ವಿಜಯಲಕ್ಷ್ಮಿ ತಾಯಿಯ ಅಂತಿಮ ಸಂಸ್ಕಾರದ ಕೊನೆ ಕ್ಷಣದಲ್ಲಿ ಏನಾಗಿ ಹೋಯ್ತು ನೋಡಿ.. ಇಷ್ಟೇನಾ ಜೀವನ..

0 views

ನಟಿ ವಿಜಯಲಕ್ಷ್ಮಿ ಬಹುಶಃ ಯಾರೊಬ್ಬರಿಗೂ ಇಂತಹ ಪರಿಸ್ಥಿತಿ ಬಾರದಿರಲಿ ಎಂದು ಹೇಳುವ ಜನರುಗಳಲ್ಲಿ ನಿಜಕ್ಕೂ ವಿಜಯಲಕ್ಷ್ಮಿ ಅವರೂ ಸಹ ಒಬ್ಬರು ಎಂಬುದು ಅಕ್ಷರಶಃ ಸತ್ಯ.. ಒಂದು ಕಾಲದಲ್ಲಿ ಇವರ ಡೇಟ್ಸ್ ಗಾಗಿ ನಿರ್ಮಾಪಕರು ಕಾದ ಉದಾಹರಣೆಯೂ ಇವೆ.. ಕನ್ನಡದ ದಿಗ್ಗಜ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡದ್ದೂ ಇದೆ.. ಆದರೆ ಸಮಯದ ಆಟವೋ ಅಥವಾ ದುರ್ದೈವವೋ ವಿಜಯಲಕ್ಷ್ಮಿ ಅವರ ಇಂದಿನ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬಾರದಿರಲಿ.. ಬಡವರು ಸಿರಿವಂತರಾಗೋದನ್ನು ನೋಡೋಕೆ ನಿಜಕ್ಕೂ ಯಾರೇ ಆಗಲಿ ಬಹಳ ಸಂತೋಷವಾಗುತ್ತದೆ.. ಆದರೆ ಸಿರಿವಂತರು ಕೆಟ್ಟ ಪರಿಸ್ಥಿತಿಗೆ ಬರೋದನ್ನು ನಿಜಕ್ಕೂ ನೋಡಿದರೆ ಮನಕಲಕುವಂತಾಗುತ್ತದೆ.. ಅದರಲ್ಲಿಯೂ ಮೂವರು ಹೆಣ್ಣು ಮಕ್ಕಳೇ ಇದ್ದು ಕಳೆದ ಒಂದು ವರ್ಷದಿಂದ ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿ ಇದೀಗ ಹೆತ್ತ ತಾಯಿಯನ್ನೇ ಕಳೆದುಕೊಂಡ ನೋವಿನಲ್ಲಿ ವಿಜಯಲಕ್ಷ್ಮಿ ಅವರಿದ್ದರೆ ಇತ್ತ ತಾಯಿಯ ಅಂತಿಮ ಸಂಸ್ಕಾರದ ವೇಳೆ ಕೊನೆ ಘಳಿಗೆಯಲ್ಲಿ ನಡೆದ ಘಟನೆ ಮನಕಲಕುತ್ತದೆ..

ಹೌದು ಎಲ್ಲರಿಗೂ ತಿಳಿದಿರುವಂತೆ ನಟಿ ವಿಜಯಲಕ್ಷ್ಮಿ ಅವರು ಕಳೆದ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ.. ಕಳೆದ ವರ್ಷ ಆರೋಗ್ಯ ಸರಿ ಇಲ್ಲದಾಗ ಕನ್ನಡದ ನಟರ ಸಹಾಯ ಕೇಳಿದಾಗ ಮುಂದೆ ಬಂದ ಸುದೀಪ್ ಅವರು ಎರಡು ಲಕ್ಷದಷ್ಟು ಹಣ ಕೊಟ್ಟು ಆಸ್ಪತ್ರೆಗೆ ಕಟ್ಟಿದ್ದರು.. ಆ ಬಳಿಕ ಸ್ವಲ್ಪ ಸುದ್ದಿಯಲ್ಲಿದ್ದ ನಟಿ ಮತ್ತೆ ಸುಮ್ಮನಾದರು.. ಆದರೆ ಈ ವರ್ಷ ಕಳೆದ ನಾಲ್ಕು ತಿಂಗಳ ಹಿಂದೆ ವಿಜಯಲಕ್ಷ್ಮಿ ಅವರ ಅಕ್ಕನಿಗೆ ಆರೋಗ್ಯ ತೀರಾ ಹದಗೆಟ್ಟು ಮತ್ತೆ ಚಿಕಿತ್ಸೆಗಾಗಿ ನೆರವು ಕೇಳಲು ಮುಂದಾದರು.. ಆದರೆ ಅದ್ಯಾಕೋ ಈ ಬಾರಿ ಕಲಾವಿದರು ಯಾರು ನೆರವು ನೀಡಲು ಮುಂದಾಗಲಿಲ್ಲ.. ಬಹುಶಃ ವಿಜಯಲಕ್ಷ್ಮಿ ಅವರ ಒರಟು ಮಾತು ಅಥವಾ ಸಹಾಯ ಕೇಳುತ್ತಿದ್ದ ರೀತಿ ಸಹ ಇದಕ್ಕೆ ಕಾರಣವಿರಬಹುದು ತಿಳಿಯದು.. ಇತ್ತ ಜನ ಸಾಮಾನ್ಯರೇ ತಮ್ಮ ಕೈಲಾದಷ್ಟು ನೆರವು ನೀಡಿದರಾದರು ಕಷ್ಟದಿಂದ ಹೊರಬರಲು ಸಾಧ್ಯವಾಗಲಿಲ್ಲ.. ಈ ಸಮಯದಲ್ಲಿ ವಿಜಯಲಕ್ಷ್ಮಿ ಅವರು ತಮ್ಮ ಅಕ್ಕನ ಈ ಪರಿಸ್ಥಿಗೆ ಕಾರಣರಾದ ನಟು ಜಯಪ್ರದಾ ಅವರ ತಮ್ಮನ ವಿಚಾರ ಹಾಗೂ ಇನ್ನಿತರ ಹಳೇ ವಿಚಾರಗಳನ್ನು ತೆಗೆದು ಮಾತನಾಡಿದ್ದು ಕೆಲವರಲ್ಲಿ ಬೇಸರವನ್ನೂ ಸಹ ಮೂಡಿಸಿತ್ತು..

ಇತ್ತ ಸೃಜನ್ ಅವರ ಜೊತೆಗಿನ ಮದುವೆಯ ವಿಚಾರ ತೆಗೆದು ಮಾತನಾಡಿದ್ದು ಮುಗಿದು ಹೋದ ವಿಚಾರಗಳನ್ನು ಮಾತನಾಡುವುದು ಬೇಡವೆಂದು ಹಲವಾರು ಮಂದಿ ವಿಜಯಲಕ್ಷ್ಮಿ ಅವರಿಗೆ ಬುದ್ಧಿ ಹೇಳಿದ್ದೂ ಉಂಟು.. ಆ ಬಳಿಕ ಕನ್ನಡದ ಕೆಲ ಕಲಾವಿದರು ತಮ್ಮ ಕೈಲಾದ ನೆರವನ್ನು ಕೊಟ್ಟಿದ್ದರು.. ವಿನೋದ್ ರಾಜ್ ಅವರು ಐದು ಸಾವಿರ ರೂಪಾಯಿ.. ನಟಿ ಶೃತಿ ಅವರು ಐದು ಸಾವಿರ ರೂಪಾಯಿ.. ಹೀಗೆ ಕೆಲವರು ಸಣ್ಣ ಪುಟ್ಟ ಹಣದ ನೆರವನ್ನು ನೀಡಿದ್ದರು.. ಆದರೆ ವಿಜಯಲಕ್ಷ್ಮಿ ಅವರ ಅಕ್ಕನ ಆರೋಗ್ಯ ತೀರಾ ಹದಗೆಟ್ಟು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮತ್ತೆ ಸಹಾಯದ ನೆರವು ಕೇಳಿದಾಗ ಸಾಮಾನ್ಯರೊಬ್ಬರು ಮೂವತ್ತು ಸಾವಿರ ಹಣ ಕೊಟ್ಟು ಆಸ್ಪತ್ರೆ ಬಿಲ್ ಕಟ್ಟಿದರು.. ಜೊತೆಗೆ ಕದ್ರಿಯಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ ಕೊಟ್ಟರು.. ಆದರೆ ವಿಜಯಲಕ್ಷ್ಮಿ ಅವರು ಅಲ್ಲಿರಲಾಗದೇ ಮರಳಿ ಬೆಂಗಳೂರಿಗೆ ಬಂದು ಹೊಟೆಲ್ ಒಂದರಲ್ಲಿ ವಾಸವಾಗಿದ್ದರು.. ಆದರೆ ಬೆಂಗಳೂರಿಗೆ ಬಂದ ಎರಡೇ ದಿನದಲ್ಲಿ ವಿಜಯಲಕ್ಷ್ಮಿ ಅವರ ತಾಯಿ ಸೋಮವಾರ ಬೆಳಿಗ್ಗೆ ತಿಂಡಿ ತಿನ್ನದೇ ಹಾಗೆ ಮಲಗಿರ್ತೇನೆ ಎಂದು ಮಲಗಿದವರು ಮತ್ತೆ ಮೇಲೇಳಲೇ ಇಲ್ಲ..

ವಿಜಯಲಕ್ಷ್ಮಿ ಅವರು ಎಬ್ಬಿಸಲು ಪ್ರಯತ್ನ ಪಟ್ಟಾಗ ಏಳಲೇ ಇಲ್ಲ.. ಅಷ್ಟರಲ್ಲಾಗಲೇ ವಿಜಯಲಕ್ಷ್ಮಿ ಅವರ ತಾಯಿ ಮಲಗಿದ್ದಲ್ಲೇ ಕೊನೆಯುಸಿರೆಳೆದು ಬಿಟ್ಟಿದ್ದರು.. ಬಹುಶಃ ಈಗಾಗಲೇ ಮಗಳು ನನಗಾಗಿ ಹಾಗೂ ಆಕೆಯ ಅಕ್ಕನಿಗಾಗಿ ಸಾಕಷ್ಟು ಕಷ್ಟ ಪಟ್ಟಿದ್ದಾಳೆ.. ಇನ್ನೂ ಸಹ ನನ್ನಿಂದ ಮಗಳಿಗೆ ಕಷ್ಟವಾಗೋದು ಬೇಡವೆನ್ನಿಸಿ‌ ಮಲಗಿದ್ದಲೇ ಬಾರದ ಲೋಕಕ್ಕೆ ಹೊರಟು ಹೋದರು.. ಇತ್ತ ಒಂದು ಕಡೆ ಹಾಸಿಗೆಯಿಂದ ಮೇಲೇಳಲಾಗದ ಪರಿಸ್ಥಿತಿಯಲ್ಲಿ ಅಕ್ಕ.. ಅತ್ತ ಜೀವ ಕಳೆದುಕೊಂಡು ಮಲಗಿರುವ ತಾಯಿಯ ನಡುವೆ ದಿಕ್ಕು ತೋಚದೇ ಕೆಲ ಗಂಟೆಗಳ ಕಾಲ ಸಮಯ ಕಳೆದ ವಿಜಯಲಕ್ಷ್ಮಿ ಅವರು ತಕ್ಷಣ ಪ್ರೇಮ ಅವರಿಗೆ ಫೋನ್ ಮಾಡಿದ್ದಾರೆ.. ಆನಂತರ ಬಾಮಾ ಹರೀಶ್ ಅವರು ಹೊಟೆಲ್ ಗೆ ಆಗಮಿಸಿ ವಿಜಯಲಕ್ಷ್ಮಿ ಅವರಿಗೆ ಅಗತ್ಯ ನೆರವು ನೀಡಿದ್ದರು.. ಆದರೆ ಅಂತಹ ಸಮಯದಲ್ಲಿ ಆ ತಾಯಿಯ ಮಗನಾಗಿ ವಿಜಯಲಕ್ಷ್ಮಿ ಅವರಿಗೆ ತಮ್ಮನಾಗಿ ನಿಂತವರೇ ಜನಸ್ನೇಹಿ ಯೋಗೇಶ್ ಅವರು.. ಹೌದು ಟ್ಯಾಕ್ಸಿ ಚಾಲಕನಾದರೂ ಸಹ ನಿರಾಶ್ರಿತರಿಗಾಗಿ ಆಶ್ರಮ ನಡೆಸುತ್ತಿರುವ ಯೋಗೇಶ್ ಅವರು ವಿಜಯಲಕ್ಷ್ಮಿ ಅವರ ನೆರವಿಗೆ ಬಂದು ಅವರ ತಾಯಿಯ ಅಂತ್ಯ ಸಂಸ್ಕಾರ ಮಾಡಲು ಮುಂದಾದರು..

ಅವರ ಆಶ್ರಮದಲ್ಲಿಯೇ ಸೋಮವಾರ ರಾತ್ರಿ ಪೂರ್ತಿ ಭಜನೆ ಏರ್ಪಡಿಸಿ ವಿಜಯಲಕ್ಷ್ಮಿ ಅವರನ್ನು ಹಾಗೂ ಅವರ ಅಕ್ಕನನ್ನು ಅವರೇ ಕರೆದುಕೊಂಡು ಹೋಗಿ ಅವರಿಗೆ ಸಕಲ ವ್ಯವಸ್ಥೆ ಕಲ್ಪಿಸಿದರು.. ಕಷ್ಟದಲ್ಲಿದ್ದಾರೆ ಎಂದು ಸುಮ್ಮನೆ ಹೆಸರಿಗೋಸ್ಕರ ಮಾಡದೇ ಆ ತಾಯಿಗೆ ಶಾಸ್ತ್ರದ ಪ್ರಕಾರ ಆಗಬೇಕಿರುವ ಸಕಲ ಕಾರ್ಯಗಳನ್ನು ನೆರವೇರಿಸಿದರು.. ವಿಜಯಲಕ್ಷ್ಮಿ ಅವರು ಲಿಂಗಾಯತರಾದ್ದರಿಂದ ಅವರ ಸಂಪ್ರದಾಯ ಪ್ರಕಾರವೇ ಎಲ್ಲಾ ಕಾರ್ಯಗಳನ್ನು ನೆರವೇರಿಸಿದ್ದು ನಿಜಕ್ಕೂ ಆತನ ದೊಡ್ಡಗುಣ ತೋರಿತು.. ಇನ್ನೂ ನಿನ್ನೆ ಬೆಳಿಗ್ಗೆ ಹತ್ತು ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ ತಿಳಿಸಿ ಚಿತ್ರರಂಗದವರು ಬರುವುದಾದರೆ ಬರಬಹುದು ಎಂದು ತಿಳಿಸಲಾಗಿತ್ತು.. ಸಮಯ ಹತ್ತು ಗಂಟೆಯೂ ಆಯಿತು.. ಆದರೆ ಆ ಕೊನೆ ಕ್ಷಣದಲ್ಲಿ ನಡೆದದ್ದೇ ಬೇರೆ.. ಹೌದು ಯಾವೊಬ್ಬ ಕಲಾವಿದರೂ ವಿಜಯಲಕ್ಷ್ಮಿ ಅವರ ಅಂತಿಮ ಸಂಸ್ಕಾರದ ಕಾರ್ಯಕ್ಕೆ ಕನಿಷ್ಟ ಎರಡು ನಿಮಿಷವೂ ಬಾರದೇ ಹೋದರು.. ಹೌದು ವಿಜಯಲಕ್ಷ್ಮಿ ಅವರ ಮಾತು ಕಿರಿಕಿರಿ ತಂದಿರಬಹುದು..

ಆದರೆ ಗಂಡು ಮಕ್ಕಳಿಲ್ಲದ ಆ ಕುಟುಂಬ ಇಂದು ಒಂದು ಅನಾಥಾಶ್ರಮದಲ್ಲಿ ತನ್ನ ತಾಯಿಯನ್ನು ಮಲಗಿಸಿಕೊಂಡು ಅವರಿಗೆ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದಾರೆ ಎಂಬ ಸಣ್ಣ ಕರುಣೆಯನ್ನು ತೋರದೇ ಹೋದದ್ದು ನಿಜಕ್ಕೂ ಬೇಸರದ ಸಂಗತಿ.. ಉಳ್ಳವರಿಗೆ ಮಾತ್ರ ಈ ಪ್ರಪಂಚ ಎಂಬುದು ಸತ್ಯದಂತೆ ಕಂಡಿತು.. ಅದರಲ್ಲೂ ಕಲಾವಿದೆಯಾಗಿ ಸಾಕಷ್ಟು ಹೆಸರು ಮಾಡಿದ್ದ ನಟಿ ಇಂದು ಆಕೆಯ ಬಳಿ ಹಣವಿಲ್ಲವೆಂಬ ಕಾರಣಕ್ಕೆ ಈ ರೀತಿಯ ಪರಿಸ್ಥಿತಿಯಲ್ಲಿ ನಿಂತಿದ್ದು ನಿಜಕ್ಕೂ ಮನಕಲಕುವಂತಿತ್ತು.. ಆದರೆ ಇತ್ತ ಅವರುಗಳು ಮಾತ್ರ ಅಂತ್ಯ ಸಂಸ್ಕಾರ ಮಾಡಲು ಸಮಯವಾದರೂ ಸಹ ಚಿತ್ರರಂಗದವರು ಯಾರಾದರು ಬಂದೇ ಬರ್ತಾರೆ ಎಂಬ ನಂಬಿಕೆಯಿಂದ ಕಾಯುತ್ತಲೇ ಇದ್ದರು.. ಆದರೆ ಮಧ್ಯಾಹ್ನ ಒಂದು ಗಂಟೆಯಾದರೂ ಸಹ ಯಾರೂ ಬಾರದೆ ಹೋದಾಗ ಕೊನೆಗೆ ವಿಜಯಲಕ್ಷ್ಮಿ ಅವರಿಗೆ ತಮ್ಮನಾಗಿ ನಿಂತು ಯೋಗೇಶ್ ಅವರೇ ಅಂತ್ಯ ಸಂಸ್ಕಾರ ನೆರವೇರಿಸಿದರು.. ಬಹುಶಃ ಅಮ್ಮ ತಾನು ಹೋಗಿ ನಿಮ್ಮನ್ನು ನನಗೆ ದೇವರ ರೂಪದಲ್ಲಿ ಕೊಟ್ಟನೆಂದು ಯೋಗೇಶ್ ಅವರ ಬಳಿ ಕಣ್ಣೀರಿಟ್ಟರು ವಿಜಯಲಕ್ಷ್ಮಿ..

ಯಾರೇ ಆಗಲಿ ಅವರು ಏನೇ ಮಾಡಿರಲಿ ಆದರೆ ತಾಯಿಯನ್ನು ಕಳೆದುಕೊಂಡ ದುಃಖ ಮಾತ್ರ ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ.. ಆ ನೋವು ಯಾವ ಶತ್ರುವಿಗೂ ಬಾರದಿರಲಿ ಎಂದೇ ಪ್ರತಿಯೊಬ್ಬರಿಗೂ ಅನಿಸುವುದು.. ಆದರೆ ಇಂತಹ ಕಷ್ಟದ ಸಮಯದಲ್ಲಿಯೂ ಯಾರೂ ಬಾರದೆ ಹೋದದ್ದು ಮಾತ್ರ ಪ್ರಪಂಚ ಯಾವುದರ ಕಡೆ ಸಾಗುತ್ತಿದೆ ಎಂದೆನಿಸುವುದು.. ಇನ್ನು ಇತ್ತ ಅಮ್ಮನನ್ನು ಕಳುಹಿಸಿಕೊಡುವ ಕೊನೆ ಘಳಿಗೆಯಲ್ಲಿ ಅಮ್ಮನನ್ನು ತಬ್ಬಿಕೊಂಡು ಎದ್ದು ಬಂದುಬಿಡಮ್ಮಾ.. ದಯವಿಟ್ಟು ಎದ್ದು ಬಂದುಬಿಡು.. ಎಂದು ವಿಜಯಲಕ್ಷ್ಮಿ ಅವರು ಅಂಗಲಾಚುತ್ತಿದ್ದ ದೃಶ್ಯ ನಿಜಕ್ಕೂ ಸಂಕಟ ತರುವಂತಿತ್ತು.. ಆಗಿದ್ದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ.. ಆದರೆ ಇನ್ನು ಮುಂದಾದರೂ ವಿಜಯಲಕ್ಷ್ಮಿ ಅವರ ಜೀವನ ಚೆನ್ನಾಗಿರಲಿ.. ಅವರು ಒಂದೊಳ್ಳೆ ಬದುಕು ಕಟ್ಟಿಕೊಳ್ಳುವಂತಾಗಲಿ.. ಮತ್ತೆ ತೆರೆ ಮೇಲೆ ಬಂದು ಮೊದಲಿನಂತೆ ಜೀವನ ಸಾಗಿಸುವಂತಾಗಲಿ.. ಇನ್ನು ನಲವತ್ತು ವರ್ಷ ವಯಸ್ಸಿನ ವಿಜಯಲಕ್ಷ್ಮಿ ಅವರಿಗೆ ಹೊಸದೊಂದು ಜೀವನ ಸಿಗುವಂತಾಗಲಿ..