ಕೊನೆಗೂ ಉಳಿಯಲೇ ಇಲ್ಲ ಈ ಜೀವ.. ಆದರೆ ಕೊನೆ ಘಳಿಗೆಯಲ್ಲಿ ಸಂಚಾರಿ ವಿಜಯ್ ಅವರ ಕೊನೆ ಆಸೆ ನೆರವೇರಿಸಲು ತಮ್ಮ ಮಾಡಿದ್ದೇನು ಗೊತ್ತಾ?

0 views

ನಟ ಸಂಚಾರಿ ವಿಜಯ್ ಇನ್ನು ನಮ್ಮ ಜೊತೆಗೆ ಇಲ್ಲ ಎಂಬ ಮಾತನಾಡಲು ಸಹ ಬಾಯಿ ಬಾರದು.. ಮನಸ್ಸು ಒಮ್ಮೆ ಕುಗ್ಗುತ್ತದೆ.. ಕಣ್ಣಂಚಲ್ಲಿ ನೀರು ತುಂಬುತ್ತದೆ.. ಕಳೆದ ಕೆಲ ತಿಂಗಳುಗಳಿಂದ ಸತತವಾಗಿ ಒಂದೂ ದಿನವೂ ಬಿಡದೇ ಉಸಿರು ಎಂಬ ತಂಡವನ್ನು ಕಟ್ಟಿಕೊಂಡು ಜನರ ನೆರವಿಗೆ ನಿಂತಿದ್ದರು.. ಆದರೆ ಆ ಭಗವಂತ ಯಾಕೋ ಸಂಚಾರಿ ವಿಜಯ್ ಅವರ ನೆರವಿಗೆ ನಿಲ್ಲಲೇ ಇಲ್ಲ‌‌.. ಬಹುಶಃ ಒಳ್ಳೆಯವರಿಗೆ ಹೆಚ್ಚು ಕಾಲುವಿಲ್ಲ ಎನ್ನುವುದು ಇದೇ ಕಾರಣಕ್ಕಿರಬೇಕು.. ಸಂಚಾರಿ ವಿಜಯ್ ಇನ್ನಿಲ್ಲವೆಂದು ಅಧಿಕೃತವಾಗಿ ತಿಳಿಸಲಾಗಿದ್ದು ನಟ ಕಿಚ್ಚ ಸುದೀಪ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.. ಆದರೆ ಕೊನೆ ಘಳಿಗೆಯಲ್ಲಿ ನಡೆದುರುವ ಬೆಳವಣಿಗೆಗಳು ನಿಜಕ್ಕೂ ಕಣ್ಣೀರು ತರಿಸುತ್ತಿವೆ..

ಹೌದು ಮೊನ್ನೆ ರಾತ್ರಿ ಆಸ್ಪತ್ರೆಗೆ ಸೇರಿಸುವ ಸಮಯದಲ್ಲಿ ನೆರವಾಗಿದ್ದ ಕಿಚ್ಚ ಸುದೀಪ್‌ ಅವರು ಸತತವಾಗಿ ವೈದ್ಯರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದ್ದು ಇದೀಗ ಅವರೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.. ಲಾಕ್‌ ಡೌನ್‌ ಗೂ ಮುನ್ನ ಎರಡು ಬಾಆರಿ ಭೇಟಿ ಆಗಿದ್ದೆವು.. ಮುಂದೆ ಬಿಡುಗಡೆಯಾಗಬೇಕಿದ್ದ ವಿಜಯ್‌ ಸಿನಿಮಾದ ಕುರಿತು ಬಹಳಷ್ಟು ಉತ್ಸುಕರಾಗಿದ್ದರು. ಆದರೆ ಈಗ ಅವರು ತಮ್‌ ಕೊನೆಯುಸಿರನ್ನು ಎಳೆದಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗುತ್ತಿಲ್ಲ.. ಅವರಆ ತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಕಂಬನಿ ಮಿಡಿದಿದ್ದಾರೆ.. ಇನ್ನು ಮೊನ್ನೆ ರಾತ್ರಿ ನಡೆದ ಘಟನೆ ಯಿಂದ ಗಂಭೀರ ಸ್ಥಿತಿಯಲ್ಲಿದ್ದ ಸಂಚಾರಿ ವಿಜಯ್ ಅವರನ್ನು ಅಪೋಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತಿತ್ತು.. ಆದರೆ ಚಿಕಿತ್ಸೆ ಆರಂಭವಾದ ಮೂವತ್ತಾರು ಘಂಟೆಗಳಾದರೂ ಸಹ ಮಿದುಳಿನ ಊತ ಕಡಿಮೆಯಾಗಲಿಲ್ಲ‌‌..

ಇನ್ನು ಆಸ್ಪತ್ರೆಗೆ ಸೇರುವ ವೇಳೆ ಉಸಿರಾಡುತ್ತಿದ್ದ ಸಂಚಾರಿ ವಿಜಯ್ ಅವರು ನಿನ್ನೆ ಮಧ್ಯರಾತ್ರಿಯಲ್ಲಿ ಉಸಿರಾಡುವುದನ್ನೂ ಸಹ ನಿಲ್ಲಿಸಿದ್ದು ಕೊನೆಗೆ ಸಂಪೂರ್ಣ ವೆಂಟಿಲೇಟರ್ ನ ಸಹಾಯದಲ್ಲಿ ಅವರನ್ನು ಇರಿಸಲಾಗಿತ್ತು.. ಇನ್ನು ಇಂದು ಬೆಳಿಗ್ಗೆ ಮಾತನಾಡಿದ ವೈದ್ಯರು ಬ್ರೈನ್ ಫೇಲ್ಯೂರ್ ಆಗಿದೆ‌. ಆದರೆ ಹೃದಯ ಬಡಿತ ಇನ್ನೂ ಇದೆ‌.‌ ಅದೇ ಕಾರಣಕ್ಕೆ ಸಂಪೂರ್ಣ ವೆಂಟಿಲೇಟರ್ ಸಪೋರ್ಟ್ ನಲ್ಲಿ ಇರಿಸಲಾಗಿದ್ದು ರಿಕವರಿ ಚಾನ್ಸಸ್ ಕಡಿಮೆ ಎನ್ನಲಾಗಿತ್ತು.. ಆದರೆ ಅದಾಗಲೇ ವೈದ್ಯರು ಕುಟುಂಬಕ್ಕೆ ಸಂಚಾತಿ ವಿಜಯ್ ಅವರು ಉಳಿಯುವುದಿಲ್ಲ ಎಂಬ ವಿಚಾರವನ್ನು ಖಚಿತ ಪಡಿಸಿಯಾಗಿತ್ತು.. ಅದೇ ಕಾರಣಕ್ಕೆ ಕೊನೆ ಕ್ಷಣದಲ್ಲಿ ಕುಟುಂಬ ಮಹತ್ತರವಾದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ..

ಹೌದು ಕೊನೆ ಕ್ಷಣದಲ್ಲಿ ಆಸ್ಪತ್ರೆಯಲ್ಲಿ ಕೆಲ ಬೆಳವಣಿಗೆಗಳು ಆಗಿದ್ದು ಸಂಚಾರಿ ವಿಜಯ್ ಅವರ ತಮ್ಮ ಈ ನಿರ್ಧಾರವನ್ನು ಮಾಡಿದ್ದಾರೆ.. ಹೌದು ಸಂಚಾರಿ ವಿಜಯ್ ಇದ್ದಷ್ಟು ದಿನ ಸಮಾಜದಲ್ಲಿ ಏನಾದರು‌ ಒಳ್ಳೆಯದನ್ನು ಮಾಡಬೇಕೆಂದು ಅಂದುಕೊಳ್ಳುತ್ತಿದ್ದ ವ್ಯಕ್ತಿ.. ಅಣ್ಣ ಇಲ್ಲವಾದರೂ ಅವನಿಂದ ನಾಲ್ಕು ಜನಗಳಿಗೆ ಉಪಯೋಗವಾಗಲಿ ಎಂದು ಅಂಗಾಂಗ ದಾನ ಮಾಡಲು ನಿರ್ಧಾರ ಮಾಡಿದ್ದೇವೆ ಎಂಬ ಮಾತನಾಡುತ್ತಾ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರು.. ಸಂಚಾರಿ ವಿಜಯ್‌ ಅವರೂ ಸಹ ಬದುಕಿದ್ದಾಗ ಒಮ್ಮೊಮ್ಮೆ ಮಾತನಾಆಡುವ ಸಮಯದಲ್ಲಿ ನಾವು ಮುಂದೊಂದು ದಿನ ಇಲ್ಲವಾಆದರೆ ನಮ್ಮ ಅಂಗಾಂಗ ಯಾರಿಗಾದರೂ ಉಪಯೋಗವಾಗುವುದಿದ್ದರೆ ಎಲ್ಲವನ್ನೂ ದಾನ ಮಾಆಡಬೇಕು ಎನ್ನುತ್ತಿದ್ದರಂತೆ.. ಅವರ ಮಾತಿನಂತೆ ಇದೀಗ ಸಂಚಾರಿ ವಿಜಯ್‌ ಅವರ ಅಂಗಾಂಗ ಗಳನ್ನು ದಾಆನ ಮಾಡುವ ನಿರ್ಧಾರವನ್ನು ಅವರ ತಮ್ಮ ಮಾಡಿದ್ದು ಸಂಚಾರಿ ವಿಜಯ್‌ ಅವರ ಕೊನೆ ಆಸೆಯಾಆದರೂ ನೆರವೇರಿದಂತಾಗಿದೆ..

ಈ ಬಗ್ಗೆ ವೈದ್ಯರು ಸಹ ಖಚಿತ ಪಡಿಸಿದ್ದು ಎಲ್ಲಾ ದಾನಗಳಿಗಿಂತ ಶ್ರೇಷ್ಠ ದಾನ ಅಂಗಾಂಗ ದಾನ.. ಅವರ ಅಸ್ತಿತ್ವವನ್ನು ಉಳಿಸಲು ಇದೊಂದೇ ದಾರಿ.. ಅವರ ಅಂಗಾಂಗಗಳು ಜೀವಂತವಾಗಿರಲಿವೆ.. ಅವರ ಮೂಲಕ ಮತ್ತೆ ನಾಲ್ಕು ಜನರ ಜೀವ ಉಳಿಯಲಿದೆ.. ಇದು ನಿಜಕ್ಕೂ ಒಳ್ಳೆಯ ನಿರ್ಧಾರ.. ಇದರಿಂದಾಗಿ ಸಂಚಾರಿ ವಿಜಯ್ ಅವರಿಗೂ ಸಹ ಶಾಂತಿ ಸಿಗಲಿದೆ ಎಂದಿದ್ದಾರೆ.. ಒಟ್ಟಿನಲ್ಲಿ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಬಂದು ಸಾಧನೆಯ ಹಾದಿಯಲ್ಲಿ ಅರ್ಧದಷ್ಟು ನಡೆದು ಇದೀಗ ಇದ್ದಕ್ಕಿದ್ದ ಹಾಗೆ ತಮ್ಮ ಬಾಳ ಪಯಣವನ್ನೇ ಮುಗಿಸಿಬಿಟ್ಟರು.. ಶಾಂತಿ ಸಿಗಲಿ‌ ಸರ್ ನಿಮಗೆ.. ನಮ್ಮಗಳ ಮನಸ್ಸಿನಲ್ಲಿ ನೀವೆಂದೂ ಸದಾ ಜೀವಂತ.. ನಿಮ್ಮ ನೆನಪುಗಳು ಸದಾ ಜೀವಂತ.. ಇತ್ತ ವಿಚಾರ ತಿಳಿಯುತ್ತಿದ್ದಂತೆ ಚಿತ್ರರಂಗದ ಗಣ್ಯರು ಸ್ನೇಹಿತರು ನಾಡಿನ ಜನರು ಪ್ರತಿಯೊಬ್ಬರೂ ಸಹ ಸಂಚಾರಿ ವಿಜಯ್ ಅವರ ಅಗಲಿಕೆಗೆ ಕಂಬನಿ‌ ಮಿಡಿದು ಸಂತಾಪ ಸೂಚಿಸಿದ್ದಾರೆ..