ಆಶ್ರಯ ಕೊಟ್ಟ ಅಭಿಮಾನಿ ಜೊತೆ ರಾತ್ರೋ ರಾತ್ರಿ ವಿಜಯಲಕ್ಷ್ಮಿ ಮಾಡಿರುವ ಕೆಲಸ ನೋಡಿ.‌‌. ಶಾಕ್ ಆದ ಮನೆಯವರು..

0 views

ನಟಿ ವಿಜಯಲಕ್ಷ್ಮಿ ಒಂದು ರೀತಿ ಆಲೋಚನೆ ಮಾಡಿದರೆ ಆಕೆಯ ಪರಿಸ್ಥಿತಿ ನಿಜಕ್ಕೂ ಯಾವ ಶತ್ರುವಿಗೂ ಬಾರದಿರಲಿ ಎನಿಸಿದರೂ ಸಹ ಆಕೆ ಜನರಲ್ಲಿ ಸಹಾಯ ಕೇಳುವ ರೀತಿ ಸಿನಿಮಾ ಜನರ ಮೇಲೆ ಮಾತನಾಡುವ ರೀತಿ ನಿಜಕ್ಕೂ ಇವರು ಆಡುತ್ತಿರುವ‌ ಮಾತಿನ ಮೇಲೆ ಅವರಿಗೆ ಗಮನ ಇದೆಯೋ ಇಲ್ವೋ ಒಂದು ತಿಳಿಯದು.. ಆದರೆ ಇದೀಗ ಇವರು ತಮಗೆ ಆಶ್ರಯ ಕೊಟ್ಟ ಅಭಿಮಾನಿ ಜೊತೆ ನಡೆದುಕೊಂಡ ರೀತಿ‌‌ ಮಾತ್ರ ನಿಜಕ್ಕೂ ಅಭಿಮಾನಿಯ ಮನೆಯವರು ಬೆಚ್ಚಿಬೀಳುವಂತೆ ಮಾಡಿದೆ.. ಹೌದು ಎಲ್ಲರಿಗೂ ತಿಳಿದಂತೆ ನಟಿ ವಿಜಯಲಕ್ಷ್ಮಿ ಅವರು ಒಂದು ಕಾಲದ ಟಾಪ್ ನಟಿಯಾಗಿದ್ದವರು.. ಬಹಳಷ್ಟು ವರ್ಷಗಳ ಕಾಲ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ದೂರವಿದ್ದು ಕಳೆದ ವರ್ಷ ಮತ್ತೆ ಸುದ್ದಿಯಾದರು.. ತಮ್ಮ ಆರೋಗ್ಯ ಸರಿ ಇಲ್ಲದ ಕಾರಣ ಸಿನಿಮಾ ಮಂದಿಯ ಬಳಿ ಸಹಾಯಕ್ಕಾಗಿ ಮನವಿ ಮಾಡಿದಾಗ ಕಿಚ್ಚ ಸುದೀಪ್ ಅವರು ಒಂದೂವರೆ ಲಕ್ಷ ರೂಪಾಯಿ ಹಣವನ್ನು ಆಸ್ಪತ್ರೆಗೆ ಕಟ್ಟಿ ನೆರವು ನೀಡಿದ್ದರು.. ಆ ಬಳಿಕ ಮತ್ತೆಲ್ಲೂ ವಿಜಯ ಲಕ್ಷ್ಮಿ ಅವರ ಸುದ್ದಿ ಕೇಳಿ ಬಂದಿರಲಿಲ್ಲ..

ಇದೀಗ ಮತ್ತೆ ಕೆಲ ತಿಂಗಳ ಹಿಂದೆ ತಮ್ಮ ಅಕ್ಕನ ಆರೋಗ್ಯ ಸರಿ‌ ಇಲ್ಲವೆಂದು ಮತ್ತೆ ಸಹಾಯಕ್ಕಾಗಿ ವೀಡಿಯೋ ಮೂಲಕ‌ ಕೇಳಿದ್ದರು.. ಆದರೆ ವಿಜಯಲಕ್ಷ್ಮಿ ಅವರು ಸಹಾಯ ಕೇಳುವ ರೀತಿ ನಿಜಕ್ಕೂ ಸಿನಿಮಾ ಮಂದಿ ಮಾತ್ರವಲ್ಲ ಸಾಮನ್ಯರಲ್ಲೂ ಕೊಂಚ ಕಿರಿಕಿರಿಯನ್ನುಂಟು ಮಾಡಿತ್ತು.. ಕೊಂಚ ಅಹಂ ಭಾವದಿಂದಲೇ ಜನರ ಬಳಿ ಹಾಗೂ ಸಿನಿಮಾದವರ ಬಳಿ ಹಣದ ಸಹಾಯ ಕೇಳಿದ್ದರು.. ಜೊತೆಗೆ ತಮ್ಮ ಹಳೆಯ ಕತೆಗಳನ್ನೆಲ್ಲಾ ತಿಳಿಸಿ ಜಗ್ಗೇಶ್ ಅವರ ಬಗ್ಗೆಯೂ ಮಾತನಾಡಿದ್ದರು.. ಜೊತೆಗೆ ಸೃಜನ್ ಜೊತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಕಾರಣಗಳನ್ನು ಸಹ ತಿಳಿಸಿ ತಮ್ಮದೇನು ತಪ್ಪಿಲ್ಲವೆಂದಿದ್ದರು.. ಆದರೆ ಕೆಲ ದಿನಗಳ ಹಿಂದೆ ತಮಗೆ ಕೊರೊನಾ ಆಗಿದ್ದು ಅಕ್ಕ ಹಾಗೂ ಅಮ್ಮನ ಪರಿಸ್ಥಿತಿ ಕೂಡ ಸರಿಯಿಲ್ಲ ಸಹಾಯ ಮಾಡಿ ಎಂದು ಕೇಳಿದ್ದರು.. ಇನ್ನು ಸಹಾಯ ಸಿಕ್ಕಿಲ್ಲವೆಂದರೆ ತಾವು ಉಳಿಯೋದೆ ಇಲ್ಲವೆಂದು ತಿಳಿಸಿದ್ದರು.. ಆ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ದೀಪಾ ತುಕಾರಾಮ್ ನಾಯಕ್ ಎಂಬುವವರು ಫೇಸ್ ಬುಕ್ ಮೂಲಕ ವಿಜಯಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಆಸ್ಪತ್ರೆಯ ಮೂವತ್ತು ಸಾವಿರ ಬಿಲ್ ಅನ್ನು ಅವರೇ ಪಾವತಿ ಮಾಡಿದ್ದರು..

ಆ ಬಳಿಕ ಇರಲು ಮನೆ ಬೇಕು ಎಂದು ವಿಜಯಲಕ್ಷ್ಮಿ ಕೇಳಿಕೊಂಡಾಗ ದೀಪಾ ತುಲಾರಾಮ್ ಅವರು ಹೊನ್ನಾವರದ ಕರ್ಕಿಯಲ್ಲಿ ಇರುವ ತಮ್ಮ ತಂದೆಗೆ ಫೋನ್ ಮಾಡಿ ಒಂದು ಬಾಡಿಗೆ ಮನೆ ಮಾಡುವಂತೆ ತಿಳಿಸಿದ್ದರು.. ಆಗ ತುಕಾರಾಮ್ ಅವರು ನಾಲ್ಕು ಸಾವಿರ ರೂಪಾಯಿಯ ಬಾಡಿಗೆ ಮನೆಯೊಂದನ್ನು ಮಾಡಿದ್ದು ವಿಜಯಲಕ್ಷ್ಮಿ ಅವರು ತಮ್ಮ ಅಕ್ಕ ಹಾಗೂ ತಾಯಿಯ ಜೊತೆಗೆ ಕರ್ಕಿಗೆ ತೆರಳಿದರು..‌ ಆದರೆ ಕಳೆದ ಆರು ದಿನಗಳಿಂದ ಆಶ್ರಯ ನೀಡಿದ ತುಕಾರಾಮ್ ಅವರಿಗೆ ಈ ಮನೆ ಚೆನ್ನಾಗಿಲ್ಲ.. ನನಗೆ ಮಲಗಲು ಮಂಚ ಬೇಕು.. ಈ ಮನೆಯಲ್ಲಿ ಹಲ್ಲಿಗಳು ಇವೆ.. ನನಗೆ ಕೆಲಸದವರನ್ನು ನೇಮಿಸಿ ಎಂದೆಲ್ಲಾ ಬೇಡಿಕೆ ಇಟ್ಟರು.. ಅಷ್ಟೇ ಅಲ್ಲದೇ ಕಳೆದ ಆರು ದಿನಗಳಿಂದ ವಿಜಯಲಕ್ಷ್ಮಿ ಅವರು ತಮ್ಮ ತಾಯಿ ಹಾಗೂ ಅಕ್ಕನನ್ನು ಸಹ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.. ತಾಯಿಯ ಶೌಚ ಸ್ವಚ್ಛ ಮಾಡುವುದು ಹಾಗೂ ಅವರಿಗೆ ಊಟ ಮಾಡಿಸುವುದು ಹೀಗೆ ಯಾವುದೇ ಕೆಲಸವನ್ನು ವಿಜಯಲಕ್ಷ್ಮಿ ಮಾಡುತ್ತಿರಲಿಲ್ಲ.. ಬದಲಾಗಿ ತುಕಾರಾಮ್ ಅವರು ಹಾಗೂ ಅವರ ಕುಟುಂಬ ಮತ್ತು ಅವರ ಮನೆ ಕೆಲಸದವರೇ ಮಾಡುತ್ತಿದ್ದರು..

ಇನ್ನು ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿರುವ ತುಕಾರಾಮ್ ಅವರು.. “ಇಲ್ಲಿ‌ ಮನೆ ಮಾಡಿ ಅವರಿಗೆ ಉಚಿತವಾಗಿ ಆಶ್ರಯ ನೀಡಿದರೂ ಸಹ ಮನೆ ಸರಿ ಇಲ್ಲ.. ಆ ವ್ಯವಸ್ಥೆ ಇಲ್ಲ.. ಈ ವ್ಯವಸ್ಥೆ ಇಲ್ಲ ಎನ್ನುತ್ತಿದ್ದರು.. ಅಷ್ಟೇ ಅಲ್ಲದೇ ಇಲ್ಲಿ ಆಶ್ರಮವಿದೆ ನಿಮ್ಮ ತಾಯಿ ಹಾಗೂ ಅಕ್ಕ ಇಲ್ಲೇ ಇರಲಿ ನಾನು ನೋಡಿಕೊಳ್ಳುತ್ತೇನೆ.. ನೀವು ಬೆಂಗಳೂರಿಗೆ ಹೋಗಿ ಅಲ್ಲಿ ನಿಮ್ಮ ಕೆಲಸ ಮಾಡಿ ಮತ್ತೆ ಹೊಸ ಜೀವನ ಆರಂಭಿಸಿ.. ಧಾರಾವಾಹಿ ಹಾಗೂ ಸಿನಿಮಾದಲ್ಲಿ ನಟಿಸಿ ಜೀವನ ರೂಪಿಸಿಕೊಳ್ಳಿ ಎಂದೆ.. ಆದರೆ ಅದಕ್ಕೊಪ್ಪದ ವಿಜಯಲಕ್ಷ್ಮಿ ಅವರು ನಾನು ತಾಯಿ ಹಾಗೂ ಅಕ್ಕನ ಜೊತೆ ಇರ್ತೇನೆ ಅವರನ್ನು ಬಿಟ್ಟು ಹೋಗೋದಿಲ್ಲ ಎಂದರು.. ಕೊನೆಗೆ ನಾನು ಇಲ್ಲಿ ಇರೋದಿಲ್ಲ ಎಂದು ರಾತ್ರೋ ರಾತ್ರಿ ಬೆಂಗಳೂರಿಗೆ ಹೋಗಬೇಕು ಎಂದು ಹಟ ಹಿಡಿದಿದ್ದಾರೆ.. ಕೊನೆಗೆ ನಾನೇ ಕಾರ್ ಮಾಡಿ ಕಳುಹಿಸಿಕೊಟ್ಟಿದ್ದೇನೆ‌ ಎಂದಿದ್ದಾರೆ..

ಆದರೆ ಇತ್ತ ಆರೋಗ್ಯ ಸರಿ ಇಲ್ಲದಿದ್ದರೂ ಅವರಿಗೆ ಆಶ್ರಯ ಕೊಟ್ಟು ಎಲ್ಲವನ್ನೂ ಉಚಿತ ವಾಗಿ ಕೊಟ್ಟು ಕೊನೆಗೆ ಅವರ ಅಕ್ಕ ಹಾಗೂ ಅಮ್ಮನಿಗೆ ಊಟ ತಿನ್ನಿಸಿ ಶೌಚಸ್ಚಚ್ಛ ಮಾಡಿದರೂ ಸಹ ರಾತ್ರೋ ರಾತ್ರಿ‌ ಇಲ್ಲಿಂದ ಹೋಗಬೇಕೆಂದು ಹಟ ಹಿಡಿದ ವಿಜಯಲಕ್ಷ್ಮಿ ಅವರ ನಡೆ ನೋಡಿ ತುಕಾರಾಮ್ ಅವರ ಕುಟುಂಬದವರು ಶಾಕ್ ಆಗಿದ್ದು ಸಧ್ಯ ಅವರೇ ದುಡ್ಡು ಕೊಟ್ಟು ಕಾರ್ ಮಾಡಿ ಕರ್ಕಿಯಿಂದ ಬೆಂಗಳೂರಿಗೆ ಕಳುಹಿಸಿದ್ದಾರೆ.. ನಿಜಕ್ಕೂ ವಿಜಯಲಕ್ಷ್ಮಿ ಅವರಿಗೆ ಏನಾಗಿದೆ.. ಸಧ್ಯ ಯಾರನ್ನೂ ಒಪ್ಪದ ಅವರಿಗೆ ಸಹಾಯ ಮಾಡಲು ಯಾರು ಮುಂದೆ ಬರುವರು.. ಇದನ್ನೆಲ್ಲಾ ವಿಜಯಲಕ್ಷ್ಮಿ ಅವರು ಸರಿಯಾಗಿ ಅರ್ಥ ಮಾಡಿಕೊಂಡು ಮತ್ತೆ ನಟನೆಯೋ ಮತ್ತೊಂದೋ ಯಾವುದಾದರು ಕೆಲಸಕ್ಕೆ ಸೇರಿಕೊಂಡು ಹೊಸ ಜೀವನ ಶುರು ಮಾಡುವುದು ಒಳ್ಳೆಯದು ಎಂಬುದು ಜನರ ಅಭಿಪ್ರಾಯ..