ರಾಧಿಕಾ ಪಂಡಿತ್ ಯಶ್ ರಿಂದ ಮತ್ತೊಂದು ಸಿಹಿ ಸುದ್ದಿ..

0 views

ಕನ್ನಡ ಸಿನಿಮಾ ಇಂಡಸ್ಟ್ರಿಯ ಸಿಂಡ್ರೆಲಾ ರಾಧಿಕಾ ಪಂಡಿತ್ ಇಂದು ತಮ್ಮ ಮೂವತ್ತೆಂಟನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಇದೇ ದಿನ ರಾಧಿಕಾ ಅವರಿಂದ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ‌‌.. ಹೌದು ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಎಂದೇ ಕರೆಯಲ್ಪಡುವ ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇತ್ತು.. ಆದರೀಗ ಕೆಜಿಎಫ್ 2 ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ರಾಕಿ ಬಾಯ್ ಸಧ್ಯದಲ್ಲಿಯೇ ಭಾರತದಾದ್ಯಂತ ತೆರೆ ಮೇಲೆ ಅಬ್ಬರಿಸಲು ಸಿದ್ಧರಾಗಿದ್ದಾರೆ.‌ ಇನ್ನು ಇತ್ತ ರಾಧಿಕಾ ಪಂಡಿತ್ ಮಾತ್ರ ಸಿನಿಮಾ ಇಂಡಸ್ಟ್ರಿ ಇಂದ ದೂರ ಉಳಿದಿದ್ದು ಇದೀಗ ಅವರ ಕಡೆಯಿಂದ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ..

ಹೌದು ರಾಧಿಕಾ ಪಂಡಿತ್ ಯಶ್ ಇಬ್ಬರೂ ಸಹ ಒಟ್ಟಾಗಿ ಸಿನಿಮಾ ಇಂಡಸ್ಟ್ರಿಗೆ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಕಾಲಿಟ್ಟವರು.. ಮಹಿಳಾ ಪ್ರಧಾನ ಸಿನಿಮಾ ಆಗಿದ್ದರಿಂದ ನಂತರ ರಾಧಿಕಾ ಪಂಡಿತ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸ್ಟಾರ್ ನಟಿಯಾದರು.. ಇತ್ತ ಯಶ್ ಅವರು ಬಹಳ ಕಷ್ಟ ಪಟ್ಟು ಸ್ವಂತ ಪರಿಶ್ರಮದ ಮೂಲಕ ಒಂದೊಂದೆ ಹೆಜ್ಜೆ ಇಟ್ಟು ಇದೀಗ ಸ್ಯಾಂಡಲ್ವುಡ್ ಮಾತ್ರವಲ್ಲ ಸಂಪೂರ್ಣ ಭಾರತದ ಸಿನಿಮಾ ರಂಗವೇ ತಿರುಗಿ ನೋಡುವಂತೆ ಬೆಳೆದು ನಿಂತರು.. ಇನ್ನು ಇಬ್ಬರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬಂದರೇ ಏನೂ ಇಲ್ಲದ ಸಮಯದಲ್ಲಿ ಪ್ರೀತಿಸಲು ಆರಂಭಿಸಿದ ಈ ಜೋಡಿ ಎಲ್ಲಾ ಬಂದ ಮೇಲೆಯೂ ತಮ್ಮ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ಕಳೆದ ಆರು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..

ಇನ್ನು ಮದುವೆಯಾದ ಎರಡು ವರ್ಷದ ನಂತರ ಸಾಲು ಸಾಲು ಸಿಹಿ ಸುದ್ದಿಗಳನ್ನು ನೀಡಿದ ಜೋಡಿ ಐರಾಳ ಆಗಮನ ನಂತರ ಯಥರ್ವ್ ನ ಆಗಮನದಿಂದಾಗಿ ಇಬ್ಬರೂ ಸಹ ಬಹಳಷ್ಟು ಸಂಭ್ರಮ ಪಟ್ಟಿದ್ದರು.. ಇನ್ನು ತಮ್ಮ ಜೀವನದ ಪ್ರತಿಯೊಂದು ವಿಶೇಷಗಳನ್ನೂ ಸಹ ಅಭಿಮಾನಿಗಳೊಟ್ಟಿಗೆ ಅಷ್ಟೇ ವಿಶೇಷವಾಗಿ ಸಂತೋಷವನ್ನು ಹಂಚಿಕೊಳ್ಳುತ್ತಾ ಬಂದ ರಾಧಿಕಾ ಪಂಡಿತ್ ಹಾಗೂ ಯಶ್ ತಮ್ಮ ಸಂಭ್ರಮದಲ್ಲಿ ತಮ್ಮ ಅಭಿಮಾನಿಗಳನ್ನೂ ಸಹ ಭಾಗವನ್ನಾಗಿಸಿದರು..

ಇನ್ನು ಕೇವಲ ಕುಟುಂಬದ ವಿಚಾರ ಮಾತ್ರವಲ್ಲ ಸಾಮಾಜಿಕ ಕಳಕಳಿಯುಳ್ಳ ಯಶ್ ಅವರು ಜನರಿಗೆ ಉಪಯೋಗವಾಗುವಂತಹ ಅನೇಕ ಕೆಲಸ ಗಳನ್ನು ಮಾಡಿದ್ದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆಯಲ್ಲಿ ಹೂಳೆತ್ತುವ ಕೆಲಸ ಮಾಡುವ ಮೂಲಕ ಹತ್ತಾರು ಹಳ್ಳಿಗಳಿಗೆ ನೀರಿನ ತೊಂದರೆ ನೀಗಿಸಿದ್ದು ನಿಜಕ್ಕೂ ಮೆಚ್ಚುವಂತದ್ದು.. ಅಷ್ಟೇ ಅಲ್ಲದೇ ಕೊರೊನಾ ಸಮಯದಲ್ಲಿ ಕಲಾವಿದರುಗಳಿಗಾಗಿ ತಮ್ಮ ಸ್ವಂತ ದುಡಿಮೆಯ ಎರಡು ಕೋಟಿ ರೂಪಾಯಿಯನ್ನು ನೀಡಿ ಪ್ರತಿಯೊಬ್ಬ ಕಲಾವಿದರಿಗೂ ಐದು ಸಾವಿರ ರೂಪಾಯಿ ಖುದ್ದಾಗಿ ಖಾತೆಗೆ ಹೋಗುವಂತೆ ನೋಡಿಕೊಂಡಿದ್ದು ನಿಜಕ್ಕೂ ಕಷ್ಟದಿಂದ ಮೇಲೆ ಬಂದ ಯಶ್ ಇದೀಗ ಕಷ್ಟದಲ್ಲಿದ್ದವರಿಗೆ ನೆರವಾಗಿದ್ದು ನಿಜಕ್ಕೂ ದೊಡ್ಡತನವೇ ಆಗಿತ್ತು.. ಇನ್ನು ಇದೆಲ್ಲದಕ್ಕೂ ಯಶ್ ಗೆ ಬೆಂಬಲವಾಗಿ ನಿಂತಿದ್ದು ಮಾತ್ರ ರಾಧಿಕಾ ಪಂಡಿತ್..

ಹೌದು ಯಶ್ ಅವರ ಪ್ರತಿಯೊಂದು ಕೆಲಸಕ್ಕೂ ಬೆಂಬಲವಾಗಿ ಸ್ಪೂರ್ತಿಯಾಗಿ ನಿಂತ ರಾಧಿಕಾ ಪಂಡಿತ್ ಸಿನಿಮಾ ಇಂಡಸ್ಟ್ರಿಯಲ್ಲಿ‌ ಸ್ಟಾರ್ ನಟಿಯಾಗಿದ್ದರೂ ಸಹ ಸಧ್ಯ ಮದುವೆಯ ನಂತರ ಕುಟುಂಬ ಮಕ್ಕಳು ಅಂತ ಸಂಪೂರ್ಣವಾಗಿ ಮಕ್ಕಳ‌ ಜವಾಬ್ದಾರಿ ನಿಭಾಯಿಸುತ್ತಿದ್ದು ಇದೀಗ ಅವರ ಕಡೆಯಿಂದ ಹೊಸ ವಿಚಾರವೊಂದು ಕೇಳಿ ಬಂದಿದೆ.. ಹೌದು ರಾಧಿಕಾ ಪಂಡಿತ್ ರನ್ನು ಅಭಿಮಾನಿಗಳು ಯಾವಾಗ ಸಿನಿಮಾ ಇಂಡಸ್ಟ್ರಿಗೆ ಮರಳುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಪ್ರಶ್ನೆ ಮಾಡುತ್ತಲೇ ಇದ್ದರು.. ಅದಕ್ಕೀಗ ಸಮಯ ಕೂಡಿ ಬಂದಿದೆ.. ಹೌದು ರಾಧಿಕಾ ಪಂಡಿತ್ ಸಿನಿಮಾ ಇಂಡಸ್ಟ್ರಿಗೆ ಮರಳುತ್ತಿದ್ದಾರೆ.. ಆದರೆ ನಟಿಯಾಗಿಯಲ್ಲ.. ಹೌದು ರಾಧಿಕಾ ಪಂಡಿತ್ ಮದುವೆಯಾದ ನಂತರ ನಿರೂಪ್ ಭಂಡಾರಿ ಅವರ ಜೊತೆ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ಅಭಿನಯಿಸಿದ್ದು ಅದೊಂದು ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾದಲ್ಲಿಯೂ ರಾಧಿಕಾ ಕಾಣಿಸಿಕೊಳ್ಳಲಿಲ್ಲ..

ಇತ್ತ ಕನ್ನಡದಲ್ಲಿ ಹಿಟ್ ಆದ 1978 ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ಅಭಿನಯಿಸಬೇಕಿತ್ತು.. ನಿರ್ದೇಶಕ‌ ಮನ್ಸೂರೆ ಅವರು ರಾಧಿಕಾ ಪಂಡಿತ್ ಅವರನ್ನು ಕೇಳಿದ್ದರು.. ಆದರೆ ರಾಧಿಕಾ ಪಂಡಿತ್ ಅವರು ಅದ್ಯಾಕೋ ಮತ್ತೆ ತೆರೆ ಮೇಲೆ ಬರುವ ಮನಸ್ಸು ಮಾಡಿರಲಿಲ್ಲ.. ಆದರೀಗ ಹಲವು ವರ್ಷಗಳ ಬ್ರೇಕ್ ನ ನಂತರ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದು ನಟಿಯಾಗಿಯಲ್ಲ.. ಬದಲಿಗೆ ನಿರ್ಮಾಪಕಿಯಾಗಿ ಬರಲಿದ್ದಾರೆ ಎನ್ನಲಾಗುತ್ತಿದೆ.. ಹೌದು ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಒಂದನ್ನು ತೆರೆಯಲಿದ್ದು ಆ ಮೂಲಕ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.. ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ದಿನವೇ ಈ ಹೊಸ ವಿಚಾರ ಹರಿದಾಡುತ್ತಿದ್ದು ಅಭಿಮಾನಿಗಳು ಸಂತೋಷ ಪಟ್ಟಿದ್ದು ರಾಧಿಕಾ ಅವರಿಗೆ ಶುಭ ಹಾರೈಸಿದ್ದಾರೆ..