ಹೆತ್ತ ತಾಯಿಯ ಮೇಲೆ ಪೊಲೀಸರಿಗೆ ದೂರು ಕೊಟ್ಟ ನಟ ವಿಜಯ್.. ಆಕೆ ಮಾಡಿದ ಕೆಲಸಕ್ಕೆ ಸರಿಯಾಗಿ ಆಯ್ತ ಎಂದ ಜನರು.

0 views

ಭೂಮಿ‌ ಮೇಲೆ ಯಾರ ಪ್ರೀತಿ ಸುಳ್ಳಾದರೂ ಹೆತ್ತ ತಾಯಿಯ ಪ್ರೀತಿ ಸುಳ್ಳಾಗದು ಎಂಬ ಮಾತಿದೆ.. ಆದರೆ ಇದು ಕಲಿಯುಗ ಏನು ಬೇಕಾದರು ನಡೆಯಬಹುದು ಎಂಬುದಕ್ಕೆ ಆಗಾಗ ನಡೆಯುವ ಇಂತಹ ಘಟನೆಗಳು ಸಾಕ್ಷಿಯಾಗಿಬಿಡುತ್ತವೆ.. ಹೌದು ಹೆತ್ತ ತಾಯಿಯ ಮೇಲೆಯೇ ಪೊಲೀಸರಿಗೆ ದೂರು ಕೊಟ್ಟ ಘಟನೆ ನಡೆದಿದೆ.. ಅದರಲ್ಲಿಯೂ ಆ ರೀತಿ ದೂರು ಕೊಟ್ಟಿರುವುದು ತಮಿಳಿನ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾದ ನಟ ವಿಜಯ್ ಅವರು.. ಅಷ್ಟಕ್ಕೂ ಅವರ ತಾಯಿ ಮಾಡಿದ ಕೆಲಸವಾದರೂ ಏನು.. ಸಂಪೂರ್ಣ ಮಾಹಿತಿ.. ಹೌದು ನಟ ವಿಜಯ್ ಅವರು ಸಿನಿಮಾ ವಿಚಾರಗಳಿಗೆ ಮಾತ್ರವಲ್ಲ ಆಗಾಗ ವ್ಯಯಕ್ತಿಕ ವಿಚಾರಗಳಿಗಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ..

ಅದೇ ರೀತಿ ಇದೀಗ ತಮ್ಮ ತಂದೆ ತಾಯಿಯ ಮೇಲೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು ಆಶ್ಚರ್ಯವಾದರೂ ಅವರು ಮಾಡಿದ್ದು ಸರಿ ಎನ್ನುತ್ತಿದ್ದಾರೆ ನೆಟ್ಟಿಗರು.. ಹೌದು ನಟ ವಿಜಯ್ ಅವರು ತಮ್ಮ ತಂದೆ ತಾಯಿ ಹಾಗೂ ಹನ್ನೊಂದು ಮಂದಿಯ ಮೇಲೆ ದೂರು ನೀಡಿದ್ದಾರೆ.. ವಿಜಯ್ ಅವರ ತಂದೆ ಎಲ್ಲರಿಗೂ ತಿಳಿದಂತೆ ತಮಿಳಿನ‌ ಖ್ಯಾತ ನಿರ್ದೇಶಕ ಎಸ್ ಎ ಚಂದ್ರಶೇಖರ್.. ಇವರು ಕಳೆದ ವರ್ಷ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದರು.. ಅದೇ ಆಗಿರುವುದು ದೊಡ್ಡ ಎಡವಟ್ಟು.. ಹೌದು ಇದೇ ಪಕ್ಷಕ್ಕೆ ನಟ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎನ್ನಲಾಗುತಿತ್ತು.. ಆದರೆ ಇಲ್ಲಿ ಅಸಲಿ ವಿಚಾರ ಬೇರೆಯೇ ಇದೆ.. ಹೌದು ವಿಜಯ್ ಅವರ ತಂದೆ ಚಂದ್ರಶೇಖರ್ ಸ್ಥಾಪಿಸಿರುವ ಪಕ್ಷದ ಹೆಸರು “ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕಮ್”

ವಿಜಯ್ ಅವರ ಹೆಸರನ್ನು ಬಳಸಿಕೊಂಡು ಅವರ ಅಭಿಮಾನಿಗಳ ಹೆಸರುಗಳನ್ನು ಬಳಸಿಕೊಂಡು ತನ್ನ ತಂದೆ ಪಕ್ಷ ಸ್ಥಾಪಿಸಿದ್ದು ವಿಜಯ್ ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ.. ನನಗೂ ಈ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.. ನನ್ನ ಹೆಸರನ್ನು ಇಲ್ಲಿ ಸೇರಿಸಬೇಡಿ.. ನನ್ನ ತಂದೆಯ ಪಕ್ಷ ಎಂಬ ಕಾರಣಕ್ಕೆ ಇದನ್ನು ಬೆಂಬಲಿಸುವುದು ಬೇಡ ಎಂದಿದ್ದರು.. ಈ ಪಕ್ಷದಲ್ಲಿ ನನ್ನ ಹೆಸರನ್ನಾಗಲಿ ಅಥವಾ ನನ್ನ ಫೋಟೋವನ್ನಾಗಲಿ ಬಳಸಿದರೆ ಪರಿಣಾಮ ಸರಿ ಬರುವುದಿಲ್ಲ ಎಂದಿದ್ದರು. ಇದು ತಮಿಳುನಾಡಿನಲ್ಲಿ ದೊಡ್ಡ ಚರ್ಚೆಯೂ ಆಗಿತ್ತು. ಇದೀಗ ವಿಜಯ್ ಅವರು ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ತನ್ನ ತಂದೆ ತಾಯಿ ಹಾಗೂ ಹನ್ನೊಂದು ಜನರ ಮೇಲೆ ದೂರು ನೀಡಿದ್ದಾರೆ..

ತಾಯಿಯ ಮೇಲೆ ದೂರು ನೀಡಲು ಸಹ ಕಾರಣವಿದೆ.. ಹೌದು ಈ ಪಕ್ಷಕ್ಕೆ ವಿಜಯ್ ಅವರ ತಂದೆ ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿಯಾಗಿದ್ದರೆ ಇತ್ತ ತಾಯಿ ಶೋಭಾ ಚಂದ್ರಶೇಖರ್ ಖಜಾಂಚಿಯಾಗಿದ್ದಾರೆ.. ಅದೇ ಕಾರಣಕ್ಕೆ ತಾಯಿಯ ಮೇಲೆಯೂ ದೂರು ನೀಡಲಾಗಿದೆ.. ಇನ್ನು ಈ ಬಗ್ಗೆ ಚಂದ್ರಶೇಖರ್ ಅವರು ಈ ಮೊದಲೇ ಪ್ರತಿಕ್ರಿಯೆ ನೀಡಿ ಆ ಹೆಸರಿನಲ್ಲಿ ಅಭಿಮಾನಿ ಸಂಘವನ್ನು ಕಟ್ಟುವಾಗ ವಿಜಯ್ ಅನುಮತಿ ಪಡಿದಿಲ್ಲ.. ಅದೇ ರೀತಿ ಈಗ ಅದೇ ಹೆಸರಿನಲ್ಲಿ ಪಕ್ಷ ಕಟ್ಟುವಾಗಲು ಅವರ ಅನುಮತಿ ಅಗತ್ಯವಿಲ್ಲ.. ಈ ಪಕ್ಷಕ್ಕೂ ವಿಜಯ್ ಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರು.. ತಂದೆಯ ಇಂತಹ ಮಾತುಗಳಿಂದ ರೋಸಿ ಹೋದ ವಿಜಯ್ ಸಧ್ಯ ಇದೀಗ ಪೊಲೀಸರಲ್ಲಿ ದೂರು ನೀಡಿದ್ದಾರೆ..

ತಮ್ಮ ಹೆಸರಿನಲ್ಲಿ ಈ ಪಕ್ಷ ಇರುವುದರಿಂದ ಅಭಿಮಾನಿಗಳು ಪಕ್ಷದ ಕಾರ್ಯಕರ್ತರಾಗುವ ಸಾಧ್ಯತೆ ಇದೆ.. ಇದರಿಂದ ಅವರ ದಾರಿ ತಪ್ಪಿಸುವ ಕೆಲಸ ಆಗಬಹುದು.. ಅಭಿಮಾನಿಗಳನ್ನು ರಾಜಕೀಯದ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.ಮ್ ಈ ಬಗ್ಗೆ ಕ್ರಮಕೈಗೊಳ್ಳಿ ಎಂದಿದ್ದಾರೆ.. ಒಟ್ಟಿನಲ್ಲಿ ರಾಜಕೀಯದ ಲಾಭಕ್ಕಾಗಿ ಪಕ್ಷ ಕಟ್ಟಿ ಅದೇ ವಿಚಾರ ಇದೀಗ ಒಂದು ಕುಟುಂಬವನ್ನೇ ಎರಡು ಭಾಗ ಮಾಡುತ್ತಿದ್ದು ಇದರಲ್ಲಿ ವಿಜಯ್ ನಡೆ ಸರಿಯಾಗಿದೆ ಎಂದಿದ್ದಾರೆ ನೆಟ್ಟಿಗರು.. ಇನ್ನು ಈ ಬಗ್ಗೆ ಈ ಹಿಂದೆಯೇ ತನ್ನ ತಂದೆ ತಾಯಿ ಇಬ್ಬರ ಬಳಿಯೂ ಪಕ್ಷದ ಬಗ್ಗೆ ಮಾತನಾಡಿ ಹೆಸರು ಬದಲಿಸಿಕೊಳ್ಳಿ ಎಂದು ಮನವಿ ಮಾಡಿದರೂ ಸಹ ಅವರು ಒಪ್ಪಲಿಲ್ಲ ಎಂದು ತಿಳಿದು ಬಂದಿದೆ. ಇನ್ನು ತಾಯಿಯ ಬಳಿ ಈ ಬಗ್ಗೆ ಪರಿಪರಿಯಾಗಿ ಕೇಳಿಕೊಂಡರೂ ಸಹ ಅವರೂ ತಮ್ಮ ನಿಲುವನ್ನು ಬದಲಿಸಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಮಗನ ಹೆಸರು ಹಾಲಾಗಬಹುದೆಂದು ತಿಳಿದಿದ್ದರೂ ಸಹ ವಿಜಯ್‌ ತಾಯಿ ಪಕ್ಷದ ಖಜಾಂಚಿಯಾಗಿದ್ದು ಇದೀಗ ವಿಜಯ್‌ ತಾಯಿಯ ಮೇಲೆ ದೂರು ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಿದ್ದಾರೆ ಜನರು.