ಅಂತೂ ತಾನು ನಿಶ್ಚಿತಾರ್ಥ ಮಾಡಿಕೊಂಡ ಹುಡುಗ ಯಾರು ಎಂದು ತಿಳಿಸಿದ ನಟಿ ಅದಿತಿ ಪ್ರಭುದೇವ್.. ನಿಜಕ್ಕೂ ಶಾಕಿಂಗ್ ನಿರ್ಧಾರ.. ಕಾರಣವೇನು ಗೊತ್ತಾ..

0 views

ಅದಿತಿ ಪ್ರಭುದೇವ.. ಸ್ಯಾಂಡಲ್ವುಡ್ ನ ನಟಿಯಾಗಿ ಮಾತ್ರವಲ್ಲದೇ ಸಿನಿಮಾ ಹೊರತು ಪಡಿಸಿಯೂ ಅವರ ಸರಳತೆ ಮೂಲಕ ಜನರಿಗೆ ಬಹಳ ಹತ್ತಿರವಾಗಿದ್ದ ನಟಿ.. ಬೇರೆ ನಟಿಯರಂತೆ ಅಹಂಕಾರ ತೋರೋದಾಗಲಿ ಅಥವಾ ಕಾರ್ಯಕ್ರಮದಲ್ಲಿ ಒಂದು ರೀತಿ ಅತಿಯಾಗಿ ನಡೆದುಕೊಳ್ಳುವುದಾಗಲಿ ಅದಿತಿ ಎಂದೂ ಸಹ ಮಾಡಲಿಲ್ಲ.. ಈ ಕಾರಣಕ್ಕೆ ಅದಿತಿ ಬಹಳಷ್ಟು ಜನರಿಗೆ ಇಷ್ಟವಾಗುವರು.. ಇನ್ನು ಶಿಲ್ಪಾ ಶೆಟ್ಟಿ ಅವರನ್ನು ನೆನಪಿಸುವ ನಟಿ ಅದಿತಿ ಪ್ರಭುದೇವ ಅವರು ಸಾಕಷ್ಟು ಹುಡುಗರ ಮನದರಸಿಯೂ ಹೌದು.. ಇನ್ನು ಇತ್ತ ಕಿರುತೆರೆಯಿಂದ ಸ್ಯಾಂಡಲ್ವುಡ್ ಗೆ ಕಾಲಿಟ್ಟು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಸಮಯದಲ್ಲಿಯೇ ಇದೀಗ ನಟಿ ಅದಿತಿ ಮದುವೆ ನಿರ್ಧಾರ ಮಾಡಿರುವುದು ನಿಜಕ್ಕೂ ಆಶ್ವರ್ಯವನ್ನುಂಟು ಮಾಡಿದೆ.. ಆದರೀಗ ತಮ್ಮ ಮದುವೆಯ ವಿಚಾರವನ್ನು ಅಧಿಕೃತಗೊಳಿಸಿರುವ ನಟಿ ಅದಿತಿ ತಾವು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದಾರೆ..

ಹೌದು ಸಾಮಾನ್ಯವಾಗಿ ಸಿನಿಮಾದಲ್ಲಿ ಬ್ಯುಸಿ ಇರುವ ಸಮಯದಲ್ಲಿ ಅದರಲ್ಲೂ ನಟಿಯರು ಯಾರೂ ಸಹ ಇಂತಹ ಸಮಯದಲ್ಲಿ ಮದುವೆಯ ನಿರ್ಧಾರ ಮಾಡುವುದಿಲ್ಲ.. ಮದುವೆಯಾದರೆ ಸಿನಿಮಾ ಅವಕಾಶಗಳು ಕಡಿಮೆಯಾಗುತ್ತವೆ ಎನ್ನುವ ಮಾತಿದೆ.. ಆದರೆ ಸಧ್ಯ ಆರೇಳು ಸಿನಿಮಾಗಳ ಅವಕಾಶ ಕೈಯಲ್ಲಿರುವ ಸಮಯದಲ್ಲಿಯೇ ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ನಿಜಕ್ಕೂ ಸಿನಿಮಾ ಮಂದಿ ಅದಿತಿಯ ನಿರ್ಧಾರ ಕಂಡು ಆಶ್ಚರ್ಯ ಪಟ್ಟಿದ್ದೂ ಉಂಟು.. ಇನ್ನು ಇತ್ತ ಅದಿತಿ ತಮ್ಮ ಹುಡುಗನ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಣದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಿದ್ದಾರೆ.. ಅಷ್ಟಕ್ಕೂ ಅದಿತಿ ಮಮಸ್ಸು ಗೆದ್ದ ಆ ಹುಡುಗ ಯಾರು.. ಯಾಕಿಷ್ಟು ಆತುರದ ಮದುವೆಯ ನಿರ್ಧಾರ ಎಲ್ಲಾ ಕುತೂಹಲಗಳಿಗೂ ಉತ್ತರ ಇಲ್ಲಿದೆ ನೋಡಿ..

ಹೌದು ಅದಿತಿ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ನಂತರ ಸ್ಯಾಂಡಲ್ವುಡ್ ನಲ್ಲಿ ಕನ್ನಡದ ಟಾಪ್ ನಟಿಯರಲ್ಲಿ‌ ಒಬ್ಬರಾದರು..ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.. ಅಷ್ಟೇ ಅಲ್ಲದೇ ಸಧ್ಯ ಸಾಕಷ್ಟು ಸಿ‌ನಿಮಾಗಳು ಅದರಲ್ಲೂ ಆರೇಳು ಸಿ‌ನಿಮಾಗಳ ಅವಕಾಶ ಅದಿತಿ ಅವರ ಕೈಯಲ್ಲಿದೆ ಎಂದು ತಿಳಿದು ಬಂದಿದೆ.. ಇಂತಹ ಸಮಯದಲ್ಲಿ ಅದಿತಿ ಮದುವೆಯ ನಿರ್ಧಾರ ಮಾಡಿದ್ದಾರೆ.. ಹೌದು ಸಿನಿಮಾ ಒಂದು ಕಡೆ ಅವರ ವೃತ್ತಿಯಾದರೆ ಇತ್ತ ಅದಿತಿ ಗ್ರಾಮೀಣ ಕುಟುಂಬದ ಹಿನ್ನೆಲೆಯಿಂದ ಬಂದವರು.. ಈ ಬಗ್ಗೆ ಕೆಲವೊಂದು ವೀಡಿಯೋ ಸಹ ಮಾಡಿದ್ದ ಅದಿತಿ ತನ್ನ ಅಜ್ಜಿ ತಾತನ ಮನೆ ಹೊಲ ಗದ್ದೆಯಲ್ಲಿ ತಾವು ಕೆಲಸ ಮಾಡುವುದು ಕೊಟ್ಟಿಗೆಯಲ್ಲಿ ಕೆಲಸ ಮಾಡುವುದು ಎಲ್ಲವನ್ನೂ ಸಹ ತೋರಿದ್ದರು.. ಈ ಮೂಲಕ ಎಂತಹ ದೊಡ್ಡ ನಟಿಯಾದರೂ ಸಹ ಅಷ್ಟೇ ಸರಳವಾಗಿ ತಮ್ಮ ಜೀವನ ಶೈಲಿಯಿದೆ ಎಂಬುದನ್ನು ತೋರಿದ್ದರು.. ಇನ್ನು ಅದೇ ವೀಡಿಯೋದಲ್ಲಿ ಅದಿತಿ ಅವರ ಅಜ್ಜಿ ತಾತ ಮೊಮ್ಮಗಳ ಮದುವೆ ನೋಡಬೇಕು ಅದೊಂದೆ ನಮ್ಮ ಆಸೆ ಎಂದಿದ್ದರು..

ಹೌದು ಅಜ್ಜಿ ತಾತನ ಆಸೆಯನ್ನು ಈಡೇರಿಸುವ ಸಲುವಾಗಿಯೇ ಇದೀಗ ಅದಿತಿ ತಮ್ಮ ಮದುವೆಯ ನಿರ್ಧಾರವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.. ಆದರೆ ಹುಡುಗ ಮಾತ್ರ ಮನೆಯವರು ನೋಡಿದ ಹುಡುಗನಲ್ಲ.. ಹೌದು ಅದಿತಿ ಮದುವೆಯಾಗುತ್ತಿರುವ ಹುಡುಗ ಮತ್ಯಾರೂ ಅಲ್ಲ.. ಆತನ ಹೆಸರು ಯಶಸ್.. ಯಶಸ್ ಒಬ್ಬ ರೈತನಾಗಿದ್ದು ಚಿಕ್ಕಮಗಳೂರಿನ ಹುಡುಗ ಆಗಿದ್ದಾರೆ.. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದು ಈಗಲೂ ಕಾಫಿ ಕೃಷಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಯಶಸ್ ಹಾಗೂ ಅದಿತಿ ಇಬ್ಬರೂ ಪರಸ್ಪರ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು.. ಈ ಹಿಂದೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಆನಂತರ ಅದ್ಯಾಕೋ ತಕ್ಷಣ ಡಿಲಿಟ್ ಮಾಡಿದ್ದರು.. ಇನ್ನು ಇತ್ತ ಎರಡೂ ಕುಟುಂಬಗಳಿಗೂ ತಮ್ಮ ಪ್ರೀತಿಯ ವಿಚಾರ ತಿಳಿಸಿದ ಜೋಡಿ ಈ ಇಬ್ಬರ ಕುಟುಂಬಗಳನ್ನು ಒಪ್ಪಿಸುವುದಕ್ಕೆ ಇಷ್ಟು ಸಮಯವಾಗಿದೆ.. ಸಧ್ಯ ಇದೀಗ ಈ ಇಬ್ಬರ ಮದುವೆಗೆ ಅದಿತಿ ಹಾಗೂ ಯಶಸ್ ಎರಡೂ ಕುಟುಂಬವೂ ಸಮ್ಮತಿಸಿದ್ದು ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿದೆ..

ಇನ್ನು ಯಶಸ್ ಜೊತೆ ಆತ್ಮೀಯವಾಗಿರುವ ಫೋಟೋ ಹಂಚಿಕೊಂಡಿರುವ ಅದಿತಿ ಕನಸೊಂದು ಕಮಸಿನಂತೆಯೇ ನಿಜವಾಯಿತೆಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದರು.. ಫೋಟೋದಲ್ಲಿ ಯಶಸ್ ಅದಿತಿಯನ್ನು ಅಪ್ಪಿಕೊಂಡದ್ದನ್ನು ನೋಡಿ ಹಾಗೂ ಉಂಗುರವನ್ನು ಹೈಲೈಟ್ ಮಾಡಿದ್ದ ಕಾರಣ ಇಬ್ಬರ ನಡುವೆ ನಿಶ್ಚಿತಾರ್ಥವಾಗಿದೆ ಎಂದು ಸ್ನೇಹಿತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದರು.. ಹಾಗೆಯೇ ಮದುವೆಯ ಬಗ್ಗೆ ಇದು ನಿಜಾನಾ ಎಂಬ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ ಕಾರಣ ಕೆಲ ಸನಯಬಿಟ್ಟು ಎಂಗೇಜ್ ಆಗಿರುವ ಬಗ್ಗೆ ಅಧಿಕೃತವಾಗಿ ತಿಳಿಸಿದರು.. ಇನ್ನು ಇದೆಲ್ಲಾ ನಡೆದ ನಂತರ ತಮ್ಮ ಮದುವೆಯ ಬಗ್ಗೆ ಮಾದ್ಯಮವೊಂದರ ಜೊತೆ ಮಾತನಾಡಿರುವ ಅದಿತಿ.. ತಾವು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ನಿಶ್ಚಿತಾರ್ಥ ಮಾಡಿಕೊಂಡಿರೋದು ನಿಜ.. ಹುಡುಗನ ಹೆಸರು ಯಶಸ್ ಎಂದು ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ನಾವಿಬ್ಬರು ಪ್ರೀತಿಯಲ್ಲಿ ಇದ್ದೇವೆ.. ಸಧ್ಯಕ್ಕೆ ಎರಡೂ ಕುಟುಂಬಗಳು ಆಶೀರ್ವಾದ ಮಾಡಿದ್ದಾರೆ..

ಆದರೆ ಮದುವೆಯ ಮಾತು ಸಧ್ಯಕ್ಕಂತೂ ಇಲ್ಲ ಎಂದಿದ್ದಾರೆ.. ಇದನ್ನು ಬಿಟ್ಟು ಯಶಸ್ ಅವರ ಬಗ್ಗೆ ಬೇರೆ ಏನು ವಿಚಾರ ಬೇಡ.. ನಾವಿಬ್ಬರು ಎಂಗೇಜ್ ಆಗಿರೋದು ಸತ್ಯ ಎಂದು ಖುಷಿಯಿಂದಲೇ ತಿಳಿಸಿದ್ದಾರೆ.. ಇನ್ನು ಇತ್ತ ಅದಿತಿ ಅವರ ಕೈಲಿ ಆರೇಳು ಸಿನಿಮಾಗಳ ಅವಕಾಶ ಇರುವ ಕಾರಣ ಅದರ ನಡುವೆ ಮದುವೆಯಾದರೆ ಸಿ‌ನಿಮಾಗಳಿಗೆ ತೊಂದರೆ ಯಾಗುತ್ತದೆ ಎಂದು ಆ ಎಲ್ಲಾ ಸಿನಿಮಾಗಳ ಚಿತ್ರೀಕರಣ ಮುಗಿದ ಬಳಿಕ ಮುಂದಿನ ವರ್ಷಾಂತ್ಯದಲ್ಲಿ ಅಥವಾ ಒಂದು ವರ್ಷದ ನಂತರ ಇಬ್ಬರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದ್ದು ಸಧ್ಯ ತಮ್ಮ ಲವ್ ಲೈಫ್ ಅನ್ನು ಎಂಜಾಯ್ ಮಾಡಲು ಮನೆಯವರ ಒಪ್ಪಿಗೆ ದೊರೆತಿದ್ದು ಬಹಿರಂಗವಾಗಿ ಓಡಾಡಲು ಅನುಮತಿ ದೊರೆತಂತಾಗಿದೆ.. ಇನ್ನು ಸಧ್ಯ ಎಂಗೇಜ್ ಆಗಿರುವ ಅದಿತಿಗೆ ಸಿನಿಮಾ ಸ್ನೇಹಿತರು ಅಭಿಮಾನಿಗಳು ಕಮೆಂಟ್ ಮೂಲಕ ನೂತನ ಜೀವನಕ್ಕೆ ಶುಭ ಹಾರೈಸಿದ್ದಾರೆ..