ಆ ದಿನ ಪಡೆದಿದ್ದ ಹಣಕ್ಕೆ ಇಷ್ಟು ವರ್ಷಕ್ಕೆ ಮೂರರಷ್ಟು ಬಡ್ಡಿ ಸೇರಿಸಿ ಹದಿಮೂರು ಕೋಟಿ ವಾಪಸ್ ಕೊಟ್ಟ ನಟ ಯಶ್..

0 views

ನಟ ರಾಕಿಂಗ್ ಸ್ಟಾರ್ ಯಶ್.. ಸಧ್ಯ ಸ್ಯಾಂಡಲ್ವುಡ್ ಮಾತ್ರವಲ್ಲದೇ ಸಂಪೂರ್ಣ ಭಾರತದ ಚಿತ್ರರಂಗದಲ್ಲಿಯೇ ದೊಡ್ಡ ಹೆಸರು ಮಾಡಿರುವ ನಟ.. ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ನಟ ಯಶ್ ಅವರು ಸಧ್ಯ ಹಣದ ವಿಚಾರವೊಂದಕ್ಕೆ ಮತ್ತೆ ಸುದ್ದಿಯಾಗಿದ್ದಾರೆ.. ಹೌದು ಮೈಸೂರಿನ ಸಾಮಾನ್ಯ ಹುಡುಗನಾಗಿದ್ದ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವುದು ನಿಜಕ್ಕೂ ಅವರ ಪರಿಶ್ರಮ ಹಾಗೂ ಪ್ರತಿಭೆಗೆ ಸಿಕ್ಕ ಪ್ರತಿಫಲ ಎನ್ನಬಹುದು.. ಸಧ್ಯ ಸಿನಿಪ್ರಿಯರು ಕೆಜಿಎಫ್ ೨ ಸಿನಿಮಾಗಾಗಿ ಕಾಯುತ್ತಿದ್ದು ಸಿನಿಮಾ ಸಹ ಸಂಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ.. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದ್ದು ಮುಂದಿನ ವರ್ಷ ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ..

ಇನ್ನು ಇತ್ತ ಕೆಜಿಎಫ್ ೨ ಸಿನಿಮಾ ಕೆಲಸ ಸಂಪೂರ್ಣಗೊಂಡಿರುವ ಕಾರಣ ನಿರ್ದೇಶಕ ಪ್ರಶಾಂತ್ ನೀಲ್ ನಟ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾದಲ್ಲಿ ಬ್ಯುಸಿ ಆದರು.. ಆದರೆ ಇತ್ತ ಯಶ್ ಅವರು ಮಾತ್ರ ಯಾವುದೇ ಸಿನಿಮಾಗಳನ್ನು ಇನ್ನೂ ಸಹ ಒಪ್ಪಿಕೊಂಡಂತೆ ಕಾಣುತ್ತಿಲ್ಲ.. ಆದರೆ ಈ ನಡುವೆಯೇ ತಾವು ವ್ಯಕ್ತಿಯೊಬ್ಬರ ಬಳಿ ಪಡೆದಿದ್ದ ದೊಡ್ಡ ಮೊತ್ತದ ಹಣವನ್ನು ಮರಳಿ ನೀಡಿದ್ದು ಸುದ್ದಿಯಾಗಿದೆ.. ಹೌದು ಯಶ್ ಅವರು ಈ ಹಿಂದೆ ಸಿನಿಮಾ ಕಲಾವಿದರುಗಳಿಗೆ ಕಷ್ಟದ ಸಮಯದಲ್ಲಿ ತಲಾ ಐದು ಸಾವಿರದಂತೆ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಮಾಡುವ ಮೂಲಕ ಒಂದು ಮುಕ್ಕಾಲು ಕೋಟಿ ಹಣವನ್ನು ದೊಡ್ಡ ಮನಸ್ಸಿನಿಂದ ನೆರವು ನೀಡಿದ್ದರು.. ಇನ್ನು ಅದಾದ ಬಳಿಕ ಕಳೆದ ಎರಡು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದ ತಮ್ಮ ಹಾಗೂ ರಾಧಿಕಾ ಪಂಡಿತ್ ಅವರ ಕನಸಿನ ಮನೆಗೆ ಕಳೆದ ತಿಂಗಳಷ್ಟೇ ಗೃಹಪ್ರವೆಶ ಮಾಡಿದ್ದು ಕುಟುಂಬದ ಜೊತೆ ಸಂತೋಷದಿಂದಿದ್ದಾರೆ..

ಆದರೆ ಈ ನಡುವೆ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೆಜಿಎಫ್ ಸಕ್ಸಸ್ ನಂತರ ಸಿನಿಮಾ ಆಯ್ಕೆಯ ವಿಚಾರದಲ್ಲಿ ಯಶ್ ಅವರು ಬಹಳ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತಿದ್ದು ಈ ಹಿಂದೆ ಒಪ್ಪಿಕೊಂಡ ಕೆಲ ಸಿನಿಮಾಗಳ ಬಗ್ಗೆ ಮತ್ತೆ ಯೋಚಿಸುವಂತಾಗಿದೆ.. ಹೌದು ಅದೇ ರೀತಿ ಕೆಜಿಎಫ್ ಮೊದಲ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕ ಯಶ್ ಅವರು ಕಿರಾತಕ ೨ ಸಿನಿಮಾವನ್ನು ಒಪ್ಪಿಕೊಂಡಿದ್ದರು.. ಆ ಸಿನಿಮಾಗಾಗಿ ಯಶ್ ಅವರು ನಿರ್ಮಾಪಕರಾದ ಜಯಣ್ಣ ಅವರಿಂದ ಸಂಭಾವನೆಯ ಅಡ್ವಾನ್ಸ್ ಕೂಡ ಪಡೆದಿದ್ದರು.‌ ಸಿನಿಮಾ ಚಿತ್ರೀಕರಣವೂ ಪ್ರಾರಂಭವಾಗಿ ಒಂದಿಷ್ಟು ಚಿತ್ರೀಕರಣವೂ ಆಗಿತ್ತು.. ಆದರೆ ಕೆಜಿಎಫ್ ಬಿಡುಗಡೆಯಾಗಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ನಂತರ ಕಿರಾತಕ ಸಿನಿಮಾವನ್ನು ಅಲ್ಲಿಗೆ ನಿಲ್ಲಿಸಲಾಗಿತ್ತು..

ಇದೀಗ ಕಿರಾತಕ ಸಿನಿಮಾ ಮುಂದುವರೆಯದ ಕಾರಣ ಯಶ್ ಅವರಿಗೆ ನೀಡಿದ್ದ ಸಂಭಾವನೆಯ ಹಣವನ್ನು ಜಯಣ್ಣ ಅವರು ವಾಪಸ್ ಕೇಳಿದ್ದಾರೆ ಎನ್ನಲಾಗಿದೆ.. ಆದರೆ ಈ ವಿಚಾರವಾಗಿ ದೊಡ್ಡತನ ತೋರಿದ ಯಶ್ ಅವರು ತಮ್ಮ ಸಂಭಾವನೆ ಮಾತ್ರವಲ್ಲದೇ ತಮ್ಮಿಂದ ಸಿನಿಮಾ ನಿಂತ ಕಾರಣ ಚಿತ್ರೀಕರಣಕ್ಕೆ ಖರ್ಚು ಮಾಡಿದ್ದ ಮೂರು ಕೋಟಿ ರೂಪಾಯಿಗಳನ್ನು ಶೇಕಡ ಮೂರರ ಬಡ್ಡಿ ಜೊತೆಗೆ ವಾಪಸ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.. ಹೌದು ತಮ್ಮ ಕಾರನದಿಂದ ಸಿನಿಮಾ ಚಿತ್ರೀಕರನ ನಿಂತಿದ್ದು ಎಂದು ಅರಿತಿರುವ ಯಶ್‌ ಅವರು ತಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದು ಅವಕಾಶ ಕೊಟ್ಟಿದ್ದ ನಿರ್ಮಾಒಕರಾದ ಜಯನ್ನ ಅವರಿಗೆ ತಮ್ಮಿಂದ ತೊಂದರೆ ಆಗಬಾರದು ಎಂಬ ಕಾರನಕ್ಕೆ ಚಿತ್ರೀಕರಣಕ್ಕೆ ಖರ್ಚು ಮಾಡಿದ್ದ ಅಷ್ಟೂ ಹಣ ಹಾಗೂ ತಾವು ಸಂಬಾವನೆಯಾಗಿ ಪಡೆದುಕೊಂಡಿದ್ದ ಅಡ್ವಾನ್ಸ್‌ ಹಣ ಎಲ್ಲದಕ್ಕೂ ಮೂರರಷ್ಟು ಬಡ್ಡಿ ಸೇರಿಸಿ ವಾಪಸ್‌ ಮಾಡುವ ಮೂಲಕ ದೊಡ್ಡತನ ತೋರಿದ್ದಾರೆ.

ಹೌದು ಸಿನಿಮಾಗಾಗಿ ಹಣ ಪಡೆಯೋದು.. ಆ ಸಿನಿಮಾ ನಿಂತರೆ ಹಣ ವಾಪಸ್‌ ಮಾಡೋದು ದೊಡ್ಡ ವಿಚಾರವೇನೂ ಅಲ್ಲ. ಆದರೆ ಇಷ್ಟೂ ವರ್ಷಕ್ಕೆ ಬಡ್ಡಿ ಸೇರಿಸಿ ಜೊತೆಗೆ ಚಿತ್ರೀಕರಣಕ್ಕೆ ಖರ್ಚು ಮಾಡಿದ್ದ ಹಣವನ್ನೂ ಸಹ ತಾವೇ ನೀಡಿದ್ದು ದೊಡ್ಡಗುಣವೇ ಸರಿ. ಹೌದು ಚಿತ್ರೀಕರಣಕ್ಕೆ ಮೂರು ಕೋಟಿ ಹಣ ಖರ್ಚು ಮಾಡಿದ್ದು ಅದು ಹಾಗೂ ತಮಗೆ ನೀಡಿದ್ದ ಸಂಭಾವನೆ ಮತ್ತು ಶೇಕಡ ಮೂರಂತೆ ಬಡ್ಡಿ ಸೇರಿಸಿ ಒಟ್ಟು ಹದಿಮೂರು ಕೋಟಿ ರೂಪಾಯಿಯನ್ನು ಯಶ್ ಅವರು ನಿರ್ಮಾಪಕ ಜಯಣ್ಣ ಅವರಿಗೆ ವಾಪಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.. ಆದರೆ ಈ ನಡುವೆ ಯಶ್ ಯಾವುದಾದರು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರಾ ಅದೇ ಹಣದಲ್ಲಿ ಜಯಣ್ಣ ಅವರಿಗೆ ಹಣ ವಾಪಸ್ ನೀಡಿದರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದ್ದು ಸಧ್ಯ ಯಶ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ..