ಸ್ಯಾಂಡಲ್ವುಡ್ ಖ್ಯಾತ ನಟ ಸಂಚಾರಿ ವಿಜಯ್ ಅವರ ಸ್ಥಿತಿ ಗಂಭೀರ.. ನಿಜಕ್ಕೂ ನಡೆದದ್ದೇ ಬೇರೆ.. ಆಸ್ಪತ್ರೆ ಮುಂದೆ ಜಮಾಯಿಸಿದ ಸ್ಟಾರ್‌ ನಟರು..

0 views

ಅದಾಗಲೇ ಕೊರೊನಾ ಸಂಕಷ್ಟದಿಂದಾಗಿ ಚಿತ್ರರಂಗ ನಲುಗಿಹೋಗಿದೆ.. ಕಳೆದ ಒಂದು ವರ್ಷದಿಂದ ಸರಿಯಾದ ಕೆಲಸ ಇಲ್ಲದೆ ಸಿನಿಮಾ ಕಾರ್ಮಿಕರ ಜೀವನ ಅಕ್ಷರಶಃ ಬೀದಿಗೆ ಬಿದ್ದಿದ್ದು ಉಳ್ಳ ಅನೇಕ ಕಲಾವಿದರು ಸ್ಟಾರ್ ನಟರು ಅವರಿಗೆಲ್ಲಾ ನೆರವಾಗಿತ್ತಿರುವುದು ಇಳಿದಿರುವ ವಿಚಾರ.. ಈ ಕಷ್ಟದ ನಡುವೆ ಕೊರೊನಾದಿಂದಾಗಿ ಅನೇಕ ಕಲಾವಿದರು ನಿರ್ಮಾಪಕರು ನಿರ್ದೇಶಕರುಗಳು ಸಹ ಕೊರೊನಾದಿಂದ ಜೀವ ಕಳೆದುಕೊಳ್ಳುತ್ತಿರುವುದು ನುಂಗಲಾರದ ತುತ್ತಾಗಿದೆ.. ಆದರೆ ಇದಿಷ್ಟು ಸಾಲದೆಂಬಂತೆ ಬೇರೆ ಬೇರೆ ರೀತಿಯಲ್ಲಿಯೂ ಕಲಾವಿದರ ವಿಚಾರದಲ್ಲಿ ನೋವಿನ ಸುದ್ದಿಗಳು ಹೊರಬೀಳುತ್ತಿದೆ.. ಹೌದು ಕನ್ನಡದ ಖ್ಯಾತ ನಟ ಸಂಚಾರಿ ವಿಜಯ್ ಅವರಿಗೆ ನಿನ್ನೆ ರಾತ್ರಿ ಆಗಿರುವ ಘಟನೆ ನಿಜಕ್ಕೂ ಕಣ್ಣೀರು ತರಿಸುವಂತಿದೆ..

ಹೌದು ಸ್ಯಾಂಡಲ್ವುಡ್ ಖ್ಯಾತ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿನ್ನೆ ರಾತ್ರಿ ಸ್ನೇಹಿತನ ಜೊತೆ ಬೈಕಿನಲ್ಲಿ ಹೋಗುವ ಸಮಯದಲ್ಲಿಅ ಪಘಾ ತವಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.. ಹೌದು ಮೆದುಳಿನಲ್ಲಿ ತೀವ್ರವಾದರ ಕ್ತಸ್ರಾವ ಆಗಿರುವ ಕಾರಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದ್ದು ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರಂತೆ.. ಆದರೆ ಇಂತಹ ಕಷ್ಟದ ಸಮಯದಲ್ಲಿ ಸಂಚಾರಿ ವಿಜಯ್ ಅವರಿಗೆ ನೆರವಾಗಿ ನಿಂತಿರುವುದು ಕನ್ನಡದ ಒಬ್ಬ ಸ್ಟಾರ್ ನಟ..

ಹೌದು ಆತ ಮತ್ಯಾರೂ ಅಲ್ಲ.. ಕಿಚ್ಚ ಸುದೀಪ್ ಅವರು.. ಹೌದು ಕಿಚ್ಚ ಸುದೀಪ್ ಅವರೇ ಖುದ್ದಾಗಿ ಸಂಚಾರಿ ವಿಜಯ್ ಅವರ ನೆರವಿಗೆ ಧಾವಿಸಿದ್ದು ವೈದ್ಯರ ಜೊತೆಯೂ ಚಿಕಿತ್ಸೆ ಬಗ್ಗೆ ಸತತವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.. ದೇವರ ದಯೆಯಿಂದ ಸಂಚಾರಿ ವಿಜಯ್ ಅವರು ಗುಣಮುಖರಾಗಿ ಚೇತರಿಸಿಕೊಂಡು ಬಿಟ್ಟರೆ ಅಷ್ಟೇ ಸಾಕು.. ಸಂಚಾರಿ ವಿಜಯ್ ಅವರು ಪ್ರತಿಭಾವಂತ ಮಾತ್ರವಲ್ಲ.. ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿಯೂ ಹೌದು.. ರಾತ್ರಿ ನಡೆದ ಘಟನೆಯಿಂದಾಗಿ ಸಂಚಾರಿ ವಿಜಯ್‌ ಅವರ ಬಲಬಾಗದ ತೊಡೆಯ ಮೂಳೆ ಸಂಪೂರ್ಣವಾಗಿ ಮುರಿದಿದ್ದು.. ರಾತ್ರಿಯೇ ಮೆದುಳಿನ ಸಚಿಕಿತ್ಸೆ ಸಹ ಮಾಡಲಾಗಿದೆ.. ಆದರೆ ಇನ್ನೂ ನಲವತ್ತೆಂಟು ಗಂಟೆಗಳ ಕಾಲ ಏನೂ ಸಹ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದು ಆತಂಕ ಹೆಚ್ಚು ಮಾಡಿದೆ.. ಹೌದು ಈ ಬಗ್ಗೆ

