ಅವಳು ತನ್ನವರಿಗಾಗಿ ನಿಂತಿದ್ದಾಳೆ.. ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹೇಳಿರುವ ಮಾತು ನೋಡಿ..

0 views

ಇಂದು ಅಂತರಾಷ್ಟ್ರೀಯ ಮಹಿಳಾ ದಿನ.. ವರ್ಷವಿಡೀ ದಿನದ 24 ಗಂಟೆಯೂ ತಾಯಿಯಾಗಿ ದುಡಿಯುವ.. ಮನೆ ಹಾಗೂ ಕಚೇರಿ ಎರಡನ್ನೂ ಸರಿದೂಗಿಸಿಕೊಂಡು ಹೋಗುವ.. ಮಗಳಾಗಿ ಪ್ರೀತಿ ನೀಡುವ.. ಸಹೋದರಿಯಾಗಿ ಬೆಂಬಲಿಸುವ.. ಮಡದಿಯಾಗಿ ಮಮತೆ ನೀಡುವ ಸ್ನೇಹಿತೆಯಾಗಿ ಜೊತೆ ನಡೆಯುವ ಹೆಣ್ಣಿಗೆ ಇಂದು ಮೀಸಲಾದ ದಿನ..

ಈ ದಿನ ಸಾಮಾನ್ಯ ಜನರಿಂದ ಹಿಡಿದು ಸೆಲಿಬ್ರೆಟಿಗಳು ಸಹ ತಮ್ಮ ತಮ್ಮ ಜೀವನದಲ್ಲಿ ವಿಶೇಷ ಪಾತ್ರ ವಹಿಸಿರುವ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯವನ್ನು ತಿಳಿಸಿ ಶುಭ ಹಾರೈಸಿದ್ದಾರೆ.. ಇನ್ನು ನಮ್ಮ ಸ್ಯಾಂಡಲ್ವುಡ್ ನ ಸ್ಟಾರ್ ಕಲಾವಿದರು.. ನೆನಪಿರಲಿ ಪ್ರೇಮ್ ಅವರು.. ರಮೇಶ್ ಅರವಿಂದ್ ಅವರು.. ನಟ ಅನಿರುದ್ಧ್ ಅವರು ಸೇರಿದಂತೆ ಬಹುತೇಕ ಎಲ್ಲರೂ ತಮ್ಮ ಜೀವನದ ಪ್ರಮುಖ ಮಹಿಳೆಯರಾದ ತಾಯಿ, ಮಡದಿ.. ಮಗಳಿಗೆ ಹಾಗೂ ಸಮಾಜದ ಎಲ್ಲಾ ಹೆಣ್ಣು ಮಕ್ಕಳಿಗೂ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯವನ್ನು ತಿಳಿಸಿದ್ದಾರೆ..

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಡದಿ ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷವಾಗಿ ಮಹಿಳಾ ದಿನದ ಶುಭಾಶಯ ತಿಳಿಸಿದ್ದಾರೆ.. ಹೌದು ದರ್ಶನ್ ಅವರಂತೆಯೇ ಸಾಮಾಜಿಕ ಕಳಕಳಿಯುಳ್ಳ ವಿಜಯಲಕ್ಷ್ಮಿ ದರ್ಶನ್ ಅವರು ಅದಾಗಲೇ ರೈತರು ಹಾಗೂ ಗ್ರಾಹಕರಿಗೆ ನೆರವಾಗುವ ಸಲುವಾಗಿ ಮೈ ಫ್ರೆಶ್ ಬ್ಯಾಸ್ಕೆಟ್ ಎಂಬ ಉದ್ಯಮವನ್ನು ಆರಂಭಿಸಿ ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತರಕಾರಿಗಳನ್ನು ತಲುಪಿಸುತ್ತ ಯಶಸ್ವಿ ಉದ್ಯಮಿಯಾಗಿರುವ ವಿಜಯಲಕ್ಷ್ಮಿ ದರ್ಶನ್ ಅವರು ಅದೆಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದ್ದಾರೆನ್ನಬಹುದು..

ಇಂದು ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಹೆಣ್ಣು ಮಕ್ಕಳು ಬಲಿಷ್ಠರಾಗಬೇಕು ಎಂದಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ದಿನದ ಪ್ರಯುಕ್ತ ಶುಭಾಶಯ ತಿಳಿಸಿರುವ ವಿಜಯಲಕ್ಷ್ಮಿ ದರ್ಶನ್ ಅವರು “ಬಲಿಷ್ಠ ಮಹಿಳೆ ತನಗಾಗಿ ನಿಂತಿದ್ದಾಳೆ. ಬಲಿಷ್ಠ ಮಹಿಳೆ ಎಲ್ಲರಿಗಾಗಿ ನಿಂತಿದ್ದಾಳೆ
ಸ್ತ್ರೀತ್ವದ ಸೊಬಗನ್ನು ಎಲ್ಲರೊಂದಿಗೆ ಆಚರಿಸೋಣ.. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ವಿಜಯಲಕ್ಷ್ಮಿ ದರ್ಶನ್ ಅವರಿಗೂ ಸ್ನೇಹಿತರು ಹಾಗೂ ದರ್ಶನ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಮಹಿಳಾ ದಿನಾಚರಣೆಯ ಶುಭಾಶಯ ತಿಳಿಸಿ ಯಶಸ್ವಿ ಉದ್ಯಮಿ ಯಾಗಿರುವ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಭಿನಂದನೆಯನ್ನೂ ಸಹ ತಿಳಿಸಿದ್ದಾರೆ..