ಯಶ್ ಅವರಿಗೆ ಖುದ್ದು ಕೃತಜ್ಞತೆ ತಿಳಿಸಿದ ಅಶ್ವಿನಿ ಪುನೀತ್.. ಕಾರಣವೇನು ಗೊತ್ತಾ.. ಇದು ದೊಡ್ಡತನ ಅಂದ್ರೆ..

0 views

ನಾಡಿನ ಮನೆ ಮಗ ಪುನೀತ್ ರಜ್ ಕುಮಾರ್ ಅವರು ಅಕಾಲಿಕವಾಗಿ ಅಗಲಿ ಹತ್ತೊಂಭತ್ತು ದಿನಗಳು ಕಳೆದೇ ಹೋದವು.. ಈಗಲೂ ಮುಂದೆಂದೂ ಸಹ ಯಾರಿಗೂ ಅರಗಿಸಿಕೊಳ್ಳಲಾಗದ ಘಟನೆ ಇದು‌.. ನೆನೆಸಿಕೊಂಡರೆ ಅಪ್ಪುವಿನ ಆ ಬಾಲ್ಯದ ವೀಡಿಯೋಗಳು.. ನಿಷ್ಕಲ್ಮಶ ವಾಗಿ ನಗುನಗುತ್ತಾ ಕಾಣುವ ಆ ಫೋಟೋಗಳನ್ನು ಕಂಡರೆ ಹೊಟ್ಟೆಯಲ್ಲಿ ಹೇಳಿಕೊಳ್ಳಲಾಗದ ಸಂಕಟ ತರುತ್ತದೆ.. ಆದರೆ ಸಮಯದ ಮುಂದೆ ನಾವೆಲ್ಲರೂ ಸಣ್ಣವರೇ.. ಪುನೀತ್ ರಾಜ್ ಕುಮಾರ್ ಅವರು ಹೊಂಟುಬಿಟ್ಟರು.. ನಾವು ನೋವ ನುಂಗಿ ದಿನ ಸಾಗಿಸಲೇ ಬೇಕು‌.. ಸಂಬಂಧವಿಲ್ಲದ ನಮ್ಮಗಳಿಗೇ ಇಷ್ಟು ನೋವಾಗುವಾಗ ಅಶ್ವಿನಿ ಅವರಿಗೆ ಅವರ ಮಕ್ಕಳಿಗೆ ಶಿವಣ್ಣ ಅವರಿಗೆ ರಾಘಣ್ಣ ಅವರಿಗೆ.. ಆಗುವ ಸಂಕಟ ಹೇಳಲೂ ಕೂಡ ಅಸಾಧ್ಯ..

ಇನ್ನು ನಿನ್ನೆಯಷ್ಟೇ ಪುನೀತ್ ಅವರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.. ಕಾರ್ಯಕ್ರಮಕ್ಕೆ ತೆಲುಗು ಹಾಗೂ ತಮಿಳಿನ‌ ಕೆಲ ನಟರು ಹಾಗೂ ಬಹುತೇಕ ಸಂಪೂರ್ಣ ಸ್ಯಾಂಡಲ್ವುಡ್ ಕಾರ್ಯಕ್ರಮದಲ್ಲಿದ್ದು ಅಪ್ಪುವಿಗೆ ನಮನ ಸಲ್ಲಿಸಿದರು.. ಅಶ್ವಿನಿ ಅವರು ಪುನೀತ್ ಅವರ ಎರಡನೇ ಪುತ್ರಿ ವಂದಿತಾ.. ಶಿವಣ್ಣ ಗೀತಕ್ಕ.. ರಾಘಣ್ಣನ ಕುಟುಂಬ.. ಪುನೀತ್ ಅವರ ಇಬ್ಬರು ಸಹೋದರಿಯರು ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.. ಪ್ರತಿಯೊಬ್ಬ ಹಿರಿಯ ಬಾಯಿಂದಲೂ ಬಂದದ್ದು ಒಂದೇ ಮಾತು.. ನಾವು ಹೀಗೆ ಇಲ್ಲಿ ನಿಂತು ಪುನೀತ್ ಅವರಿಗೆ ಈ ರೀತಿಯ ಕಾರ್ಯಕ್ರಮ ಮಾಡಬೇಕಾ.. ಇಷ್ಟು ಚಿಕ್ಕ ವಯಸ್ಸಿಗೆ ಕೋಟ್ಯಾಂತರ ಜನ ಮೆಚ್ಚುವ ಕಾರ್ಯ ಮಾಡಿ ಅಪ್ಪು ಯಾಕೆ ಹೋಗಿ ಬಿಟ್ಟರು.. ನಿಜಕ್ಕೂ ಇದು ಉತ್ತರವಿಲ್ಲದ ಕಣ್ಣೀರೇ ಉತ್ತರವಾದ ಪ್ರಶ್ನೆ..

