ತಮ್ಮ ಮದುವೆಯನ್ನ ಯಾರು ಮಾಡಿಸಿದ್ರು ಎಂದು ಸತ್ಯ ಬಿಚ್ಚಿಟ್ಟ ವಿನೋದ್‌ ರಾಜ್..‌

0 views

ವಿನೋದ್‌ ರಾಜ ಹಾಗೂ ತಾಯಿ ಲೀಲಾವತಿ ಅವರ ಜೀವನ ಒಂದು ರೀತಿ ಕೆಲವೊಂದು ವಿಚಾರಗಳಲ್ಲಿ ನಿಗೂಡ ರೀತಿಯಲ್ಲಿಯೇ ಸಾಗಿ ಹೋಯಿತು ಎನ್ನುವ ಮಾತುಗಳಿದೆ.. ಅದರಲ್ಲೂ ಇತ್ತೀಚೆಗೆ ಬೆಳಕಿಗೆ ಬಂದ ವಿನೋದ್‌ ರಾಜ್‌ ಅವರ ಮದುವೆ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಕಮೆಂಟ್‌ ಗಳು ಹರಿದಾಡಿದ್ದವು.. ಇಷ್ಟು ದಿನ ಸುಳ್ಳು ಹೇಳಿಕೊಂಡು ತಾನು ಮದುವೆಯೇ ಆಗಿಲ್ಲ ಎಂದು ವಿನೋದ್‌ ರಾಜ ಇದ್ದರು ಎಂದು ಟೀಕಿಸಲಾಗಿತ್ತು.. ಇನ್ನು ಮದುವೆ ಮಾಡಿಕೊಂಡು ಆ ಹೆಣ್ಣು ಮಗಳಿಗೆ ಮೋಸ ಮಾಡಿದ್ದಾರೆ ಎಂದೂ ಸಹ ಕೆಲವರು ಹೇಳಿದ್ದುಂಟು.. ಇದೆಲ್ಲದಕ್ಕೂ ಮೀರಿ ವಿನೋದ್‌ ರಾಜ್‌ ಅವರು ತಮ್ಮ ಪತ್ನಿ ಜೊತೆ ಇರುವುದು ಲೀಲಾವತಿ ಅವರಿಗೆ ಇಷ್ಟವಿಲ್ಲ ಎನ್ನುವಂತಹ ಮಾತುಗಳು ಸಹ ಕೇಳಿ ಬಂದವು.. ಆದರೆ ಈ ಎಲ್ಲದರ ಬಗ್ಗೆ ಅದರಲ್ಲೂ ಮುಖ್ಯವಾಗಿ ವಿನೋದ್‌ ರಾಜ ಅವರು ತಮ್ಮ ಮದುವೆ ಎಲ್ಲಿ ಆಯಿತು.. ತಮ್ಮ ಪತ್ನಿ ನಿಜಕ್ಕೂ ಯಾರು.. ಆಕೆಯ ಜೊತೆ ಯಾರು ಮದುವೆ ಮಾಡಿಸಿದರು ಈ ಎಲ್ಲಾ ಸತ್ಯಗಳನ್ನು ಈಗ ತಿಳಿಸಿದ್ದಾರೆ..

ಹೌದು ತಾಯಿಯನ್ನು ಕಳೆದುಕೊಂಡು ನೋವಿನಲ್ಲಿರುವ ವಿನೋದ್‌ ರಾಜ್‌ ಅವರು ಇದೀಗ ತಾಯಿಯ ಹನ್ನೊಂದನೇ ದಿನದ ಕಾರ್ಯವನ್ನು ಮುಗಿಸಿದ್ದು ಪತ್ನಿ ಹಾಗೂ ಅವರ ಮಗ ವಿನೋದ್‌ ರಾಜ್‌ ಅವರ ಜೊತೆಯೇ ಇದ್ದಾರೆ.. ಇನ್ನು ಈ ಸಮಯದಲ್ಲಿ ಪತ್ನಿಯ ಬಗ್ಗೆ ಹಾಗೂ ಮಗನ ಬಗ್ಗೆ ಸಂಪೂರ್ಣವಾಗಿ ಸತ್ಯ ತಿಳಿಸಿದ್ದಾರೆ.. ಮೊದಲು ತಮ್ಮ ಮದುವೆಯನ್ನು ಯಾಕೆ ಮುಚ್ಚಿಟ್ಟರು ಎಂಬ ಬಗ್ಗೆ ಮಾತನಾಡಿದ ವಿನೋದ್‌ ರಾಜ್‌ ಅವರು.. ಮದುವೆಯನ್ನು ಮುಚ್ಚಿಡಬೇಕು ಅನನೋದು ಏನಿರಲಿಲ್ಲ. ಆದರೆ.. ಮದುವೆ ಆಗಿರೋದನ್ನ ಹೇಳುವಂತಹ ಪರಿಸ್ಥಿತಿಯಲ್ಲಿ ನಾವಿರಲಿಲ್ಲ.. ಯಾಕಂದ್ರೆ ಅದನ್ನ ಸುಮ್ಮನೆ ಇನ್ನೊಂದು ಸಾರಿ ದೊಡ್ಡದಾಗಿ ವಿಚಾರ ಮಾಡ್ಕೊಂಡ್ ಹೋಗಿ.. ಯಾರ್ ಬಂದರೂ ಯಾರ್ ಬರಲಿಲ್ಲ.. ಅನ್ನೋ ಮಾತೆಲ್ಲಾ ನಮಗೆ ಬೇಡವಾಗಿತ್ತು.. ಅದ್ಧೂರಿಯಾಗಿ ಮದುವೆಯಾಗೋದು ಸಹ ನಮಗೆ ಬೇಡವಾಗಿತ್ತು.. ಅದೇ ಕಾರಣಕ್ಕೆ ನಮ್ಮ ತಾಯಿ ಅವರು ನೆಟ್ಟಗೆ ನನ್ನ ಹಾಗೂ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿ ತಿರುಪತಿಯಲ್ಲಿ ಮದುವೆ ಮಾಡಿದ್ರು.. ಮದುವೆ ಮಾಡಿಸಿಬಿಟ್ಟು ನಮ್ಮಿಬ್ಬರನ್ನೂ ಸೆಟಲ್ ಮಾಡಿದ್ರು.. ಪಾಪ ನನ್ನ ಪತ್ನಿಯೂ ಅವರ ಪಾಡಿಗೆ ಅವರು ಚೆನ್ನಾಗಿ ಇರಲಿ ಅಂತ ಚೆನ್ನೈ ತೋಟದಲ್ಲಿ ಅವರಿಗೆ ಬೇಕಾದ ಎಲ್ಲಾ ಸೌಕರ್ಯವನ್ನ ಮಾಡಿದ್ರು.. ಅವರು ಚೆನ್ನಾಗಿ ಜೀವನ ಮಾಡ್ಲಿ ಅಂತ ನಿರ್ಧಾರ ಮಾಡಿ ಅಲ್ಲಿ ಇರಿಸಿದ್ರು.. ನಾನು ಅಲ್ಲಿಯೇ ಇದ್ದೆ.. ನಂತರ ಇಲ್ಲಿಗೆ ಬಂದ ನಂತರ ಹೋಗಿ ಬಂದು ಮಾಡುತ್ತಿದ್ದೆ.. ಮುಖ್ಯವಾಗಿ ಅಮ್ಮನಿಗೆ ಯಾವುದೇ ವಿವಾದಗಳು ಬೇಡವಾಗಿತ್ತು.. ನಮ್ಮ ಮದುವೆಗೆ ಇನ್ನೇನಾದ್ರೂ ಬೇರೆ ಹೆಸರಿಟ್ಟು ಹೇಳೋದು ಬೇಡವಾಗಿತ್ತು.. ಅದಕ್ಕಾಗಿ ಅಮ್ಮನಿಗೆ ಕ್ಲೀನ್ ಆಗಿ.. ಒಂದು ಮಗ ಚೆನ್ನಾಗಿ ಓದಬೇಕು ಅಂತಿತ್ತು.. ಹಾಗೆ ಸೊಸೆ ಚೆನ್ನಾಗಿ ನೋಡಿ ಕೊಳ್ಳಬೇಕು ಅನ್ನೋದಿತ್ತು.. ಇಷ್ಟು ಅವರಿಗಿತ್ತು.. ಇದು ಈಚೆಕಡೆ ಬಂದಾಗ.. ಬೇರೆ ಮಾತುಗಳು ಬರಬಾರದು ಅನ್ನೋ ಉದ್ದೇಶ ಅಮ್ಮನಿಗೆ ಇತ್ತು ಅಷ್ಟೇ.. ಕೆಳಗಿನ ವೀಡಿಯೋ ನೋಡಿ..

