ತಂದೆಯ ಸ್ಥಿತಿ ನೋಡಿ ಕಣ್ಣೀರಿಟ್ಟ ಕಮಲಿ ಧಾರಾವಾಹಿ ನಟಿ ಯಮುನಾ..

0 views

ಹೆಣ್ಣು ಮಕ್ಕಳು ಅಪ್ಪ ಅಮ್ಮನ ಕಷ್ಟಕ್ಕಾಗ್ತಾರೆ ಅನ್ನೋ ಮಾತು ನಿಜಕ್ಕೂ ಸತ್ಯ ಎನ್ನಬಹುದು‌.. ಎಲ್ಲರೂ ಕೈ ಬಿಟ್ಟರೂ ಹೆಣ್ಣು ಮಕ್ಕಳು ಮಾತ್ರ ತಮ್ಮ ತಂದೆ ತಾಯಿಯನ್ನು ತಾವು ಹೆತ್ತ ಮಕ್ಕಳಂತೆ ನೋಡಿಕೊಳ್ಳುವರು ಎನ್ನಲಾಗುತ್ತದೆ.. ಅದಕ್ಕೆ ನೈಜ್ಯ ಉದಾಹರಣೆ ಕನ್ನಡ ಕಿರುತೆರೆಯ ನಟಿ ಅಶ್ವಿನಿ ನಕ್ಷತ್ರ ಹಾಗೂ ಕಮಲಿ ಧಾರಾವಾಹಿ ಖ್ಯಾತಿಯ ನಟಿ ಯಮುನಾ ಅವರು.. ಹೌದು ಎಲ್ಲವನ್ನೂ ಮರೆತು ಹೋಗಿರುವ ಅಪ್ಪನನ್ನು ಚಿಕ್ಕ ಮಗುವಿನಂತೆ ನೋಡಿಕೊಳ್ಳುತ್ತಿರುವ ಯಮುನಾ ಅವರು ವಯಸ್ಸಾದ ಅಪ್ಪ ಅಮ್ಮನನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಸೇರಿಸುವ ಅದೆಷ್ಟೋ ಮಕ್ಕಳಿಗೆ ಪಾಠವಾಗಿ ನಿಂತಿದ್ದಾರೆನ್ನಬಹುದು..

ಕಿರುತೆರೆಯಲ್ಲೊ ಹತ್ತಾರು ಧಾರಾವಾಹಿಯಲ್ಲಿ ನಟಿಸಿರುವ ಯಮುನಾ ಅವರು ಅಶ್ವಿನಿ ನಕ್ಷತ್ರ.. ಕಮಲಿ.. ಅಮೃತ ವರ್ಷಿಣಿ ಧಾರಾವಾಹಿಗಳ ಮೂಲಕ ಮನೆಮಾತಾದವರು.. ಅಷ್ಟೇ ಅಲ್ಲದೇ ರನ್ನ.. ರಾಂಧವ.. ಇನ್ನೂ ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ಯಮುನಾ ಅವರು ಲಾಕ್ ಡೌನ್ ಸಮಯದಲ್ಲಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ‌ ತೊಡಗಿದ್ದರು.. ಅಷ್ಟೇ ಅಲ್ಲದೇ ಆ ಸಮಯದಲ್ಲಿ ರಕ್ತದಾನವನ್ನೂ ಸಹ ಮಾಡಿದ್ದರು.. ಸದ್ಯ ಇದೀಗ ಅಪ್ಪನ ಹಾರೈಕೆಯಲ್ಲಿ ತೊಡಗಿಕೊಂಡಿದ್ದಾರೆ..

ಹೌದು ಯಮುನಾ ಅವರ ತಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಪಕರಾಗಿದ್ದವರು.. ಅಷ್ಟೇ ಅಲ್ಲದೇ ಓಪನ್ ಯೂನಿವರ್ಸಿಟಿಯಲ್ಲಿ ಎಕ್ಸಾಮಿನಿಷನ್ ಕಂಟ್ರೋಲರ್ ಆಗಿದ್ದವರು.. ಆದರೀಗ ಆಲ್ಜೆಮಿರ್ ಎನ್ನುವ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದು ಎಲ್ಲವನ್ನೂ ಮರೆತುಬಿಟ್ಟಿದ್ದಾರೆ.. ಆದರೆ ಇಂತಹ ಸಮಯದಲ್ಲಿ ಯಮುನಾ ಅವರು ತಮ್ಮ ತಂದೆಯನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದು ನಿಜಕ್ಕೂ ಮನಮುಟ್ಟುವಂತಿದೆ..

ಈ ಬಗ್ಗೆ ಮಾದ್ಯಮದ ಜೊತೆ ಸಂದರ್ಶನದ ಸಮಯದಲ್ಲಿ ಮಾತನಾಡಿರುವ ಯಮುನಾ ಅವರು ತಮ್ಮ ತಂದೆಯ ಬಗ್ಗೆ ಮಾತನಾಡಿ ಅಪ್ಪನನ್ನು ಈ ಸ್ಥಿತಿಯಲ್ಲಿ‌ ನೋಡಲು ಬಹಳ ಕಷ್ಟವಾಗುತ್ತಿದೆ ಎಂದು ಕಣ್ಣೀರಿಟ್ಟಿದ್ದಾರೆ.. ಜನರನ್ನು ಗುರುತಿಸುವುದು.. ಹೊಸ ವಿಷಯಗಳನ್ನು ನೆನಪಿಟ್ಟುಕೊಳ್ಳೋದು ದೊಡ್ಡ ಕಷ್ಟ.. ಒಂದು ವರ್ಷದಲ್ಲಿ ನನ್ನ ತಂದೆ ಎಲ್ಲವನ್ನು ತಮ್ಮೆಲ್ಲಾ ನೆನಪನ್ನು ಕಳೆದುಕೊಂಡರು.. ಈಗ ಅವರು ಯಾರನ್ನೂ ನೆನಪು ಮಾಡಿಕೊಳ್ಳುತ್ತಿಲ್ಲ.. ಈ ಕಾಯಿಲೆ ನನ್ನ ತಂದೆಯನ್ನು ಆವರಿಸಿತು.. ಇದನ್ನು ನಾನು ತುಂಬ ಹತ್ತಿರದಿಂದ ನೋಡಿದೆ.. ಅವರನ್ನು ಈ ಸ್ಥಿತಿಯಲ್ಲಿ ನೋಡಲು ತುಂಬ ಕಷ್ಟವಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಪ್ರಾಧ್ಯಾಪಕರು..

