ಮನದಾಳದ ಮಾತು ಹೇಳಿಕೊಂಡು ಮಗಳಿಗೆ ಮಾತು ಕೊಟ್ಟ ಯಶ್.. ಮಗಳಿಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ..

0 views

ಇಂದು ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಎಲ್ಲರೂ ತಮ್ಮ ತಮ್ಮ ಮನೆಯ ದೇವತೆಗಳಿಗೆ ಶುಭ ಕೋರುತ್ತಿದ್ದು ಸ್ಯಾಂಡಲ್ವುಡ್ ನ ಕಲಾವಿದರು ಸಹ ತಮ್ಮ ಹೆಣ್ಣು ಮಕ್ಕಳ ಜೊತೆ ಸಂಭ್ರಮಾಚರಣೆ ಮಾಡಿದ್ದಾರೆ.. ಹೌದು ಮನೆಯಲ್ಲಿ ಯಾರಿದ್ದರೇನು ಒಂದು ಹೆಣ್ಣು ಮಗು ಇರಬಾರದೆ ಎನ್ನುವ ಮಾತಿನಂತೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಪ್ರಾತಿನಿಧ್ಯ ಎಂದರೂ ತಪ್ಪಾಗಲಾರದು.. ಅದರಲ್ಲೂ ಅಪ್ಪನಿಗೆ ಹೆಣ್ಣು ಮಕ್ಕಳೆಂದರೆ ವಿಶೇಷ ಪ್ರೀತಿ ಎಂಬುದನ್ನು ಯಾವ ತಂದೆಯೂ ಒಪ್ಪಿಕೊಳ್ಳದೇ ಇರಲಾರರು.. ಇತ್ತ ಸಾಮಾನ್ಯರಿಂದ ಹಿಡಿದು ಸೆಲಿಬ್ರೆಟಿಗಳು ಸ್ಟಾರ್ ಕಲಾವಿದರು ಯಾರೇ ಆಗಲಿ ಹೊರಗೆ ಯಾರ ಮಾತು ಕೇಳದಿದ್ದರೂ ಮನೆಯಲ್ಲಿ ತಮ್ಮ ತಮ್ಮ ಪುಟಾಣಿ ಹೆಣ್ಣು ಮಕ್ಕಳ ಮಾತುಗಳನ್ನು ಕೇಳಿಯೇ ಕೇಳುವರು ಎಂಬುದು ಅಕ್ಷರಶಃ ಸತ್ಯದ ಮಾತು..

ಇನ್ನು ಇಂದು ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ನಮ್ಮ ಕನ್ನಡದ ಕಲಾವಿದರು ಸಾಕಷ್ಟು ಜನರು ತಮ್ಮ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.. ಹೌದು ಅದರಲ್ಲಿಯೂ ನಟ ಶರಣ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗಳ ಫೋಟೋ ಜೊತೆಗೆ ಭಾವುಕರಾಗಿ ಬರೆದು ಪೋಸ್ಟ್ ಮಾಡಿದ್ದು ಮಗಳಿಗೆ ಧನ್ಯವಾದಗಳನ್ನೂ ಸಹ ತಿಳಿಸಿದ್ದಾರೆ.. ಮಗಳು… ಪ್ರತಿ ಹೆತ್ತವರ ಪಾಲಿಗೂ ಅವರ ಬದುಕಿನ ಖುಷಿ, ಜೀವನ ಅವರಿಗೆ ನೀಡಿರುವ ಬಹುದೊಡ್ಡ ಉಡುಗೊರೆ.. ಮಗಳೇ, ನೀನೆಷ್ಟು ಬೆಳೆದು ದೊಡ್ಡವಳಾದರೂ ನನ್ನ ಕಣ್ಣಿಗೆ ನೀನಿನ್ನೂ ಪುಟ್ಟ ಕಂದಮ್ಮ.. ನನ್ನ ಜೀವನದ ಭಾಗವಾಗಿರುವುದಕ್ಕೆ ನಿನಗೆ ಮನದಾಳದ ಧನ್ಯವಾದಗಳು.. ಎಂದು ಬರೆಯುವ ಮೂಲಕ‌ ಮಗಳಿಗೆ ಶುಭಾಶಯ ತಿಳಿಸಿದ್ದಾರೆ.. ಇನ್ನು ಇತ್ತ ನಟಿ ಶೃತಿ ಅವರೂ ಸಹ ತಮ್ಮ ಮಗಳಿಗೆ ಶುಭಾಶಯ ತಿಳಿಸಿದ್ದು ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಶುಭಾಶಯಗಳು.. ನನ್ನ ಜೀವನದ ಪ್ರತಿಯೊಂದು ದಿನವೂ ಈ ಮಗಳಿಗಾಗಿಯೇ ಎಂದು ಬರೆದಿದ್ದಾರೆ..

ನಟಿ ಶೃತಿ ಅವರು ಮಹೇಂದರ್ ಅವರಿಂದ ದೂರಾದ ಸಮಯದಿಂದಲೂ ಮಗಳ ಸಂಪೂರ್ಣ ಜವಾಬ್ದಾರಿಯನ್ನು ಶೃತಿ ಅವರೇ ತೆಗೆದುಕೊಂಡು ಮಗಳನ್ನು ನೋಡಿಕೊಳ್ಳುತ್ತಾ ಮಗಳಿಗೆ ಸದಾ ಜೊತೆಯಾಗಿದ್ದು ಮಗಳಿಗಾಗಿಯೇ ತನ್ನ ಜೀವನ ಎಂದಿದ್ದಾರೆ.. ಆದರೆ ಶೃತಿ ಅವರ ಬಗ್ಗೆ ಇನ್ನೊಂದು ವಿಚಾರ ಹೇಳುವುದಾದರೆ ಈಗಲೂ ಸಹ ಮಗಳು ಗೌರಿಗೆ ತನ್ನ ತಂದೆಯ ಜೊತೆ ಮಾತನಾಡು ನಿನಗೆ ಬೇಕು ಎಂದಾಗಲೆಲ್ಲಾ ಹೋಗಿ ಭೇಟಿ ಮಾಡಿಕೊಂಡು ಬಾ.. ಎನ್ನುತ್ತಾರಂತೆ.. ಮಗಳಿಗೆ ತನ್ನಿಂದ ಅಪ್ಪನ ಪ್ರೀತಿಯ ಕೊರತೆಯಾಗಬಾರದೆಂದು ಮಹೇಂದರ್ ಅವರ ಜೊತೆ ಈಗಲೂ ಸಹ ಗೌರಿ ಅವರನ್ನು ಮಾತನಾಡಿಸುತ್ತಾರಂತೆ.. ನಿಜಕ್ಕೂ ಇದು ಶೃತಿ ಅವರ ದೊಡ್ಡತನವನ್ನು ತೋರುತ್ತದೆ..

ಇನ್ನು ಇತ್ತ ರಾಕಿಭಾಯ್ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೂ ಸಹ ತಮ್ಮ ಮನೆಯ ಮಹಾಲಕ್ಷ್ಮಿ ಐರಾಳಿಗೆ ಮಗಳ ದಿನಾಚರಣೆಯ ಅಂಗವಾಗಿ ವಿಶೇಷವಾಗಿ ಶುಭ ಕೋರಿದ್ದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಹೌದು ಎಲ್ಲರಿಗೂ ತಿಳಿದಿರುವಂತೆ ಎಂಟು ವರ್ಷಗಳ ಕಾಲ ರಾಧಿಕಾ ಪಂಡಿತ್ ಹಾಗೂ ಯಶ್ ಅವರು ಪ್ರೀತಿಸಿ ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾದಾಗ ಅವರ ಬಾಳಿಗೆ ಮೊದಲು ಆಗಮಿಸಿದ ವಿಶೇಷ ಪುಟ್ಟ ಜೀವವೇ ಐರಾ.. ಯಶ್ ಹಾಗೂ ರಾಧಿಕಾ ಬಾಳಿಗೆ ಐರಾ ಸಿಕ್ಕಾಪಟ್ಟೆ ಸ್ಪೆಷಲ್ ಎಂದರೆ ತಪ್ಪಾಗಲಾರದು.. ಅದರಲ್ಲಿಯೂ ಈ ಹಿಂದೆ ಸಾಕಷ್ಟು ಬಾರಿ ಕಾರ್ಯಕ್ರಮಗಳಲ್ಲಿ ರಾಧಿಕಾ ಅವರು ಹೇಳಿದಂತೆ ಯಶ್ ಯಾರ ಮತು ಕೇಳ್ತಾರೋ ಇಲ್ವೋ ಆದರೆ ಮಗಳ ಮುಂದೆ ಎಲ್ಲಕ್ಕೂ ಯೆಸ್ ಅಂತಾರೆ.. ಮನೆಯಲ್ಲಿ ನಾವೇನಾದರು ಕೇಳಿದರೆ ಪ್ರತಿಕ್ರೊತೆ ಇರೋದಿಲ್ಲಾ.. ಆದರೆ ಐರಾ ಮಾತ್ರ ಯಶ್ ಅವರಿಗೆ ಬಾಸ್ ಎನ್ನಬಹುದು ಅವಳ ಪ್ರತಿ ಮಾತನ್ನೂ ಸಹ ಯಶ್ ಕೇಳ್ತಾರೆ ಎಂದಿದ್ದರು.. ಹೆಣ್ಣು ಮಕ್ಕಳೇ ಹಾಗೆ ತಂದೆಗೆ ಸದಾ ಸ್ಪೆಷಲ್ ಮಾತ್ರವಲ್ಲ ಅವರ ಜೀವನ ಭಾಗವೇ ಆಗಿಬಿಟ್ಟಿರುತ್ತಾರೆ..

ಅದೇ ರೀತಿ ಯಶ್ ಅವರಿಗೂ ಸಹ ಐರಾ ಎಂದರೆ ಆ ಮಟ್ಟದ ಪ್ರೀತಿ ಎನ್ನಬಹುದು.. ಅದರಲ್ಲೂ ಐರಾಳ ಮೊದಲ ಹುಟ್ಟುಹಬ್ಬವನ್ನು ಅವಳು ಜೀವನ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ಕಾರಣಕ್ಕೆ ಸಂಪೂರ್ಣ ಸ್ಯಾಂಡಲ್ವುಡ್ ನ ಎಲ್ಲಾ ಕಲಾವಿದರನ್ನು ಕರೆಸಿ ಅದ್ಧೂರಿಯಾಗಿ ಆಚರಣೆ ಮಾಡಿದ್ದರು.. ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ರೀತಿ ಹೆಚ್ಚು ಸಮಾರಂಭಗಳಿಗೆ ಹೋಗದಿದ್ದರೂ ಪುಟಾಣಿ ಐರಾಳ ಹುಟ್ಟುಹಬ್ಬಕ್ಕೆ ಆಗಮಿಸಿ ಶುಭ ಕೋರಿದ್ದು ಮತ್ತಷ್ಟು ವಿಶೇಷವಾಗಿತ್ತು.. ಇನ್ನು ಇದೀಗ ಯಶ್ ಅವರು ತಮ್ಮ ಮುದ್ದು ಮಗಳಿಗೆ ವಿಶೇಷವಾಗಿ ಮಗಳ ದಿನಾಚರಣೆಯ ಶುಭ ಕೋರಿದ್ದು ಮಗಳಿಗೆ ಮಾತು ಕೊಡುವ ಮೂಲಕ ಜೀವನ ಪೂರ್ತಿ ಅವಳ ಮಾತು ಕೇಳುವ ಉಡುಗೊರೆ ನೀಡಿದ್ದಾರೆ..

ಮಗಳ ಜೊತೆಗಿನ ಫೋಟೋ ಹಂಚಿಕೊಂಡಿರುವ ನಟ ಯಶ್ ಅವರು “ನಾನು ಸದಾ ಎಂದಿಗೂ ನೀನು ಹೇಳಿದ ಮಾತುಗಳನ್ನು ಕೇಳುತ್ತಲೇ ಸಾಗುತ್ತೇನೆ.. ನೀನು ನಮಗೆ ದೇವರ ಆಶೀರ್ವಾದ ಮಗಳೇ.. ಪ್ರಪಂಚದ ಎಲ್ಲಾ ಅದ್ಭುತವಾದ ಹೆಣ್ಣು ಮಕ್ಕಳಿಗೂ ಹೆಣ್ಣು ಮಕ್ಕಳ ದಿನದ ಶುಭಾಶಯಗಳು.. ನೀನು ನಮ್ಮ ಜೀವನವನ್ನು ತುಂಬಾನೇ ವಿಶೇಷ ಗೊಳಿಸಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಸಧ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೇ ಭಾರತದ ಚಿತ್ರರಂಗದಲ್ಲಿ ಹೆಸರು ಮಾಡಿರುವ ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು ಪುಟಾಣಿ ಐರಾಗೆ ಕನ್ನಡ ಹಾಗೂ ಇತರೆ ಭಾಷೆಗಳ ಅಭಿಮಾನಿಗಳು ಸಹ ಶುಭಾಶಯ ತಿಳಿಸಿದ್ದಾರೆ..