ಇದ್ದ ತೋಟವನ್ನು ಮಾರಿಕೊಂಡ ವಿನೋದ್ ರಾಜ್.. ಕಾರಣವೇನು ಗೊತ್ತಾ.. ಇಷ್ಟೇ ಜೀವನ..

0 views

ನಟ ವಿನೋದ್ ರಾಜ್ ಸ್ಯಾಂಡಲ್ವುಡ್ ನ ಒಂದು ಕಾಲದ ಸ್ಟಾರ್ ನಟನಾಗಿ ಗುರುತಿಸಿಕೊಂಡವರು.. ಆದರೆ ಕೆಲ ವರ್ಷಗಳ ಬಳಿಕ ಚಿತ್ರರಂಗದಿಂದ ದೂರವಾದರು.. ಆನಂತರ ತನ್ನ ತಾಯಿ ಹಿರಿಯ ನಟಿ ಲೀಲಾವತಿ ಅವರ ಜೊತೆ ಜೀವನ ಸಾಗಿಸುತ್ತಿದ್ದು ಅವರು ಮದುವೆಯಾಗದೇ ಅಮ್ಮನ ಆರೈಕೆಯಲ್ಲಿಯೇ ಜೀವನ ಕಳೆಯುವ ನಿರ್ಧಾರ ಮಾಡಿದ್ದರು.. ಆದರೆ ಇದೀಗ ತಮ್ಮ ಜಮೀನನ್ನು ಮಾರಿಕೊಂಡಿದ್ದು ಈ ನಿರ್ಧಾರಕ್ಕೆ ನಿಜವಾದ ಕಾರಣ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುವುದು.. ಮನುಷ್ಯನಿಗೆ ಏನಿದ್ದರೇನಂತೆ ಹೋಗುವಾಗ ಏನೂ ಹೊತ್ತು ಹೋಗುವುದಿಲ್ಲ ಎಂಬುದಕ್ಕೆ ವಿನೋದ್ ರಾಜ್ ಅವರೇ ನೈಜ್ಯ ಉದಾಹರಣೆ.. ಜೀವನ‌ ಇಷ್ಟೇ ಎನಿಸದೇ ಇರದು..

ಹೌದು ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರಾದ ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಎಲ್ಲಿಯೂ ಸುದ್ದಿಯಾಗಲಿಲ್ಲ.. ಅತ್ತ ಲೀಲಾವತಿ ಅವರೂ ಸಹ ಚಿತ್ರರಂಗದಿಂದ ದೂರ ಸರಿದು ವರ್ಷಗಳು ಕಳೆದಿದ್ದವು.. ಇನ್ನು ಕೆಲ ವರ್ಷಗಳ ಬಳಿಕ ಬೆಂಗಳೂರಿನ ಬಳಿಯ ನೆಲಮಂಗಲದ ಸಮೀಪವಿರುವ ಸೋಲದೇವನಹಳ್ಳಿಯಲ್ಲಿ ತೋಟ ಖರೀದಿ‌ ಮಾಡಿ ಅಲ್ಲಿಯೇ ಜೀವನ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂತು.. ಕೃಷಿ ಮಾಡಿಕೊಂಡು ಪರಿಸರದ ನಡುವೆ ಪ್ರಾಣಿ ಪಕ್ಷಿಗಳ ನಡುವೆ ಜೀವನ ನಡೆಸುವ ನಿರ್ಧಾರ ಮಾಡಿದ ಲೀಲಾವತಿ ಅವರು ಹಾಗೂ ವಿನೋದ್ ರಾಜ್ ಅವರು ಸೋಲದೇವನಹಳ್ಳಿ ಬಳಿ ತೋಟ ಖರೀದಿ ಮಾಡಿ ಅಲ್ಲಿಯೇ ವಸಿಸುತ್ತಿದ್ದರು..

ಆನಂತರ ಸಾಕಷ್ಟು ಬಾರಿ ಸುದ್ದಿಯಾಗಿದ್ದ ಲೀಲಾವತಿ ಅವರು ಹಾಗೂ ವಿನೋದ್ ರಾಜ್ ಅವರು ಹಣ ಕಳೆದುಕೊಂಡು ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರುವಂತಾಗಿತ್ತು.. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಬಂದ ಸಮಯದಲ್ಲಿ ಲಾರಿ ಗಟ್ಟಲೇ ಮೇವನ್ನು ಅಲ್ಲಿನ ಜಾನುವಾರುಗಳಿಗಾಗಿ ಕಳುಹಿಸಿಕೊಟ್ಟಿದ್ದರು.. ಆನಂತರ ಕೊರೊನಾ ಸಮಯದಲ್ಲಿ ಸಾಕಷ್ಟು ಸಹ ಕಲಾವಿದರುಗಳಿಗೆ ಒಳ್ಳೆಯ ಗುಣ ಮಟ್ಟದ ಆಹಾರದ ಕಿಟ್ ಗಳನ್ನು ನೀಡಿ ನೆರವಾಗಿ ದೊಡ್ಡತನ ತೋರಿದ್ದರು.. ಅಷ್ಟೇ ಅಲ್ಲದೇ ತಮ್ಮ ಊರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿ ಅಲ್ಲಿನ ಜನರಿಗೆ ನೆರವಾಗಿದ್ದರು.. ಕೊರೊನಾ ಸಮಯದಲ್ಲಿ ಆಗಾಗ ಆ ಗ್ರಾಮಕ್ಕೆ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿಸುವ ಮೂಲಕ ಜನರ ಆರೋಗ್ಯ ಕಾಳಜಿ ವಹಿಸಿದ್ದರು.. ಆದರೀಗ ತಮ್ಮ ಪ್ರೀತಿಯ ಜಮೀನನ್ನು‌ ಮಾರಿದ್ದಾರೆ..

ಹೌದು ಎಲ್ಲರಿಗೂ ತಿಳಿದಂತೆ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದ್ದು ಕೆಲ ತಿಂಗಳುಗಳಿಂದ ಹಾಸಿಗೆ ಹಿಡಿದಿದ್ದಾರೆ.. ಎದ್ದು ನಡೆಯದ ಪರಿಸ್ಥಿತಿಯಲ್ಲಿದ್ದು ವಿನೋದ್ ರಾಜ್ ಅವರು ತಾಯಿಯ ಆರೋಗ್ಯ ಕಾಳಜಿ ಮಾಡುತ್ತಿದ್ದಾರೆ.. ಇದಕ್ಕೂ ಮುನ್ನ ಕನ್ನಡ ಚಿತ್ರರಂಗದ ಹಿರಿಗ ಕಲಾವಿದರುಗಳಾದ ನಟಿ ಶೃತಿ ಅವರು ಸುಧಾರಾಣಿ ಅವರು‌ ಮಾಳವಿಕ ಅವರು ಭಾರತಿ ವಿಷ್ಣುವರ್ಧನ್ ಅವರು ಹೇಮಾ ಚೌಧರಿ ಅವರು ಎಲ್ಲರೂ ಸಹ ಲೀಲಾವತಿ ಅವರ ಮನೆಗೆ ಭೇಟಿ ಕೊಟ್ಟು ಅಲ್ಲಿಯೇ ಸಾಕಷ್ಟು ಸಮಯ ಕಳೆದು ತಾವೂ ಸಂತೋಷ ಪಟ್ಟು ಲೀಲಾವತಿ ಅವರನ್ನೂ ಸಹ ಸಂತೋಷ ಪಡಿಸಿದ್ದರು..

ಇನ್ನು ಪುನೀತ್ ಅವರ ಅಗಲಿಕೆಯ ನಂತರ ಸಾಕಷ್ಟು ಕುಗ್ಗಿ ಹೋಗಿದ್ದ ಲೀಲಾವತಿ ಅವರು ಬಹಳ ನೊಂದು ಕೊಂಡು ಕಣ್ಣೀರಿಟ್ಟಿದ್ದರು.. ನಮ್ಮ ಕಣ್ಮುಂದೆ ಬೆಳೆದ ಹುಡುಗನನ್ನು ಕಳೆದುಕೊಂಡು ನಾವೆಲ್ಲಾ ಹೀಗೆ ಇರಬೇಕಾ ಎಂದಿದ್ದರು.. ಇತ್ತ ವಿನೋದ್ ರಾಜ್ ಅವರು ಸಹ ಕಣ್ಣೀರಿಟ್ಟು ಆ ಕೊನೆ ಕ್ಷಣದಲ್ಲಿ ಆ ನನ್ನ ಕಂದ ಅದೆಷ್ಟು ನೋವು ಅನುಭವಿಸಿದನೋ ಎಂದು ಸಂಕಟ ಪಟ್ಟಿದ್ದರು.. ಅದಾದ ಕೆಲ ದಿನಗಳಲ್ಲಿ ಲೀಲಾವತಿ ಅವರು ಮನೆಯಲ್ಲಿಯೇ ಜಾರಿ ಬಿದ್ದ ಕಾರಣ ಆರೋಗ್ಯ ತೀರಾ ಹದಗೆಟ್ಟು ಹಾಸಿಗೆ ಹಿಡಿದಿದ್ದಾರೆ..

ಇನ್ನು ಈ ಸಮಯದಲ್ಲಿ ವಿನೋದ್ ರಾಜ್ ಅವರು ತಮ್ಮ ಜಮೀನನ್ನು ಮಾರಿದ್ದು ಆ ಹಣವನ್ನು ಬಳಸುತ್ತಿರುವ ರೀತಿ ನಿಜಕ್ಕೂ ಆಶ್ಚರ್ಯವನ್ನುಂಟು‌ ಮಾಡಿದೆ.. ಹೌದು ಲೀಲಾವತಿ ಅವರು ತಾವು ದುಡಿದ ಹಣದಲ್ಲಿ ಬಹುತೇಕ ಜಮೀನು ತೋಟ ಖರೀದಿ ಮಾಡುತ್ತಿದ್ದರು.. ಅದೇ ರೀತಿ ಚೆನ್ನೈನಲ್ಲಿಯೂ ಜಮೀನು ಖರೀದಿ ಮಾಡಿದ್ದರು.. ನಂತರ ಬೆಂಗಳೂರು ಸಮೀಪದ ಸೋಲದೇವನಹಳ್ಳಿಯಲ್ಲಿಯೂ ತೋಟ ಖರೀದಿ ಮಾಡಿದ್ದರು.. ಇದೀಗ ಚೆನ್ನೈ ನ ತಮ್ಮ ಜಮೀನನ್ನು‌ ಮಾರಿದ್ದಾರೆ.. ಆ ಜಮೀನಿಂದ ಬಂದ ಹಣವನ್ನು ಇದೀಗ ತಮ್ಮ ಸ್ವಂತಕ್ಕೆ ಬಳಸಿಕೊಳ್ಳದೇ ಸೋಲದೇವನಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು ಗುದ್ದಲಿಪೂಜೆಯನ್ನೂ ಸಹ‌ ನೆರವೇರಿಸಿದ್ದಾರೆ..

ಹೌದು ಐವತ್ತು ಲಕ್ಷ ರೂಪಾಯಿ ವೆಚ್ಛದಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು ಗ್ರಾಮದ ಜನತೆಗೆ ನಿಜಕ್ಕೂ ಇದರಿಂದ ಬಹಳ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.. ಐದು ರೂಪಾಯಿ ಸಿಕ್ಕರೂ ಸಾಕು‌ ಮತ್ತೊಬ್ಬರಿಂದ ಕಿತ್ತುಕೊಳ್ಳುವ ಜನರ ನಡುವೆ ತಮ್ಮ ಸ್ವಂತ ಜಮೀನು ಮಾರಿ ಅದರಿಂದ ಬಂದ ಹಣದಲ್ಲಿ ಹಳ್ಳಿಯ ಜನರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿರುವ ಲೀಲಾವತಿ ಅವರು ಹಾಗೂ ವಿನೋದ್ ರಾಜ್ ಅವರು ನಿಜಕ್ಕೂ ಗ್ರೇಟ್.. ಅವರಿಗೆ ಭಗವಂತ ಆರೋಗ್ಯ ಹಾಗೂ ಮತ್ಯಷ್ಟು ಶಕ್ತಿ ನೀಡುವಂತಾಗಲಿ.. ಜೀವನ‌ ಇಷ್ಟೇ ಹೋಗುವಾಗ ಏನು