ಚಿತ್ರರಂಗದವರಿಗೆ ಯಶ್ 1.5 ಕೋಟಿ ಕೊಟ್ಟದ್ದಕ್ಕೆ ತಕ್ಷಣವೇ ಉಪೇಂದ್ರ ಅವರು ಮಾಡಿದ್ದೇನು ಗೊತ್ತಾ?

0 views

ಸ್ಟಾರ್ ಎನಿಸಿಕೊಳ್ಳುವುದು ಸಿನಿಮಾಗಳ‌ ನಟನೆಯಿಂದ ಮಾತ್ರವಲ್ಲ.. ಬದಲಿಗೆ ತಾವುಗಳು ನಿಜ ಜೀವನದಲ್ಲಿ ನಡೆದುಕೊಳ್ಳುವ ರೀತಿಯಿಂದಲೂ ಎಂದು ಈಗಾಗಲೇ ನಮ್ಮ ಸ್ಯಾಂಡಲ್ವುಡ್ ನ ಸಾಕಷ್ಟು ಸ್ಟಾರ್ ನಟರು ತೋರಿಸಿಕೊಟ್ಟಿದ್ದಾರೆ.. ಹೌದು ಸಧ್ಯ ಕೊರೊನಾ ಕಾರಣದಿಂದಾಗಿ ಆಗಿರುವ ಲಾಕ್ ಡೌನ್ ನಿಂದ ಬಹುತೇಕ ಎಲ್ಲಾ ವರ್ಗದ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.. ಅದರಲ್ಲಿಯೂ ಆ ದಿನ ದುಡಿದಿದ್ದು ಆ ದಿನದ ಊಟಕ್ಕೆ ಎನ್ನುವಂತಿದ್ದ ದಿನಗೂಲಿ ನೌಕರರ ಪಾಡಂತೂ ಹೇಳತೀರದಾಗಿದೆ.. ಅದೇ ಕಾರಣಕ್ಕೆ ಸಾಕಷ್ಟು ಮಂದಿ ನೆರವು ನೀಡಲು ಮುಂದೆ ಬಂದಿದ್ದಾರೆ.. ಆದರೆ ಕಳೆದ ವರ್ಷ ಹರಿದುಬಂದಷ್ಟು ನೆರವು ಈ ವರ್ಷ ಬರಲಿಲ್ಲ.. ಆದರೂ ಸಹ ಕೆಲವರು ಇಂತಹ ಕಷ್ಟದ ಸಮಯದಲ್ಲಿಯೂ ಕೋಟಿ ಕೋಟಿ ಹಣವನ್ನಿ ಜನರಿಗೆ ನೀಡುತ್ತಿರುವುದು ನಿಜಕ್ಕೂ ಅವರುಗಳ ದೊಡ್ಡತನವನ್ನು ತೋರುತ್ತದೆ..

ಇದೀಗ ಸಿನಿಮಾ ಕಲಾವಿದರಿಗಾಗಿ ನಟ ಯಶ್ ಅವರು ಒಂದೂವರೆ ಕೋಟಿ ರೂಪಾಯಿ ಹಣವನ್ನು ಖುದ್ದಾಗಿ ಕಲಾವಿದರ ಖಾತೆಗೆ ಹಾಕಲು ಮುಂದಾಗಿದ್ದಾರೆ.. ಹೌದು “ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಬದುಕನ್ನು ಹೆಚ್ಚು ಕಮ್ಮಿ ಬುಡಮೇಲು ಮಾಡಿದೆ.. ಅದರಲ್ಲೂ ಕಳೆದೊಂದು ವರ್ಷದಿಂದ ನನ್ನ ಸಿನಿಮಾ ಕುಟುಂಬ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತಿದೆ.. ಹೌದು ಇದು ಬರಿ ಮಾತನಾಡುವ ಸಮಯವಲ್ಲ.. ಸಂಕಷ್ಟದಲ್ಲಿರುವ ಸಿನಿಮಾ ಕುಟುಂಬದ ಜೊತೆ ನಿಲ್ಲುವ ಸಮಯ.. ಹಾಗಾಗಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿರುವ ನಮ್ಮ ಸಿನಿಮಾ ಕಲಾವಿದರು.. ತಂತ್ರಜ್ಞರು.. ಕಾರ್ಮಿಕರ ಅಧಿಕೃತ ಖಾತೆಗಳಿಗೆ ತಲಾ ಐದು ಸಾವಿರ ರೂಪಾಯಿಗಳನ್ನು ನನ್ನ ಸಂಪಾದನೆಯ ಹಣದಿಂದ ಭರಿಸಲು ನಿರ್ಧರಿಸಿದ್ದೇನೆ..

ಈ ಬಗ್ಗೆ ಈಗಾಗಲೇ ನಮ್ಮ ಒಕ್ಕೂಟದ ಅಧ್ಯಕ್ಷರಾದ ಸಾರಾ ಗೋವಿಂದು ಮತ್ತು ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರನಾಥ್ ಅವರೊಂದಿಗೆ ಚರ್ಚಿಸಿದ್ದೇನೆ.. ನಮ ಕಲಾವಿದರು ತಂತ್ರಜ್ಞರು ಮತ್ತು ಕಾರ್ಮಿಕರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣವೇ ಇದು ಕಾರ್ಯರೂಪಕ್ಕೆ ಬರಲಿದೆ.. ಈ ಸಣ್ಣ ಸಹಾಯ ಈಗ ಎದುರಾಗಿರುವ ಎಲ್ಲಾ ಕಷ್ಟಗಳಿಗೂ ಪರಿಹಾರ ಎಂಬುದು ನನ್ನ ಭಾವನೆಯಲ್ಲ.. ಬದಲಿಗೆ ಶಕ್ತಿ ಇರುವ ಹೃದಯವಂತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಕಷ್ಟದಲ್ಲಿರುವ ಜನ ಸಮುದಾಯದ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತು ಸಹಾಯ ಮಾಡಿದರೆ ನಾನು‌ ಮಾಡಿದ ಪ್ರಯತ್ನಕ್ಕೂ ಸಾರ್ಥಕತೆ ಬರುತ್ತದೆ ಎಂಬುದು ನನ್ನ ಆಶಯ..” ಎನ್ನುವ ಮಾತುಗಳನ್ನಾಡುವ ಮೂಲಕ ಇತರರಿಗೂ ಸಹಾಯ ಮಾಡಲು ಪ್ರೇರಣೆಯಾಗಿದ್ದರು..

ಇನ್ನು ಕಳೆದ ಒಂದು ತಿಂಗಳಿಂದ ಸಿನಿಮಾ ಮಂದಿ ಮಾತ್ರವಲ್ಲದೇ ಇನ್ನೂ ಕಷ್ಟದಲ್ಲಿರುವ ಕೆಲ ವರ್ಗದ ಜನರಿಗೆ ಆಹಾರ ಕಿಟ್ ಗಳನ್ನು ನೀಡುತ್ತಾ ನೆರವಾಗುತ್ತಿರುವ ನಟ ಉಪೇಂದ್ರ ಅವರು ಇದೀಗ ಯಶ್ ಅವರು ಚಿತ್ರರಂಗದ ಕಾರ್ಮಿಕರಿಗೆ ಒಂದೂವರೆ ಕೋಟಿ ಹಣ ನೀಡಿತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರು ಈ ಬಗ್ಗೆ ವಿಚಾರ ಹಂಚಿಕೊಂಡ ಮರುಕ್ಷಣವೇ ಹಿಂದೆ ಮುಂದೆ ಯೋಚಿಸದೇ ಯಾವುದೇ ಹಮ್ಮು ಬಿಮ್ಮಿಲ್ಲದೇ ಯಶ್ ಅವರು ಹಾಕಿರುವ ಪೋಸ್ಟ್ ಅನ್ನು ಖುದ್ದಾಗಿ ತಮ್ಮ ಫೇಸ್ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದ ಅಕೌಂಟ್ ಗಳಲ್ಲಿ ಹಂಚಿಕೊಂಡು ಯಶ್ ಅವರ ಬಗ್ಗೆ ಮಾತನಾಡಿದ್ದಾರೆ.. ಹೌದು ಯಶ್ ಅವರ ಕುರಿತು ಪ್ರತಿಕ್ರಿಯೆ ಕೊಟ್ಟ ಉಪೇಂದ್ರ ಅವರು “ಯಶ್ ಅವರಿಂದ ಮಹತ್ವದ ಹೆಜ್ಜೆ.. ಧನ್ಯವಾದಗಳು ಯಶ್.. ಇಂತಹ ಮತ್ತಷ್ಟು ಮಹತ್ಕಾರ್ಯಗಳು ತಮ್ಮಿಂದ ನಡೆಸಲು ಆ ಭಗವಂತ ತಮಗೆ ಶಕ್ತಿ ನೀಡಲಿ” ಎಂದು ಬರೆದು ಯಶ್ ಅವರ ದೊಡ್ಡತನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ..

ಒಬ್ಬರು ಸಹಾಯ ಮಾಡಲು ಮುಂದೆ ಬಂದಾಗ ಅಯ್ಯೋ ಪ್ರಚಾರಕ್ಕಾಗಿ ಮಾಡ್ತಾವ್ನೆ.. ಅಷ್ಟೇ.. ಅದು ಇದು ಅನ್ನೋ ಮಾತುಗಳನ್ನು ಆಡೋದು ಬಿಟ್ಟು ಸಾಧ್ಯವಾದರೆ ಉಪೇಂದ್ರ ಅವರ ರೀತಿಯಲ್ಲಿ ಅಭಿನಂದನೆ ಸಲ್ಲಿಸಿದರೆ ನೆರವಿಗೆ ಧಾವಿಸಿದ ಆ ಹೃದಯಕ್ಕೂ ಸಾರ್ಥಕ ಎನಿಸುತ್ತದೆ.. ಹೊಟ್ಟೆ ತುಂಬಿದವನಿಗಿಂತ ಹಸಿದವನಿಗೆ ಅನ್ನದ ಮಹತ್ವ ಏನು ಎಂಬುದು ಚೆನ್ನಾಗಿ ತಿಳಿದಿರುತ್ತದೆ.. ಕಷ್ಟ ಪಟ್ಟು ದುಡಿದ ಒಂದೂವರೆ ಕೋಟಿ ರೂಪಾಯಿಯನ್ನು ಈ ರೀತಿ ಸುಮ್ಮನೆ ದಾನ ಮಾಡಿಬಿಡುವುದು ಸುಲಭವಲ್ಲ.. ನಿಜಕ್ಕೂ ಯಶ್ ಅವರ ಸಹಾಯದಿಂದ ಸಿನಿಮಾ ಕಾರ್ಮಿಕರು ಕನಿಷ್ಟ ಒಂದು ತಿಂಗಳು ನೆಮ್ಮದಿಯಾಗಿ ಊಟ ಮಾಡಬಹುದಾಗಿದೆ.. ಧನ್ಯವಾದಗಳು ಯಶ್ ಸರ್.. ಕಷ್ಟದ ದಾರಿಯಲ್ಲಿಯೇ ಬೆಳೆದು ಬಂದು ಒಂದೊಂದು ರೂಪಾಯಿಗೂ ಕಷ್ಟ ಪಟ್ಟು.. ಅವಮಾನಗಳನ್ನು ಅನುಭವಿಸಿ.. ಇದೀಗ ತಮಗೆ ಅನ್ನ ಕೊಟ್ಟ ಚಿತ್ರರಂಗದ ಕೈ ಹಿಡಿದು ನಿಂತ ಯಶ್ ಅವರ ಬೆಳವಣಿಗೆ ನಿಜಕ್ಕೂ ಹೆಮ್ಮೆ ಪಡುವಂತದ್ದು.. ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.. ನಾವೆಲ್ಲರೂ ಒಂದೇ.. ಎಲ್ಲಾ ಸ್ಟಾರ್ ಗಳು ನಮ್ಮವರೇ.. ನಮ್ಮ ಸ್ಯಾಂಡಲ್ವುಡ್ ನಮ್ಮ ಹೆಮ್ಮೆ..