ಸಾಲು ಸಾಲು ಸಂತೋಷದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಶಾಕ್.. ನೋಟಿಸ್ ಜಾರಿ..

0 views

ಸ್ಯಾಂಡಲ್ವುಡ್ ಮಾತ್ರವಲ್ಲದೇ ಇಡೀ ಭಾರತ ಚಿತ್ರರಂಗವೇ ಕಾದು ಕುಳಿತಿರುವ ಕೆಜಿಎಫ್ ಸಿನಿಮಾದ ಟೀಸರ್ ಮೊನ್ನೆಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿತ್ತು.. ಎಲ್ಲರೂ ನಿರೀಕ್ಷಿಸಿದಂತೆ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದು 24 ಗಂಟೆಗಳಲ್ಲಿ 78 ಮಿಲಿಯನ್ ವೀಕ್ಷಣೆ ಪಡೆದದ್ದಷ್ಟೇ ಅಲ್ಲದೇ ಅದಾಗಲೇ 150 ಮಿಲಿಯನ್ ವೀಕ್ಷಣೆ ದಾಟಿ ಹಳೆಯ ಎಲ್ಲಾ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆದಿದೆ..

ಇನ್ನು ಟೀಸರ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡದ್ದಕ್ಕೆ ಸಂಪೂರ್ಣ ಚಿತ್ರತಂಡ ಸಂತೋಷದಿಂದಿದ್ದರು.. ನಾಯಕನಟ ಯಶ್ ಅವರೂ ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದರು.. ಇನ್ನು ಹುಟ್ಟುಹಬ್ಬದ ಪ್ರಯುಕ್ತ ಮಹಾಲಕ್ಷ್ಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದರು.. ಅಷ್ಟೇ ಅಲ್ಲದೇ ಮಗನಿಗೆ ಮುಡಿ ತೆಗೆಸುವ ಕಾರ್ಯವನ್ನೂ ಸಹ ಮಾಡಿ ಸಾಲು ಸಾಲು ಸಂತೋಷದಲ್ಲಿದ್ದ ಯಶ್ ಅವರಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಬಂದಿದ್ದು.. ನೋಟಿಸ್ ಜಾರಿಯಾಗಿದೆ‌‌‌‌..

ಹೌದು ಮೂರು ದಿನಗಳ ಹಿಂದೆ ಬಿಡುಗಡೆಯಾದ ಕೆಜಿಎಫ್ ಸಿನಿಮಾದ ಟೀಸರ್ ಗೆ ಸಂಬಂಧಪಟ್ಟಂತೆ ಆರೋಗ್ಯ ಇಲಾಖೆ ಯಶ್ ಅವರಿಗೆ ನೋಟಿಸ್ ಜಾರಿ ಮಾಡಿದೆ.. ದೃಶ್ಯವನ್ನು ಸಾಮಾಜಿಕ ಜಾಲತಾಣದಿಂದ ತೆರೆಯುವಂತೆ ತಿಳಿಸಿದೆ.. ಹೌದು ಖುದ್ದು ಯಶ್ ಅವರ ಹೆಸರಿಗೆ ನೋಟಿಸ್ ಜಾರಿ ಮಾಡಿರುವ ಆರೋಗ್ಯ ಇಲಾಖೆ ಕೆಳಕಂಡಂತೆ ತಿಳಿಸಿದೆ..

“ಜನವರಿ 7 ರಂದು ಬಿಡುಗಡೆಯಾಗಿರುವ ಕೆಜಿಎಫ್ ಸಿನಿಮಾದ ಟೀಸರ್ ಹಾಗೂ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದ್ದು ಅವುಗಳಲ್ಲಿ ತಾವು ಸಿ ಗರೇ ಟ್ ಸೇದುವ ದೃಶ್ಯಗಳು ಇದ್ದು ಅದರಲ್ಲಿ ಕಾನೂನು ಉಲ್ಲಂಘನೆಯಾಗಿದೆ..

ಲಕ್ಷಾಂತರ ಯುವ ಅಭಿಮಾನಿಗಳನ್ನು ಹೊಂದಿರುವ ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ನೀವು ಇಂತಹ ದೃಶ್ಯಗಳ ಮೂಲಕ ನಿಮ್ಮನ್ನು ಯುವ ಜನತೆ ಅನುಸರಿಸುವುದು ಸಾಮಾನ್ಯವಾಗಿರುತ್ತದೆ.. ಈ ಮೂಲಕ ಯುವ ಜನತೆ ರೋಗಗಳಿಗೆ ಒಳಗಾಗುವ ಸಾಧ್ಯತೆ ಇದೆ.. ಆದ್ದರಿಂದ ಈ ಮೂಲಕ ತಿಳಿಸುವುದೇನೆಂದರೆ ಈ ಕೂಡಲೇ ಅಂತಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕುವಂತೆ ನೀವು ಸೂಚನೆ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ‌ ಮಾಡಲು ಇಲಾಖೆಯೊಂದಿಗೆ ಸಹಕರಿಸಲು ಸೂಚಿಸಿದೆ” ಎಂದು ಬರೆದಿದೆ..

ಇನ್ನು ಟೀಸರ್ ಗಳಲ್ಲಿ ಅಂತಹ ದೃಶ್ಯಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂಬ ಕ್ಯಾಪ್ಶನ್ ಹಾಕದೇ ಇರುವುದೇ ಆರೋಗ್ಯ ಇಲಾಖೆ ಈ ರೀತಿ ನೋಟಿಸ್ ನೀಡಲು ಕಾರಣವಾಗಿದೆ.. ಇನ್ನು ಅಧಿಕೃತವಾಗಿ ನೋಟಿಸ್ ಮೂಲಕ ಸೂಚನೆ ನೀಡಿರುವುದರಿಂದ ಟೀಸರ್ ಅನ್ನು ತೆಗೆದು ಹಾಕುವರೋ ಅಥವಾ ಎಡಿಟ್ ಮಾಡಿ ಮತ್ತೊಮ್ಮೆ ಹಾಕುವರೋ ಕಾದು ನೋಡಬೇಕಿದೆ.. ಅಕಸ್ಮಾತ್ ತೆಗೆದು ಹಾಕಿದರೆ ಅತಿ ಹೆಚ್ಚು ವೀಕ್ಷಣೆ ಪಡೆದದ್ದೆಲ್ಲಾ ವ್ಯರ್ಥವಾಗುವುದು.. ಚಿತ್ರತಂಡ ಈ ಬಗ್ಗೆ ಯಾವ ರೀತಿಯ ನಿರ್ಣಯ ಕೈಗೊಳ್ಳುವುದೋ ಕಾದು ನೋಡಬೇಕಿದೆ..