ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಿದ್ದ ಅನಂತ್ ಕುಮಾರ್ ಅವರ ಮಗಳು ವಿಜೇತ ಇಂದು ಮಾಡಿರುವ ಕೆಲಸ ನೋಡಿ..

0 views

ರಾಜ್ಯ ಸರ್ಕಾರದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮುಖ್ಯಮಂತ್ರಿ ಸ್ಥಾನ ಬದಲಾಗಿ ರಾಜ್ಯ ರಾಜಕಾರಣದಲ್ಲಿ‌ ಒಂದು ರೀತಿ ಸಂಚಲನ ಮೂಡಿದರೆ.. ಇತ್ತ ಅದೇ ಸಮಯದಲ್ಲಿ ಬಿಜೆಪಿ ನಾಯಕ ಅನಂತ್ ಕುಮಾರ್ ಅವರ ಮಗಳು ವಿಜೇತ ಅವರು ರಾಜಕೀಯದ ಕುರಿತು ಮಾಡಿದ್ದ ಟ್ವೀಟ್ ದೊಡ್ಡ ಸುದ್ದಿಯಾಗಿತ್ತು..

ಹೌದು ರಾಜ್ಯದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ನೋಡಿದ ವಿಜೇತ ಅವರು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಿದ್ದರು.. ಆ ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ‌ ಸುದ್ದಿಯಾಗಿತ್ತು.. ಖುದ್ದು ಜೆಡಿಎಸ್ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರೇ ಅನಂತ್ ಕುಮಾರ್ ಪುತ್ರಿ ವಿಜೇತ ಅವರನ್ನು ಪಕ್ಷಕ್ಕೆ ಆಹ್ವಾನಿಸುವ ಮಟ್ಟಕ್ಕೆ ಬಂದು ನಿಂತಿತ್ತು.. ಆದರೀಗ ವಿಜೇತ ಬೇರೆಯದ್ದೇ ಕೆಲಸ ಮಾಡಿದ್ದಾರೆ..

ಹೌದು ವಿಜೇತ ಅವರು ಅಂದು ರಾಜ್ಯದಲ್ಲಿ ಆಗುತ್ತಿದ್ದ ರಾಜಕೀಯ ಬೆಳವಣಿಗೆಗಳನ್ನು ನೋಡಿ “ಕರ್ನಾಟಕ ರಾಜಕೀಯ ನಿಜಕ್ಕೂ ಆಸಕ್ತಿದಾಯಕ ಏಕೆ.. ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗುತ್ತಿದೆ” ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.. ವಿಜೇತ ಅವರು ಈ ಮಾತುಗಳನ್ನು ಆಡುತ್ತಿದ್ದಂತೆ ದೊಡ್ಡ ಸುದ್ದಿಯಾಯಿತು.. ಬಿಜೆಪಿ ನಾಯಕನ ಪುತ್ರಿ ಜೆಡಿಎಸ್ ಪಕ್ಷವನ್ನು ಹೊಗಳಿದ್ದನ್ನು ನೋಡಿ ವಿಜೇತ ಜೆಡಿಎಸ್ ಪಕ್ಷ ಸೇರಲಿದ್ದಾರಾ ಎಂಬ ಕುತೂಹಲವೂ ಮೂಡಿತ್ತು.. ಇನ್ನು ಇತ್ತ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ ಅವರು ವಿಜೇತ ಅವರು ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಎಂಬ ಮಾತುಗಳನ್ನು ಆಡಿದ್ದರು.. ಅಷ್ಟೇ ಅಲ್ಲದೇ ಇದು ಬಿಜೆಪಿ ವಲಯದಲ್ಲಿಯೂ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು..

ಆದರೀಗ ವಿಜೇತ ಅವರು ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.. ಹೌದು ಎಲ್ಲಾ ಕುತೂಹಲಕ್ಕೂ ಇದೀಗ ತಮ್ಮ ಮಾತಿನ ಮೂಲಕವೇ ತೆರೆ ಎಳೆದಿದ್ದಾರೆ.. “ನನ್ನ ಇತ್ತೀಚಿನ ಟ್ವೀಟ್ ನಲ್ಲಿನ ಹೇಳಿಕೆ ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.. ಪ್ರಸ್ತುತ ಈಗ ನಾನು ನೀಡುತ್ತಿರುವ ಹೇಳಿಕೆ ಆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದು ಎಲ್ಲಾ ಚರ್ಚೆಗಳಿಗೆ ಪೂರ್ಣ ವಿರಾಮ ಇಡುತ್ತದೆ ಎಂಬ ಭರವಸೆ ಇದೆ.. ಮುಂದೆಯೂ ಸಹ ನಾನು ನಿಮ್ಮೊಂದಿಗೆ ಸಂವಾದವನ್ನು ಮುಂದುವರೆಸುತ್ತೇನೆ.. “ರಾಜಕೀಯದಲ್ಲಿ ಸಿದ್ದಾಂತ ವಿಶ್ಲೇಷಣೆ ಮತ್ತು ಅವಲೋಕನಗಳು ಇರುತ್ತವೆ.. ಸಾಮಾನ್ಯವಾಗಿ ಇವುಗಳನ್ನು ಒಂದೇ ಎಂದುಕೊಂಡು ಗೊಂದಲಕ್ಕೊಳಗಾಗುತ್ತವೆ.. ಜೆಡಿಎಸ್ ಕುರಿತ ನನ್ನ ಹೇಳಿಕೆಯೂ ನನ್ನ ಅವಲೋಕನವಷ್ಟೇ.. ನನ್ನ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ನನ್ನ ಕುಟುಂಬ ಸದಸ್ಯರ ಜೊತೆ ತಳುಕು ಹಾಕುವುದು ಸರಿಯಲ್ಲ..

ನನ್ನ ತಂದೆ ಸುಮಾರು ಮೂವತ್ತೈದು ವರ್ಷಗಳ ವರೆಗೆ ಲಕ್ಷಾಂತರ ಕಾರ್ಯಕರ್ತರ ಜತೆ ಸೇರಿ ಒಂದೊಂದೇ ಇಟ್ಟಿಗೆ ಇಟ್ಟು ಕರ್ನಾಟಕದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ನಿರ್ಮಿಸಿದ್ದಾರೆ.. ನನ್ನ ಅಮ್ಮ ಹಸಿವು ಪೌಷ್ಟಿಕಾಂಶ ಪರಿಸರ ಸೇರಿದಂತೆ ಪಕ್ಷಕ್ಕಾಗಿ ಹಾಗೂ ಸಮಾಜಕ್ಕಾಗಿ ಅತ್ಯಂತ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ.. ಪ್ರಜಾಪ್ರಭುತ್ವದಲ್ಲಿ‌ ಪರಸ್ಪರ ಗೌರವ ಮೂಲಭೂತವಾದದ್ದು ಎಂದು ನನ್ನ ತಂದೆ ನನಗೆ ಕಲಿಸಿದ್ದಾರೆ.. ನಾನು ಯಾವುದೇ ಪಕ್ಷವನ್ನು ಸೇರುತ್ತೇನೆ ಎಂದು ನನ್ನ ಅಭಿವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು.. ನಾನು ಮುಂದೆ ಒಂದು ಸುಧೀರ್ಘ ಪ್ರಯಾಣವನ್ನು ಹೊಂದಿದ್ದೇನೆ.. ಮತ್ತು ನನ್ನ ಮಾತೃಭೂಮಿಯ ಸೇವೆಗಾಗಿ ನನ್ನ ಕಲಿಕೆಯನ್ನು ಹೆಚ್ಚಿಸಲು ಬಯಸುತ್ತೇನೆ.. ನನಗೆ ಸದಾ ದೇಶವೇ ಮೊದಲು.. ಎಂದು ಬರೆಯುವ ಮೂಲಕ ತಾವು ಜೆಡಿಎಸ್ ಪಕ್ಷಕ್ಕೆ ಸೇರುವ ವಿಚಾರಕ್ಕೆ ಅಂತ್ಯ ಹಾಡಿದ್ದಾರೆ..