ನಮಗೆ ತಿರುಗೇಟು ನೀಡಲು ಗೊತ್ತಿಲ್ಲ.. ವಿಷ್ಣುವರ್ಧನ್ ಪ್ರತಿಮೆ ಸ್ಥಳಾಂತರದ ವಿಚಾರದಲ್ಲಿ ಅನಿರುದ್ಧ್ ಹೇಳಿದ್ದೇನು ಗೊತ್ತಾ?

0 views

ನಿನ್ನೆ ರಾತ್ರೋ ರಾತ್ರಿ ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಳಾಂತರ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಷ್ಣುವರ್ಧನ್ ಅವರ ಅಳಿಯ ನಟ ಅನಿರುದ್ಧ್ ಅವರು ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತ ಪಡಿಸಿದ್ದಾರೆ.. ಹೌದು ವಿಷ್ಣುವರ್ಧನ್ ಅವರ ವಿಚಾರದಲ್ಲಿಯೇ ಯಾಕೆ ಈ ರೀತಿ ಪದೇ ಪದೇ ಆಗುತ್ತಿದೆ ಎಂದು ನೊಂದುಕೊಂಡು ಮಾತನಾಡಿದ್ದಾರೆ..

ಹೌದು ನಿನ್ನೆ ರಾತ್ರಿ ಮಾಗಡಿ ರಸ್ತೆಯ ಅಂಡರ್ ಪಾಸ್ ಮೇಲ್ಭಾಗದಲ್ಲಿ ಇದ್ದ ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ತೆಗೆದು ಹಾಕಲಾಗಿದೆ.. ಈ ಬಗ್ಗೆ ಮಾತನಾಡುದ ಅನಿರುದ್ಧ್ ಅವರು “ಈಗಾಗಲೇ ಪ್ರತಿಷ್ಠಾಪನೆಯಾಗಿರುವ ಮೂರ್ತಿಯನ್ನ ರಾತ್ರೋ ರಾತ್ರಿ ಯಾರಿಗೂ ಹೇಳದೇ ಕೇಳದೇ ತೆಗೆಯುವುದು ಎಷ್ಟು ಸರಿ.. ಈ ರೀತಿಯ ಕೆಲಸಗಳಿಂದ ಹಿರಿಯ ವ್ಯಕ್ತಿಗೆ ಅವಮಾನ ಮಾಡಿದಂತೆ.. ಇದರಿಂದ ವಿಷ್ಣುವರ್ಧನ್ ಅಭಿಮಾನಿಗಳಿಗೆ ಕುಟುಂಬದವರಿಗೆ ದುಃಖ ಆಗುತ್ತದೆ.. ವಿಷ್ಣುವರ್ಧನ್ ಅಪ್ಪಾವ್ರ ಪ್ರತಿಮೆಯನ್ನ ಯಾರು ತೆಗೆದರು ಮತ್ತು ಯಾಕೆ ತೆಗೆದರು ಎನ್ನುವ ಕಾರಣವೂ ತಿಳಿದಿಲ್ಲ.. ನಾವು ಹಾಗೂ ನಮ್ಮ ಕುಟುಂಬ ಎಲ್ಲರನ್ನ ಗೌರವಿಸುತ್ತದೆ..

ಯಾರ ಮಾತಿಗೂ ತಿರುಗೇಟು ನೀಡುವುದು ನಮಗೆ ಗೊತ್ತಿಲ್ಲ.. ಸಚಿವರಾಗಿರುವ ಸೋಮಣ್ಣ ಅವರ ಮಾತುಗಳಿಗೆ ನಾವು ಗೌರವ ನೀಡುತ್ತೇವೆ.. ಒಂದು ಪುತ್ಥಳಿಯನ್ನ ಪ್ರತಿಷ್ಠಾಪನೆ ಮಾಡುವಾಗಲೇ ಎಲ್ಲ ಮಾಹಿತಿ ಸಂಗ್ರಹಿಸಿಕೊಳ್ಳಬೇಕು.. ಪ್ರತಿಷ್ಠಾಪನೆ ವಿಚಾರದಲ್ಲಿ ಯಾವ ತೊಂದರೆಯೂ ಇಲ್ಲ ಎಂದಮೇಲೆ ಪ್ರತಿಮೆ ಸ್ಥಾಪನೆ ಮಾಡಲಾಗುತ್ತದೆ.. ಪ್ರತಿ ಬಾರಿಯೂ ಅಪ್ಪಾಜಿ ಅವರ ಬಗ್ಗೆಯೇ ಈ ರೀತಿ ಯಾಕೆ ಆಗುತ್ತಿದೆ.. ಒಂದು ವೇಳೆ ಪ್ರತಿಮೆ ಸ್ಥಳಾಂತರಿಸುವದಿದ್ದರೆ ಎಲ್ಲರ ಜೊತೆ ಮಾತುಕತೆ ನಡೆಸಿ ಗೌರವಯುತವಾಗಿ ತೆಗೆಯಬಹುದಿತ್ತು.. ಆದರೆ ಈ ರೀತಿ ಮಾಡಿರುವುದು ನಿಜಕ್ಕೂ ಸರಿಯಿಲ್ಲ.. ಎಂದಿದ್ದಾರೆ.. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಸೋಮಣ್ಣ ಅವರು ಹೇಳಿರುವ ಮಾತೇ ಬೇರೆ..

ಹೌದು ಈ ಬಗ್ಗೆ ಸಚಿವ ಸೋಮಣ್ಣ ಅವರು ಮಾತನಾಡಿ “ಈ ಹಿಂದೆ ಅಂದರೆ ನಲವತ್ತು ವರ್ಷಗಳ ಹಿಂದೆಯೇ ಆ ಜಾಗವನ್ನು ಬಾಲಗಂಗಾಧರೇಶ್ವರ ವೃತ್ತ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.. ನಾನು ಮತ್ತು ವಿಷ್ಣುವರ್ಧನ್ ಬಹಳ ಆತ್ಮೀಯರು.. ಆದರೆ ಈ ಪ್ರತಿಮೆಯನ್ನು ಯಾಕೆ ತೆರವು ಮಾಡಲಾಗಿದೆ ಅಂತ ಮಾಹಿತಿ ಇಲ್ಲ.. ಆದರೆ ಈ ಪ್ರದೇಶದಲ್ಲಿ ತಿಳಿದೋ ಅಥವಾ ತಿಳಿಯದೋ ಅಲ್ಲಿ ಪ್ರತಿಮೆ ಇರಿಸಲಾಗಿತ್ತು.. ಮುಂದಿನ ನಾಲ್ಕೈದು ದಿನಗಳಲ್ಲಿ ಒಳ್ಳೆ ಕಡೆ ವಿಷ್ಣುವರ್ಧನ್ ಅವರ ಪ್ರತಿಮೆ ಸ್ಥಾಪನೆ ಮಾಡಲಾಗುವುದು.. ವಿಷ್ಣುವರ್ಧನ್ ನನಗೆ ಆತ್ಮೀಯರಲ್ಲಿ ಆತ್ಮೀಯರು.. ನನ್ನ ಜೊತೆಗಿನ ಅವರ ಒಡನಾಟ ಹೇಗಿತ್ತು ಅನ್ನೋದು ಈಗ ಹೇಳಲು ಸಮಯ ಇಲ್ಲ. ಇದೊಂದು ಸೂಕ್ಷ್ಮ ಘಟನೆಯಾಗಿದೆ.. ನಡೆದ ಅತಾಚುರ್ಯಕ್ಕೆ ನಾನು ಕ್ಷಮೆ ಕೇಳುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಿ ಬೇಕಾದ್ರೂ ಪ್ರತಿಮೆ ಸ್ಥಾಪಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ..

ಒಟ್ಟಿನಲ್ಲಿ ರಾಜಕೀಯ ಹಾಗೂ ಇನ್ನಿತರ ಕಾರಣಗಳಿಂದ ಮೇರು ನಟನಿಗೆ ಅವಮಾನ ಮಾಡಬಾರದಷ್ಟೇ.. ಎಲ್ಲರ ಬಳಿ ಮಾತನಾಡಿ ಗೌರವಯುತವಾಗಿ ತೆಗೆದಿದ್ದರೆ ವಿಚಾರ ಇಷ್ಟು ದೊಡ್ಡದಾಗುತ್ತಿರಲಿಲ್ಲ.. ಬದಲಿಗೆ ಯಾರಿಗೂ ಹೇಳದೇ ಕೇಳದೇ ರಾತ್ರೋ ರಾತ್ರಿ ಪ್ರತಿಮೆ ತೆಗೆದಿರುವುದು ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ..