ಮಾಲ್ಡೀವ್ಸ್ ನಲ್ಲಿ ರಾಧಿಕಾ ಹಾಗೂ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿರುವ ಯಶ್..‌ ಫೋಟೋ ಗ್ಯಾಲರಿ ನೋಡಿ..

0 views

ಕೊರೊನಾ ಬಂದ ನಂತರ ಸಾಮಾನ್ಯರು ಮಾತ್ರವಲ್ಲ ಸೆಲಿಬ್ರೆಟಿಗಳು ಸಹ ತಮ್ಮ ಎಲ್ಲಾ ಪ್ರವಾಸಗಳನ್ನು‌ ಮೊಟಕುಗೊಳಿಸಿ ಮನೆಯಲ್ಲಿಯೇ ಬಹಳಷ್ಟು ತಿಂಗಳ ಕಾಲ ಸಮಯ ಕಳೆದರು.. ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ರಾಜ್ಯದಲ್ಲಿಯೇ ಪ್ರವಾಸ ಕೈಗೊಳ್ಳುತ್ತಿದ್ದ ಸ್ಟಾರ್ ಗಳು‌ ಇದೀಗ ವಿದೇಶ ಪ್ರವಾಸದತ್ತ ಮುಖ ಮಾಡಿದ್ದಾರೆ..

ಹೌದು ಕಳೆದ ಎರಡು ತಿಂಗಳಿಂದ ಸ್ಯಾಂಡಲ್ವುಡ್ ಸೇರಿದಂತೆ ಬಹಳಷ್ಟು ಕಲಾವಿದರು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು ಸಾಮಾಜಿಕ ಜಾಲತಾಣದ ತುಂಬೆಲ್ಲಾ ನಟ ನಟಿಯರ ಸಖತ್ ಫೋಟೋ ಚಿತ್ರೀಕರಣಗಳ ಪೋಸ್ಟ್ ಗಳೇ ರಾರಾಜಿಸುತ್ತಿದ್ದವು.. ನಟಿಮಣಿಯರು ಸಮುದ್ರ ತೀರದಲ್ಲಿ ನಿಂತು ಪಡ್ಡೆ ಹೈಕಳ ನಿದ್ದೆ ಗೆಡಿಸುವಂತಹ ಫೋಟೋಗಳನ್ನು ಹಂಚಿಕೊಂಡರೆ ಇತ್ತ ಕೆಲ ನಟರು ಕುಟುಂಬದ ಸಮೇತ ಪ್ರವಾಸದ ಫೋಟೋ ಹಂಚಿಕೊಂಡು ಎಂಜಾಯ್ ಮಾಡಿದ್ದೂ ಉಂಟು..

ಇನ್ನು ಇದೀಗ ನಮ್ಮ ರಾಕಿ ಭಾಯ್ ಯಶ್ ಅವರೂ ಸಹ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು ಪತ್ನಿ ರಾಧಿಕಾ ಪಂಡಿತ್.. ಮಕ್ಕಳಾದ ಐರಾ ಹಾಗೂ ಯಥರ್ವ್ ಜೊತೆ ಮಾಲ್ಡೀವ್ಸ್ ಗೆ ಬಂದಿಳಿದಿದ್ದಾರೆ.. ಹೌದು ಮಾಲ್ಡೀವ್ಸ್ ನಲ್ಲಿ ಪತ್ನಿ ಮಕ್ಕಳ ಜಿತೆ ಸಮಯ ಕಳೆಯುತ್ತಿರುವ ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ..

ಇನ್ನು ಕೊರೊನಾ ಕಾರಣದಿಂದ ಮಾಲ್ಡೀವ್ಸ್ ನ ಪ್ರಮುಖ ಆದಾಯದ ಮೂಲವಾದ ಪ್ರವಾಸೋದ್ಯಮ ನೆಲಕಚ್ಚಿದ್ದು ಅದನ್ನು ಪುನಶ್ಚೇತನ ಗೊಳಿಸುವ ಸಲುವಾಗಿ ಭಾರತದ ಅನೇಕ ನಟ ನಟಿಯರಿಗೆ ಉಚಿತವಾಗಿ ಮಾಲ್ಡೀವ್ಸ್ ಪ್ರವಾಸದ ಆಫರ್ ನೀಡಲಾಗಿದ್ದು ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿನ ಫೋಟೋ ಹಂಚಿಕೊಳ್ಳಬೇಕಿತ್ತು.. ಅದೇ ರೀತಿ ಸಾನ್ವಿ ಶ್ರೀವಾತ್ಸವ್.. ಪ್ರಣಿತಾ ಸುಭಾಶ್.. ಶರ್ಮಿಳಾ ಮಾಂಡ್ರೆ ಸೇರಿದಂತೆ ಸ್ಯಾಂಡಲ್ವುಡ್.. ಹಾಗೂ ತಮಿಳು ತೆಲುಗು ಹಾಗೂ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯ ನಟಿಮಣಿಯರು ಮಾಲ್ಡೀವ್ಸ್ ತೆರಳಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದರು.. ಆನಂತರ ನಟ ಅನಿರುದ್ಧ್ ಅವರ ಸಂಪೂರ್ಣ ಕುಟುಂಬವೂ ಸಹ ಮಾಲ್ಡೀವ್ಸ್ ತೆರಳಿ ಅಲ್ಲಿನ ತಾಜ್ ಹೊಟೆಲ್ ನಲ್ಲಿ ಉಳಿದು ಫೋಟೋ ಹಂಚಿಕೊಂಡಿದ್ದರು..

ಇನ್ನು ಇದೀಗ ನಟ ಯಶ್ ಅವರೂ ಸಹ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು.. ಟ್ರೋಪಿಕಲ್ ಪ್ಯಾರಡೈಸ್ ಅಂತ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್.. ಇಗೋ ನಾವು ಬಂದಿದ್ದೇವೆ.. ಎಂದು ಬರೆದು ಮಕ್ಕಳು ಹಾಗೂ ರಾಧಿಕಾ ಜೊತೆಗಿನ ಫೋಟೋ ಜೊತೆಗೆ ಪೋಸ್ಟ್ ಮಾಡಿದ್ದಾರೆ.. ಸದ್ಯ ಕೊರೊನಾ ಬಂದಾಗಿನಿಂದ ಯಶ್ ಅವರು ತಮ್ಮ ಮನೆಯಲ್ಲಿ ನಡೆಯಬೇಕಾದ ಎಲ್ಲಾ ಸಮಾರಂಭಗಳನ್ನು ಸಹ ಸರಳವಾಗಿ ಆಚರಿಸಿದ್ದು ಇದೇ ಮೊದಲ ಬಾರಿಗೆ ಮಗ ಹಾಗೂ ಮಗಳನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ..