ಸೃಜನ್ ಜೊತೆ ನಿಶ್ಚಿತಾರ್ಥ ನಡೆದ ಬಳಿಕ ನಿಜಕ್ಕೂ ಏನಾಯ್ತು ಗೊತ್ತಾ.. ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ವಿಜಯಲಕ್ಷ್ಮಿ..

0 views

ವಿಜಯಲಕ್ಷ್ಮಿ.. ಒಂದು ಕಾಲದಲ್ಲಿ ಕನ್ನಡ ತಮಿಳು ತೆಲುಗು ಚಿತ್ರರಂಗದಲ್ಲಿ ಮಿಂಚಿ ತೆರೆ ಮರೆಗೆ ಸರಿದ ನಟಿ.. ಕಳೆದ ಒಂದೆರೆಡು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದ ನಟಿ ಇದೀಗ ಸೃಜನ್ ಜೊತೆ ತಮ್ಮ ಮದುವೆ ಏಕೆ ಮುರಿದು ಬಿತ್ತು ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.. ಹೌದು ಸೃಜನ್ ಮೇಲೆ ತಮಗಿದ್ದ ಪ್ರೀತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ..ಹೌದು ವಿಜಯಲಕ್ಷ್ಮಿ ಅವರು ಯಾವ ಸಿನಿಮಾ ದಿಂದ ನೆನಪಾಗುತ್ತಾರೋ ಬಿಡುತ್ತಾರೋ.. ಆದರೆ ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನಯದ ಸೂರ್ಯವಂಶ ಸಿನಿಮಾದಲ್ಲಿ ನಟಿಸಿದ್ದೇ ನೆನಪಾಗುತ್ತದೆ.. ಅದರಲ್ಲಿಯೂ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರಿಗೆ ಕೈಕೊಟ್ಟ ಪಾತ್ರದ ಬಗ್ಗೆ ಈಗಲೂ ಸಹ ವಿಜಯಲಕ್ಷ್ಮಿ ಅವರ ವೀಡಿಯೋಗಳಿಗೆ ಜನರು ಕಮೆಂಟ್ ಮಾಡೋದು ಸಹ ಉಂಟು.. ಇನ್ನು ನಾಗಾಭರಣ ಅವರ ನಿರ್ದೇಶನದ ನಾಗಮಂಡಲ ಸಿನಿಮಾ ಕೂಡ ವಿಜಯಲಕ್ಷ್ಮಿ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿತ್ತು.. ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಮಿಂಚಿದ್ದ ವಿಜಯಲಕ್ಷ್ಮಿ ಅವರು ಇದ್ದಕಿದ್ದ ಹಾಗೆ ತೆರೆ ಮರೆಗೆ ಸರಿದು ಬಿಟ್ಟಿದ್ದರು.. ಅವರ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ.. ಆದರೆ ಕಳೆದ ಒಂದೆರೆಡು ವರ್ಷದ ಹಿಂದೆ ವಿಜಯಲಕ್ಷ್ಮಿ ಅವರು ಆರ್ಥಿಕವಾಗಿ ಕಷ್ಟದಲ್ಲಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಯಿತು..

ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಅವರು ಕನ್ನಡದ ನಟರ ಬಳಿ ಸಹಾಯ ಕೇಳಿದ ವಿಜಯಲಕ್ಷ್ಮಿ ಅವರಿಗೆ ಸುದೀಪ್ ಅವರೂ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ಸಿನಿಮಾ ಮಂದಿ ಸಹಾಯ ಹಸ್ತವನ್ನು ಸಹ ಚಾಚಿದ್ದರು.. ಆದರೆ ಆನಂತರ ಈ ವರ್ಷ ತನ್ನ ಅಕ್ಕ ಸಹ ಅನಾರೋಗ್ಯದಿಂದ ಬಳಲುತ್ತಿದ್ದ ವಿಚಾರವನ್ನು ಹಂಚಿಕೊಂಡಿದ್ದ ವಿಜಯಲಕ್ಷ್ಮಿ ಅವರು ಮತ್ತೊಮ್ನೆ ಸಹಾಯ ಮಾಡಲು ಮನವಿ ಮಾಡಿದ್ದರು.. ಆದರೆ ವಿಜಯಲಕ್ಷ್ಮಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟ್ರೋಲ್ ಮಾಡಲಾಗಿತ್ತು.. ಅವರ ವ್ಯಯಕ್ತಿಕ ವಿಚಾರಗಳನ್ನು ತೆಗೆದು ಸೃಜನ್ ಅವರಿಗೆ ಕೈಕೊಟ್ಟದ್ದಕ್ಕೆ ನೀವು ಹೀಗೆ ಬೀದಿಗೆ ಬಂದಿರೋದು ಎಂದೆಲ್ಲಾ ಪೋಸ್ಟ್ ಗಳು ಹರಿದಾಡ ತೊಡಗಿತು.. ಆದರೀಗ ಖುದ್ದು ವಿಜಯಲಕ್ಷ್ಮಿ ಅವರೇ ತಮ್ಮ ಮದುವೆ ಏಕೆ ಮುರಿದುಬಿತ್ತು.. ಸೃಜನ್ ಜೊತೆ ಸಂಬಂಧ ಏಕೆ ಕಡಿದುಕೊಂಡರು ಎಂಬುದರ ಬಗ್ಗೆ ತಿಳಿಸಿದ್ದಾರೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಹಲವು ವರ್ಷಗಳ ಹಿಂದೆ ಸೃಜನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ನಿಶ್ಚಯಗೊಂಡು ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರಿತ್ತು..

ಆದರೆ ನಿಶ್ವಿತಾರ್ಥದ ಬಳಿಕ ಕೆಲ ಮನಸ್ತಾಪ ಮೂಡಿ ಮದುವೆ ಮುರಿದು ಬಿತ್ತು.. ಇತ್ತ ಸೃಜನ್ ಅವರು ಗ್ರೀಷ್ಮಾ ಅವರನ್ನು ವಿವಾಹವಾಗಿ ಸಧ್ಯ ಎರಡು ಮಕ್ಕಳು ಸಹ ಇದ್ದು ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದಾರೆ.. ಆದರೆ ಅತ್ತ ವಿಜಯಲಕ್ಷ್ಮಿ ಅವರು ಮಾತ್ರ ಬೇರೆ ಯಾವುದೇ ಮದುವೆಯಾಗದೇ ತಮ್ಮ ಅಕ್ಕನ ಜೊತೆಯೇ ಜೀವನ ಸಾಗಿಸುತ್ತಿದ್ದರು.. ಆದರೀಗ ವಿಜಯಲಕ್ಷ್ಮಿ ಅವರನ್ನು ಸೃಜನ್ ಅವರಿಗೆ ಕೈಕೊಟ್ಟಿರಿ ಎಂದು ಟ್ರೋಲ್ ಮಾಡಿದ್ದಕ್ಕೆ ತಮ್ಮ ಮದುವೆ ಏಕೆ ಮುರಿದುಬಿತ್ತು ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.. “ಈಗ ಎಲ್ಲಾ ಕಡೆ ನೋಡಿದ್ರೂ ಸೃಜನ್ ನ ಯಾಮಾರಿಸಿದ್ದಕ್ಕೆ ಬೀದಿಗೆ ಬಂದುಬಿಟ್ಲು ಅಂತ ಹೇಳ್ತಿದ್ದಾರೆ.. ನಾನು ಯಾವ ಬೀದಿಗೆ ಬಂಡಿದ್ದೀನಿ ಅಂತ ಸ್ವಲ್ಪ ಹೇಳ್ಬೇಕು.. ಯಾಕಂದರೆ ಮಾದ್ಯಮದವರೇ ಎಲ್ಲವನ್ನೂ ಹೇಳ್ತಾರೆ.. ನಾವ್ ಹೇಗಿದಿವಿ ಎಲ್ಲಿ ಹುಟ್ಟಿದ್ವಿ.. ಯಾರನ್ನ ಯಾಮಾರೆಸಿದ್ವಿ.. ಜಾತಕ ಹೇಳೋರ ಹತ್ರ ಹೋಗೋದೆ ಬೇಡ.. ಎಲ್ಲವನ್ನು ಮಾದ್ಯಮದವರೇ ಹೇಳಿ ಬಿಡ್ತಾರೆ.. ಈಗ ಹೇಳಿ ನಾನು ಯಾರನ್ನ ಯಾಮಾರಿಸಿದೆ.. ಯಾಮಾರೆಸಿದೆ ಅನ್ನೋದು ದೊಡ್ಡ ಪದ.. ಬೇಕಿದ್ರೆ ಸೃಜನ್ ಅವರನ್ನ ಹೋಗಿ ಕೇಳಿ.. ಲಕ್ಷ ಖರ್ಚು ಮಾಡಿ ಚೆನ್ನೈ ನಲ್ಲಿ ನಿಶ್ಚಿತಾರ್ಥ ಮಾಡ್ಸಿದ್ದು ನಾವೇ.. ಒಂದಲ್ಲಾ ಎರಡಲ್ಲಾ ಬಹಳಷ್ಟು ಲಕ್ಷ ಖರ್ಚು ಮಾಡಿ ನಿಶ್ಚಿತಾರ್ಥ ಮಾಡ್ಸಿದ್ದು ನಾವೇ.. ಅದಾದ ಮೇಲೆ ಎಲ್ಲಾ ತಯಾರಿ‌ ಮಾಡ್ತಾ ಮಾಡ್ತಾ ಒಂದು ಮಾತು ಬಂತು.. ನೀವು ತಮಿಳವರು..ನೀವ್ ಈ ಈ ತರ ಮಾಡ್ತೀರಾ.. ನಾವ್ ಕನ್ನಡದವರು ನಾವ್ ಈ ರೀತಿ ಮಾಡಲ್ಲಾ ಹಾಗೆ ಹೀಗೆ ಅಂತ.. ಒಂದ್ ಸರಿ ಎರಡ್ ಸರಿ ಅಲ್ಲ.. ಪದೇ ಪದೇ ಆ ರೀತಿ ಮಾತು ಬಂತು..

ದಿನಾ ಒಂದ್ ತರ ಜಗಳದಲ್ಲಿಯೇ ಇತ್ತು.. ನನ್ನ ಸೃಜನ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಇರ್ಲಿಲ್ಲ.. ನಾವ್ ಒಳ್ಳೆಯ ಸ್ನೇಹಿತರೇ ಆಗಿದ್ವಿ.. ಆದರೆ ಮನೆಯಲ್ಲಿ ಈತರ ಮಾತ್ ಬಂತು.. ಸೃಜನ್ ಅವರು ನಮ್ಮ ತಂದೆ ಇಲ್ಲವಾದ ಮನೆಗೆ ಬಂದು ಒಳ್ಳೆ ಉದ್ದೇಶದಿಂದಲೇ ಬಂದು ಮದುವೆ ಮಾಡಿಕೊಳ್ಳೋದಾಗಿ ಹೇಳಿದ್ರು.. ನಂತರ ಎಲ್ಲ ಒಪ್ಪಿಗೆಯಾಗಿ ನಿಶ್ಚಿತಾರ್ಥ ಆಯ್ತು.. ಆದರೆ ಈ ರೀತಿ ತಮಿಳವರು ಅಂತ ಮನಸ್ತಾಪ ಬಂತು.. ಆಗ ಬಹಳ ಭಾರವಾದ ಮನಸ್ಸಿನಿಂದಲೇ ಇಬ್ಬರೂ ಕೂತ್ಕೊಂಡು ಪ್ರಬುದ್ಧವಾಗಿಯೇ ನಿರ್ಧಾರ ತಗೊಂಡ್ವಿ.. ನಾನು ಸೃಜನ್ ಅವರನ್ನ ಕೂರಿಸಿಕೊಂಡು ಹೇಳಿದೆ.. ನಾನು ಬಹಳ ಒಳ್ಳೆಯ ರೀತಿಯಲ್ಲಿಯೇ ಬಯಸಿದೆ.. ಮನೆಯವರು ಆಸೆ ಪಡೋ ರೀತಿ.. ಬಯಸೋ ರೀತಿಯಲ್ಲಿಯೇ ಹೆಣ್ಣು ಸಿಗಬೇಕು.. ಆಗಲೇ ಜೀವನ ಚೆನ್ನಾಗಿರೋದು.. ಅದನ್ನ ನಾನು ಸ್ವಚ್ಛವಾದ ಪ್ರೀತಿ ಅಂತ ಭಾವಿಸ್ತೇನೆ.. ಯಾವುದು ಪ್ರೀತಿ ಅಂದ್ರೆ.. ನಮಗೆ ಅವರು ಸಿಗ್ತಾರಾ ಇಲ್ವಾ ಅನ್ನೋದಲ್ಲ.. ಅವರು ಚೆನ್ನಾಗಿರ್ಬೇಕು ಅಂತ ಬಯಸೋದು ನಿಜವಾದ ಪ್ರೀತಿ.. ನಾನು ಅದನ್ನೇ ಹೇಳಿದೆ.. ಮನೆಯಲ್ಲಿ ಈತರ ಭಾಷೆ ವಿಚಾರದಲ್ಲಿ ಮನಸ್ತಾಪ ಇದ್ದಾಗ ಇದನ್ನ ಮುಂದುವರೆಸೋದು ಬೇಡ ಅಂತ.. ದೇವರ ಸಾಕ್ಷಿಯಾಗಿ ಅವರನ್ನ ಕೂರಿಸ್ಕೊಂಡು ಇದನ್ನೇ ಹೇಳಿದೆ.. ಜೀವನದ ಉದ್ದಕ್ಕೂ ಇದೇ ಮನಸ್ತಾಪ‌ ಮುಂದುವರೆಸಿಕೊಂಡು ಹೋಗೋಕೆ ಆಗಲ್ಲ.. ಮನೆಯವರು ನೆಮ್ಮದಿಯಾಗಿ ಇರ್ಬೇಕು ಅಂತ ಹೇಳಿದೆ.. ಅವತ್ತು ನಾನು ಏನು ಬಯಸಿದ್ನೋ ಇವತ್ತು ಸೃಜನ್ ಅವರು ಅದೇ ರೀತಿ ಬದುಕ್ತಾ ಇದ್ದಾರೆ.. ಬಾಳ್ತಾ ಇದ್ದಾರೆ..

ಆದರೆ ನೀವೇನ್ ಹೇಳ್ತಿದ್ದೀರಾ ಅಂದ್ರೆ ಸೃಜನ್ ಗೆ ನೀನು ಮೋಸ ಮಾಡಿದ್ದಕ್ಕೆ ಬೀದಿಗೆ ಬಂದಿದ್ದೀಯಾ ಅಂತಿದ್ದೀರಾ.. ನಾನೇನ್ ಮಾಡಿದೆ.. ಈಗಿನವರ ತರ ಮದುವೆಯಾಗಿ ಆಮೇಲೆ ಜಗಳ ಮಾಡಿಕೊಂಡು ಡಿವೋರ್ಸ್ ತಗೊಂಡು ಕೊಡು ನನಗೆ ಒಂದ್ ಕೋಟಿ ಪರಿಹಾರ ಅಂದುಕೊಂಡು ನಾನ್ ಮಾಡ್ಲಿಲ್ಲವಲ್ಲ.. ಕನ್ನಡದಲ್ಲಿ ಎಲ್ಲಾ ನಟಿಯರಿಗೂ ಡಿವೋರ್ಸ್ ಆಗಿದೆ.. ಈಗ ಮತ್ತೊಬ್ಬರ ಜೊತೆ ಜೀವನ ಮಾಡ್ತಿದ್ದಾರೆ.. ಅವರ ಬಗ್ಗೆ ಬರೀತಾ ಇದ್ದೀರಾ.. ಇವನನ್ನ ಯಾಮಾರಿಸಿ ಬೀದಿಗೆ ಬಂದ್ಳು ಅಂತ ಬರೀತಾ ಇದ್ದೀರಾ.. ಇಲ್ಲಾ ತಾನೆ.. ಆದ್ರೆ ನನ್ನ ಬಗ್ಗೆ ಯಾಕ್ ಹೀಗೆ ಬರೀತಾ ಇದ್ದೀರಾ.. ಜೀವನದಲ್ಲಿ ನಾನು ಬಹಳಷ್ಟು ಕಷ್ಟ ಪಟ್ಟು ಬಂದಿದ್ದೀನಿ.. ಸುಮ್ನೆ ಯಾರ್ಯ್ರಾರೋ ಏನೇನೋ ಮಾತಾಡೋದು ನನಗೆ ಇಷ್ಟವಿಲ್ಲ.. ನನ್ನನ್ನ ಮಾತೃಭಾಷೆ ತಮಿಳು ಅಂತ ಮಾತನಾಡಿದ್ರು.. ಆದರೆ ಆಮೇಲೆ ಪೂಜಾ ಅವರು ತಮಿಳು ಧಾರಾವಾಹಿಯಲ್ಲಿ ಅಭಿನಯಿಸಿದ್ರು.. ಆಗ ನನಗೆ ಆಶ್ಚರ್ಯ ಆಯ್ತು.. ನನ್ನ ಮಾತೃ ಭಾಷೆ ತಮಿಳು ಅಂತ ಹೇಳ್ಬಿಟ್ಟು ಈಗ ತಮಿಳಲ್ಲಿ ಅಭಿನಯಿಸ್ತಾ ಇದ್ದಾರೆ.. ಅಂತ ನಾನು ಸುಮ್ಮನಾಗ್ಬಿಟ್ಟೆ.. ಎಂದಿದ್ದಾರೆ..