ಕೊನೆಗೂ ಉಳಿಯಲಿಲ್ಲ ಈ ಜೀವ.. ಕೊನೆ ಕ್ಷಣದಲ್ಲಿ ಅಂತ್ಯ ಸಂಸ್ಕಾರ ಮಾಡಲು ಬಂದಿರೋದು ಯಾರು ಗೊತ್ತಾ.

0 views

ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ದಿಗ್ಗಜ ಕಲಾವಿದರುಗಳ ಜೊತೆ ಅಭಿನಯಿಸಿದ ಕಲಾವಿದೆ.. ಆದರೆ ನಿಜಕ್ಕೂ ಇಂದು ಅವರಿಗೆ ಬಂದಿರುವ ಪರಿಸ್ಥಿತಿ ಪ್ರತಿಯೊಬ್ಬರಿಗೂ ಪಾಠವೋ ಅಥವಾ ಸಂದರ್ಭದ ಆಟವೋ ಅಥವಾ ದುರ್ದೈವವೋ ಒಂದು ತಿಳಿಯದು.ಮ್ ಆದರೆ ಇಷ್ಟು ದಿನ ಉಳಿಸಿಕೊಳ್ಳಬೇಕು ಎಂದು ಕಷ್ಟ ಪಡುತ್ತಿದ್ದ ಆ ಜೀವವೇ ಇಲ್ಲವಾಗಿ ಹೋಯ್ತು.. ಹೌದು ನಿನ್ನೆ ಮಧ್ಯಾಹ್ನ ವಿಜಯಲಕ್ಷ್ಮಿ ಅವರ ತಾಯಿ ಇಲ್ಲವಾಗಿದ್ದಾರೆ.. ಹೌದು ಕಳೆದ ನಾಲ್ಕು ತಿಂಗಳಿಂದ ಅಕ್ಕ ಹಾಗೂ ಅಮ್ಮನನ್ನು ಕಟ್ಟಿಕೊಂಡು ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಸಹಾಯಕ್ಕಾಗಿ ಅಂಗಲಾಚಿ ಕೊನೆಗೆ ಊರೂರು ಸುತ್ತಿದರೂ ಸಹ ವಿಜಯಲಕ್ಷ್ಮಿ ಅವರು ನಿನ್ನೆ ಅವರ ತಾಯಿಯನ್ನು ಕಳೆದುಕೊಂಡು ಬಿಟ್ಟರು..

ಹೌದು ಎಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ವಿಜಯಲಕ್ಷ್ಮಿ ಅವರಿಗೆ ಆರೋಗ್ಯ ಸರಿ ಇಲ್ಲದಾಗ ಅವರ ನೆರವಿಗೆ ಕನ್ನಡದ ಸಾಕಷ್ಟು ಜನರು ಬಂದಿದ್ದರು.. ಕಿಚ್ಚ ಸುದೀಪ್ ಅವರು ಆಸ್ಪತ್ರೆಯ ಬಿಲ್ ಪಾವತಿಸಿದ್ದರು.. ಆನಂತರ ಎಲ್ಲವೂ ಸರಿಯಾಗಿತ್ತು.. ಆದರೆ ನೋವಿನ ಮೇಲೆ ನೋವು ಎಂಬಂತೆ ಕಳೆದ ನಾಲ್ಕು ತಿಂಗಳ ಹಿಂದೆ ವಿಜಯಲಕ್ಷ್ಮಿ ಅವರ ಅಕ್ಕನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಚೆನ್ನೈ ನಿಂದ ಮತ್ತೆ ಬೆಂಗಳೂರಿಗೆ ಬಂದರು.. ಇರಲು ಮನೆ ಇರದೆ ಕೈಯಲ್ಲಿ ಹಣವಿಲ್ಲದೇ ಸಾಕಷ್ಟು ತೊಂದರೆ ಅನುಭವಿಸಿದ ವಿಜಯಲಕ್ಷ್ಮಿ ಅವರು ಚಿತ್ರರಂಗದವರ ಬಳಿ ಹಾಗೂ ಜನರ ಬಳಿ ಸಾಕಷ್ಟು ಬಾರಿ ಸಹಾಯದ ನಿರೀಕ್ಷೆ ಮಾಡಿದರು. ಚಿತ್ರರಂಗದ ಕೆಲವರು ತಮ್ಮ ಕೈಲಾದ ಸಹಾಯ ಮಾಡಿದರಾದರು ಬದುಕು ಕಟ್ಟಿಕೊಳ್ಳಲು ದಾರಿ ಕಾಣದಂತಾಯಿತು.. ವಿಜಯಲಕ್ಷ್ಮಿ ಅವರ ಒರಟು ಮಾತು ಜನರಿಗೆ ಕಿರಿಕಿರಿ ತಂದದ್ದೂ ಹೌದು..

ಆದರೂ ಸಹ ನೆರವಿಗೆ ಧಾವಿಸಿದ ಸಾಮಾನ್ಯರೊಬ್ಬರು ಅವರ ಆಸ್ಪತ್ತ್ರೆಯ ಬಿಲ್ ಪಾವತಿಸಿ ಅವರನ್ನು ಕರ್ಗಿಯಲ್ಲಿ ಒಂದು ಬಾಡಿಗೆ ಮನೆ ಮಾಡಿ ಇರಿಸಿದರು.. ಆದರೆ ತಾವಿದ್ದಂತಹ ಬಾಡಿಗೆ ಮನೆಯಲ್ಲಿ ಸರಿಯಾದ ಅನುಕೂಲವಿಲ್ಲವೆಂದು ಕಳೆದ ಮೂರು ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಮರಳಿ ಬಂದರು.. ಬೆಂಗಳೂರಿಗೆ ಬಂದು ಎರಡು ದಿನಗಳ ಬಳಿಕ ನಿನ್ನೆ ಬೆಳಿಗ್ಗೆ ವಿಜಯಲಕ್ಷ್ಮಿ ಅವರು ತನ್ನ ತಾಯಿಗೆ ಬೆಳಗಿನ ಟಿಫನ್ ನೀಡಲು ಮುಂದಾಗಿದ್ದಾರೆ.. ಆ ಸಮಯದಲ್ಲಿ ನನಗೆ ಟಿಫನ್ ಬೇಡ ಎಂದು ತಾಯಿ ಹೇಳಿದ್ದು ಸ್ವಲ್ಪ ಸಮಯ ರೆಸ್ಟ್ ಮಾಡುವೆನೆಂದು ಮಲಗಿದ್ದಾರೆ.. ಅದೇ ಕೊನೆ.. ಮಲಗಿದ ವಿಜಯಲಕ್ಷ್ಮಿ ಅವರ ತಾಯಿ ಮತ್ತೆ ಮೇಲೇಳಲೇ ಇಲ್ಲ..

ಹೌದು ಒಂದು ಕಾಲದಲ್ಲಿ ಇಬ್ಬರೂ ಹೆಣ್ಣು ಮಕ್ಕಳು ಕಲಾವಿದೆಯರಾಗಿ ಗಗುರುತಿಸಿಕೊಂಡು ಖ್ಯಾತಿಯನ್ನು ಪಡೆದಿದ್ದವರು.. ಆದರೆ ಇಂದು ಒಬ್ಬಳು ಮಗಳು ಹಾಸಿಗೆಯಲ್ಲಿ.. ಮತ್ತೊಬ್ಬಳು ವಯಸ್ಸಾದ ನನ್ನನ್ನಿ ಹಾಗೂ ತನ್ನ ಅಕ್ಕನನ್ನು ಉಳಿಸಿಕೊಳ್ಳಲು ಪಡುತ್ತಿರುವ ಕಷ್ಟ ನೋಡಿದ ಆ ತಾಯಿ ಅದೆಷ್ಟು ಕೊರಗಿರಬೇಡ.. ಅದೇ ಕೊರಗಿನಲ್ಲಿ ನಿನ್ನೆ ಮಗಳಿಗೆ ಮತ್ತಷ್ಟು ತೊಂದರೆಯಾಗೋದು ಬೇಡವೆಂದು ಮಲಗಿದ್ದಲ್ಲಿಯೇ ಜೀವ ಕಳೆದುಕೊಂಡುಬಿಟ್ಟರು.. ಹೌದು ವಿಜಯಲಕ್ಷ್ಮಿ ಅವರ ತಾಯಿಗೆ ಎಪ್ಪತ್ತೈದು ವರ್ಷ ವಯಸ್ಸಾಗಿದ್ದು ನಿನ್ನೆ ಹೊಟೆಲ್ ಒಂದರಲ್ಲಿ ಕೊನೆಯುಸಿರೆಳೆದಿದ್ದಾರೆ.. ಇನ್ನು ಆ ತಕ್ಷಣ ವಿಜಯಲಕ್ಷ್ಮಿ ಅವರು ಪ್ರೇಮಾ ಅವರಿಗೆ ಪೋನ್ ಮಾಡಿದ್ದು ಭಾಮಾ ಹರೀಶ್ ಅವರು ತಕ್ಷಣ ಆಗಮಿಸಿ ಏನು ನೆರವು ಬೇಕೋ ಅದನ್ನು ನೀಡಿದ್ದಾರೆ..

