ವಿನೋದ್ ರಾಜ್ ಹಾಗೂ ಲೀಲಾವತಿ ಅವರು ಜೂನಿಯರ್‌ ಕಲಾವಿದರಿಗೆ ಆಹಾರ ಕಿಟ್ ಕೊಡಲು ಬಳಸುತ್ತಿರುವುದು ನಿಜಕ್ಕೂ ಯಾವ ದುಡ್ಡು ಗೊತ್ತಾ?

0 views

ಕೊರೊನಾ ಎರಡನೇ ಅಲೆ ತನ್ನ ಆಟವನ್ನು ತೋರುತ್ತಿದೆ.. ಇದನ್ನು ನಿಯಂತ್ರಣ ಮಾಡುವ ಸಲುವಾಗಿ ಅದಾಗಲೇ ಸರ್ಕಾರ ಲಾಕ್ ಡೌನ್ ಮಾಡಿದ್ದು ಸಾವಿರಾರು ಕುಟುಂಬಗಳು ಊಟಕ್ಕೂ ಇಲ್ಲದಂತೆ ಪರದಾಡುವಂತಾಗಿದೆ.. ಇನ್ನು ಕಳೆದ ವರ್ಷ ಹೊಸದರ ಬಿರುಸಿನಲ್ಲಿ ಸಾಲು ಸಾಲು ಮಂದಿ ಆಹಾರ ಕಿಟ್ ಅದು ಇದು ಅಂತ ನೆರವು ನೀಡಲು ಮುಂದಾಗಿದ್ದರು.. ನೂರಾರು ದಾನಿಗಳಿಂದ ಬಹಳಷ್ಟು ಜನರಿಗೆ ನರವಾಗಿತ್ತು.. ಆದರೆ ಈ ವರ್ಷ ಯಾಕೋ ಯಾರೂ ಅಷ್ಟು ಉತ್ಸುಕರಾಗಿಲ್ಲ.. ತಾವಾಯ್ತು ತಮ್ಮ ಪಾಡಾಯ್ತು ಅಂತ ಸುಮ್ಮನಾಗಿದ್ದಾರೆ.. ಕಳೆದ ವರ್ಷ ಪ್ರಚಾರಕ್ಕೂ ಸಹ ಕೆಲವರು ದಾನ ಧರ್ಮ ಮಾಡಿದ್ದೂ ಉಂಟು.. ಆದರೆ ಇದು ಸಾಮಾನ್ಯ ಎಂದು ಅಂತವರು ಸಹ ಇದೀಗ ಸುಮ್ಮನಾಗಿ ಬಿಟ್ಟರು..

ಆದರೆ ಇವರೆಲ್ಲರ ನಡುವೆ ಜನರಿಗೆ ನೆರವಾಗಲು ಕೆಲವರು ಮುಂದೆ ಬಂದಿದ್ದಾರೆ.. ಇನ್ನು ಚಿತ್ರರಂಗ ಮತ್ತೆ ಕಳೆದ ವರ್ಷದ ಸ್ಥಿತಿಗೆ ಬಂದು ನಿಂತಿದ್ದು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ದಿನಗೂಲಿ ನೌಕರರ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ.. ಸಿನಿಮಾ ಕೆಲಸಗಳು ನಿಂತು ತಿಂಗಳುಗಳು ಕಳೆದು ಹೋಗಿವೆ.. ಇಂತಹ ಸಮಯದಲ್ಲಿ ಮತ್ತೊಬ್ಬರ ಬಳಿ ಕೇಳಲೂ ಆಗದೆ ಸಂಸಾರ ಸಾಗಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.. ಇಂತಹವರಿಗೆ ಇದೀಗ ಸ್ಯಾಂಡಲ್ವುಡ್ ನಟ ಉಪೇಂದ್ರ ಅವರು ಸಹಾಯ ನೀಡಲು ಮುಂದಗಿದ್ದು ಉಪೇಂದ್ರ ಅವರಿಗೆ ಸಾಕಷ್ಟು ಸ್ಟಾರ್ ಕಲಾವಿದರು ಕೈ ಜೋಡಿಸುತ್ತಿದ್ದಾರೆ..

ಇನ್ನು ಇದೆಲ್ಲದರ ನಡುವೆ ಎಲೆ ಮರೆಯ ಕಾಯಿಯಂತೆ ಜೂನಿಯರ್ ಕಲಾವಿದರಿಗೆ ಆ ಎರಡು ಜೀವಗಳು ನೆರವಾಗುತ್ತಿವೆ.. ಹೌದು ಆ ಎರಡು ಜೀವ ಮತ್ಯಾರೂ ಅಲ್ಲ ಹಿರಿಯ ನಟಿ ಲೀಲಾವತಿ ಅವರು ಹಾಗೂ ವಿನೋದ್ ರಾಜ್ ಅವರು.. ಅದರಲ್ಲಿಯೂ ಇವರು ಜೂನಿಯರ್ ಕಲಾವಿದರಿಗೆ ನೆರವಾಗಲು ಬಳಸುತ್ತಿರುವ ಹಣ ಯಾವುದು ಎಂದು ತಿಳಿದರೆ ನಿಜಕ್ಕೂ ಆಶ್ಚರ್ಯವಾಗುವುದು.. ಹೌದು ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಅವರೊಟ್ಟಿಗೆ ತೋಟದಲ್ಲಿ ಕೃಷಿ ಮಾಡಿಕೊಂಡು ವಾಸವಿದ್ದ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಆದರೆ ಬರಿ ತಮ್ಮ ಬದುಕು ಮಾತ್ರ ನೋಡದ ಈ ತಾಯಿ ಮಗ ತಮ್ಮ ಸ್ವಂತ ದುಡ್ಡಿನಲ್ಲಿ ತಾವಿದ್ದ ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿಕೊಟ್ಟಿದ್ದರು..

ಅಷ್ಟೇ ಅಲ್ಲದೇ ಉತ್ತರ ಕರ್ನಾಟಕದ ನೆರೆಯ ಸಮಯದಲ್ಲಿ ಅಲ್ಲಿನ ಜನರ ಗೋವುಗಳ ಹೊಟ್ಟೆ ತುಂಬಿಸುವ ಸಲುವಾಗಿ ಲಾರಿಗಟ್ಟಲೇ ಆಹಾರವನ್ನು ಪೂರೈಸಿದ್ದರು.. ಜೊತೆಗೆ ಕಳೆದ ವರ್ಷ ಕೊರೊನಾ ಸಮಯದಲ್ಲಿ ಸಂಪೂರ್ಣ ಊರಿಗೆ ತಮ್ಮ ಸ್ವಂತ ಹಣದಲ್ಲಿ ಸ್ಯಾನಿಟೈಸ್ ಮಾಡಿಸಿದ್ದರು.. ಜೊತೆಗೆ ಜೂನಿಯರ್ ಕಲಾವಿದರಿಗೆ ನೆರವಾಗುವ ಸಲುವಾಗಿ ಎಲ್ಲರಿಗೂ ಆಹಾರ ಕಿಟ್ ಗಳನ್ನು ನೀಡಿ ದೊಡ್ಡತನ ತೋರಿದ್ದರು.. ಆದರೆ ಈ ವರ್ಷ ನೆರವು ನೀಡಲು ಅಷ್ಟಾಗಿ ಯಾರೂ ಸಹ ಮುಂದೆ ಬಂದಿಲ್ಲ.. ಆದರೆ ಲೀಲಾವತಿ ಅಮ್ಮನವರು ಹಾಗೂ ವಿನೋದ್ ರಾಜ್ ಅವರು ಮಾತ್ರ ನೆರವಾಗುವುದ ಮರೆಯಲಿಲ್ಲ.. ಈ ಬಾರಿಯೂ ಚಿತ್ರರಂಗದ ಸಾವಿರಾರು ಜೂನಿಯರ್ ಕಲಾವಿದರಿಗೆ ಉತ್ತಮ ಗುಣಮಟ್ಟದ ಆಹಾರ ಕಿಟ್ ಗಳನ್ನು ಯಾವುದೇ ಪ್ರಚಾರದ ನಿರೀಕ್ಷೆಯಿಲ್ಲದೆ ನೀಡುತ್ತಾ ಬರುತ್ತಿದ್ದಾರೆ.. ಆದರೆ ಇವರು ಜೂನಿಯರ್ ಕಲಾವಿದರಿಗೆ ಆಹಾರ ಕಿಟ್ ನೀಡಲು ಬಳಸುತ್ತಿರುವ ಹಣ ಯಾವುದು ಗೊತ್ತಾ..

ಆ ಹಣ ಬೇರೆ ಯಾವುದೋ ಅಲ್ಲ.. ಬದಲಿಗೆ ಲೀಲಾವತಿ ಅವರು ತಮ್ಮ ಆಸ್ತಿ ಮಾರಿದ ಹಣ.. ಹೌದು ತಮ್ಮ ಆಸ್ತಿಯನ್ನು ಮಾರಿ ತಮ್ಮ ಜೀವನದ ನಿರ್ವಹಣೆಗಾಗಿ ಇಟ್ಟುಕೊಂಡಿದ್ದ ಹಣದಲ್ಲಿ‌ ಇದೀಗ ಜೂನಿಯರ್ ಕಲಾವಿದರ ಜೀವನ ನಡೆಸಲು ನೆರವಾಗುತ್ತಿದ್ದಾರೆ.. ನಿಜಕ್ಕೂ ಮತ್ತೊಬ್ಬರದ್ದು ಕಿತ್ತುಕೊಂಡು ಆಸ್ತಿ ಮಾಡಬೇಕು ಎನ್ನುವ ಈ ಕಾಲದಲ್ಲಿ ತಮ್ಮ ಆಸ್ತಿಯನ್ನು ಮಾರಿದ ಹಣದಲ್ಲಿ ಚಿತ್ರರಂಗದ ಜೂನಿಯರ್ ಕಲಾವಿದರಿಗೆ ನೆರವಾಗುತ್ತಿರುವುದು ನಿಜಕ್ಕೂ ದೊಡ್ಡತನವೇ ಸರಿ.. ಲೀಲಾವತಿ ಅಮ್ಮನವರಿಗೆ ಹಾಗೂ ವಿನೋದ್ ರಾಜ್ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ..