ಭಾರತಕ್ಕೆ 8 ಲಕ್ಷ ಕೋಟಿ ರೂ. ಕೊಟ್ಟ 27 ವರ್ಷದ ಈ ಹುಡುಗ ನಿಜಕ್ಕೂ ಯಾರು ಗೊತ್ತಾ? ತಿಳಿದರೆ ಶಾಕ್ ಆಗ್ತೀರಾ..

0 views

ನಮ್ಮಲ್ಲಿ ಒಂದು ಮಾತು ಇದೆ..‌ ಮೊದಲ ಬೆಂಚ್ ನಲ್ಲಿ ಕೂತವರು ಲಕ್ಷ ಲಕ್ಷ ಸಂಬಳಕ್ಕೆ ಕೆಲಸಕ್ಕೆ ಸೇರ್ತಾರೆ.. ಕೊನೆತ ಬೆಂಚ್ ನಲ್ಲಿ ಕೂತವರು ಲಕ್ಷ‌ ಲಕ್ಷ ಸಂಬಳ ಕೊಡುವ ದೊಡ್ಡ ಉದ್ಯಮಿಗಳಾಗ್ತಾರೆ.. ಅಂತಾರೆ.. ಅದೇ ರೀತಿ ಕಾಲೇಜು ಬಿಟ್ಟ ಅನೇಕರು ಪ್ರಪಂಚದ ದೊಡ್ಡ ಉದ್ಯಮಿಗಳಾಗಿರುವುದು ಕಣ್ಣ ಮುಂದಿದೆ.. ಬಿಲ್ ಗೇಟ್ಸ್.. ಸ್ಟೀವ್ ಜಾಬ್ಸ್.. ಜುಕರ್ ಬರ್ಗ್.. ಹೀಗೆ ಸಾಕಷ್ಟು ಮಂದಿ ಕಾಲೇಜನ್ನು ಅರ್ಧಕ್ಕೆ ಬಿಟ್ಟವರು.. ಅದೇ ರೀತಿ ಇಲ್ಲೊಬ್ಬ ಕಾಲೇಜನ್ನು ಅರ್ಧಕ್ಕೆ ಬಿಟ್ಟು ಹೋದ ಹುಡುಗ ಇದೀಗ ಭಾರತಕ್ಕೆ 8 ಲಕ್ಷ ಕೋಟಿ ರೂಪಾಯಿಯನ್ನು ಸಹಾಯ ಮಾಡಿದ್ದಾರೆ.. ಈತ ನಿಜಕ್ಕೂ ಯಾರು ಗೊತ್ತಾ? ಇಲ್ಲಿದೆ ನೋಡಿ..

ಹೌದು ಕೊರೊನ ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅನೇಕ ದೇಶಗಳು ಅನೇಕ ಉದ್ಯಮಿಗಳು ನೆರವಾಗುತ್ತಿದ್ದಾರೆ.. ಭಾರತದ ಉದ್ಯಮಿಗಳಷ್ಟೇ ಅಲ್ಲದೇ ಬೇರೆ ದೇಶದ ಉದ್ಯಮಿಗಳು ಸಹ ಆರ್ಥಿಕ ನೆರವು ನೀಡಿದ್ದು ಭಾರತದೊಂದಿಗೆ ನಿಂತಿದ್ದಾರೆ.. ಇನ್ನು ಇಂತಹ ಸಮಯದಲ್ಲಿ ಸಣ್ಣ ವಯಸ್ಸಿನ ಯುವಕನೊಬ್ಬ ಭಾರತಕ್ಕೆ 8 ಲಕ್ಷ ಕೋಟಿ ಹಣ ನೀಡಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ರಷ್ಯಾದ ಯುವ ಬಿಲೇನಿಯರ್ ಉದ್ಯಮಿಯೊಬ್ಬ ಭಾರತಕ್ಕೆ ಈ ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.. ಅಷ್ಟಕ್ಕೂ ಈತ ಯಾರು ಗೊತ್ತಾ..

ಈತನ ಹೆಸರು ವಿತಾಲಿಕ್ ಬ್ಯುಟೆರಿನ್.. ವಯಸ್ಸು ಕೇವಲ 27.. ರಷ್ಯಾದ ಉದ್ಯಮಿ.. ಈತ ಭಾರತಕ್ಕೆ ಕೊಟ್ಟಿರುವ ಹಣ 1.4 ಶತಕೋಟಿ ಡಾಲರ್.. ಅಂದರೆ ಒಟ್ಟು ಎಂಟು ಲಕ್ಷ ಕೋಟಿ ರೂಪಾಯಿ.. ಇದು ನಮ್ಮ ಕರ್ನಾಟಕದ ಬಡ್ಜೆಟ್ ಹಣದ ಮೂರು ಪಟ್ಟು ಹಣವಾಗಿದ್ದು ಭಾರತದ ಸಂಕಷ್ಟದ ಸಮಯದಲ್ಲಿ ನೆರವಾಗಲು ನೀಡಿದ್ದಾರೆ.. ಅಷ್ಟಕ್ಕೂ ವಿತಾಲಿಕ್ ಮಾಡುವ ಕೆಲಸವಾದರೂ ಏನು.. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ಹಣ ಸಂಪಾದನೆ ಹೇಗೆ ಸಾಧ್ಯವಾಯಿತು ಗೊತ್ತಾ.. ವಿತಾಲಿಕ್ ಮೂಲತಹ ರಷ್ಯಾದವರು.. ಸಧ್ಯ ಕೆನಡಾದಲ್ಲಿ ನೆಲೆಸಿದ್ದಾರೆ.. ವಯಸ್ಸು ಕೇವಲ 27.. ಅಲ್ಲಿ ಈತ ಕ್ರಿಪ್ಟೋ ಬಿಲೆನಿಯರ್ ಎಂದೇ ಹೆಸರು ಮಾಡಿದ್ದಾರೆ.. ಎಲ್ಲರಿಗೂ ಬಿಟ್ ಕಾಯಿನ್ ಕರೆನ್ಸಿ ಬಗ್ಗೆ ಗೊತ್ತಿರಲೇ ಬೇಕು.. ಅದೇ ರೀತಿ ಈತ ಇಥೀರಿಯಮ್ ಎಂಬ ಕ್ರಿಪ್ಟೋ ಕರೆನ್ಸಿಯನ್ನು ಹುಟ್ಟುಹಾಕಿದವ.. ನಂತರ ಆ ಕರೆನ್ಸಿಗೆ ಸಂಬಂಧಪಟ್ಟ ಸಂಸ್ಥೆಯನ್ನೂ ಸಹ ಸ್ಥಾಪಿಸಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ..

ಇವರ ತಂದೆ ಕೂಡ ಕಂಪ್ಯೂಟರ್ ಇಂಜಿನಿಯರ್.. ವಿತಾಲಿಕ್ ಆರು ವರ್ಷವಿದ್ದಾಗ ರಷ್ಯಾದಿಂದ ಕೆನಡಾಗೆ ಬಂದು ನೆಲೆಸಿದರು.. ಮೂರನೇ ಕ್ಲಾಸಿನಲ್ಲಿದ್ದಾಗಲೇ ಅತಿಯಾದ ಬುದ್ಧಿವಂತನಾದ ಈತನಿಗೆ ಶಾಲೆ ಬಿಡಿಸಿ ಕಂಪ್ಯೂಟರ್ ಗೆ ಸಂಬಂಧ ಪಟ್ಟ ಕೋರ್ಸ್ ಗಳನ್ನು ಈತನ ತಂದೆ ಕಲಿಸಿದರು.. ನಂತರ ಅನೇಕ ಕಡೆ ಕೆಲಸ ಮಾಡಿದ ವಿಥಾಲಿಕ್.. ತನ್ನ ಹದಿನೇಳನೇ ವರ್ಷಕ್ಕೆ ಇವರ ತಂದೆ ಕ್ರಿಪ್ಟೋ ಕರೆನ್ಸಿ ಬಗ್ಗೆ ಪರಿಚಯ ಮಾಡಿದರು.. ಅದರಿಂದಾಚೆಗೆ ಅದರ ಮೇಲೆ ಆಸಕ್ತಿ ಬೆಳೆಸಿಕೊಂಡ ವಿಥಾಲಿಕ್ ಸಧ್ಯ ತನ್ನದೇ ಆದ ಒಂದು ಕರೆನ್ಸಿಯನ್ನು ಹುಟ್ಟು ಹಾಕಿದ್ದು 2018 ರಿಂದ ಈಚೆಗೆ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.. ಅದಾಗಲೇ ನಲವತ್ತು ವರ್ಷದೊಳಗಿನ ಬಿಲೇನಿಯರ್.. 30 ವರ್ಷದೊಳಗಿನ ಬಿಲೇನಿಯರ್ ಪಟ್ಟಿಯಲ್ಲಿ ಈತನ ಹೆಸರು ಸೇರ್ಪಡೆಯಾಗಿದ್ದು ಅತಿ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ವಿಥಾಲಿಕ್ ನ ಮನಸ್ಸೂ ಕೂಡ ಅಷ್ಟೇ ದೊಡ್ಡದಾಗಿದೆ..

ಬಿಟ್ ಕಾಯಿನ್ ಒಂದರ ಬೆಲೆ 35 ಲಕ್ಷವಾದರೆ.. ವಿತಾಲಿಕ್ ಹುಟ್ಟುಹಾಕಿರುವ ಇಥೀರಿಯಮ್ ಕರೆನ್ಸಿಯ ಬೆಲೆ 2.78 ಲಕ್ಷ ರೂ. ಪ್ರಸ್ತುತ ಬಿಟ್ ಕಾಯಿನ್ ನಂತರ ಹೆಚ್ಚು ವಹಿವಾಟು ಆಗುತ್ತಿರುವ ಕರೆನ್ಸಿ ವಿತಾಲಿಕ್ ನ ಇಥೀರಿಯಮ್ ಆಗಿದೆ.. ತಾನೊಬ್ಬ ಸಿರಿವಂತ ಆದರೆ ಸಾಲದು ಎಂಬಂತೆ ಕಷ್ಟದಲ್ಲಿರುವ ಸಾವಿರಾರು ಮಂದಿಗೆ ಸಹಾಯ ಮಾಡುತ್ತಿದ್ದಾರೆ.. ಸಧ್ಯ ಪ್ರಪಂಚದ ಅತಿದೊಡ್ಡ ದೇಶಗಳಲ್ಲಿ ಒಂದಾಗಿರುವ ಭಾರತಕ್ಕೆ ಸಹಾಯ ಮಾಡುವ ಮಟ್ಟಕ್ಕೆ ವಿತಾಲಿಕ್ ಬೆಳೆದು ನಿಂತಿದ್ದು ಆತ ನಡೆದು ಬಂದ ದಾರಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿ ಎನ್ನಬಹುದು‌‌..