ತಂಗಿ ಮದುವೆ ಮಾಡಲು ಬ್ಯಾಂಕ್ ಸಾಲ ಸಿಗಲಿಲ್ಲವೆಂದು ಈ ಅಣ್ಣ ಏನಾಗಿ ಹೋದ ನೋಡಿ.. ನಿಜಕ್ಕೂ ಮನಕಲಕುತ್ತದೆ..

0 views

ಮಧ್ಯಮ ವರ್ಗದ ಅದೆಷ್ಟೋ ಕುಟುಂಬಗಳಲ್ಲಿ ಈಗಲೂ ಸಹ ಗಂಡು ಮಕ್ಕಳು ಮನೆಯ ಜವಾಬ್ದಾರಿಯ ನೊಗ ಹೊತ್ತು ತಮ್ಮ ಕನಸುಗಳನ್ನೆಲ್ಲಾ ಪಕ್ಕಕ್ಕಿಟ್ಟು ಮನೆಯವರಿಗಾಗಿ ಅಪ್ಪ ಅಮ್ಮ ಅಕ್ಕ ತಂಗಿಯರ ಸಂತೋಷಕ್ಕಾಗಿ ಹಗಲು ರಾತ್ರಿ ಕತ್ತೆಯಂತೆ ದುಡಿಯುತ್ತಲೇ ಇದ್ದಾರೆ.. ಆದರೂ ಸಹ ಜೀವನದಲ್ಲಿ ಸರಿಯಾದ ನೆಲೆ ಕಾಣದೇ ಅಂದುಕೊಂಡಂತೆ ಬದುಕಲು ಆಗದೇ ಹೇಗೋ ಇರುವಷ್ಟು ದಿನವೂ ಕಮಿಟ್ಮೆಂಟ್ ಗಳ ನಡುವೆಯೇ ಜೀವನ ಸಾಗಿಸುವಂತಾಗಿದೆ.. ಇದರ ಮಡುವೆ ಅಕ್ಕ ತಂಗಿಯರ ಮದುವೆಯ ಜವಾಬ್ದಾರಿಗಳನ್ನೂ ಸಹ ವಹಿಸಿಕೊಳ್ಳುವ ಸಹೋದರರು ಅಕ್ಕ ತಂಗಿಯರಿಗೆ ಒಂದು ಸರಿಯಾದ ಮನೆ ಸೇರಿಸುವುದರೊಳಗೆ ಅಕ್ಷರಶಃ ಹೈರಾಣಾಗಿ ಬಿಡುವರು.. ಆದರೆ

ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಯ ಮದುವೆ ಮಾಡಲು ನೂರಾರು ಕನಸು ಕಟ್ಟಿ ಒಳ್ಳೆಯ ಹುಡುಗನನ್ನೂ ಹುಡುಕಿ ಮದಿವೆಯ ದಿನಾಂಕವನ್ನೂ ಸಹ ನಿಗದಿ ಮಾಡಿ ಕೊನೆಗೆ ತಂಗಿಯ ಮದುವೆಗಾಗಿ ಬ್ಯಾಂಕ್ ನಲ್ಲಿ ಲೋನ್ ಸಿಗದ ಕಾರಣ ತನ್ನ ಜೀವವನ್ನೇ ಕಳೆದುಕೊಂಡಿರುವ ಮನಕಲಕುವ ಘಟನೆ ನಡೆದಿದ್ದು ನಿಜಕ್ಕೂ ಈತನ ಕತೆ ಕೇಳಿದರೆ ಕಣ್ಣೀರು ಜಾರುತ್ತದೆ.. ಹೌದು ಈತನ ಹೆಸರು ಪಿ ವಿ ವಿಪಿನ್.. ಕೇವಲ ಇಪ್ಪತ್ತಾರು ವರ್ಷದ ಹುಡುಗ.. ಸಂಸಾರದ ನೊಗ ಹೊತ್ತು ಕೊನೆಗೆ ತಂಗಿಯ ಮದುವೆ ಮಾಡಲಾಗದೇ ಜೀವ ಕಳೆದುಕೊಂಡ ನತದೃಷ್ಟ ಹುಡುಗ‌.‌ ಹೌದು ತನ್ನ ಒಡಹುಟ್ಟಿದ ತಂಗಿಯ ಮದುವೆ ಮಾಡುವ ಸಲುವಾಗಿ ವಿಪಿನ್ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದ..