ಹೌದು ಆ ದಿನ ಅಕ್ಟೋಬರ್ ಇಪ್ಪತ್ತೊಂಭತ್ತು ಎಂದಿನಂತೆ ನಗುನಗುತ್ತಲೇ ಕಾರ್ ನಲ್ಲಿ ಅಶ್ವಿನಿ ಅವರ ಜೊತೆ ಬಂದ ಪುನೀತ್ ಅವರು ಅರ್ಧಗಂಟೆಯಲ್ಲಿ ಇಲ್ಲವೆಂದಾಗ ಜೊತೆಯಲ್ಲಿಯೇ ಇದ್ದ ಅಶ್ವಿನಿ ಅವರ ಪರಿಸ್ಥಿತಿ ನಿಜಕ್ಕೂ ಕರುಳು ಹಿಂಡುವಂತಿದೆ.. ಆದರೆ ಅಪ್ಪು ಇಲ್ಲವಾದ ಬಳಿಕ ಆ ಕುಟುಂಬಕ್ಕೆ ನಿಜಕ್ಕೂ ಸವಾಲೇ ಆಗಿತ್ತು.. ಆದರೆ ದೊಡ್ಡಮನೆಯ ದೊಡ್ಡತನ ಅಶ್ವಿನಿ ಅವರು ನಡೆದುಕೊಂಡ ರೀತಿಯಲ್ಲಿ ಅವರ ಪ್ರಬುದ್ಧತೆಯಲ್ಲಿ ತೋರಿತು.. ಹೌದು ಆ ದಿನ ಮೊದಲು ಅಶ್ವಿನಿ ಅವರು ಶಿವಣ್ಣನಿಗೆ ಫೋನ್ ಮಾಡಿದ್ದಾರೆ.. ಅಳುತ್ತಿದ್ದ ಅಶ್ವಿನಿ ಧ್ವನಿ ಕೇಳಿ ಮರಳಿ ಫೋನ್ ಮಾಡಿದ ಶಿವಣ್ಣನಿಗೆ ಅಶ್ವಿನಿ ಅವರಿಂದ ಬಂದದ್ದು “ಇಲ್ಲ ಶಿವಣ್ಣ ಹೀ ಪಾಸ್ಡ್ ಅವೇ ಅನ್ನೋ ಗದ್ಗದಿತವಾದ ಮಾತು.. ಕಣ್ಣೀರು ತುಂಬಿದ ನೋವು” ತಕ್ಷಣ ಫೋನ್ ನನ್ನು ಬಿಸಾಡಿದ ಶಿವಣ್ಣ ಮನೆಯ ತುಂಬೆಲ್ಲಾ ಒದ್ದಾಡಿದ್ದಾರೆ.. ನನಗೆ ನನ್ನ ತಮ್ಮ ಬೇಕು.. ನನ್ನ ತಮ್ಮನಿಗೆ ಹೀಗ್ಯಾಕ್ ಆಯ್ತು..

ಅವನಿಗಿಂತ ನಾನು ಹದಿಮೂರು ವರ್ಷ ದೊಡ್ಡವನು.. ನಾನು ಮೊದಲು ಹೋಗಬೇಕು.. ಅವನಲ್ಲ.. ಅವನು ನನಗೆ ಬೇಕು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.. ಅವರನ್ನು ಸಮಾಧಾನ ಪಡಿಸಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದವರು ಗೀತಕ್ಕ.. ಸದಾ ತಾನೇ ಡ್ರೈವ್ ಮಾಡುತ್ತಿದ್ದ ಶಿವಣ್ಣ ಆ ದಿನ ಹಿಂದೆ ಕೂತು ಅಳುತ್ತಲೇ ಬಂದರು.. ಆದರೆ ಆಸ್ಪತ್ರೆಗೆ ಬಂದೊಡನೇ ದುಃಖವನ್ನೆಲ್ಲಾ ತಡೆದು ತನ್ನ ಮುಖ ನೋಡಿದರೆ ಅಶ್ವಿನಿ ಅವರು ಮತ್ತಷ್ಟು ಕುಗ್ಗಬಹುದೆಂದು ದುಃಖ ತಡೆದು ಒಳ ಹೋದರು.. ರಾಘಣ್ಣ ಅವರೂ ಸಹ ಅಶ್ವಿನಿ ಹಾಗೂ ಮಕ್ಕಳು ಗಟ್ಟಿಯಾಗಿರಲೆಂದು ತಮ್ಮ ದುಃಖವನ್ನೆಲ್ಲಾ ತಡೆದು ಕೊನೆಗೆ ನೆನ್ನೆ ಅದನ್ನೆಲ್ಲಾ ಜನರ ಮುಂದೆ ಹೊರ ಹಾಕಿ ಬಿಕ್ಕಿಬಿಕ್ಕಿ ಅತ್ತರು..