ಇನ್ನು ವಿನೋದ್ ಪತ್ನಿ ಜೊತೆ ಇರೋದು ಲೀಲಾವತಿ ಅವರಿಗೆ ಇಷ್ಟ ಇಲ್ಲ ಎನ್ನುವ ಮಾತುಗಳು ಹೊರಗೆ ಕೇಳಿ ಬಂದಿದ್ದವು.. ಆ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್.. ಪತ್ನಿ ಜೊತೆ ಇರೋದು ಅಮ್ಮನಿಗೆ ಇಷ್ಟ ಇಲ್ಲ ಅಂದಿದ್ರೆ ನನಗೆ ಮಗ ಹೇಗೆ ಬರ್ತಿದ್ದಾ? ನಾನು ಅವರ ಜೊತೆಯೇ ಇದ್ದು ಒಂದು ಮಗನನ್ನ ಕೊಟ್ಟು.. ಅವನನ್ನು ಚೆನ್ನಾಗಿ ಓದ್ಸಿ.. ಅವನನ್ನ ಚೆನ್ನಾಗಿ ಬೆಳೆಸಿದ್ದೇನೆ.. ಇಲ್ಲಿ ನನ್ನ ತಾಯಿ ಇಷ್ಟೆಲ್ಲಾ ಕಷ್ಟ ಪಟ್ಟು ಹಿಂಸೆ ಪಟ್ಟು ಅವರ ಜೀವನದಲ್ಲಿ ವ್ಯವಸ್ಥೆಗಳನ್ನ ಮಾಡಿದ್ದಾರೆ.. ನನ್ನ ಹಾಗೂ ತಾಯಿಯದ್ದು ವ್ಯವಹಾರಗಳು ಕಮ್ಮಿ.. ಅವರಿಗೆ ಸಿನಿಮಾದಿಂದ ಕೋಟಿ ಕೋಟಿ ಬಂದಿಲ್ಲ.. ನಾನು ಕೂಡ ಕೆಲವೇ ಸಿನಿಮಾ ನಂತರ ಪೋಷಕ ಪಾತ್ರಕ್ಕೆ ಬಂದುಬಿಟ್ಟೆ.. ಬಂದ ಸ್ವಲ್ಪ ಹಣವನ್ನೇ ನಾವು ಇಲ್ಲಿ ಹಾಕಿದ್ವಿ.. ನನಗೂ ಸಂಪಾದನೇ ಕಡಿಮೆ ಇತ್ತು.. ಚೆನ್ನೈ ನಲ್ಲಿಯೂ ಆಸ್ತಿ ಇತ್ತು.. ಇಲ್ಲೂ ಆಸ್ತಿ ಇತ್ತು.. ಅಲ್ಲಿ ನೋಡ್ಕೋಳೋರು ಕೂಡ ಒಬ್ಬರು ಬೇಕಿತ್ತು.. ಇಲ್ಲಿ ನೋಡ್ಕೋಳೋರು ಕೂಡ ಒಬ್ಬರು ಬೇಕಿತ್ತು.. ಈ ರೀತಿ ತೋಟ ಚೆನ್ನಾಗಿ ಹಸಿರಾಗಿಲ್ಲ ಎಂದ್ರೆ ಅದಕ್ಕೆ ಬೆಲೆನೇ ಇಲ್ಲ.. ನನಗೂ ಅವಕಾಶ ಕಡಿಮೆ ಆಯ್ತು.. ನಮ್ಮ ಜೀವನವೂ ನಡಿಬೇಕಿತ್ತು.. ಆಗೆಲ್ಲಾ ಇಷ್ಟು ಆದಾಯ ಇರಲಿಲ್ಲ.. ಕುಟುಂಬವನ್ನ ಸಾಕಬೇಕಿತ್ತು.. ಆ ಸಮಯದಲ್ಲಿ ಯಾವುದಾದರೂ ಆಸ್ತಿಯನ್ನ ಮಾರಬೇಕು.. ಬಂದ ಹಣವನ್ನ ಬ್ಯಾಂಕ್ ಗೆ ಹಾಕಿ ಬಡ್ಡಿಯಲ್ಲಿ ಜೀವನ ಮಾಡಬೇಕಿತ್ತು.. ಅದನ್ನೆಲ್ಲಾ ಎಲ್ಲರಿಗೂ ಹೇಳೋಕೆ ಸಾಧ್ಯ ಇರಲಿಲ್ಲ..