ಹುಡುಗನನ್ನು ನೋಡಿ ಮದುವೆ ದಿನಾಂಕ ನಿಗದಿ ಮಾಡಿ ಎಲ್ಲವೂ ಆಗಿತ್ತು.. ಆದರೆ ಮದುವೆಯ ಸಂಭ್ರಮ ತುಂಬಿರಬೇಕಾದ ಮನೆ ಸೂತಕದ ಮನೆಯಾಗಿ ಹೋಗಿತು.. ಹೌದು ಈತ ತಂಗಿಗಾಗಿ ಆಭರಣ ಕೊಳ್ಳಲು ಬ್ಯಾಂಕ್ ಒಂದರಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದ.. ಈತನ ಬಳಿ ಇದ್ದದ್ದು ಕೇವಲ ಮೂರು ಗುಂಟೆ ಭೂಮಿ.. ಆ ಜಾಗದ ಮೇಲೆ ರಾಷ್ಟ್ರೀಕೃತ ಬ್ಯಾಂಕ್ ಆಗಲಿ ಅಥವಾ ಸಹಕಾರ ಬ್ಯಾಂಕ್ ಆಗಲಿ ಎಲ್ಲಿಯೂ ಸಾಲ ಸಿಗಲಿಲ್ಲ.. ಕೊನೆಗೆ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ಅರ್ಜಿ ಹಾಕಿದ್ದ.. ಆ ಬ್ಯಾಂಕಿನಲ್ಲಿ ಲೋನ್ ಸಹ ಮಂಜೂರಾಯಿತು.. ಈ ವಿಚಾರವನ್ನು ಬ್ಯಾಂಕ್‌ ನವರೇ ಹಿಂದಿನ ದಿನ ವಿಪಿನ್ ಗೆ ಫೋನ್ ಮಾಡಿ ಸಾಲ ಮಂಜೂರಾಗಿದೆ ಎಂದು ತಿಳಿಸಿದ್ದರು..

ಈ ವಿಚಾರ ತಿಳಿದು ನಿಟ್ಟುಸಿರು ಬಿಟ್ಟಿದ್ದ ವಿಪಿನ್ ಮಾರನೇ ದಿನವೇ ತನ್ನ ತಂಗಿ ಹಾಗೂ ಅಮ್ಮನನ್ನು ಜ್ಯುವೆಲರಿ ಅಂಗಡಿಯೊಂದಕ್ಕೆ ಕರೆದುಕೊಂಡು ಹೋದ.. ಅಲ್ಲಿ ಅಮ್ಮ ಹಾಗೂ ತಂಗಿಯನ್ನು ಆಭರಣ ಸೆಲೆಕ್ಟ್ ಮಾಡುತ್ತಿರಿ ನಾನು ಬ್ಯಾಂಕ್ ಗೆ ಹೋಗಿ ಹಣ ತೆಗೆದುಕೊಂಡು ಬರುವೆನೆಂದು ಬ್ಯಾಂಕ್ ಗೆ ತೆರಳಿದ್ದಾನೆ.. ಆದರೆ ಅಲ್ಲಿ ಬ್ಯಾಂಕ್ ನವರು ಸಾಲ‌ ಮಂಜೂರಾಗಿಲ್ಲ ಎಂದಿದ್ದಾರೆ.. ಕೊನೆ ಕ್ಷಣದಲ್ಲಿ ಲೋನ್ ಅರ್ಜಿ ತಿರಸ್ಕಾರವಾಗಿದೆ ಎಂದು ತಿಳಿಸಿದ್ದು ಇದರಿಂದ ವಿಪಿನ್ ಗೆ ದಿಕ್ಕು ತೋಚದಂತಾಗಿದೆ.. ಅತ್ತ ಅಮ್ಮ ಹಾಗೂ ತಂಗಿಯನ್ನು ಜ್ಯುವೆಲರಿ ಅಂಗಡಿಯಲ್ಲಿ ಕೂರಿಸಿ ಹಣ ತರುವೆನೆಂದು ಬಂದಿದ್ದ ವಿಪಿನ್ ಬರಿಗೈಯಲ್ಲಿ ಹೇಗೆ ಅಮ್ಮ ತಂಗಿಯ ಬಳಿ ಮರಳಲಿ ಎಂದು ಅಂಗಡಿಗೆ ಹೋಗದೇ ಸೀದಾ ಮನೆಗೆ ಬಂದಿದ್ದಾನೆ..

ಮನೆಗೆ ಬಂದ ವಿಪಿನ್ ದುಡುಕಿನ ನಿರ್ಧಾರ ಮಾಡಿಯೇ ಬಿಟ್ಟ.. ಹೌದು ತಂಗಿಗೆ ಚಿನ್ನ ಕೊಡಿಸಲು ಸಹ ನನ್ನ ಬಳಿ ಹಣವಿಲ್ಲದಾಯ್ತು ಎಂದು ಮನನೊಂದು ತನ್ನ ಜೀವವನ್ನೇ ಕಳೆದುಕೊಂಡು ಬಿಟ್ಟ.. ಇತ್ತ ಜ್ಯುವೆಲರಿ ಅಂಗಡಿಯಲ್ಲಿ ಕಾದು ಕಾದು ಸುಸ್ತಾದ ಅಮ್ಮ ಹಾಗೂ ತಂಗಿ ಮನೆಗೆ ಮರಳಿದ್ದಾರೆ.. ಆದರೆ ಮನೆಗೆ ಬಂದು ನೋಡುತ್ತಿದ್ದಂತೆ ಮಗ ಜೀವ ಕಳೆದುಕೊಂಡದ್ದು ಕಂಡು ಆ ತಾಯಿ ಮಗಳು ಇಬ್ಬರೂ ಸಹ ಕುಸಿದು ಬಿದ್ದಿದ್ದಾರೆ.. ಹೌದು ಜವಾಬ್ದಾರಿ ಎಂಬ ನೊಗ ಹೊತ್ತು ಮುಂದೆ ಸಾಗಲಾಗದೇ ವಿಪಿನ್ ತನ್ನ ಜೀವನವನ್ನೇ ಮುಗಿಸಿಕೊಂಡು ಬಿಟ್ಟ.. ಇತ್ತ ಮದುವೆಯ ಸಂಭ್ರಮದಲ್ಲಿರಬೇಕಾದ ಮನೆ ಸೂತಕದ ಮನೆಯಾಗಿ ಹೋಯ್ತು.. ಇದು ವಿಪಿನ್ ನ ನೋವು ಮಾತ್ರವಲ್ಲ.. ಮಧ್ಯಮ ವರ್ಗದ ಅದೆಷ್ಟೋ ಯುವಕರ ಪಾಡೇ ಇದು..

ಅತ್ತ ಹೇಳಿಕೊಳ್ಳಲಾಗದೆ ಇತ್ತ ಬಿಡಲೂ ಆಗದೇ ಮನೆಯವರ ಸಂತೋಷಕ್ಕಾಗಿ ಏನು ಮಾಡಿದರೂ ಸಾಲದಾಗುತ್ತದೆ.. ಕೊನೆಗೆ ನೋವಿನಲ್ಲಿಯೇ ಜೀವನ ಸಾಗಿಸುವಂತಾಗಿರುತ್ತದೆ.. ಅದೇನೆ ಆಗಲಿ ಇರುವುದರಲ್ಲಿ ಜೀವನ ಮಾಡೋಣ.. ಇಂದಲ್ಲಾ ನಾಳೆ ನಮ್ಮ ದಿನವೂ ಬರುವುದು.. ಆದರೆ ದುಡುಕಿ ಇಂತಹ ನಿರ್ಧಾರಗಳನ್ನು ಮಾಡಿದರೆ ಯಾರ ಮುಖದಲ್ಲಿ ನಾವುಗಳು ಸಂತೋಷ ನೋಡಬೇಕು ಎಂದುಕೊಳ್ಳುವೆವೋ ಅವರುಗಳೇ ಜೀವನ ಪೂರ್ತಿ ಕೊರಗುತ್ತ ಮತ್ತಷ್ಟು ಕಷ್ಟದಲ್ಲಿ ಜೀವನ ಮಾಡುವಂತಾಗಿಬಿಡುತ್ತದೆ.. ವಿಪಿನ್ ಗೆ ಶಾಂತಿ ಸಿಗಲಿ.. ಮಗನನ್ನು ಕಳೆದುಕೊಂಡ ಆ ತಾಯಿ ಅಣ್ಣನನ್ನು ಕಳೆದಕೊಂಡ ಆ ತಂಗಿಗೆ ಭಗವಂತ ಧೈರ್ಯ ನೀಡಲಿ.. ಮುಂದಿನ ಜೀವನಕ್ಕೆ ಯಾವುದಾದರೂ ದಾರಿ ತೋರುವಂತಾಗಲಿ..