ಈ ಬಗ್ಗೆ ವಿಷ್ಣು ಸೇನಾ ಸಮಿತಿಯ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು.. ವಿಚಾರ ತಿಳಿಸಿದ್ದಾರೆ.. ಹೌದು “ಆತ್ಮೀಯ ಸಂಚಾರಿ ವಿಜಯ್ ಅವರುಅ ಪಘಾ ತಕ್ಕೀಡಾಗಿದ್ದಾರೆ. ನಿನ್ನೆ ರಾತ್ರಿ ಸ್ನೇಹಿತನ ಜೊತೆ ಬೈಕ್ ನಲ್ಲಿ ಹೋಗುವಾಗ ಸಂಭವಿಸಿದ ಘಟನೆಯಿಂದಾಗಿ ಮೆದುಳಿನಲ್ಲಿ ರಕ್ತ ಸ್ರಾ ವಆಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆಂಬ ಸುದ್ದಿ ಕೇಳಿ ಆತಂಕ ಹೆಚ್ಚಾಗಿದೆ. ಕಿಚ್ಚ ಸುದೀಪ್ ಸರ್ ಆಪತ್ ಕಾಲಕ್ಕೆ ನೆರವಾಗವುದರ ಜೊತೆಗೆ ವೈದ್ಯರ ಜೊತೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಕಾಳಜಿವಹಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ.. ಸಂಚಾರಿ ವಿಜಯ್ ಅವ್ರು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸೋಣ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಒಟ್ಟಿನಲ್ಲಿ ಅದ್ಯಾಕೋ ಕಳೆದ ವರ್ಷದಿಂದ ಸ್ಯಾಂಡಲ್ವುಡ್ ನ ಹಣೆಬರಹವೇ ಸರಿ ಇಲ್ಲ ಎನ್ನುವಂತೆ ಕಾಣುತ್ತಿದೆ.. ಅತ್ತ ಕೆಲಸ ಇಲ್ಲದೆ ಊಟಕ್ಕೂ ಸಹ ತೊಂದರೆ ಪಡುತ್ತಿರುವ ಕಾರ್ಮಿಕರು.. ಇತ್ತ ಕೊರೊನಾದಿಂದ ಇನ್ನಿಲ್ಲವಾಗುತ್ತಿರುವ ಕಲಾವಿದರು.. ಈ ನಡುವೆ ಇಂತಹ ಸುದ್ದಿಗಳು ಬೇರೆ.. ದಯವಿಟ್ಟು ಈ ವಿಚಾರ ಸಂಚಾರಿ ವಿಜಯ ಅವರು ಗುಣಮುಖರಾಗಿ ಮರಳಿದರು ಎಂಬ ಸಮಾಧಾನದ ಸುದ್ದಿಯಿಂದ ಅಂತ್ಯವಾಗಲಿ.. ಮತ್ತೊಂದು ನೋವಿನ ಸುದ್ದಿ ಬಾರದಿರಲಿ.. ಚಿಕ್ಕ ವಯಸ್ಸಿನ ಅದರಲ್ಲೂ ಬಹಳ ಒಳ್ಳೆಯ ಮನಸ್ಸಿನ ಪ್ರತಿಭಾವಂತ ವ್ಯಕ್ತಿ ಸಂಚಾರಿ ವಿಜಯ್ ಅವರು ಆದಷ್ಟು ಬೇಗ ಗುಣಮುಖರಾಗಿಬಿಡಲಿ.. ಇನ್ನು ಸಂಚಾರಿ ವಿಜಯ್‌ ಅವರಿಗೆ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪರಿಸ್ಥಿತಿ ಗಂಭೀರ ಎಂದು ಹೇಳಲಾಗಿದ್ದು ಸತೀಶ್‌ ನೀನಾಸಂ ಸೇರಿದಂತೆ ಅನೇಕ ಕಲಾವಿದರು ಆಸ್ಪತ್ರೆಗೆ ಆಗಮಿಸಿದ್ದು ಆತಂಕ ಹೆಚ್ಚು ಮಾಡಿದೆ..