ರಶ್ಮಿಕಾ ಜೊತೆ ಮದುವೆ.. ಬಹಿರಂಗವಾಗಿ ವಿಚಾರ ತಿಳಿಸಿದ ನಟ ವಿಜಯ್ ದೇವರಕೊಂಡ.. ಹಾರ್ಟಿನ ಸಿಂಬಲ್ ಜೊತೆಗೆ ವಿಜಯ್ ಹೇಳಿದ ಮಾತು ನೋಡಿ..

0 views

ರಶ್ಮಿಕಾ ಮಂದಣ್ಣ.. ಬಹುಶಃ ನ್ಯಾಷನಲ್ ಕ್ರಶ್ ಅನ್ನೋದಕ್ಕಿಂತ ಸಾಮಾಜಿಕ ಜಾಲತಾಣದ‌ ಕ್ರಶ್ ಎಂದರೂ ತಪ್ಪಾಗಲಾರದು.. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುವ ರಶ್ಮಿಕ ಮಂದಣ್ಣ ಅವರ ಬಹಳಷ್ಟು ವಿಚಾರಗಳು ಸದ್ದು ಮಾಡುತ್ತಿರುತ್ತವೆ.. ಅಂತಹುದೇ ಒಂದು ಸುದ್ದಿಯಲ್ಲಿ ರಶ್ಮಿಕಾ ಅವರ ಮದುವೆ ವಿಚಾರವೂ ಒಂದು. ಅದರಲ್ಲಿಯೂ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ ಮದುವೆಯಾಗುತ್ತಿದ್ದಾರೆ.. ಅದರಲ್ಲಿಯೂ ಇದೇ ವರ್ಷಾಂತ್ಯದಲ್ಲಿ ಅವರಿಬ್ಬರ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು.. ಆದರೆ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.. ಇದೀಗ ಖುದ್ದು ವಿಜಯ್ ದೇವರಕೊಂಡ ಅವರೆ ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದಾರೆ..

ಹೌದು ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಭಿನಯಿಸಿದ ಬೆನ್ನಲ್ಲೇ ಆಕೆಯ ಅದೃಷ್ಟವೇ ಬದಲಾಯಿತು.. ಅದೃಷ್ಟದ ಜೊತೆಗೆ ರಶ್ಮಿಕಾ ಅವರ ಪರಿಶ್ರಮದಿಂದಾಗಿ ತೆಲುಗಿನ ಸಿನಿಮಾದಲ್ಲಿ ಅವಕಾಶ ಪಡೆದು ಮೊದಲ ಸಿನಿನದಲ್ಲಿಯೇ ದೊಡ್ಡ ಹಿಟ್ ಕೊಟ್ಟ ರಶ್ಮಿಕಾ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಆದರೆ ಏಳಿಗೆಯ ಹಾದಿಯಲ್ಲಿ ಮಾತ್ರವಲ್ಲ ಜೀವನದಲ್ಲಿ ಕೆಲ ಘಟನೆಗಳನ್ನು ಸಹ ಹಿಂತಿರುಗಿ ನೋಡದಂತಾಯ್ತು.. ಹೌದು ಕಿರಿಕ್ ಪಾರ್ಟಿ ಸಿನಿಮಾ ಆಗುತ್ತುದ್ದಂತೆ ವಯಸ್ಸು ಇಪ್ಪತ್ತೆರೆಡು ದಾಟಿಲ್ಲವಾದರೂ ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು.. ಆದರೆ ತೆಲುಗಿನಲ್ಲಿ ಸಿನಿಮಾ ಹಿಟ್ ಆಯಿತು.. ಇತ್ತ ರಕ್ಷಿತ್ ಹಾಗೂ ರಶ್ಮಿಕಾ ನಡುವೆ ವ್ಯಯಕ್ತಿಕ ವಿಚಾರಗಳಿಗೆ ಬ್ರೇಕಪ್ ಕೂಡ ಆಗಿ ನಿಶ್ಚಿತಾರ್ಥ ಮುರಿದುಬಿದ್ದಿತ್ತು..

ನಂತರ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯುಸಿ ಆದರು.. ಅತ್ತ ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ತೆಲುಗು ತಮಿಳು ಹಿಂದಿ ಎಲ್ಲಾ ಭಾಷೆಗಳಲ್ಲಿಯೂ ಅಭಿನಯಿಸಲು ಶುರು ಮಾಡಿದರು.. ಈ ನಡುವೆ ಗೀತಾ ಗೋವಿಂದಂ ಸಿನಿಮಾ ಮಾಡಿದಾಗಿನಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಮದುವೆಯ ಸುದ್ದಿ ಆಗಾಗ ಹರಿದಾಡುತ್ತಲೇ ಇತ್ತು.. ಇಬ್ಬರ ನಡುವೆ ಪ್ರೀತಿ ಇದೆ ಎನ್ನಲಾಗುತಿತ್ತು.. ಆ ಸುದ್ದಿಗಳಿಗೆ ಪುಷ್ಟಿ ನೀಡುವಂತೆ ಆಗಾಗ ರೆಸ್ಟೋರೆಂಟ್ ಗಳಲ್ಲಿ ತಡರಾತ್ರಿ ಡಿನ್ನರ್ ಗಳಲ್ಲಿ‌ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು..

ಜೊತೆಗೆ ಕಳೆದ ಕೆಲ ವರ್ಷಗಳಿಂದ ಪ್ರತಿಯೊಂದು ಹಬ್ಬವನ್ನೂ ಸಹ ರಶ್ಮಿಕಾ ವಿಜಯ್ ಕುಟುಂಬದ ಜೊತೆಗೆ ಆಚರಣೆ ಮಾಡುತ್ತಿದ್ದದ್ದು ಇಬ್ಬರ ಮದುವೆ ಖಚಿತ ಎನ್ನಲಾಗುತಿತ್ತು.. ಇತ್ತ ಸಿನಿಮಾ ಹೊರತಾಗಿಯೂ ರಶ್ಮಿಕಾ ಅವರ ಕುಟುಂಬದ ಹಿನ್ನೆಲೆ ಆರ್ಥಿಕವಾಗಿ ಬಹಳ ಶ್ರೀಮಂತರಾಗಿದ್ದು.. ಅತ್ತ ವಿಜಯ್ ದೇವರಕೊಂಡ ಕೂಡ ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಾಣ‌ ಮಾಡಿ ಉದ್ಘಾಟನೆ ಮಾಡಿದ್ದರು.. ಜೊತೆಗೆ ತಮ್ಮದೆ ಆದ ಪ್ರೊಡಕ್ಷನ್ ಹೌಸ್ ಕೂಡ ಹೊಂದಿರುವ ವಿಜಯ್ ದೇವರಕೊಂಡ ರಶ್ಮಿಕಾ ನಡುವಿನ ಅತ್ಮೀಯತೆಯೂ ಸಹ ಬಹಳ ಗಟ್ಟಿಯಾಗಿತ್ತು.. ಹೌದು ಎರಡು ದಿನದಿಂದ ಈ ಇಬ್ಬರ ಮದುವೆ ವಿಚಾರವಾಗಿ ಯಾರೊಬ್ಬರೂ ಪ್ರತಿಕ್ರಿತೆ ನೀಡಿರಲಿಲ್ಲ.. ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ಸ್ನೇಹಿತರು ಸಂಬಂಧಿಕರು ಎಲ್ಲರೂ ಸಹ ಖುದ್ದು ಫೋನ್ ಮಾಡಿ ಮದುವೆ ಬಗ್ಗೆ ವಿಚಾರಿಸುವಂತಾಯಿತು..

ಆದರೆ ರಶ್ಮಿಕಾ ಮಾತ್ರ ಈಗಲೂ ಎಲ್ಲಿಯೂ ಪ್ರತಿಕ್ರಿಯೆ ನೀಡಲಿಲ್ಲ.. ಆದರೆ ಇತ್ತ ವಿಜಯ್ ಮಾತ್ರ ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.. ಇದೇ ಕಾರಣಕ್ಕೆ ಆಗಾಗ ಈ ಇಬ್ಬರ ಮದುವೆ ವಿಚಾರ ಸುದ್ದಿಯಾಗುತಿತ್ತು.. ಅದರಲ್ಲೂ ಕಳೆದ ಎರಡು ದಿನಗಳಿಂದ ದೊಡ್ಡ ಸುದ್ದಿಯಾಗಿದ್ದು ಈ ವರ್ಷಾಂತ್ಯದಲ್ಲಿ‌ ಇಬ್ಬರ ಮದುವೆ ನಡೆಯಲಿದೆ.. ಅದಾಗಲೇ ತಯಾರಿಯೂ ಶುರುವಾಗಿದೆ ಎನ್ನಲಾಗಿತ್ತು.. ಆದರೀಗ ಈ ಎಲ್ಲಾ ವಿಚಾರಗಳಿಗೆ ಖುದ್ದು ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ.. ಪ್ರತಿಕ್ರಿಯೆಯ ಜೊತೆಗೆ ಹೃದಯದ ಸಿಂಬಲ್ ಕೂಡ ಹಾಕಿದ್ದಾರೆ.. ಆದರೆ ವಿಚಾರ ಬೇರೆಯೇ ಇದೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಜೆ ನೀಡಿರುವ ವಿಜಯ್ ದೇವರಕೊಂಡ “ಇವೆಲ್ಲವೂ ಅರ್ಥವಿಲ್ಲದ್ದೂ ಹಾಗೂ ಯಥಾ ಪ್ರಕಾರ ನಾನ್ಸೆನ್ಸ್” ಎಂದಿದ್ದಾರೆ.. ಅಷ್ಟೇ ಅಲ್ಲದೇ ಇದರ ಜೊತೆಗೆ ಹೃದಯದ ಎಮೋಜಿ ಕೂಡ ಹಾಕಿದ್ದಾರೆ.. ಆದರೆ ಹೃದಯದ ಎಮೋಜಿ ಪ್ರೀತಿಯ ಕಾರಣಕ್ಕಲ್ಲ.. ಲೌಡ ಎಂಬ ಒಅದ ಬಳಸುವ ಸಲುವಾಗಿ.. ಹೌದು “ಹೃದಯ ಡ ಸುದ್ದಿ ಇದು..” ಎಂದಿದ್ದಾರೆ..ಒಟ್ಟಿನಲ್ಲಿ ಇಬ್ಬರ ಮದುವೆ ವಿಚಾರಕ್ಕೆ ಖುದ್ದು ವಿಜಯ್ ಅವರೇ ತೆರೆ ಎಳೆದಿದ್ದು ಇದೆಲ್ಲವೂ ನಾನ್ಸೆನ್ಸ್ ಎಂದಿದ್ದಾರೆ.. ರಶ್ಮಿಕಾ ಈ ಬಗ್ಗೆ ಪ್ರತಿಕ್ರಿಯೆ ಏನಾದರೂ ನೀಡುವರಾ ಕಾದು ನೋಡಬೇಕಿದೆಯಷ್ಟೇ..