ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲೇ ದೊಡ್ಡ ಯಡವಟ್ಟು.. ಏನಾಗಿ ಹೋಯ್ತು ನೋಡಿ..

0 views

ಕನ್ನಡ ಕಿರುತೆರೆಯ ಎಲ್ಲರ ನೆಚ್ಚಿನ ಕಾರ್ಯಕ್ರಮ ಎಂದೇ ಹೇಳಲಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮೊನ್ನೆಯಷ್ಟೇ ತನ್ನ ಸೀಸನ್ ಐದನ್ನು ಆರಂಭಿಸಿದ್ದು ಮೊದಲ ಸಂಚಿಕೆ ಪ್ರಸಾರವಾಗಿತ್ತು.. ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅತಿಥಿಗಳ ಆಯ್ಕೆಯ ಬಗ್ಗೆ ಕುತೂಹಲ ಇದ್ದೇ ಇತ್ತು.. ಅದರಂತೆಯೇ ಮೊದಲ ಸಂಚಿಕೆಯಲ್ಲಿ ಸ್ಯಾಂಡಲ್ವುಡ್ ನ ಕ್ವೀನ್ ಎನ್ನಲಾಗುವ ಮೋಹಕ ತಾರೆ ರಮ್ಯ ಅವರನ್ನು ಕರೆಸಲಾಗಿತ್ತು.. ರಮ್ಯಾ ಅವರ ಸಂಚಿಕೆಯ ಬಗ್ಗೆ ಸಾಕಷ್ಟು ಕುತೂಹಲ ನಿರೀಕ್ಷೆ ಎಲ್ಲವೂ ಇತ್ತು.. ಅದರಂತೆಯೇ ಬಹಳಷ್ಟು ಮಂದಿ ರಮ್ಯಾ ಅವರ ವೀಕೆಂಡ್ ವಿತ್ ರಮೇಶ್ ಸಂಚಿಕೆಗಾಗಿ ಕಾದು ಕುಳಿತಿದ್ದರು.. ಆದರೆ ವೀಕೆಂಡ್ ವಿತ್ ರಮೇಶ್ ಸೀಸನ್ ಐದರ ಮೊದಲ ಸಂಚಿಕೆಯಲ್ಲೇ ದೊಡ್ಡ ಯಡವಟ್ಟಾಗಿ ಹೋಗಿದೆ..

ಹೌದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಪ್ರಸಾರವಾದರೆ ಟಿ ಆರ್ ಪಿ ಯಲ್ಲಿ ಅದೇ ನಂಬರ್ ಒನ್ ಎನ್ನುವುದು ಎಲ್ಲರಿಗೂ ಗೊತ್ತು.. ವಾಹಿನಿಯೂ ಸಹ ಟಿ ಆರ್ ಪಿ ಗಾಗಿ ಏನೇನು ಕಂಟೆಂಟ್ ಬೇಕೋ ಆ ರೀತಿಯಾಗಿ ಸಿದ್ಧ ಮಾಡಿಕೊಳ್ಳೋದು ಸಹ ಹೊಸ ವಿಚಾರವೇನೂ ಅಲ್ಲ.. ಅದರಂತೆಯೇ ರಮ್ಯಾ ಅವರ ಸಂಚಿಕೆಯಲ್ಲಿಯೂ ಸಾಕಷ್ಟು ತಯಾರಿ ನಡೆದಿತ್ತು ಆದರೆ ಮೊದಲ ಸಂಚಿಕೆಯಲ್ಲಿಯೇ ಅವರ ಎಲ್ಲಾ ಯೋಜನೆಗಳು ತಲೆ ಕೆಳಗಾಗಿ ಹೋದವು‌‌..

ಹೌದು ಕಿರುತೆರೆಗೆ ವೀಕ್ಷಕರೇ ಮಹಾಪ್ರಭುಗಳು ಎಂದರೆ ತಪ್ಪಲ್ಲ.. ಆದರೆ ವೀಕ್ಷಕರ ಅಭಿಪ್ರಾಯವನ್ನು ಕಡೆಗಣಿಸಿದರೆ ಏನಾಗುವುದು ಎಂದು ಈಗ ಪ್ರೂವ್ ಆಗಿದೆ.. ಹೌದು ಮೊದಲ ಸಂಚಿಕೆಗೂ ಮುನ್ನ ಪತ್ರಿಕಾ ಗೋಷ್ಟಿ ನಡೆಸಿದ್ದ ರಾಘವೇಂದ್ರ ಹುಣಸೂರು ಅವರು ಹಾಗೂ ರಮೇಶ್ ಅವರು ಕಾರ್ಯಕ್ರಮದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಿದ್ದರು.. ಪತ್ರಿಮಾಗೋಷ್ಟಿ ನಡೆದ ನಂತರ ಕೆಲ ಸುದ್ದಿ ಮಾದ್ಯಮಗಳ ಜೊತೆ ಮಾತನಾಡುವಾಗ ಡಾ.ಬ್ರೋ ಅವರ ವಿಚಾರ ಪ್ರಸ್ತಾಪವಾಯಿತು.. ಡಾ. ಬ್ರೋ ಗಗನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರಾ ಎಂಬ ಪ್ರಶ್ನೆಗೆ ಕೊಂಚ ಅತಿರೇಕವಾಗಿಯೇ ಉತ್ತರ ನೀಡಿದ್ದ ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರು ನಿಮ್ ಅಜ್ಜಿಗೆ ಡಾ.ಬ್ರೋ ಗೊತ್ತಾ.. ನಿಮ್ಮ ತಾಯಿಗೆ ಡಾ.ಬ್ರೋ ಗೊತ್ತಾ ಎಂದೆಲ್ಲಾ ಕೇಳಿದ್ದರು.. ಈ ಮಾತುಗಳಿಂದ ಬೇಸರಗೊಂಡಿದ್ದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು..

ಈ ನಡುವೆಯೇ ಮೊದಲ ಸಂಚಿಕೆ ಪ್ರಸಾರವಾಗಿದ್ದು ಅದರಲ್ಲಿ ರಮ್ಯಾ ಅವರ ಕಂಗ್ಲೀಷ್ ಮಾತುಗಳಿಗೆ ಜನ ಬೆಸ್ತು ಬಿದ್ದರು.. ಅದೇ ದಿನ ರಾತ್ರಿ ಶುರುವಾದ ಟೀಕೆಗಳು ಇನ್ನೂ ಸಹ ಕಡಿಮೆಯಾಗಿಲ್ಲ.. ವೀಕೆಂಡ್ ವಿತ್ ರಮೇಶ್ ಅಲ್ಲ.. ವೀಕೆಂಡ್ ವಿತ್ ಇಂಗ್ಲೀಷ್.. ಇದು ಜೀ ಕನ್ನಡ ಅಲ್ಲ ಜೀ ಇಂಗ್ಲೀಷ್ ಹೀಗೆ ಸಾಕಷ್ಟು ರೀತಿಯಲ್ಲಿ ವಾಹಿನಿಯನ್ನು ಟ್ರೋಲ್ ಮಾಡಲಾಯಿತು.. ಮತ್ತೊಂದು ಕಡೆ ರಮ್ಯಾ ಅವರು ಯಾಕಾದ್ರೂ ಈ ಶೋಗೆ ಬಂದೆನೋ ಎನ್ನುವಷ್ಟರ ಮಟ್ಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಯಿತು.. ವಾಹಿನಿಯವರು ಕಾರ್ಯಕ್ರಮಕ್ಕೆ ಬರುವ ಅತಿಥಿಗಳಿಗೆ ಕನ್ನಡದಲ್ಲಿಯೇ ಮಾತನಾಡಿ ಎಂದು ಹೇಳಬಹುದು.. ಅಥವಾ ಕೇಳಿಕೊಳ್ಳಲೂ ಬಹುದು.. ಆದರೆ ಬಹುಶಃ ವಾಹಿನಿಯವರು ರಮ್ಯಾ ಅವರ ವಿಚಾರದಲ್ಲಿ ಆ ಕೆಲಸವನ್ನು ಮಾಡಿಲ್ಲ.. ಅದೊಂದು ಸಣ್ಣ ಯಡವಟ್ಟಿನಿಂದಾಗಿ ಇದೀಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೇಲೆ ಇದ್ದ ಅಷ್ಟೂ ಪ್ರೀತಿ ಗೌರವ ಒಂದೇ ಕ್ಷಣದಲ್ಲಿ ಮಣ್ಣುಪಾಲಾದಂತಾಗಿದೆ.. ಜೊತೆಗೆ ಇದು ಮುಂದಿನ ಸಂಚಿಕೆಗಳಲ್ಲಿ ಟಿಆರ್ ಪಿ ಮೇಲೆ ದೊಡ್ಡ ಪರಿಣಾಮವನ್ನು ಬೀರೋದಂತೂ ಸತ್ಯ ಎನ್ನಲಾಗಿದೆ..

ಅಷ್ಟೇ ಅಲ್ಲ ಡಾ.ಬ್ರೋ ನ ಕರೆಸಿ ಎಂದು ಪ್ರೇಕ್ಷಕರು ಒತ್ತಾಯ ಮಾಡಿದರೂ ಸಹ ಅದಕ್ಕೆ ಬೆಲೆ ಕೊಡದ ಕಾರಣ ಇದೀಗ ಪ್ರೇಕ್ಷಕರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎಂಬುದರ ಅರಿವಾದಂತೆ ಕಾಣುತ್ತಿದೆ.. ಯಾವ ಕಾರ್ಯಕ್ರಮವನ್ನು ನಾವುಗಳೇ ತಲೆಯ ಮೇಲೆ ಹೊತ್ತುಕೊಂಡು ಮೆರೆಸಿದೆವೋ.. ಅದೇ ಕಾರ್ಯಕ್ರಮವನ್ನು ಟೀಕಿಸುವಂತಾಯಿತು.. ಕಾಲ ಯಾವಗಲೂ ಒಂದೇ ರೀತಿ ಇರದು ಎಂಬುದು ಮಾತ್ರ ಸತ್ಯ ಅಷ್ಟೇ.‌ ಇನ್ನು ಮುಂದಾದರೂ ಬರುವ ಅತಿಥಿಗಳು ಸಂಪೂರ್ಣ ವಾಗಿ ಕನ್ನಡ ಮಾತನಾಡುವಂತಾಗಲಿ.. ಹಾಗೆಯೇ ಪ್ರೇಕ್ಷಕರ ಮನವಿಯಂತೆ ಡಾ.ಬ್ರೋ ಕೂಡ ಕಾರ್ಯಕ್ರಮಕ್ಕೆ ಬಂದು ತಮ್ಮ ಈ ಜರ್ನಿಯ ಬಗ್ಗೆ ಹೇಳಿಕೊಳ್ಳುವಂತಾಗಲಿ..