ಒಳ್ಳೆಯ ರೇಟಿಂಗ್ ಇದ್ದರೂ ಮುಕ್ತಾಯವಾಗುತ್ತಿದೆ ಪ್ರಸಿದ್ಧ ಧಾರಾವಾಹಿಗಳು.. ಕಾರಣವೇನು ಗೊತ್ತಾ?

0 views

ಕೊರೊನಾ ಬಂದ ನಂತರ ಸಾವಿರಾರು ಜನರ ಜೀವನ ಬದಲಾಯಿತು.. ಅನೇಕ ಉದ್ಯಮಗಳು ಮುಚ್ಚಿ ಹೋದವು.‌ ಕೆಲವರ ಬದುಕು ಬದಲಾಯಿತು.. ಅದೇ ರೀತಿ ಕನ್ನಡ ಕಿರುತೆರೆ ಇಂಡಸ್ಟ್ರಿಯಲ್ಲಿ ಬಹಳಷ್ಟು ಬದಲಾವಣೆಗಳು ಆದವು.. 20 ಕ್ಕೂ ಹೆಚ್ಚು ಧಾರಾವಾಹಿಗಳು ನಿಂತು ಹೋದವು.. ಕಲರ್ಸ್ ಸೂಪರ್ ವಾಹಿನಿಯೇ‌ ತಾತ್ಕಾಲಿಕವಾಗಿ ಸ್ಥಗಿತವಾಯಿತು.. ಬಹಳಷ್ಟು ಜನರು ಮೆಚ್ಚಿಕೊಂಡಿದ್ದ ಮಗಳು ಜಾನಕಿ ಅಂತ್ಯ ಕಾಣದೇ ಮುಕ್ತಾಯಗೊಂಡಿದ್ದು ಈಗಲೂ ಬಹಳಷ್ಟು ಜನರಿಗೆ ಬೇಸರವಿದೆ..

ಇನ್ನು ಇತ್ತೀಚೆಗೆ ಡಬ್ಬಿಂಗ್ ಧಾರಾವಾಹಿಗಳು ಕಾಲಿಟ್ಟ ಬಳಿಕ ಕನ್ನಡದ ಧಾರಾವಾಹಿಗಳು ಕೆಲ ದಿನಗಳು ಹಿಂದೆ ಸರಿದದ್ದು ಹೌದು.. ಆದರೀಗ ಎಲ್ಲಾ ವಾಹಿನಿಗಳಲ್ಲಿಯೂ ಹೊಸ ಹೊಸ ಕತೆಗಳ ಆರಂಭವಾಗಿದೆ.. ಹೊಸ ಧಾರಾವಾಹಿಗಳು ಶುರುವಾಗುತ್ತಿವೆ.. ಅದರಲ್ಲೂ ಸುವರ್ಣ ವಾಹಿನಿ ಬದಲಾವಣೆಯ ಜೊತೆಗೆ ಹೊಸ ರೂಪದಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ತರುತ್ತಿದೆ..

ಇನ್ನು ಇದೆಲ್ಲದರ ನಡುವೆಯೂ ಕೆಲ ಧಾರಾವಾಹಿಗಳು ಅಂತ್ಯವಾಗುತ್ತಿವೆ.. ಹೌದು ಟಿ ಆರ್ ಪಿ ಕಾರಣಕ್ಕಾಗಿ ಕೆಲ ಧಾರಾವಾಹಿ ಅಂತ್ಯವಾಗುತ್ತಿದ್ದರೆ.. ಇನ್ನೂ ಕೆಲ ಧಾರಾವಾಹಿ‌ ಒಳ್ಳೆಯ ರೇಟಿಂಗ್ ಇದ್ದರೂ ಸಹ ಮುಗಿಸಲಾಗುತ್ತಿದೆ.. ಹೌದು ಅದಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ರೇಟಿಂಗ್ ಇಲ್ಲದ ಕಾರಣ ಎರಡು ತಿಂಗಳ ಹಿಂದಷ್ಟೇ ಶುರುವಾದ ಲಗ್ನ ಪತ್ರಿಕೆ ಧಾರಾವಾಹಿಯನ್ನು ಮುಗಿಸಲಾಗುತ್ತಿದೆ.. ಆದರೆ ಇತ್ತ ಜೀ ವಾಹಿನಿಯಲ್ಲಿಯೂ ಕೆಲ ಧಾರಾವಾಹಿಗಳು ಅಂತ್ಯವಾಗುತ್ತಿವೆ..

ಹೌದು ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿ ಎನಿಸಿಕೊಂಡಿರುವ ಜೀ ಕನ್ನಡದಲ್ಲಿ ಅದಾಗಲೇ ಗಟ್ಟಿಮೇಳ ಹಾಗೂ ಜೊತೆಜೊತೆಯಲಿ ಧಾರಾವಾಹಿಗಳು ವರ್ಷದ ಕಾಲದಿಂದ ಟಾಪ್ ಎರಡು ಧಾರಾವಾಹಿಗಳಾಗಿದ್ದು ತನ್ನ ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ.. ಆದರೆ ಅತ್ತ ಒಳ್ಳೆಯ ರೇಟಿಂಗ್ ಇದ್ದರೂ ಸಹ ಧಾರಾವಾಹಿಯೊಂದು ಅಂತ್ಯವಾಗುತ್ತಿವೆ.. ಹೌದು ಬಹಳಷ್ಟು ವರ್ಷಗಳಿಂದ ಪ್ರಸಾರವಾಗುತ್ತಿರುವ ಯಾರೇ ನೀ ಮೋಹಿನಿ ಧಾರಾವಾಹಿ ಅಂತ್ಯವಾಗುತ್ತಿದೆ.. ಇನ್ನೂ ಹೇಳಬೇಕೆಂದರೆ ಟಾಪ್ ಹತ್ತು ಕನ್ನಡ ಧಾರಾವಾಹಿಗಳಲ್ಲಿ ಯಾರೇ ನೀ ಮೋಹಿನಿ ಧಾರಾವಾಹಿಯೂ ಒಂದಾಗಿತ್ತು..

ರೇಟಿಂಗ್ ಕೂಡ ಬಹಳ ಚೆನ್ನಾಗಿತ್ತು.. ಆದರೆ ಬಹಳಷ್ಟು ವರ್ಷವಾದ ಕಾರಣ ಧಾರಾವಾಹಿಯನ್ನು ಮುಗಿಸಿ ಹೊಸ ಧಾರಾವಾಹಿಗಳನ್ನು ತರಲಾಗುತ್ತಿದೆ.. ಜನರೂ ಸಹ ಯಾರೇ ನೀ ಮೋಹಿನಿ ಧಾರಾವಾಹಿ ಕತೆ ಮುಂದೆ ಸಾಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದೂ ಉಂಟು.. ಅದಾಗಲೇ ಸತ್ಯ..‌ರಾಮಲೀಲಾ ಹಾಗೂ ಮತ್ತೊಂದು ಹೊಸ ಕತೆ ಜೀ ಕನ್ನಡ ವಾಹಿನಿಯಲ್ಲಿ ಶುರುವಾಗಲಿದ್ದು ಇನ್ನೂ ಕೆಲ ಹಳೆ ಧಾರಾವಾಹಿಗಳು ಅಂತ್ಯವಾಗಬಹುದಾಗಿದೆ..

ಆದರೆ ಅತ್ತ ಜೀ ವಾಹಿನಿಯಲ್ಲಿ ಬಹಳಷ್ಟು ವರ್ಷಗಳ ಕಾಲದಿಂದ ಇದ್ದ ಶೃತಿ‌ ನಾಯ್ಡು ಅವರು ಇದೀಗ ಸುವರ್ಣ ವಾಹಿನಿಗೆ ಬಂದಿದ್ದು ಮನಸೆಲ್ಲಾ ನೀನೆ ಎಂಬ ಹೊಸ ಧಾರಾವಾಹಿಯನು ತರುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಕಾರಣದಿಂದ ಇನ್ನಷ್ಟು ಬದಲಾವಣೆಗಳು ಆಗಲಿದ್ದು ಕಿರುತೆರೆಯಲ್ಲಿ ಹೊಸ ಹೊಸ ಧಾರಾವಾಹಿಗಳ ಆಗಮನವಾಗುತ್ತಿದೆ.. ಅತ್ತ ಹಳೆ ಕತೆಗಳು ಮುಕ್ತಾಯವಾಗುತ್ತಿವೆ..