ಸಿಹಿಸುದ್ದಿ.. ಕೊರೊನಾದ ಅಂತ್ಯ ಯಾವಾಗ ಎಂದು ಖಚಿತವಾಗಿ ತಿಳಿಸಿದ ವಿನಯ್ ಗುರೂಜಿ..‌‌

0 views

ಕಳೆದ ಎರಡು ವರ್ಷಗಳಿಂದ ಕೊರೊನಾ ಬಂದ ನಂತರ ಜನರ ಜೀವನ ಯಾವ ರೀತಿಯಾಗಿದೆ ಎಂದರೆ ಅದನ್ನು ನೆನಪಿಸಿಕೊಂಡರೆ ಈಗಲೂ ಸಹ ಒಮ್ಮೆ ಕುಸಿದು ಬೀಳುವಂತಾಗುತ್ತದೆ.. ಅದರಲ್ಲಿಯೂ ಕಳೆದ ವರ್ಷ ಮಾರ್ಚ್ ತಿಂಗಳಿನಿಂದೀಚೆಗೆ ಭಾರತದಲ್ಲಿ ಹಿಂದೆಂದೂ ನಾವು ನೋಡದ ಪರಿಸ್ಥಿತಿ‌ ನಿರ್ಮಾಣವಾಗಿತ್ತು.. ಬಡವರು ಬೇಡಿ ತಿನ್ನುವಂತಾಯಿತು.. ಸಿರಿವಂತರು ಕೂಡಿಟ್ಟಿದ್ದರಲ್ಲಿ ಜೀವನ ನಡೆಸುವಂತಾಯಿತು.. ಆದರೆ ಮದ್ಯಮ ವರ್ಗದವರ ಪಾಡು ಹೇಳತೀರಂದಂತಾಯಿತು.. ಲೋನ್ ಗಳು ಇ ಎಂ ಐ ಗಳು ಮನೆ ಬಾಡಿಗೆ ಜೀವನ ನಡೆಸಲು ಸಹ ಹಣವಿಲ್ಲದೇ ಪರದಾಡುವಂತಾಯಿತು.. ಇದು ತಿಂಗಳುಗಳು ಕಳೆದು ವರ್ಷವಾದತೂ ಜನರ ಪರಿಸ್ಥಿತಿ ಸುಧಾರಿಸಲಿಲ್ಲ.. ಇತ್ತೀಚೆಗೆ ಎಲ್ಲವೂ ಮೊದಲಿನಂತಾಗುತ್ತಿದೆ ಎಂಬ ಸಣ್ಣ ಭರವಸೆ ಬರುತ್ತಿರುವಾಗಲೇ ಇತ್ತ ಓಮಿಕ್ರಾನ್ ಆ ಕ್ರಾನ್ ಈ ಕ್ರಾನ್ ಎಂದುಕೊಂಡು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೀಗ ಎಲ್ಲೋ ಒಂದು ಕಡೆ ಮತ್ತೊಂದು ಭರವಸೆ ಮೂಡಿದಂತೆ ಕಾಣುತ್ತಿದೆ..

ಹೌದು ಸಾಮಾನ್ಯವಾಗಿ ಕೆಲವರು ಈ ಭವಿಷ್ಯವಾಣಿಗಳನ್ನು ನಂಬಿದರೆ ಮತ್ತೆ ಕೆಲವರು ಇದರಿಂದ ದೂರವೇ ಇರುತ್ತಾರೆ.. ಆದರೆ ಪರಿಸ್ಥಿತಿಗಳು ಸಂದರ್ಭಗಳು ಕೆಟ್ಟಾಗ ಹುಲ್ಲುಕಡ್ಡಿಯೂ ಆಸರೆಯಾದಂತೆ ಯಾರೇ ಸಣ್ಣದಾಗಿ ಸಕಾರಾತ್ಮಕವಾದ ವಿಚಾರ ತಿಳಿಸಿದರೂ ಸಹ ಮನುಷ್ಯನಲ್ಲಿ ಜಿಒವನದ ಮೇಲೆ ಆಶಾಭಾವನೆ ಮೂಡುತ್ತದೆ.. ಅದೇ ರೀತಿ ಇದೀಗ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಸಧ್ಯ ಕೊರೊನಾ ನಿಲ್ಲುವುದರ ಬಗ್ಗೆ ಮಾತುಗಳನ್ನಾಡಿದ್ದಾರೆ..

ಹೌದು ವಿನಯ್ ಗುರೂಜಿ ಅತಿ ಚಿಕ್ಕ ವಯಸ್ಸಿನವರಾದರೂ ಸಹ ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದರೂ ಸಹ ಅವಧೂತರು ಎನ್ನಲಾಗುವ ಇವರ ಬಳಿಗೆ ದೊಡ್ಡ ದೊಡ್ಡ ರಾಜಕಾರಣಿಗಳು ದೊಡ್ಡ ದೊಡ್ಡ ಉದ್ಯಮಿಗಳು ಕಲಾವಿದರು ಎಲ್ಲರೂ ಸಹ ಇವರ ಬಳಿ ತೆರಳುವುದು ಅಷ್ಟೇ ಸತ್ಯವಾಗಿದೆ.. ಎಸ್ ಎಂ ಕೃಷ್ಣ ಅವರ ಕುಟೂಂಬ ಡಿಕೆ ಶಿವಕುಮಾರ್ ಅವರ ಕುಟುಂಬ ದೇವೇ ಗೌಡರ ಕುಟುಂಬ ಹೀಗೆ ಬಹಳಷ್ಟು ರಾಜಕಾರಣಿಗಳು ಇವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಪಡೆಯುವುದು ಸಹ ಸುಳ್ಳಲ್ಲ.. ಅಷ್ಟೇ ಏಕೆ ಇವರ ಸಲಹೆಯಂತೆಯೇ ಕಾಫಿ ಡೇ ಸಿದ್ದಾರ್ಥ್ ಅವರ ಮಗನ ಜೊತೆಹೆ ಡಿಕೆ ಶಿವಕುಮಾರ್ ಅವರ ಮಗಳ ಮದುವೆ ಕೂಡ ಮಾಡಲಾಯಿತು..

ಇನ್ನು ರಾಜಕೀಯ ವಿಚಾರವಾಗಿ ಸಾಕಷ್ಟು ವಿಚಾರ ತಿಳಿಸುವ ವಿನಯ್ ಗುರೂಜಿ ಇದೀಗ ಕೊರೊನಾದ ಬಗ್ಗೆ ಮಾತನಾಡಿದ್ದಾರೆ.. ಹೌದು ಅದರಲ್ಲೂ ಜನರಿಗೆ ಸಿಹಿಸುದ್ದಿಯನ್ನೇ ನೀಡಿದ್ದು ಸಧ್ಯದಲ್ಲಿಯೇ ಕೊರೊನಾ ಮುಕ್ತಾಯವಾಗುವುದರ ಬಗ್ಗೆಯೂ ಹೇಳಿದ್ದಾರೆ.. “ಮಳೆ ವಿಚಾರವೂ ಸಹ ಗೊತ್ತಾಗಿತ್ತು.. ಹಾಗಾಗಿ ಈ ಕೊರೊನಾ ವಿಚಾರ ಇನ್ನು ಮೂರು ನಾಲ್ಕು ತಿಂಗಳು ಎಳಿಬಹುದು.. ನನಗೆ ನನ್ನ ವ್ಯಯಕ್ತಿಕ ಅಭಿಪ್ರಾಯ.. ನಾನ್ ಮೆಡಿಟೇಷನ್ ಮಾಡಿದಾಗ ತಿಳಿದಿರೋದು.. ಎಲ್ಲವನ್ನು ದೇವರು ಮಾಡ್ಲಿ ಮ್ಯಾಜಿಕ್ ಆಗಲಿ‌ ಪವಾಡ ಆಗಲಿ ಅಂತಲ್ಲ.. ನಮ್ಮ ಪ್ರಯತ್ನವೇ ನಿಜವಾದ ಪವಾಡ.. ಪಕ್ಷಕ್ಕಿಂತ ವೋಟರ್ಸ್ ಮುಖ್ಯ.. ಎಲ್ಲಾ ನಾಗರೀಕರನ್ನ ನಾವು ರಕ್ಷಣೆ ಮಾಡಬೇಕು.. ಒಮ್ಮತದಿಂದ ಕೆಲಸ ಮಾಡಿದರೆ ಮಾರ್ಚ್ ಮೇ ಒಳಗೆ ನಾವೆಲ್ಲರೂ ಇದರಿಂದ ಹೊರ ಬರ್ತೀವಿ ಅಂತ ನನ್ನ ನಂಬಿಕೆ..” ಎಂದಿದ್ದಾರೆ..

ಒಟ್ಟಿನಲ್ಲಿ ಯಾರೇ ಹೇಳಲಿ ಆದರೆ ಈ ಕೊರೊನಾ ಅನ್ನೋದು ಹೊರಟುಹೋದರೆ ಜನರ ಬದುಕು ಮೊದಲಿನಂತಾಗಿಬಿಟ್ಟರೆ ಸಾಕು.. ಇರೋವಷ್ಟು ದಿನ ದುಡಿದು ತಿನ್ನಲು ದಾರಿ ಸಿಕ್ಕರೆ ಸಾಕು.. ಅದನ್ನು ಬಿಟ್ಟು ಕಾಣದ ಕಾಯಿಲೆಗೆ ತುತ್ತಾಗಿ ಮನೆಯವರು ಸಹ ಮುಖ ನೋಡದಂತೆ ಹೋಗೋದು ಯಾರಿಗೂ ಆ ಪರಿಸ್ಥಿತಿ ಬಾರದಿರಲಿ.. ಅದರಲ್ಲೂ ಕಳೆದ ವರ್ಷ ಕೊರೊನಾದಿಂದಾಗಿ ಜೀವ ಕಳೆದುಕೊಂಡವರ ಮುಖವನ್ನೂ ಸಹ ಯಾರು ನೋಡಲಾಗಲಿಲ್ಲ.. ಅದರಲ್ಲೂ ಜೆಸಿಬಿಗಳಲ್ಲಿ ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಿದ ರೀತಿಯಂತೂ ನಿಜಕ್ಕೂ ಏತಕ್ಕಾಗಿ ಈ ಶಿಕ್ಷೆ ಎನ್ನುವಂತಾಗಿತ್ತು.. ಸಧ್ಯ ಪರಿಸ್ಥಿತಿ ಸುಧಾರಿಸಿದೆ.. ಮುಂದಿನ ದಿನಗಳಲ್ಲಿ ಕೊರೊನಾ ಅಂತ್ಯವಾಗಲಿದೆ ಎನ್ನುವ ಮಾತುಗಳನ್ನು ಸಹ ದೊಡ್ಡವರು ಆಡುತ್ತಿದ್ದಾರೆ.. ಅದೇ ರೀತಿ ಎಲ್ಲವೂ ಆಗಿಬಿಡಲಿ.. ಆದರೆ ಅದನ್ನು ಬಿಟ್ಟು ಈ ಮಧ್ಯೆ ಹೊಸ ತಳಿ ಆ ತಳಿ ಈ ತಳಿ ಅಂತ ಮತ್ಯಾವುದೇ ಹೊಸ ವೈರಸ್ ಗಳು ಬರದಿದ್ದರೆ ಸಾಕು..