ಆದರೆ ಅತ್ತ ಆರೋಗ್ಯ ಸರಿ ಇಲ್ಲದ ಅಕ್ಕನನ್ನು ನೋಡಿಕೊಂಡು ಇತ್ತ ತಾಯಿಯ ಕಾರ್ಯವನ್ನೂ ಸಹ ಮಾಡಬೇಕಿದ್ದ ವಿಜಯಲಕ್ಷ್ಮಿ ಅವರ ನೆರವಿಗೆ ತಮ್ಮನಾಗಿ ನಿಂತದ್ದು ಜನಸ್ನೇಹಿ ಯೋಗೇಶ್ ಎಂಬುವವರು.. ಹೌದು ನಿರಾಶ್ರಿತರನ್ನು ಸಾಕುವಂತಹ ಪುಣ್ಯದ ಕೆಲಸ ಮಾಡುತ್ತಿರುವ ಜನಸ್ನೇಹಿ ಯೋಗೇಶ್ ಎಂಬುವಬರು ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಮುಂದಾಗಿದ್ದು ಹೊಟೆಲ್ ನಿಂದ ವಿಜಯಲಕ್ಷ್ಮಿ ಅವರ ತಾಯಿಯನ್ನು ತಮ್ಮ ಆಶ್ರಮಕ್ಕೆ ಕರೆತಂದು ಅಲ್ಲಿಯೇ ಕೊನೆ ಸಮಯದಲ್ಲಿ ಮಾಡಬೇಕಾದ ಎಲ್ಲಾ ಪೂಜಾಪುನಸ್ಕಾರಗಳನ್ನು ನೆರವೇರಿಸಿದ್ದಾರೆ.. ಹೌದು ನಿರಾಶ್ರಿತರನ್ನು ಸಾಕುವಂತಹ ಪುಣ್ಯದ ಕೆಲಸ ಮಾಡುತ್ತಿರುವ ಜನಸ್ನೇಹಿ ಯೋಗೇಶ್ ಎಂಬುವಬರು ವಿಜಯಲಕ್ಷ್ಮಿ ಅವರ ಸಹಾಯಕ್ಕೆ ಮುಂದಾಗಿದ್ದು ಹೊಟೆಲ್ ನಿಂದ ವಿಜಯಲಕ್ಷ್ಮಿ ಅವರ ತಾಯಿಯನ್ನು ತಮ್ಮ ಆಶ್ರಮಕ್ಕೆ ಕರೆತಂದು ಅಲ್ಲಿಯೇ ಕೊನೆ ಸಮಯದಲ್ಲಿ ಮಾಡಬೇಕಾದ ಎಲ್ಲಾ ಪೂಜಾಪುನಸ್ಕಾರಗಳನ್ನು ನೆರವೇರಿಸಿದ್ದಾರೆ..

ಹೌದು ವಿಜಯಲಕ್ಷ್ಮಿ ಅವರಿಗೆ ತಮ್ಮನಾಗಿ.. ವಿಜಯಲಕ್ಷ್ಮಿ ಅವರ ತಾಯಿಗೆ ಮಗನಾಗಿ ಕೊನೆಯ ಎಲ್ಲಾ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ.. ಅಷ್ಟೇ ಅಲ್ಲದೇ ಇಂದು ಬೆಳಿಗ್ಗೆ ಹತ್ತು ಗಂಟೆಗೆ ವಿಜಯಲಕ್ಷ್ಮಿ ಅವರ ತಾಯಿಯ ಅಂತ್ಯ ಸಂಸ್ಕಾರವನ್ನೂ ಸಹ ಅವರೇ ಮಗನಾಗಿ ನೆರವೇರಿಸಲಿದ್ದಾರೆ.. ನಿಜಕ್ಕೂ ಯೋಗೇಶ್ ಅವರ ಈ ಪುಣ್ಯ ಕಾರ್ಯಕ್ಕೆ ದೇವರು ಒಳ್ಳೆದು ಮಾಡಲಿ.. ಮುಂದೆ ಕೊನೆವರೆಗೂ ಸಹ ನಾನು ವಿಜಯಲಕ್ಷ್ಮಿ ಅವರ ಜೊತೆ ನಿಲ್ಲುವೆ ಎಂದು ಯೋಗೇಶ್ ಅವರು ತಿಳೊಸಿದ್ದು ವಿಜಯಲಕ್ಷ್ಮಿ ಅವರ ಮುಂದಿನ ಜೀವನವಾದರೂ ಚೆನ್ನಾಗಿರಲಿ.. ಧಾರಾವಾಹಿಗಳಲ್ಲಿಯೋ ಸಿನಿಮಾಗಳಲ್ಲಿಯೋ ಅಭಿನಯಿಸಿ ಅವರು ಬದುಕು ಕಟ್ಟಿಕೊಳ್ಳುವಂತಾಗಲಿ..