ನಮ್ಮ ಪರಿಸ್ಥಿತಿ ಹೀಗಿದೆ.. ಇದಕ್ಕೆ ಮಾರ್ತಾ ಇದ್ದೀವಿ ಅಂತೆಲ್ಲಾ ಎಲ್ಲಾ ವಿಚಾರಗಳನ್ನೂ ಹೇಳೋಕ್ ಆಗ್ತಾ ಇರ್ಲಿಲ್ಲ.. ನನ್ನ ಹೆಂಡತಿಯ ಹೆಸರು ಅನು ಅಂತ.. ಮಗ ಯುವರಾಜ್ ಅಂತ.. ಅಷ್ಟೇ ನನ್ನ ಕುಟುಂಬ.. ನಾನ್ ನಿಜವಾಗಿಯೂ ಹೇಳ್ತಾ ಇದ್ದೀನಿ.. ನಮ್ಮ ಕುಟುಂಬ ಗೌಪ್ಯವಾಗಿ ಮರ್ಯಾದೆಯಾಗಿ ಇದ್ರೆ ಸಾಕಿತ್ತು.. ಯಾವುದೇ ವಿವಾದ ಅಥವಾ ತೊಂದರೆ ಬಂದಾಗ ತಾನೆ ಬೇರೆಲ್ಲಾ ಮಾತು ಬರೋದು.. ನಮ್ಮ ನಡುವೆ ಯಾವುದೇ ವಿವಾದವಾಗಲಿ ತೊಂದರೆಯಾಗಲಿ ಇರಲಿಲ್ಲ.. ಅದಕ್ಕಾಗಿಯೇ ಇಷ್ಟು ವರ್ಷ ಚೆನ್ನಾಗಿರೋದು.. ನಾನು ಚೆನ್ನಾಗಿ ನೋಡಿಕೊಂಡಿಲ್ಲ ಅಂದ್ರೆ ಅವನು ಹೇಗೆ ಬೆಳಿತಾ ಇದ್ದ.. ಅವನು ಓದೋದಕ್ಕೆ ಫೀಸ್ ಯಾರು ಕೊಟ್ಟಿದ್ದು.. ಅವನೀಗ ಕೆಲಸಕ್ಕೆ ಸೇರಿಕೊಂಡು ಐವತ್ತು ಸಾವಿರ ದುಡಿತಾನೆ.. ನಾನು ಅಮ್ಮ ಅವನಿಗೆ ಅದನ್ನೇ ಹೇಳಿದ್ದು.. ಅವನಿಗೆ ದುಡಿಬೇಕು ಕಣಪ್ಪಾ ಅಂತ ಹೇಳಿದ್ದೇವೆ.. ಯಾಕಂದ್ರೆ ಯಾರೇ ಆಗ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದರೆ ಒಂದು ಸಮಯದಲ್ಲಿ ಚೆನ್ನಾಗೇ ಇರ್ತಾರೆ.. ಆದ್ರೆ ಅದೇ ಮುಂದುವರಿಲಿಲ್ಲ ಅಂದ್ರೆ ವಯಸ್ಸೂ ಆಗ್ತಾ ಇರತ್ತೆ ಕೈಯಲ್ಲಿ ಏನೂ ಇಲ್ಲದೇ ಜೀವನ ತುಂಬಾ ತೊಂದರೆ ಆಗಿ ಬಿಡತ್ತೆ.. ಅದಕ್ಕೆ ಅವನು ಸಿನಿಮಾ ಬೇಡ ಅಂತ ಹೇಳಿದ್ವಿ.. ನಮ್ಮ ತಾಯಿ ಮೊದಲೇ ಹೇಳಿದ್ದ ಹಾಗೆ ಅವನು ಜೀವನ ರೂಪಿಸಿಕೊಂಡಿದ್ದಾನೆ.. ನಾವು ಅಷ್ಟೇ.. ಆಗ ಅಲ್ಲಿ ನನ್ನ ಪತ್ನಿ ಇಲ್ಲಿ ನಾನು ಎಲ್ಲವನ್ನು ನೋಡಿಕೊಂಡಿದ್ರಿಂದಾನೇ ನಾವು ಎಲ್ಲವನ್ನು ಉಳಿಸಿಕೊಳ್ಳೋಕೆ ಸಾಧ್ಯವಾಯ್ತು.. ಇಲ್ಲಾಂದ್ರೆ ಬೇಗನೇ ನಾವು ಎಲ್ಲವನ್ನ ಕಳ್ಕೊಂಡ್ ಬಿಡ್ತಾ ಇದ್ವಿ.. ಅವತ್ತು ಮಾರಿಬಿಟ್ಟಿದ್ರೆ ಒಂದು ಕೋಟಿಗೆ ಹೋಗ್ತಿತ್ತು.. ಆದರೆ ಇವತ್ತು ಇದನ್ನೆಲ್ಲಾ ಮೇಯ್ನ್ಟೇನ್ ಮಾಡೋಕೆ ಒಂದು ಕೋಟಿ ಬೇಕು.. ಕುಟುಂಬದ ಸಹಕಾರ ಇಲ್ಲದೇ ಏನೂ ಮಾಡೋಕ್ ಆಗಲ್ಲ ಇಬ್ಬರೂ ಸೇರಿ ಇದೆಲ್ಲವನ್ನ ಉಳಿಸಿಕೊಂಡಿದ್ದೇವೆ ಎಂದು ಪತ್ನಿಯ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿದ್ದಾರೆ..  ಇವಿಷ್ಟು ಪತ್ನಿ ಅನು ಹಾಗೂ ಮಗ ಯುವರಾಜನ ಬಗ್ಗೆ ವಿನೋದ್‌ ರಾಜ್‌ ಅವರು ಆಡಿದ ಮಾತುಗಳಾಗಿದ್ದು ತಮ್ಮ ಪತ್ನಿ ಹಾಗೂ ಮಗನ ಬಗ್ಗೆ ಜನರಿಗೆ ಇದ್ದಂತಹ ಎಲ್ಲಾ ಸಂಶಯಗಳನ್ನು ದೂರ ಮಾಡಿದ್ದಾರೆ.. ಅಷ್ಟೇ ಅಲ್ಲದೇ ತಮ್ಮ ಮದುವೆ ವಿಚಾರವನ್ನ ಯಾಕೆ ಮುಚ್ಚಿಟ್ಟಿದ್ದರು ಎಂಬ ವಿಚಾರವನ್ನೂ ಸಹ ತಿಳಿಸಿದ್ದು ಇನ್ನಾದರೂ ವಿನೋದ್‌ ರಾಜ್‌ ಅವರ ಮದುವೆ ಬಗ್ಗೆ ಆಗುತ್ತಿರುವ ಟೀಕೆಗಳಿಗೆ ಕೆಟ್ಟ ಕೆಟ್ಟ ಕಮೆಂಟ್‌ ಗಳಿಗೆ ಅಂತ್ಯ ಬೀಳಲಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.