ಹುಟ್ಟುಹಬ್ಬದ ದಿನವೇ ಯಾರೂ ಊಹಿಸಿರದ ಘಟನೆ..  ಜೊತೆ ಇದ್ದವರಿಂದಲೇ ಮೋಸ.. ಅಸಮಾಧಾನ ಹೊರ ಹಾಕಿದ ಯಶ್..

0 views

ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ.. ಅಭಿಮಾನಿಗಳಿಗೆ ದೊಡ್ಡ ಹಬ್ಬ.. ಆದರೆ ಇಂದೇ ಯಾರು ಊಹಿಸದ ಘಟನೆಯೂ ನಡೆದಿದೆ.. ಹೌದು ರಾಕಿಂಗ್ ಸ್ಟಾರ್ ಯಶ್ ಅವರು ಸಿನಿಮಾ ರಂಗದಲ್ಲಿ ನಡೆದು ಬಂದ ಜರ್ನಿ ಎಲ್ಲರಿಗೂ ತಿಳಿದೇ ಇದೆ.. ಯಾವುದೇ ಹಿನ್ನೆಲೆ‌ ಇಲ್ಲದೆ ಸಿನಿಮಾ ರಂಗಕ್ಕೆ ಬಂದು ನೆಲೆ ನಿಂತು ಇದೀಗ ಸಂಪೂರ್ಣ ಭಾರತದ ಸಿನಿಮಾ ಇಂಡಸ್ಟ್ರಿಯೇ ತನ್ನತ್ತ ತಿರುಗಿ ನೋಡುವಂತೆ ಆಗಿದ್ದು ಕೆಜಿಎಫ್ ಸಿನಿಮಾದಿಂದ.. ಹೌದು ವರ್ಷಗಳ ಪರಿಶ್ರಮದಿಂದ ಮೂಡಿ ಬಂದ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ಯಶ್ ಅವರಿಗೆ ಹೆಸರನ್ನೂ ಸಹ ತಂದುಕೊಟ್ಟಿತು.. ಇದೀಗ ಕೆಜಿಎಫ್ 2 ಸಿನಿಮಾಗಾಗಿ ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿದ್ದಾರೆ.. ಆದರೆ ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾ ಈ ವರ್ಷಕ್ಕೆ ಮುಂದೂಡಲ್ಪಟ್ಟಿತ್ತು.. ಇನ್ನು ಈ ದಿನ ಯಶ್ ಅವರ ಹುಟ್ಟುಹಬ್ಬವಾದ್ದರಿಂದ ಈದಿನ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಬೇಕೆಂದು ಸಿನಿಮಾ ತಂಡ ನಿರ್ಧರಿಸಿ ಎಲ್ಲಾ ತಯಾರಿಯನ್ನೂ ಸಹ ಮಾಡಿಕೊಂಡಿತ್ತು.. ಆದರೆ ನಡೆದಿದ್ದೇ ಬೇರೆ..

ಹೌದು ಇಂದು ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಯಶ್ ಅಭಿನಯದ ಬಹು ನಿರೀಕ್ಷೆಯ..‌ ಎಲ್ಲಾ ಭಾಷೆಯವರೂ ಕಾಯುತ್ತಿರುವ ಕೆಜಿಎಫ್ ಸಿನಿಮಾದ ಟೀಸರ್ ಬಿಡುಗಡೆಯಾಗಬೇಕಿತ್ತು.. ಆದರೆ ಇದ್ದಕ್ಕಿದ್ದಂತೆ ನಿನ್ನೆ ರಾತ್ರಿಯೇ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.. ಇದಕ್ಕೆ ಕಾರಣ ಅದೊಂದು ಕಾಣದ ಕೈ.. ಹೌದು ಸಿನಿಮಾ ತಂಡದಲ್ಲಿಯೇ ಇದ್ದುಕೊಂಡು ಅವರುಗಳಿಗೇ ಮೋಸಮಾಡಲು ಮುಂದಾಗಿದ್ದು ಟೀಸರ್ ಅನ್ನು ಲೀಕ್ ಮಾಡಿದ್ದಾನೆ.. ಯಾರೂ ಸಹ ಊಹಿಸಿಯೂ ಇರಲಿಲ್ಲ.. ನಮ್ಮಲ್ಲಿಯೇ ಒಬ್ಬ ಈರೀತಿ‌ ಮಾಡುತ್ತಾನೆಂದು..

ಹೌದು ಇಂದು ಬಿಡುಗಡೆಯಾಗಬೇಕಾದ ಟೀಸರ್ ಅನ್ನು ನಿನ್ನೆಯೇ ಯಾರೋ‌ ಒಬ್ಬ ಅವರ ಜೊತೆಯೇ ಇರುವವನು ಒಬ್ಬ ಟೀಸರ್ ಅನ್ನು ಲೀಕ್ ಮಾಡಿದ್ದಾನೆ.. ಇದರಿಂದ ಎಚ್ಚೆತ್ತ ಸಿನಿಮಾ ತಂಡ ತಕ್ಷಣ ನಿನ್ನೆ ರಾತ್ರಿ 9.29 ಕ್ಕೆ ಟೀಸರ್ ಅನ್ನು ಹೊಂಬಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.. ಬಿಡುಗಡೆಯಾದ ಮೂರೇ ನಿಮಿಷಕ್ಕೆ ಒಂದು ಮಿಲಿಯನ್ ವೀಕ್ಷಣೆ ಪಡೆದು ಮೂರು ಲಕ್ಷ ಲೈಕ್ ಪಡೆದು ಇದುವರೆಗೂ ಇದ್ದ ಎಲ್ಲಾ ದಾಖಲೆಗಳನ್ನು ಅಳಿಸಿದೆ..

ಇನ್ನು ಈ ಬಗ್ಗೆ ನಿನ್ನೆ ಮಾತನಾಡಿರುವ ಯಶ್..‌ ವೀಡಿಯೋ ಲೀಕ್ ಮಾಡಿದವನ ಬಗ್ಗೆಯೂ ಮಾತನಾಡಿ ಬೇಸರ ವ್ಯಕ್ತ ಪಡಿಸಿದ್ದಾರೆ.. ಹೌದು.. “ಎಲ್ರಿಗೂ ನಮಸ್ಕಾರ.. ಕೆಜಿಎಫ್ 2 ಟೀಸರ್ ಬೆಳಿಗ್ಗೆ 10.18ಕ್ಕೆ ಬಿಡುಗಡೆ ಆಗಬೇಕಿತ್ತು.. ಆದರೆ ಯಾರೋ ಒಬ್ಬ ಪುಣ್ಯಾತ್ಮ ಮಹಾನುಭಾವ ಈ ಟೀಸರ್ ನ ಅದಾಗಲೇ ಲೀಕ್ ಮಾಡಿದ್ದಾರೆ.. ಅವ್ರಿಗೆ ಅದೇನ್ ಸಂತೋಷ ಸಿಗತ್ತೋ ಗೊತ್ತಿಲ್ಲ.. ಆದರೆ ದೇವರು ಒಳ್ಳೆದ್ ಮಾಡ್ಲಿ ಅವರಿಗೆ.. ಅಭಿಮಾನಿಗಳು ತುಂಬಾ ಆಸೆಗಳನ್ನ ಇಟ್ಕೊಂಡಿದ್ರಿ.. ಬಹಳ ನಿರೀಕ್ಷೆ ಇಟ್ಕೊಂಡಿದ್ರಿ.. ಬೆಳಿಗ್ಗೆ ಬಿಡುಗಡೆ ಆಗತ್ತೆ ಅಂತ.. ಆದರೆ ಪರವಾಗಿಲ್ಲ. ಆದರೆ ನಿಮಗೋಸ್ಕರ ಈಗಲೇ ರಾತ್ರಿ 9.29 ಕ್ಕೆ ಹೊಂಬಾಳೆ ಚಾನಲ್ ನಲ್ಲಿ‌ ಬಿಡುಗಡೆ ಮಾಡ್ತಾ ಇದ್ದೀವಿ.. ನೋಡಿ.. ಇದು ಬರಿ ಟೀಸರ್.. ಸಿನಿಮಾ ಇನ್ನು ಮುಂದೆ ಇದೆ..” ಎಂದಿದ್ದಾರೆ..

ಒಂದು ಸಿನಿಮಾ ಮಾಡಬೇಕೆಂದರೆ ಎಷ್ಟು ಪರಿಶ್ರಮ ಪಟ್ಟಿರುತ್ತಾರೆಂದು ಸಿನಿಮಾ ತಂಡದವರಿಗೆ ಗೊತ್ತು.. ಆದರೆ ಇಂತಹ ಘಟನೆಗಳು ಅವರುಗಳ ಮನಸ್ಸಿಗೂ ಬೇಸರವನ್ನುಂಟು ಮಾಡಿಬಿಡುತ್ತದೆ..‌ನಮ್ಮೊಳಗೆ ಒಬ್ಬ ಇಂತಹ ಕೆಲಸ ಮಾಡಿದ್ದಾನೆಂದರೆ ಅವರು ನಂಬುವುದಾದರೂ ಯಾರನ್ನು.. ಆ ಭಗವಂತನೇ ಬಲ್ಲ..

ಇನ್ನು ಯಶ್ ಅವರ ಹುಟ್ಟುಹಬ್ಬಕ್ಕಾಗಿ ಬಿಡುಗಡೆಯಾಗಬೇಕಿದ್ದ ಟೀಸರ್ ನಿನ್ನೆಯೇ ಬಿಡುಗಡೆಯಾದರೂ ಸಹ ದಾಖಲೆಗಳ ಮೇಲೆ ದಾಖಲೆ ಬರೆದಿದೆ.. ಇನ್ನು ಅಭಿಮಾನಿಗಳು ಇಂದು ತಾವು ಇದ್ದ ಜಾಗಗಳಲ್ಲಿಯೇ ಯಶ್ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.. ಕಳೆದ ವರ್ಷ ಐದು ಸಾವಿರ ಕೆಜಿ ಕೇಕ್ ತಯಾರಿಸಿ ದಾಖಲೆ ಬರೆದು 240 ಅಡಿಯ ಅತಿ ಎತ್ತರದ ಕಟೌಟ್ ಕೂಡ ಹಾಕಿದ್ದರು.. ಆದರೆ ಈ ಬಾರಿ‌ ಕೊರೊನಾ ಕಾರಣದಿಂದ ಇದ್ದಲ್ಲಿಯೇ ಹಾರೈಸಿ ಎಂದು ಮನವಿ ಮಾಡಿಕೊಂಡಿದ್ದರು..

ಇನ್ನು ರಾಧಿಕಾ ಪಂಡಿತ್ ಅವರು ಈ ಬಾರಿ ಮನೆಯಲ್ಲಿಯೇ ಯಶ್ ಅವರ ಹುಟ್ಟುಹಬ್ಬ ಆಚರಿಸಿದ್ದು ಅಭಿಮಾನಿಗಳೊಟ್ಟಿಗೆ ಫೋಟೋ ಹಂಚಿಕೊಂಡಿದ್ದಾರೆ.. ಹೌದು ಕೇಕ್ ಕಟ್ ಮಾಡುತ್ತಿರುವ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು “ಕೆಲವೊಮ್ಮೆ ನನಗೆ ಆಶ್ವರ್ಯವಾಗತ್ತೆ.. ನನಗೆ ನೀನು ಇಷ್ಟೊಂದು ಪರ್ಫೆಕ್ಟ್ ಯಾಕೆ ಎಂದು.. ಆದರೆ ಆನಂತರ ತಿಳಿಯುತ್ತದೆ.. ಏಕೆಂದರೆ ನೀನು ನಿನ್ನ ಪಾಲಿನ ಕೇಕ್‌ ಕೂಡ ನನಗಾಗಿ ಹಂಚಿಕೊಳ್ಳುವೆ ಅದಕ್ಕೆಂದು.. ಹುಟ್ಟುಹಬ್ಬದ ಶುಭಾಶಯಗಳು ಬೆಸ್ಟಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಅಭಿಮಾನಿಗಳು ಕಮೆಂಟ್ ಮೂಲಕ ಶುಭ ಹಾರೈಸಿದ್ದು ಫೋಟೋ ವೈರಲ್ ಆಗಿದೆ.‌