಿರ್ದೇಶನ ಮಾಡುವ ನಿರ್ಧಾರ ಮಾಡಿ ಯಶಸ್ವಿಯೂ ಆದರು.. ಸಲಗ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು..

ಇತ್ತ ಸಲಗಗಾಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ್ದ ವಿಜಯ್ ಸಲಗ ಯಶಸ್ಸು ಕಂಡು ಸಂತೋಷ ಪಟ್ಟರು.. ಇತ್ತ ವಿಜಯ್ ಅವರ ಪತ್ನಿ ಕೀರ್ತಿ ವಿಜಯ್ ಅವರೇ ಸಾಕಷ್ಟು ಬಾರಿ ಮಾದ್ಯಮದ ಮುಂದೆ ಬಂದು ಸಲಗ ಸಿನಿಮಾದ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು‌.‌ ವಿಜಯ್ ಅವರ ತಾಯಿ ಹೋಗುವಾಗ ಮಗನ ಎಲ್ಲಾ ಕಷ್ಟಗಳನ್ನು ತೆಗೆದುಕೊಂಡು ಹೋಗಿದ್ದಾರೆ.. ಮುಂದೇನಿದ್ದರೂ ಯಶಸ್ಸಿನ ಹಾದಿಯಲ್ಲಿ ಸಾಗುವುದಷ್ಟೇ ಎಂದಿದ್ದರು.. ಅವರ ಮಾತಿನಂತೆಯೇ ಇತ್ತ ಸಲಗ ಸಿನಿಮಾ ದುನಿಯಾ ವಿಜಯ್ ಅವರಿಗೆ ಬೇರೆಯದ್ದೇ ದಾರಿ ತೋರಿತು.. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಸಹ ಸಲಗ ಸಿನಿಮಾ ಕಾರಣದಿಂದ ಅವಕಾಶಗಳು ಸಿಗಲಾರಂಭಿಸಿದವು‌. ತಮ್ಮ ಸಂಪೂರ್ಣ ಲುಕ್ ಬದಲಿಸಿಕೊಂಡ ದುನಿಯಾ ವಿಜಯ್ ತೆಲುಗಿನ ಚಿತ್ರೀಕರಣದಲ್ಲಿಯೂ ಸಹ ಪಾಲ್ಗೊಳ್ಳುತ್ತಿದ್ದು ಅಲ್ಲಿಯೂ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ..

ಇನ್ನು ಈ ನಡುವೆ ಕೀರ್ತಿ ತಮ್ಮ ಪತಿ ವಿಜಯ್ ಗಾಗಿ ನಿರ್ಧಾರ ಮಾಡಿ ಇದೀಗ ಆ ಕೆಲಸದಲ್ಲಿಯೇ ಬ್ಯುಸಿ ಆಗಿದ್ದಾರೆ.. ಹೌದು ಇತ್ತೀಚಿನ ದಿನಗಳಲ್ಲಿ ಕಲಾವಿದರುಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅಭಿಮಾನಿಗಳ ಜೊತೆ ಮಾತನಾಡುತ್ತಾ ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳುತ್ತಾ ಆಗಾಗ ಫೋಟೋಗಳನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ‌‌.. ಸಾಮಾಜಿಕ ಜಾಲತಾಣ ಅಭಿಮಾನಿಗಳನ್ನು ಬೇಗ ತಲುಪಲು ಒಂದೊಳ್ಳೆ ಮಾದ್ಯಮವೂ ಹೌದು.. ಅದರಲ್ಲಿ ಆಕ್ಟೀವ್ ಆಗಿದ್ದರೆ ಕಲಾವಿದರಿಗೆ ಮತ್ತಷ್ಟು ಒಳ್ಳೆಯದೂ ಹೌದು.. ಈ‌ ಕಾರಣಕ್ಕೆ ಇದೀಗ ವಿಜಯ್ ಅವರ ಪತ್ನಿ ಕೀರ್ತಿ ಅವರು ಇನ್ಸ್ಟಾಗ್ರಾಂ ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದು ವಿಜಯ್ ಅವರ ಹೊಸ ಹೊಸ ಲುಕ್ ಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..

ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಸಾಮ್ರಾಟ್ ನನ್ನು ಸಿನಿಮಾ ಇಂಡಸ್ಟ್ರಿಗೆ ತರುವ ನಿರ್ಧಾರ ಮಾಡಿದಂತೆ ಕಂಡು ಬರುತ್ತಿದ್ದು ಸಾಮ್ರಾಟ್ ಹೆಸರಿನಲ್ಲಿಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ತೆರೆದು ಅಲ್ಲಿ ವಿಜಯ್ ಅವರ ಹಾಗೂ ಸಾಮ್ರಾಟ್ ನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.. ಅಷ್ಟೇ ಅಲ್ಲದೇ ಅಭಿಮಾನಿಗಳ ಕಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡೋದು ಮಾತ್ರವಲ್ಲದೇ ವಿಜಯ್ ಅವರಿಗೆ ಸಂಬಂಧಪಟ್ಟಂತೆ ಅವರುಗಳು ಎಡಿಟ್ ಮಾಡಿದ ವೀಡಿಯೋಗಳನ್ನೂ ಸಹ ಸ್ವತಃ ಕೀರ್ತಿ ಅವರು ಶೇರ್ ಮಾಡಿಕೊಂಡು ಸ್ಟೇಟಸ್ ನಲ್ಲಿ ಹಾಕಿಕೊಳ್ಳುತ್ತಿದ್ದು ಸಲಗ ಸಕ್ಸಸ್ ಅನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಗಂಡನ ಹೊಸ ಹೊಸ ಲುಕ್ ನ ಫೋಟೋಗಳ ಅಪ್ಡೇಟ್ ಮಾಡುವ ಕೀರ್ತಿ ವಿಜಯ್ ಅವರ ಯಶಸ್ಸಿನ ಈ ಪಯಣದಲ್ಲಿ ಜೊತೆಯಾಗಿ ನಿಂತಿದ್ದು ಗಂಡನ ಸಿನಿಮಾ ಕೆರಿಯರ್ ಗೆ ಮತ್ತಷ್ಟು ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ..