ವಿನೋದ್ ರಾಜ್ ಅವರಿಗೆ ಮದುವೆ ಯಾಕೆ ಮಾಡಲಿಲ್ಲ.. ಕಣ್ಣೀರಿಟ್ಟು ಸತ್ಯ ಬಿಚ್ಚಿಟ್ಟ ಲೀಲಾವತಿ ಅವರು..

0 views

ಸ್ಯಾಂಡಲ್ವುಡ್ ಕಂಡ ಶ್ರೇಷ್ಠ ನಟಿಯರಲ್ಲಿ ಒಬ್ಬರು ಲೀಲಾವತಿ ಅವರು.. ನಟನೆ ಮಾತ್ರವಲ್ಲದೇ ನಿಜ ಜೀವನದಲ್ಲಿಯೂ ಸಹ ತಾವು ನಡೆದುಕೊಳ್ಳುವ ರೀತಿಯಿಂದಲೇ ಜನರಿಗೆ ಮತ್ತಷ್ಟು ಇಷ್ಟವಾಗುವ ಹಿರಿ ಜೀವವದು.. ನಾಡಿಗೆ ಕಷ್ಟ ಬಂದಾಗಲೆಲ್ಲಾ ತಮ್ಮ ಕೈಲಾದಷ್ಟು ಜನರಿಗೆ ಸಹಾಯ ಮಾಡುತ್ತಲೇ ಬಂದ ಹಿರಿ ಜೀವ ಇಂದು ಮಗನ ವಿಚಾರಕ್ಕೆ ಕಣ್ಣೀರಿಟ್ಟಿದೆ.. ಹೌದು ಲೀಲಾವತಿ ಅವರು ಹಾಗೂ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರವಾದ ಬಳಿಕ ಹಳ್ಳಿಯೊಂದರಲ್ಲಿ ತೋಟ ಮಾಡಿಕೊಂಡು ಕೃಷಿ ಕಾಯಕದಲ್ಲಿ ತೊಡಗಿಕೊಂಡರು.. ತಮ್ಮ ಜೀವನವಷ್ಟೇ ನೋಡದ ಅವರು ಆಸ್ಪತ್ರೆಯೇ ಇಲ್ಲದ ಆ ಹಳ್ಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿಕೊಟ್ಟರು.. ತೋಟದಲ್ಲಿ ಅನೇಕರಿಗೆ ಕೆಲಸ ಕೊಟ್ಟರು.. ಅಷ್ಟೇ ಅಲ್ಲದೇ ಕಳೆದ ವರ್ಷ ಉತ್ತರ ಕರ್ನಾಟಕದ ನೆರೆ ಸಮಯದಲ್ಲಿ ಅಲ್ಲಿನ ಹಸುಗಳಿಗಾಗಿ ಲಾರಿಗಟ್ಟಲೇ ಆಹರವನ್ನು ಪೂರೈಸಿದ್ದರು..

ಕಳೆದ ವರ್ಷ ಕೊರೊನಾದಿಂದ ಲಾಕ್ ಡೌನ್ ಆದ ಸಮಯದಲ್ಲಿ ಕಷ್ಟದಲ್ಲಿದ್ದ ಚಿತ್ರರಂಗದ ನೂರಾರು ಜೂನಿಯರ್ ಕಲಾವಿದರಿಗೆ ಆಹಾರ ಸಾಮಗ್ರಿಗಳನ್ನು ನೀಡಿ ನೆರವಾಗಿದ್ದರು.. ಅಷ್ಟೂ ಕುಟುಂಬಗಳ ಹಸಿವನ್ನು ನೀಗಿಸಿದ್ದರು.. ಈ ವರ್ಷವೂ ಸಹ ತಮ್ಮ ಆಸ್ತಿ ಮಾರಿದ್ದ ಹಣದಲ್ಲಿ ಅನೇಕ ಕಲಾವಿದರಿಗೆ ಸಹಾಯ ಹಸ್ತ ಚಾಚಿ ದೊಡ್ಡತನ ಮೆರೆದಿದ್ದರು.. ಆದರೀಗ ಆ ಹಿರಿಯ ಜೀವ ಇಂದು ಮಗನ ವಿಚಾರಕ್ಕೆ ಕಣ್ಣೀರಿಟ್ಟಿದೆ.. ಹೌದು ಲೀಲಾವತಿ ಅವರು ಮಗನ ಮದುವೆ ವಿಚಾರ ಹಾಗೂ ಇನ್ನಿತರ ವಿಚಾರಗಳನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.. ಲೀಲಾವತಿ ಅವರು ಚಿತ್ರರಂಗದಲ್ಲಿ ಎಷ್ಟು ದೊಡ್ಡ ಹೆಸರು ಮಾಡಿದರೋ ಅದೇ ರೀತಿ ವಿನೋದ್ ರಾಜ್ ಅವರು ಸಹ ಚಿತ್ರರಂಗದಲ್ಲಿ ಕೆಲವೇ ವರ್ಷಗಳಲ್ಲಿ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದರು..

ಆದರೆ ಆನಂತರ ಕಾರಣಾಂತರಗಳಿಂದ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರವೇ ಉಳಿದುಬಿಟ್ಟರು.. ಆ ಕುರಿತು ಸಹ ಲೀಲಾವತಿ ಅವರು‌ ಆಡಿರುವ ಮಾತು ನೋಡಿ.. “ಅಯ್ಯೋ ಅದನ್ನು ಹೇಳೋಕೆ ಮಾತೇ ಇಲ್ಲ.. ಅವನ ಯವ್ವೌನದ ಜೀವನವನ್ನ ಹೇಗೆ ಕಳಿತಾನೆ ಅಂತ ಕೆಲವರು ಏನಾದರು ಊಹೆ ಮಾಡಿಕೊಂಡಿದ್ದರೆ ಅದು ಸುಳ್ಳು.. ಅತ ಒಬ್ಬ ಶ್ರಮಜೀವಿ.. ಮಗನ ಹತ್ತಿರ ದುಡುಸ್ಕೊಂಡು ಅಮ್ಮ ತಿಂತಿದ್ದಾಳೆ ಅಂತ ಅಂದುಕೊಳ್ಳಬೇಡಿ.. ಒಂದ್ಯ್ ತಾಯಿ ತನ್ನ ಮಗನಿಗೆ ಏನೆಲ್ಲಾ ಮಾಡಬಲ್ಲಳು.. ತನ್ನ ಮಗನನ್ನು ಸುಲಭವಾಗಿ ಬಿಡಲ್ಲ.. ಮಗನ ಮೇಲೆ ಪ್ರೀತಿ ಇದ್ದೇ ಇರತ್ತೆ.. ಅದೇ ರೀತಿ ನನಗೂ ನನ್ನ ಮಗನ ಮೇಲೆ ಪ್ರೀತಿ ಇದ್ದೇ ಇದೆ.. ತಾಯಿ ಏನೇನು ಮಾಡಬೇಕೋ ಅದನ್ನೆಲ್ಲಾ ನಾನು ಮಾಡಿದೆ.. ಇನ್ನು ಸಿನಿಮಾದಲ್ಲಿ ಅವಕಾಶ ಕಡಿಮೆಯಾಗಿ ಮಗನಿಗೆ ಮನಸ್ಸಿನ ಜಿಗುಪ್ಸೆ ಹೆಚ್ಚಾದಾಗ ನಾನು ಕೃಷಿ ಕಡೆ ಮನಸ್ಸು ಕೊಡು ಎಂದೆ..

ಅದರಲ್ಲಿಯೇ ತೊಡಗಿಕೊಂಡು ತೋಟವನ್ನು ಸ್ವರ್ಗ ಮಾಡಿದ.. ಅವನು ಚಿಕ್ಕವನಿದ್ದಾಗ ನನ್ನನ್ನು ಹಿಡಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದ.. ಅವನು ಅಷ್ಟು ಶ್ರಮ ಪಟ್ಟಿದ್ದ.. ಎಲ್ಲರೂ ಹೇಳಿದ್ರು ಅವನು ಚೆನ್ನಾಗಿ ಮಾಡ್ತಾನೆ ಅಂತ.. ಆದರೆ ಯಾರೂ ಸಹ ಅವನಿಗೆ ಸಣ್ಣದೊಂದು ಪ್ರಶಸ್ತಿ ಕೊಟ್ಟು ಪ್ರೋತ್ಸಾಹ ಮಾಡಲಿಲ್ಲ.. ನಾನು ಅಬಲೆಯಾಗಿದ್ದೆ.. ಅವನೊಬ್ಬನೇ ಆಧಾರವಾಗಿದ್ದ ಅಷ್ಟೇ.. ಕೃಷಿ ಮಾಡಿ ಆ ಗಿಡಗಳ ಜೊತೆಯೇ ಮಾತನಾಡಿಕೊಂಡು ನೆಮ್ಮದಿ ಕಂಡೆ.. ಅದರಲ್ಲಿಯೇ ಹೊಸತನವನ್ನು ಕಂಡೆ.. ಆದರೆ ಮನುಷ್ಯರಲ್ಲಿ ಬೆನ್ನ ಹಿಂದೆ ಕೆಲಸ ಮಾಡೋರೆ ಜಾಸ್ತಿ.. ಇನ್ನು ವಿನೋದ್ ರಾಜ್ ಅವರ ಮದುವೆ ವಿಚಾರದ ಕುರಿತು ಮಾತನಾಡಿದ ಲೀಲಾವತಿ ಅವರು ಮದುವೆ ವಿಚಾರದಲ್ಲಿ ಲೀಲಾವತಿ ಪ್ರಯತ್ನವೇ ಮಾಡಿಲ್ಲ ಅಂತ ಜನ ತಿಳಿದುಕೊಂಡಿರಬಹುದು..

ಆದರೆ ಲೀಲಾವತಿ ಆ ಎಲ್ಲಾ ಪ್ರಯತ್ನ ಮಾಡಿ ಆಗಿತ್ತು.. ಸಮಯ ಬಂದಾಗ ತಾನೇ ಗೊತ್ತಾಗತ್ತೆ.. ಅಯ್ಯೋ ದೇವ್ರೆ ಯಾವ ತಾಯಿಗೆ ತಾನೆ ಮಗನ ಭವಿಷ್ಯ ಚೆನ್ನಾಗಿರಲಿ ಅಂತ ಅನಿಸೊಲ್ಲಾ ಹೇಳಿ.. ನಾನು ಅದರ ಅಪ್ಪನಷ್ಟು ಮಗನ ಬಗ್ಗೆ ಆಸೆ ಪಟ್ಟಿದ್ದೆ.. ಆದರೆ ಸಾಕಷ್ಟು ಜಿಗುಪ್ಸೆಗಳು ತೊಂದರೆಗಳು ಎಲ್ಲವೂ ಬಂದವು.. ಆಮೇಲೆ ಅದಕ್ಕೊಸ್ಕರ ಬಲವಂತ ಮಾಡೋಕು ಮನಸ್ಸಾಗಲಿಲ್ಲ.. ಎಂದು ಮಗನ ಮದುವೆಯ ಬಗ್ಗೆಯೂ ಅಮ್ಮನಾಗಿ ತಾನು ಮಾಡಿದ ಪ್ರಯತ್ನದ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.. ಒಟ್ಟಿನಲ್ಲಿ ತಾಯಿಗೆ ಮಗನಾಸರೆ.. ಮಗನಿಗೆ ತಾಯಿಯಾಸರೆ ಎಂದು ಜೀವನ ಸಾಗಿಸುತ್ತಿರುವ ಈ ಅಮ್ಮ ಮಗನಿಗೆ ದೇವರು ಆರೋಗ್ಯ ಕೊಟ್ಟು ಕಾಪಾಡುವಂತಾಗಲಿ..