ಈ ವಿನಯ್‌ ಗೌಡ ನಿಜಕ್ಕೂ ಯಾರು? ಕಲರ್ಸ್‌ ಕನ್ನಡ ವಾಹಿನಿಯೇ ಭಯ ಪಡ್ತಿರೋದೇಕೆ?

0 views

ಬಿಗ್‌ ಬಾಸ್‌ ಕನ್ನಡ.. ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಎನ್ನಲಾಗುತ್ತದೆ.. ಸೇಸನ್‌ ಒಂದರಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುವ ಬಿಗ್‌ ಬಾಸ್‌ ಕನ್ನಡ ಈ ಬಾರಿ ಸ್ಪರ್ಧಿಗಳ ಆಯ್ಕೆಯ ವಿಚಾರವಾಗಿ ದೊಡ್ಡ ಸುದ್ದಿಯೇ ಆಗುತ್ತಿದೆ ಎಂದರೆ ಅದು ಸುಳ್ಳಲ್ಲ.. ಅದರಲ್ಲೂ ಈ ಬಾರಿಯ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ವಿಚಿತ್ರವಾಗಿದ್ದು.. ಕೆಲವರು ಇಷ್ಟವಾದರೆ ಕೆಲವರು ಕಷ್ಟ ಎನಿಸುತ್ತಿರುವುದು ಉಂಟು.. ಇನ್ನು ಬಿಗ್‌ ಬಾಸ್‌ ಸೇಸನ್‌ ಹತ್ತು ಶುರುವಾಗಿ ಅದಾಗಲೇ ಮೂರು ವಾರಗಳು ಕಳೆದಿದ್ದು ಮೊದಲ ವಾರ ಸ್ನೇಕ್‌ ಶ್ಯಾಮ್‌ ಅವರು ಹಾಗೂ ಎರಡನೇ ವಾರ ಗೌರೀಶ್‌ ಅಕ್ಕಿ ಅವರು ಬಿಗ್‌ ಬಾಸ್‌ ಮನೆಯಿಂದ ಹೊರ ನಡೆದಾಯಿತು.. ಇನ್ನು ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಮಾತನಾಡುವುದಾದರೆ ಹೊರಗಡೆ ಇದ್ದಾಗ ಇಷ್ಟವಾಗದ ಪ್ರತಾಪ್‌ ಮನೆಯೊಳಗೆ ನೆಚ್ಚಿನ ಸದಸ್ಯ ಎಂದು ಹೇಳುವಷ್ಟರ ಮಟ್ಟಕ್ಕೆ ಪ್ರೇಕ್ಷಕರಿಗೆ ಇಷ್ಟವಾಗಿರೋದುಂಟು.. ಇನ್ನು ಕೆಲವರು ಧಾರಾವಾಹಿಯಲ್ಲಿ ಹೀರೋಗಳು ಹಾಗೂ ಸಾಕ್ಷಾತ್‌ ಮಹಾದೇವನ ಪಾತ್ರ ಮಾಡಿ ಜನರ ಮನ ಗೆದ್ದಿದ್ದರೂ ಕೂಡ ಬಿಗ್‌ ಬಾಸ್‌ ಮನೆಯೊಳಗೆ ತಮ್ಮ ನಿಜವಾದ ನಡವಳಿಕೆಯಿಂದ ಅಸಹ್ಯ ಹುಟ್ಟಿಸಿರೋದು ಉಂಟು.. ಕೆಳಗಿನ ವೀಡಿಯೋ ನೋಡಿ..

ಹೌದು ಮನೆಯ ಕೆಲ ಸದಸ್ಯರನ್ನು ಕಂಡರೆ ಬಿಗ್‌ ಬಾಸ್‌ ಮನೆಯ ಉಳಿದ ಸ್ಪರ್ಧಿಗಳು ಮಾತ್ರವಲ್ಲ ಅದ್ಯಾಕೋ ಕಲರ್ಸ್‌ ಕನ್ನಡ ವಾಹಿನಿಯೇ ಭಯ ಪಟ್ಟಂತೆ ಕಾಣುತ್ತಿದೆ.. ಯಾರ ಬಗ್ಗೆ ಮಾತು ಎಂಬುದು ಎಲ್ಲರಿಗೂ ತಿಳಿದೇ ಇದೆ.. ಹೌದು ನಟ ವಿನಯ್‌ ಅದ್ಯಾಕೋ ತನ್ನ ದುರಹಂಕಾರದ ಪರಮಾವಧಿಯನ್ನು ಮೀರಿದಂತೆ ಕಾಣುತ್ತಿದೆ.. ದೊಡ್ಡ ಘಟ ಏರು ಧ್ವನಿ ಇದೆ ಎಂದ ಮಾತ್ರಕ್ಕೆ ಎಲ್ಲರನ್ನೂ ಹೆದರಿಸಿ ನಡೆಯಬಹುದು ಎಂದು ಊಹಿಸಿಕೊಂಡು ತಲೆಯಲ್ಲೇ ನಡೆಯುತ್ತಿರುವ ಸ್ಪರ್ಧಿ ಈ ವಿನಯ್‌ ಎಂಬ ಮಾತುಗಳು ಕೇಳಿ ಬರುತ್ತಿದೆ.. ಬಿಗ್‌ ಬಾಸ್‌ ಮನೆಯಲ್ಲಿ ತಾನೋಬ್ಬ ದೊಡ್ಡ ಡಾ.. ಎಂಬಂತೆ ಆಡುತ್ತಿದ್ದು ಇದಕ್ಕೆ ಕಲರ್ಸ್‌ ಕನ್ನಡ ವಾಹಿನಿ ಸೊಪ್ಪಾಕುತ್ತಿರುವುದು ನಿಜಕ್ಕೂ ಆಶ್ಚರ್ಯ ವಾಗುತ್ತಿದೆ. ಹೌದು ಬಿಗ್‌ ಬಾಸ್‌ ಮನೆಯಲ್ಲಿ ಯಾರೇ ಸದಸ್ಯರು ತಪ್ಪು ಮಾಡಿದರೂ ಕೂಡ ವಾರದ ಕತೆಯಲ್ಲಿ ಕಿಚ್ಚ ಸುದೀಪ್‌ ಅವರು ಅದನ್ನು ಮುಖಕ್ಕೆ ಹೊಡೆದಂತೆ ಮಾತನಾಡುವುದು ಈಗ ಮಾತ್ರವಲ್ಲ ಪ್ರತಿಯೊಂದು ಸೀಸನ್‌ ನಲ್ಲಿಯೂ ಜನರಿಗೆ ಇಷ್ಟವಾಗುತಿತ್ತು..

ವಾರ ಪೂರ್ತಿ ಮನೆಯಲ್ಲಿ ತಪ್ಪು ಮಾಡಿದವರಿಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ಅವರು ಸರಿಯಾಗಿ ತರಾಟೆಗೆ ತೆಗೆದುಕೊಂಡು ಬುದ್ಧಿ ಹೇಳುವುದನ್ನು ನೋಡಲೇ ಸಾಕಷ್ಟು ಜನ ಶೋ ನೋಡುತ್ತಿದ್ದದ್ದೂ ಉಂಟು.. ಆದರೆ ಅದ್ಯಾಕೋ ವಿನಯ್‌ ವಿಚಾರದಲ್ಲಿ ಕಿಚ್ಚ ಸುದೀಪ್‌ ಅವರು ಒಂದೂ ಮಾತನಾಡದೇ ಇರುವುದು ನಿಜಕ್ಕೂ ವೀಕ್ಷಕರಿಗೆ ಬೇಸರ ತರಿಸಿದೆ.. ಮೊದಲ ವಾರದಿಂದಲೂ ವಿನಯ್‌ ತನ್ನ ದುರಹಂಕಾರವನ್ನು ತೋರುತ್ತಿದ್ದು ಮೊದಲ ವಾರ ಡ್ರೋನ್‌ ಪ್ರತಾಪ್‌ ನ ರೆಕ್ಕೆ ಪುಕ್ಕ ಕಿತ್ತಾಕುವೆ ಎಂದು ಮಾತನಾಡಿದರೂ ಕೂಡ ಆ ವಾರ ವಿನಯ್‌ ಗೆ ಸುದೀಪ್‌ ಅವರು ಒಂದೂ ಮಾತನಾಡಲಿಲ್ಲ.. ಇನ್ನು ಇದು ವಿನಯ್‌ ಗೆ ಮತ್ತಷ್ಟು ಅಹಂಕಾರವನ್ನು ತಂದುಕೊಟ್ಟಿತು ಎಂದರೂ ತಪ್ಪಾಗಲಾರದು.. ಎರಡನೇ ವಾರವೂ ದರ್ಪದಿಂದ ಮೆರೆಯುತ್ತಿದ್ದ ವಿನಯ್‌ ಸಂಗೀತಾ ಮೇಲೆ ಎಗರಿ ಬೀಳುವುದು ಹೊಸದೇನೂ ಆಗಿರಲಿಲ್ಲ.. ಆದರೆ ಅದ್ಯಾಕೋ ಮನೆಯ ಸದಸ್ಯರೆಲ್ಲರೂ ಅವನಿಗೆ ಹೆದರಿಕೊಂಡು ಬಕೆಟ್‌ ಹಿಡಿಯುತ್ತಿದ್ದಂತೆ ಕಾಣುತಿತ್ತು..

ಇನ್ನು ವಿನಯ್‌ ಏನೇ ತಪ್ಪು ಮಾಡಿದರೂ ಕೂಡ ಅದನ್ನು ಪ್ರಶ್ನಿಸದ ಸುದೀಪ್‌ ಅವರು ಈ ವಾರ ಆತ ಮಾಡಿದ ತಪ್ಪುಗಳ ಬಗ್ಗೆ ಮಾತನಾಡುವರು ಎಂದು ಜನರು ಕಾದಿದ್ದರು.. ಆತ ಮಾಡಿದ ತಪ್ಪಿನಿಂದ ಮನೆಯ ಸದಸ್ಯರೆಲ್ಲಾ ಭಾರ ಹೊರುವಂತಾಯಿತು.. ಈ ಬಗ್ಗೆಯೂ ವಿನಯ್‌ ಗೆ ಒಂದೂ ಮಾತು ಬೈಯಲಿಲ್ಲ.. ಇನ್ನು ಪ್ರತಾಪ್‌ ಮೇಲೆ ಮತ್ತೆ ಮತ್ತೆ ತನ್ನ ಪೌರುಷ ತೋರುತ್ತಿದ್ದ ವಿನಯ್‌ ಈ ವಾರ ಕೂಡ ಬಾಯಿ ಮುಚ್ಚಿಕೊಂಡು ಕೇಳು ಎನ್ನವ ಮಾತುಗಳನ್ನಾಡಿದ್ದನು.. ಈ ಬಗ್ಗೆಯೂ ಕೂಡ ಸುದೀಪ್‌ ಅವರು ಯಾವುದೇ ಮಾತನಾಡಲಿಲ್ಲ.. ಇದು ನಿಜಕ್ಕೂ ಬಿಗ್‌ ಬಾಸ್‌ ಪ್ರೇಕ್ಷಕರಿಗೆ ಅದ್ಯಾಕೋ ತೀರಾ ಅಸಮಾಧಾನವನ್ನು ತರಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕಮೆಂಟ್‌ ಮಾಡುತ್ತಿದ್ದಾರೆ.. ಇನ್ನು ಮನೆಯ ಸದಸ್ಯರಿಗಾಗಿ ಜನರು ಒಂದಷ್ಟು ಉಡುಗೊರೆಗಳನ್ನು ಕಳುಹಿಸಿದ್ದು ಅದರಲ್ಲಿ ವಿನಯ್‌ ಗೆ ಆನೆ ಉಡುಗೊರೆಯಾಗಿ ಬಂದಿದೆ.. ಕೆಳಗಿನ ವೀಡಿಯೋ ನೋಡಿ..

ಅದರ ಜೊತೆ ಬರೆದಿರುವ ಪತ್ರದಲ್ಲಿ ಈ ಮನೆಯಲ್ಲಿ ನಿಮ್ಮನ್ನ ಯಾರೂ ಬೀಳಸೋರಿಲ್ಲ ಅಂತ ಅಂದುಕೊಂಡು ದಿಕ್ಕು ತಪ್ಪಬೇಡ.. ಎಂದು ಬರೆದಿದ್ದು ಆತ ಅತಿಯಾಗಿ ತಲೆಯಲ್ಲೇ ಮೆರೆಯುತ್ತಿರುವುದ ಕಡಿಮೆ ಮಾಡು ಎನ್ನುವಂತಿತ್ತು.. ಆದರೆ ಸುದೀಪ್‌ ಅವರು ಮಾತ್ರ.. ವಿನಯ್‌ ನೀವು ಆ ಮನೆಯಲ್ಲಿ ಆನೆ ಇದ್ದಂತೆ ಅದು ನಿಮಗೆ ಪಾಸಿಟಿವ್‌ ಆಗಿ ಬಂದಿದೆ ಎಂದು ಹೇಳಿ ಅಭಿನಂದಿಸಿದರು.. ಈ ಬಗ್ಗೆ ಸಾಕಷ್ಟು ಟ್ರೋಲ್‌ ಆಗುತ್ತಿರೋದು ಉಂಟು.. ಒಟ್ಟಿನಲ್ಲಿ ಇಷ್ಟು ದಿನ ಬಿಗ್‌ ಬಾಸ್‌ ಗೆ ಮನೆಯ ಸದಸ್ಯರು ಭಯ ಪಡುತ್ತಿದ್ದರೆ ಈಗ ಮಾತ್ರ ಮನೆಯ ಸದಸ್ಯನೊಬ್ಬನಿಗೆ ಬಿಗ್‌ ಬಾಸೇ ಭಯ ಪಡುತ್ತಿರುವುದು ನಿಜಕ್ಕೂ ವಿಚಿತ್ರ ಎನ್ನಬಹುದು..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.