ಸ್ಯಾಂಡಲ್ವುಡ್ ನ‌ ಸ್ಟಾರ್ ನಿರ್ದೇಶಕ ಯಶ್ ಆಪ್ತ ಇನ್ನಿಲ್ಲ.. ಕಣ್ಣೀರಿಟ್ಟ ಯಶ್.. ನಿಜಕ್ಕೂ ಏನಾಯ್ತು ಗೊತ್ತಾ..

0 views

ಕಳೆದ ಎರಡು ವರ್ಷದಿಂದ ಕೊರೊನಾ ಅದೆಷ್ಟು ಜೀವಗಳನ್ನು ಪಡೆಯಿತೋ ಲೆಕ್ಕವೇ ಇಲ್ಲ‌.. ಅದರಲ್ಲೂ ಸಿನಿಮಾ ಮಂದಿ ಸಾಕಷ್ಟು ಜನ ಕೊರೊನಾದಿಂದ ಇಲ್ಲವಾದರು.. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಮಳಯಾಳಂ ಹೀಗೆ ಎಲ್ಲಾ ಭಾಷೆಯ ಕಲಾವಿದರು ಕೊರೊನಾದಿಂದಾಗಿ ದೂರವಾದರು.. ಇದೀಗ ಕನ್ನಡದ ಖ್ಯಾತ ನಿರ್ದೇಶಕ ರಾಕಿಂಗ್ ಸ್ಟಾರ್ ಯಶ್ ಅವರ ಆಪ್ತ ಕೊರೊನಾದಿಂದಾಗಿ ಜೀವ ಕಳೆದುಕೊಂಡಿದ್ದಾರೆ..

ಹೌದು ಸ್ಯಾಂಡಲ್ವುಡ್ ನಲ್ಲಿ ಕೊರೊನಾ ದಿಂದಾಗಿ ಮಾತ್ರವಲ್ಲ ಕಳೆದ ಎರಡು ವರ್ಷದಿಂದ ಬೇರೆ ಬೇರೆ ಕಾರಣಗಳಿಂದಲೂ ಸಾಕಷ್ಟು ಕಲಾವಿದರು ಕೊನೆಯುಸಿರೆಳೆದರು.. ಕೆಲವರು ಕೊರೊನಾ ದಿಂದ ಹೋದರೆ ಮತ್ತೆ ಕೆಲವರು ಅಕಾಲಿಕವಾಗಿ ಇಲ್ಲವಾದರು.. ಇನ್ನಷ್ಟು ಮಂದಿ ಕೊರೊನಾದಿಂದಾದ ಆರ್ಥಿಕ ಸಂಕಷ್ಟದಿಂದ ತಾವಾಗಿಯೇ ಜೀವ ಕಳೆದುಕೊಂಡದ್ದು ಮಾತ್ರ ನಿಜಕ್ಕೂ ಮನಕಲಕುವಂತಿತ್ತು.. ಇನ್ನು ಈ ವರ್ಷವಾದರೂ ಈ ರೀತಿಯ ಯಾವುದೇ‌ ನೋವುಗಳು ಬಾರದಿರಲಿ ಎಂದುಕೊಳ್ಳುತ್ತಿರುವಾಗಲೇ ಇದೀಗ ಕನ್ನಡದ ಖ್ಯಾತ ನಟ‌ಕೊರೊನಾದಿಂದಾಗಿ ಇಲ್ಲವಾಗಿದ್ದಾರೆ..

ಹೌದು 2020 ರಲ್ಲಿ ಬುಲೆಟ್ ಪ್ರಕಾಶ್, ಚಿರು ಸರ್ಜಾ, ಮೈಕಲ್, ಹೀಗೆ ಇನ್ನೂ ಅನೇಕ ಕನ್ನಡದ ಕಲಾವಿದರು ಇಹಲೋಕ ತ್ಯಜಿಸಿದರು.. ಇನ್ನು ಕಳೆದ ವರ್ಷ ಹೇಳುವುದೇ ಬೇಕಿಲ್ಲ.. ನಾಡಿನ ಮನೆ ಮಗನೇ ಇಲ್ಲವಾಗಿ ಹೋದರು.. ಅಪ್ಪು ಇಲ್ಲದ ನೋವು ಸಂಕಟ ಇನ್ನು ಅಪ್ಪು ಇರೋದಿಲ್ಲ ಎನ್ನುವುದ ನೆನಪಿಸಿಕೊಂಡರೂ ಸಹ ಸಂಕಟ ಹೇಳಲು ಅಸಾಧ್ಯ..‌ ಅಪ್ಪು ಅವರು ಶಿವರಾಂ ಅವರು ಜೊತೆಗೆ ಸಾಕಷ್ಟು ಕಲಾವಿದರು ನಿರ್ಮಾಪಕರು ನಿರ್ದೇಶಕರು ಸಹ ಕಳೆದ ವರ್ಷ ಇಲ್ಲವಾದರು.. ಇನ್ನು ಇದೀಗ ಕನ್ನಡದ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ..

ಹೌದು ಕಳೆದ ವಾರವಷ್ಟೇ ಕೊರುತೆರೆಯ ನನ್ನಮ್ಮ ಸೂಪರ್ ಸ್ಟಾರ್ ಶೋನ ಸಮನ್ವಿ ರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಜೀವ ಕಳೆದುಕೊಂಡಿದ್ದಳು.. ಇದೀಗ ಬೆಳ್ಳಿತೆರೆಯ ಸ್ಟಾರ್ ನಿರ್ದೇಶಕ ಕಿರಾತಕ ಸಿನಿಮಾ ಮೂಲಕ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಸಕ್ಸಸ್ ಕೊಟ್ಟ ನಿರ್ದೇಶಕ ಪ್ರದೀಪ್ ರಾಜ್ ಇಲ್ಲವಾಗಿದ್ದಾರೆ.. ಯಶ್ ಅವರ ಸಿನಿಮಾ ಬದುಕಿಗೆ ಕಿರಾತಕ ಸಿನಿಮಾ ದೊಡ್ಡ ತಿರುವು ನೀಡಿದ್ದು ಸುಳ್ಳಲ್ಲ.. ಇದೀಗ ತನ್ನ ಆಪ್ತರನ್ನು ಕಳೆದುಕೊಂಡ ಯಶ್ ಕಂಬನಿ ಮಿಡಿದಿದ್ದಾರೆ..

ಹೌದು ಪ್ರದೀಪ್ ರಾಜ್ ಅವರಿಗೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.. ಪ್ರದೀಪ್ ರಾಜ್ ಅವರಿಗೆ ನಲವತ್ತಾರು ವರ್ಷ ವಯಸ್ಸಾಗಿತ್ತು.. ಅವರು ಹಲವಾರು ವರ್ಷಗಳಿಂದ ಡಯಾಬಿಟಿಸ್ ನಿಂದಲೂ ಸಹ ಬಳಲುತ್ತಿದ್ದ ಕಾರಣ ಈ ರೀತಿಯಾಗಿದೆ ಎನ್ನಲಾಗಿದೆ.. ಇಂದು ಬೆಳಿಗ್ಗೆ ಮೂರು ಗಂಟೆ ವೇಳೆಗೆ ಪ್ರದೀಪ್ ರಾಜ್ ಅವರು ಕೊನೆಯುಸಿರೆಳೆದರೆಂದು ಅವರ ಸಹೋದರ ಪ್ರಶಾಂತ್ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.. ಮೂಲತಃ ಪಾಂಡಿಚೆರಿಯವರಾದ ಕಾರಣ ಪ್ರದೀಪ್ ರಾಜ್ ಅವರ ಅಂತಿಮ ಕಾರ್ಯಗಳನ್ನು ಪಾಂಡಿಚೆರಿಯಲ್ಲಿಯೇ ಕುಟುಂಬದವರ ಸಮ್ಮುಖದಲ್ಲಿ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.. ಪ್ರದೀಪ್ ರಾಜ್ ಅವರ ಅಗಲಿಕೆಗೆ ಇದೀಗ ಸಂಪೂರ್ಣ ಚಿತ್ರರಂಗ ಕಂಬನಿ ಮಿಡಿದು ಸಂತಾಪ ಸೂಚಿಸಿದೆ..