ಮೈಸೂರು ಒಪನ್ ಯುನಿವರ್ಸಿಟಿಯಲ್ಲಿ ಎಕ್ಸಾಮಿನೇಶನ್ ಕಂಟ್ರೋಲರ್ ಆಗಿದ್ದವರು.. ಆದರೀಗ ಈ ರೀತಿ ಆಗಿದ್ದು ನಮ್ಮಿಂದ ನೋಡಲು ಕಷ್ಟವಾಗುತ್ತಿದೆ.. ಎಂದು ಭಾವುಕರಾಗಿದ್ದಾರೆ.. ಅಷ್ಟೇ ಇಲ್ಲದೆ ಈ ಕಾಯಿಲೆ ಬಂದಾಗ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು.. ಮಗುವಿನಂತೆ ನೋಡಿಕೊಳ್ಳಬೇಕು.. ಇಲ್ಲವಾದಲ್ಲಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.. ಜೊತೆಗೆ ಈ ಕಾಯಿಲೆ ಮನೆಯ ಇತರ ಸದಸ್ಯರ ಮನಸ್ಸಿನ ಮೇಲೆಯೂ ಪರಿಣಾಮ ಬೀರುತ್ತದೆ.. ಪ್ರೀತಿ ತಾಳ್ಮೆಯಿಂದ ನೋಡಿಕೊಂಡು ಅವರ ಜೊತೆ ಮಗುವಾಗಬೇಕು.. ಮತ್ತೊಬ್ಬರ ಮೇಲೆ ಪೂರ್ಣ ಪ್ರಮಾಣದಲ್ಲಿ ಅವಲಂಬಿತರಾಗುತ್ತಾರೆ.. ಇಂತಹ ಸಮಯದಲ್ಲಿ ಏನೂ ಕಿರಿಕಿರಿ ಮಾಡಿಕೊಳ್ಳದೆ ನಾವು ಚಿಕ್ಕವರಿದ್ದಾಗ ನಮ್ಮನ್ನು ಅವರು ತಾಳ್ಮೆಯಿಂದ ನೋಡಿಕೊಂಡಂತೆ ನಾವೂ ಸಹ ಅವರನ್ನು ತಾಳ್ಮೆಯಿಂದ ನೋಡಿಕೊಳ್ಳಬೇಕು ಎಂದಿದ್ದಾರೆ.. ಜೊತೆಗೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಅಪ್ಪನ ಫೋಟೋ ಹಂಚಿಕೊಂಡು ಮಾತನಾಡಿರುವ ಯಮುನಾ ಅವರು “ಜನರನ್ನು ಗುರುತಿಸುವಲ್ಲಿ ಮತ್ತು ಹೊಸ ನೆನಪುಗಳನ್ನು ರೂಪಿಸುವಲ್ಲಿ 2013 ರಿಂದ ತೊಂದರೆಯಿಂದ ನನ್ನ ತಂದೆ ಅವರು, ಈಗ ಸಂಪೂರ್ಣವಾಗಿ ಸ್ಮರಣೆಯನ್ನು ಕಳೆದುಕೊಂಡಿದ್ದಾರೆ, ಈಗ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ ಆಲ್ಜಮೈರ್ ಪೀಡಿತ ಜನರು ಕ್ರಮೇಣ ತಮ್ಮ ಆರೈಕೆದಾರರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಶಿಶುಗಳಾಗಿರುತ್ತಾರೆ.
ಈ ರೋಗದ ಕಾರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ ಮತ್ತು ಕಾಲಾನಂತರದಲ್ಲಿ ಪರಿಸ್ಥಿತಿ ಹದಗೆಡುತ್ತದೆ. ಗುಣಪಡಿಸಲಾಗದ ಈ ಕಾಯಿಲೆಯನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ ಏಕೆಂದರೆ ನನ್ನ ತಂದೆಯು ಇದರಿಂದ ಪ್ರಭಾವಿತರಾಗಿದ್ದಾರೆ, ನಿಜಕ್ಕೂ ಹೃದಯ ಕದಡುವ ಸನ್ನಿವೇಶ ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಮತ್ತು ಮೈಸೂರು ಓಪನ್ ಯೂನಿವರ್ಸಿಟಿಯಲ್ಲಿ ಪರೀಕ್ಷೆಗಳ ನಿಯಂತ್ರಕರಾಗಿ ನಿಷ್ಪಾಪ ದಾಖಲೆಯೊಂದಿಗೆ ಸೇವೆ ಸಲ್ಲಿಸಿದ ನಿಜವಾದ ಪ್ರಬಲ ವ್ಯಕ್ತಿ. ಅವರನ್ನು ನೋಡಿಕೊಳ್ಳುವ ಜನರು ಅವರೊಂದಿಗೆ ಪ್ರೀತಿಯಿಂದ, ಕಾಳಜಿಯಿಂದ ಮತ್ತು ತಾಳ್ಮೆಯಿಂದಿರುವುದು ಬಹಳ ಮುಖ್ಯ” ಎಂದಿದ್ದಾರೆ..