ಇನ್ನು ಆ ದಿನ ಸಂಪೂರ್ಣ ಚಿತ್ರರಂಗವೇ ದೊಡ್ಮನೆಯ ಬೆನ್ನೆಲುಬಾಗಿ ನಿಂತಿತ್ತು.. ಯಶ್ ದರ್ಶನ್ ಸುದೀಪ್ ಪ್ರತಿಯೊಬ್ಬರೂ ಸಹ ಆಸ್ಪತ್ರೆಗೆ ಆಗಮಿಸಿದ್ದರು.. ನಂತರ ದರ್ಶನ್ ಅವರು ಪುನೀತ್ ಅವರ ಮನೆಗೂ ಕೂಡ ತೆರಳಿದರು.. ಆದರೆ ಆ ದಿನ ರಾತ್ರಿ ಯಶ್ ಅವರು ಮಾಡಿದ ಕೆಲಸಕ್ಕೆ ಅಶ್ವಿನಿ ಅವರು ಯಶ್ ಅವರಿಗೆ ಖುದ್ದು ಧನ್ಯವಾದಗಳನ್ನು ತಿಳಿಸಿದ್ದಾರೆ.. ಹೌದು ಯಶ್ ಅವರು ಇಂತಹ ಕಷ್ಟದಲ್ಲಿ ನೆರವಾಗಿ ಸದಾ ನಿಲ್ಲುತ್ತಾರೆ.. ಅದು ಅವರ ದೊಡ್ಡಗುಣವೇ ಸರಿ.. ಅದನ್ನು‌ ನೆನೆದು ಅಶ್ವಿನಿ ಅವರು ಯಶ್ ಅವರಿಗೆ ಧನ್ಯವಾದ ತಿಳಿಸಿ ದೊಡ್ಡತನ ತೋರಿದ್ದಾರೆ..

ಹೌದು ಆ ದಿನ ರಾತ್ರಿ ಅಂದು ಶಿವಣ್ಣ ಅವರೇ ತಿಳಿಸಿದಂತೆ ಯಶ್ ನನ್ನ ಜೊತೆಯೇ ಇದ್ದರು.. ಆತನ ಪ್ರೀತಿ ನಿಜಕ್ಕೂ ಎಂದೂ ಕಡಿಮೆಯಾಗಿಲ್ಲ.. ಆ ರಾತ್ರಿ ದಿಕ್ಕು ತೋಚದೇ ನಿಂತಿದ್ದಾಗ ನಾಳೆ ಮತ್ತೆ ಇಲ್ಲೇ ನಿಂತಿರ್ಬೇಕು ದಯವಿಟ್ಟು ಹೋಗಿ ಸ್ವಲ್ಪ ಸಮಯ ಮಲಗಿ ಅಂತ ನನ್ನನ್ನ ಬಹಳಷ್ಟು ಕೇಳಿಕೊಂಡು ಬಿಡದೇ ನನ್ನನ್ನು ಮಲಗಲು ಕಳುಹಿಸಿದರು.. ಆ ಸಮಯದಲ್ಲಿ ನಾನು ಇರ್ತೇನೆ.. ನೀವು ಹೋಗಿ ಸ್ವಲ್ಪ ನಿದ್ರೆ ಮಾಡಿ ಅಂತ ಆ ರಾತ್ರಿ ನನ್ನ ಕಳುಹಿಸಿದ್ರು.. ಅಷ್ಟೇ ಅಲ್ಲದೇ ಪುನೀತ್ ಅವರ ಮಗಳು ಅಮೇರಿಕಾದಲ್ಲಿ‌ ಇದ್ದದ್ದು ಅವರನ್ನು ಮರಳಿ ಕರೆತರುವುದು ಕುಟುಂಬಕ್ಕೆ ದೊಡ್ಡ ವಿಚಾರವಾಗಿತ್ತು.. ಅಂತಹ ಸಮಯದಲ್ಲಿ ಮಾಡಬೇಕಾದ ಎಲ್ಲಾ ಕೆಲಸ ಮಾಡಿದ್ದು ಧೃತಿಯನ್ನು ಕರೆತಂದಿದ್ದೂ ಸಹ ಯಶ್ ಅವರೇ..

ಹೌದು ಈ ಬಗ್ಗೆ ಖುದ್ದು ಶಿವಣ್ಣ ಅವರೇ ಹೇಳಿಕೊಂಡರು.. ಸಿನಿಮಾದಲ್ಲಿ ತೋರುವಂತೆ ಫೋನ್ ಮಾಡಿದ ತಕ್ಷಣ ಬೇರೊಂದು ದೇಶದಿಂದ ಬರುವುದು ನಿಜ ಜೀವನದಲ್ಲಿ ಸಾಧ್ಯವಿಲ್ಲ.. ಅಲ್ಲಿಂದ ಬರಲು ಅದರದ್ದೇ ಆದ ನಿಯಮಗಳು ಇರುತ್ತವೆ.. ಆದರೆ ಆ ಸಮಯದಲ್ಲಿ ಧೃತಿಯನ್ನು ಕರೆತರುವ ಜವಾಬ್ದಾರಿ ವಹಿಸಿಕೊಂಡವರು ಯಶ್.. ಹೌದು ಆ ದಿನ ರಾತ್ರಿ ಕಂಠೀರವ ಸ್ಟೇಡಿಯಂ ನ ಒಂದು ರೂಮಿನಲ್ಲಿ‌ ಧೃತಿಯನ್ನು ಕರೆತರುವ ಕೆಲಸ ನಡೆಯುತ್ತಿರುತ್ತದೆ. ಆಗ ಅಲ್ಲಿದ್ದವರೇ ಯಶ್.. ಸರ್ಕಾರದ ಪ್ರಮುಖರಿಗಾಗಲಿ ಅಧಿಕಾರಿಗಳಿಗಾಗಲಿ ಅಥವಾ ಅಮೇರಿಕಾದಲ್ಲಿದ್ದ ಪುನೀತ್ ಅವರ ಮಗಳು ಧೃತಿ ಅವರಿಗಾಗಲಿ ಜೊತೆಯಾಗಿ ಮಾತನಾಡಿದ್ದು ಇದೇ ಯಶ್.. ರಾತ್ರಿ ಪೂರ್ತಿ ಅಲ್ಲಿಯೇ ಇದ್ದು ಯಾರ್ಯಾರಿಗೆ ಫೋನ್ ಮಾಡಬೇಕೋ ಎಲ್ಲವನ್ನೂ ಮಾಡಿ ಧೃತಿ ಅವರನ್ನು ಮರಳಿ ಕರೆತರಲು ಏನೇನು ವ್ಯವಸ್ಥೆ ಮಾಡಬೇಕೋ ಎಲ್ಲವನ್ನು ಮಾಡಿದರು..

ಈ ಬಗ್ಗೆ ಶಿವಣ್ಣ ಹೇಳಿಕೊಳ್ಳುವಾಗ.. ಅವತ್ತು ನಾನು ಸ್ವಲ್ಪ ಹೊತ್ತು ಬೇಕಿದ್ರೆ ಇಲ್ಲಿ ರೂಮ್ ನಲ್ಲಿ ಧೃತಿ ಕೆಲಸವಾಗು ಇರ್ತೀನಿ ಎಂದೆ.. ಆದರೆ ಯಶ್ ಮಾತ್ರ ನಾನು ಇದೀನಲ್ಲ.. ಎಲ್ಲಾ ನೋಡ್ಕೋತೀನಿ ನೀವು ಸ್ವಲ್ಪ ಮಲಗಿ ಶಿವಣ್ಣ ಎಂದರು.. ಎಂದು ಯಶ್ ಬಗ್ಗೆ ಮಾತನಾಡಿದ್ದರು.. ಅಂದುಕೊಂಡಂತೆ ಧೃತಿ ಮರಳಿ ಬಂದು ತಂದೆಯ ಮುಖವನ್ನು ನೋಡುವಂತಾಯಿತು.. ಅಂದಿನ ದಿನ ರಾತ್ರಿಯಿಂದ ಹಿಡಿದು ಧೃತಿ ದೆಹಲಿಗೆ ತಲುಪುವವರೆಗೂ ಯಶ್ ಅವರು ಅಲ್ಲಿಯೇ ಇದ್ದರು..‌ ಕೊನೆವರೆಗೂ ಕುಟುಂಬದಂತೆ ನಿಂತರು.. ಇಂತಹ ಕಷ್ಟದ ಸಮಯದಲ್ಲಿ ಮನೆಯ ಸದಸ್ಯರಿಗೆ ದಿಕ್ಕು ತೋಚದಂತಾಗುವುದು ಸಹಜ.. ಆದರೆ ಅಂತಹ ಸಮಯದಲ್ಲಿ ಗಟ್ಟಿಯಾಗಿ ಜೊತೆಯಾಗಿ ನಿಲ್ಲುವವನೇ ನಿಜವಾದ ಮನುಷ್ಯತ್ವವುಳ್ಳ ಮನುಷ್ಯ.. ಇದೇ ವಿಚಾರವಾಗಿ ಅಂದು ಧೃತಿಯನ್ನು ಮರಳಿ ಕರೆಸಲು ಯಶ್ ಅವರು ಮಾಡಿದ ಕೆಲಸಕ್ಕೆ ಅಶ್ವಿನಿ ಅವರು ಯಶ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ..