ತಾಯಿಯನ್ನು ಕಳೆದುಕೊಂಡ ಎರಡೇ ದಿನಕ್ಕೆ ದುನಿಯಾ ವಿಜಯ್ ಮಾಡಿರುವ ಕೆಲಸ ನೋಡಿ..

0 views

ಕಳೆದ ಎರಡು ದಿನಗಳ ಹಿಂದಷ್ಟೇ ಜುಲೈ ಎಂಟರಂದು ಸ್ಯಾಂಡಲ್ವುಡ್ ನ ಖ್ಯಾತ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರು ಇಹಲೋಕ ತ್ಯಜಿಸಿದ್ದು ದುನಿಯಾ ವಿಜಯ್ ಅಕ್ಷರಶಃ ದಿಕ್ಕು ತೋಚದಂತಾದರು.. ಇದಕ್ಕೆ ಕಾರಣ ದುನಿಯಾ ವಿಜಯ್ ಅವರು ತಮ್ಮ ತಾಯಿ ತಂದೆಯ ಮೇಲೆ‌ ಇಟ್ಟಿದ್ದ ಪ್ರೀತಿ.. ಇದೀಗ ದುನಿಯಾ ವಿಜಯ್ ಅವರ ತಾಯಿ ಹೋದ ಎರಡೇ ದಿನಕ್ಕೆ ದುನಿಯಾ ವಿಜಯ್ ಅವರು ಮಾಡಿರುವ ಕೆಲಸ ನಿಜಕ್ಕೂ ಮನಕಲಕುವಂತಿದೆ.. ಹೌದು ದುನಿಯಾ ವಿಜಯ್ ಅವರ ಬಾಳಿನ ಎಲ್ಲಾ ಏಳು ಬೀಳುಗಳು ಎಲ್ಲರಿಗೂ ತಿಳಿದೇ ಇದೆ.. ಜೀವನದಲ್ಲಿ ಬಹಳ ಕಷ್ಟದಿಂದ ಮೇಲೆ ಬಂದ ದುನಿಯಾ ವಿಜಯ್ ಅವರ ಪ್ರತಿ ಹೆಜ್ಜೆಯಲ್ಲಿಯೂ ವಿಜಯ್ ಅವರ ತಾಯಿ ಜೊತೆಯಾಗಿ ನಿಂತಿದ್ದರು..

ಅದರಲ್ಲಿಯೂ ದುನಿಯಾ ವಿಜಯ್ ಅವರ ವ್ಯಯಕ್ತಿಕ ಜೀವನ ಅಂದರೆ ಪತ್ನಿ ನಾಗರತ್ನ ಅವರ ವಿಚಾರದಲ್ಲಿ ಸಾಕಷ್ಟು ವಿವಾದಗಳಾದಗಲೂ ಸಹ ನಾರಾಯಣಮ್ಮನವರು ಎಲ್ಲಿಯೂ ಮಗನನ್ನು ಬಿಟ್ಟುಕೊಟ್ಟಿರಲಿಲ್ಲ.. ಮಗನಿಗೆ ಬೆಂಬಲವಾಗಿಯೇ ನಿಂತಿದ್ದರು.. ಇನ್ನು ದುನಿಯಾ ವಿಜಯ್ ಅವರು ಕೀರ್ತಿ ಅವರನ್ನು ಎರಡನೇ ವಿವಾಹವಾದ ನಂತರವೂ ತನ್ನ ತಂದೆ ತಾಯಿಯನ್ನು ತನ್ನೊಡನೇ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು.. ನಾರಾಯಣಮ್ಮನವರೂ ಸಹ ಮಗ ಸೊಸೆಯ ಜೊತೆ ಸಹಬಾಳ್ವೆ ಇಂದ ಜೀವನ ನಡೆಸುತ್ತಿದ್ದರು.. ಇತ್ತ ತಾಯಿಯ ಮೇಲೆ ಬಹಳಷ್ಟು ಪ್ರೀತಿ ಗೌರವ ಇಟ್ಟುಕೊಂಡಿದ್ದ ದುನಿಯಾ ವಿಜಯ್ ಅವರು ತನ್ನ ತಂದೆತಾಯಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಅಪ್ಪ ಅಮ್ಮನ ಪಾದಗಳ ಫೋಟೋಗಳನ್ನು ಹಂಚಿಕೊಂಡು ಇವರ ಆಶೀರ್ವಾದವೇ ನನಗೆ ಶ್ರೀರಕ್ಷೆ ಎನ್ನುತ್ತಿದ್ದರು..

ಆದರೆ ಕಳೆದ ಎರಡು ತಿಂಗಳ ಹಿಂದೆ ಕೊರೊನಾ ಎರಡನೇ ಅಲೆಗೆ ತತ್ತರಿಸಿದವರಲ್ಲಿ ದುನಿಯಾ ವಿಜಯ್ ಅವರೂ ಸಹ ಒಬ್ಬರು.. ಹೌದು ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗಿದ್ದ ಸಮಯದಲ್ಲಿ ವಿಜಯ್ ಅವರ ತಂದೆ ತಾಯಿ ಇಬ್ಬರಿಗೂ ಸಹ ಕೊರೊನಾ ಪಾಸಿಟಿವ್ ಆಗಿದ್ದು ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಇದ್ದಾಗ ತನ್ನ ಮನೆಯನ್ನೇ ಆಸ್ಪತ್ರೆಯನ್ನಾಗಿಸಿ ಪ್ರತಿದಿನ ವೈದ್ಯರು ಬಂದು ಅಪ್ಪ ಅಮ್ಮನಿಗೆ ಚಿಕಿತ್ಸೆ ನೀಡುವಂತೆ ಸಕಲ ವ್ಯವಸ್ಥೆಯನ್ನೂ ಸಹ ಮಾಡಿದ್ದರು.. ಕೊರೊನಾದಿಂದ ಅಪ್ಪ ಅಮ್ಮ ಇಬ್ಬರೂ ಸಹ ಚೇತರಿಸಿಕೊಂಡರು.. ಆದರೆ ಅದಾದ ಕೆಲವೇ ದಿನಗಳಲ್ಲಿ ಅಂದರೆ ಇಪ್ಪತ್ತು ದಿನಗಳ ಹಿಂದಷ್ಟೇ ನಾರಯಣಮ್ಮ ಅವರಿಗೆ ಬ್ರೈನ್ ಸ್ಟ್ರೋಕಾಗಿದ್ದು ಇನ್ನು ಉಳಿಯುವುದು ಅಸಾಧ್ಯವೆಂದಾಗ ಅಮ್ಮನ ಕೊನೆಯ ದಿನಗಳಲ್ಲಿ ಪ್ರತಿ ಕ್ಷಣವೂ ಜೊತೆಯೇ ಇದ್ದು ಅಮ್ಮನ ಹಾರೈಕೆಯಲ್ಲಿ‌ ತೊಡಗಿದ್ದರು..

ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನೋವನ್ನು ಹಂಚಿಕೊಂಡಿದ್ದರು.. ಆದರೆ ವಿಧಿಯ ನಿರ್ಣಯವೇ ಬೇರೆ ಇತ್ತು.. ನಾರಾಯಣಮ್ಮ ಅವರು ಜುಲೈ ಎಂಟರಂದು ಕೊನೆಯುಸಿರೆಳೆದು ಬಾರದ ಲೋಕಕ್ಕೆ ಪಯಣ ಬೆಳೆಸಿದರು.. ತಾಯಿಯ ಮೇಲೆ ಅಪಾರ ಪ್ರೀತಿ ಇಟ್ಟಿದ್ದ ದುನಿಯಾ ವಿಜಯ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.. ಅಮ್ಮನನ್ನು ಅಪ್ಪಿಕೊಂಡು ಬಿಡದೇ ಅಮ್ಮನ ಅಗಲಿಕೆಯ ನೋವು ಅನುಭವಿಸುತ್ತಿದ್ದರು.. ಇನ್ನು ಜುಲೈ ಒಂಭತ್ತರಂದು ದುನಿಯಾ ವಿಜಯ್ ಅವರ ತಂದೆಯ ಹುಟ್ಟೂರಾದ ಆನೇಕಲ್ ನ ಕುಂಬಾರಹಳ್ಳಿಯ ತಮ್ಮ ಜಮೀನಿನಲ್ಲಿ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದರು.. ಇನ್ನು ಮೊನ್ನೆ ಅಂತ್ಯ ಸಂಸ್ಕಾರ ನಡೆದ ದಿನದಿಂದಲೂ ದುನಿಯಾ ವಿಜಯ್ ಅವರು ಅಲ್ಲಿಯೇ ಉಳಿದಿದ್ದು ಪ್ರತಿದಿನ ತಾಯಿಯ ಬಳಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.. ಹೌದು ಅದರ ಜೊತೆಗೆ ಅದಾಗಲೇ ಬಿಸಿಲು ಮಳೆಯಿಂದ ತಾಯಿಗೆ ತೊಂದರೆ ಎಂದು ಅಂತ್ಯ ಸಂಸ್ಕಾರ ನಡೆದ ಎರಡೇ ದಿನಕ್ಕೆ ಅಮ್ಮನ ಸ್ಮಾರಕವನ್ನು ನಿರ್ಮಾಣ ಮಾಡುತ್ತಿದ್ದಾರೆ..

ಹೌದು ಇದ್ದಷ್ಟು ದಿನ ಅಮ್ಮನನ್ನು ಮಗುವಿನಂತೆಯೇ ನೋಡಿಕೊಂಡ ದುನಿಯಾ ವಿಜಯ್ ಇದೀಗ ತನ್ನ ತಾಯಿ ಇಲ್ಲವಾದರೂ ಆಕೆಯ ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಅಮ್ಮನಿಗೆ ಮಳೆ ಬಿಸಿಲಿನಿಂದ ತೊಂದರೆಯಾಗುತ್ತದೆ ಎಂದು ಅದಾಗಲೇ ಇಂದು ಅಮ್ಮನ ಸ್ಮಾರಕ ಕಟ್ಟುವ ಕೆಲಸ ಶುರು ಮಾಡಿದ್ದು ಇನ್ನು ಐದಾರು ದಿನಗಳಲ್ಲಿ ಕೆಲಸ ಸಂಪೂರ್ಣಗೊಳ್ಳಲಿದೆ.. ಪ್ರತಿಯೊಬ್ಬ ತಂದೆ ತಾಯಿಗೆ ಬಹುಶಃ ಕೊನೆಗಾಲದಲ್ಲಿ ಮಕ್ಕಳು ಈ ರೀತಿ ನೋಡಿಕೊಂಡರೆ ಸಾಕು ಎನ್ನುವುದಷ್ಟೇ ಮನಸ್ಸಿನಲ್ಲಿರುತ್ತದೆ.. ಹೆತ್ತವರು ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ.. ಇಲ್ಲವಾದ ನಂತರ ಎಷ್ಟೇ ಹಣ ಕೊಟ್ಟರು ಅವರು ಮರಳಿ ಬರುವುದಿಲ್ಲ.. ನನ್ನ ಅಮ್ಮ ಮಗುವಿನಂತೆ ನನ್ನ ಜೊತೆ ಇದ್ದರು.. ನನ್ನ ಮಗುವನ್ನೇ ಕಳೆದುಕೊಂಡ ರೀತಿ ನೋವಾಗುತ್ತಿದೆ ಎಂದು ದುನಿಯಾ ವಿಜಯ್ ಕಂಬನಿ‌ ಮಿಡಿದಿದ್ದಾರೆ..