ನಂಜನಗೂಡಿನಲ್ಲಿ ಮಗನಿಗೆ ಮುಡಿ ಕೊಡಿಸಿದ ರಾಧಿಕಾ ಯಶ್.. ಫೋಟೋ ಗ್ಯಾಲರಿ ನೋಡಿ..

0 views

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಸದ್ಯ ನಿನ್ನೆಯಷ್ಟೇ ತಮ್ಮ ನಗ ಯಥರ್ವ್ ಯಶ್ ಗೆ ಯಶ್ ಅವರ ಮನೆ ದೇವರಾದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ‌ ಸನ್ನಿಧಿಗೆ ತೆರಳಿ ಮುಡಿ ತೆಗಿಸುವ ಕಾರ್ಯವನ್ನು ಪೂರ್ಣಗೊಳಿಸಿದ್ದು ಇಂದು ರಾಧಿಕಾ ಪಂಡಿತ್ ಮಗನ ಹೊಸ ಲುಕ್ ನ ಫೋಟೋ ಹಂಚಿಕೊಂಡಿದ್ದಾರೆ.. ಹೌದು ಸ್ಯಾಂಡಲ್ವುಡ್ ನ ತಾರಾ ಜೋಡಿಗಳಲ್ಲಿ ಒಂದಾದ ರಾಧಿಕಾ ಹಾಗೂ ಯಶ್ ಕುಟುಂಬದಲ್ಲಿ ಸದ್ಯ ಸಾಲು ಸಾಲು ಸಂಭ್ರಮಾಚರಣೆಗಳು ನೆರವೇರುತ್ತಿದ್ದು ಸದ್ಯ ಅಭಿಮಾನಿಗಳು ಆ ಕುಟುಂಬದ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಹಾರೈಸಿದ್ದಾರೆ..

ಹೌದು ರಾಧಿಕಾ ಆಗಲಿ ಯಶ್ ಆಗಲಿ ಇನ್ನೂ ಏನೂ ಇಲ್ಲದ ಸಮಯದಲ್ಲಿಯೇ ಒಬ್ಬರನ್ನೊಬ್ಬರು ಇಷ್ಟ ಪಟ್ಟು ಏಳು ವರ್ಷದ ಪ್ರೀತಿಸಿ.. ಜೀವನದಲ್ಲಿ ತಮ್ಮದೇ ಆದ ಜವಾಬ್ದಾರಿಗಳನ್ನು ನಿರ್ವಹಿಸಿ ವೃತ್ತಿ ಬದುಕಲ್ಲಿ ಸಾಧಿಸಿ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಹೆಸರು ಮಾಡಿದ ಜೋಡಿ 2016 ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಮುದ್ದಾದ ಎರಡು ಮಕ್ಕಳು ಸಹ ಆದವು.. 2018 ರಲ್ಲಿ ಡಿಸೆಂಬರ್ ನಲ್ಲಿ ಯಶ್ ಹಾಗೂ ರಾಧಿಕಾ ಕುಟುಂಬಕ್ಕೆ ಪುಟಾಣಿ ಐರಾಳ ಆಗಮನದ ಮೂಲಕ ಅವರ ಮನೆಯ ಸಂತೋಷ ಇನ್ನೂ ಹೆಚ್ಚಾಯಿತೆನ್ನಬಹುದು..

ಇನ್ನು ಆ ಸಂಭ್ರಮದ ಹಿಂದೆಯೇ 2019 ರ ನವೆಂಬರ್ ನಲ್ಲಿ ಮತ್ತೊಂದು ಮಗು ಜನನವಾಗಿ ಯಶ್ ಹಾಗೂ ರಾಧಿಕಾ ಕುಟುಂಬ ಪರಿಪೂರ್ಣವಾಯಿತೆನ್ನಬಹುದು.. ಇನ್ನು ಮಗಳಿಗೆ ಐರಾ ಎಂದು ಹೆಸರಿಟ್ಟರೆ ಮಗನಿಗೆ ಯಥರ್ವ್ ಯಶ್ ಎಂದು ಹೆಸರಿಟ್ಟು ಸಂತೋಷ ಹಂಚಿಕೊಂಡಿದ್ದರು.. ಯಶ್ ಹಾಗೂ ರಾಧಿಕಾ ಇಬ್ಬರೂ ಸಹ ಅವರ ಜೀವನದ ಪ್ರತಿಯೊಂದು ಘಟನೆಯನ್ನೂ ಸಹ ಅಭಿಮಾನಿಗಳೊಟ್ಟಿಗೆ ವಿಶೇಷವಾಗಿ ಹಂಚಿಕೊಳ್ಳುವ ಮೂಲಕ ಅವರುಗಳನ್ನು ತಮ್ಮ ಸಂತೋಷದ ಒಂದು ಭಾಗವನ್ನಾಗಿಸಿದರು.. ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ವಿಶೇಷ ವಾಗಿ ಆಚರಿಸಿ ಬಹುತೇಕ ಸಂಪೂರ್ಣ ಸ್ಯಾಂಡಲ್ವುಡ್ ಅನ್ನೇ ಆಹ್ವಾನಿಸಿ ಮಗಳ ಮೊದಲ ಹುಟ್ಟುಹಬ್ಬ ನೆನಪಿನಲ್ಲಿ‌ ಉಳಿಯುವಂತೆ ಮಾಡಿದ್ದರು..

ಮಗನ ಹುಟ್ಟುಹಬ್ಬವನ್ನು ಅದೇ ರೀತಿ ಅದ್ಧೂರಿಯಾಗಿ ಮಾಡುವ ಪ್ಲಾನ್ ನಲ್ಲಿದ್ದ ಯಶ್ ಹಾಗೂ ರಾಧಿಕಾ ಕೊರೊನಾ ಕಾರಣದಿಂದಾಗಿ ಗೋವಾದಲ್ಲಿ ಸಮುದ್ರದ ನಡುವೆ ಐಶಾರಾಮಿ ಬೋಟ್ ನಲ್ಲಿ ಮಗನ ಮೊದಲ ಹುಟ್ಟುಹಬ್ಬವನ್ನು ಇನ್ನೂ ವಿಶೇಷವಾಗಿ ಆಚರಿಸಿದರು.. ಇದೀಗ ಮಗ ಹುಟ್ಟಿ ವರ್ಷ ತುಂಬಿದ ಬಳಿಕ ಮೈಸೂರಿನ ಬಳಿ ತಮ್ಮ ಮನೆ ದೇವರಾದ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇಗುಲಕ್ಕೆ ಬಂದು ಮುಡಿ ತೆಗೆಸುವ ಕಾರ್ಯ ಮಾಡಿದ್ದಾರೆ..

ಹೌದು ಕಳೆದ ವರ್ಷ ಐರಾಳನ್ನು ಕರೆತಂದು ಸಂಪ್ರದಾಯದಂತೆ ಮುಡಿ ತೆಗೆಸಿ ಫೋಟೋ ಹಂಚಿಕೊಂಡಿದ್ದರು.. ಇದೀಗ ಮಗನಿಗೂ ಸಹ ಮುಡಿ ತೆಗೆಸುವ ಕಾರ್ಯ ಮಾಡಿದ್ದು ರಾಧಿಕಾ ಪಂಡಿತ್ ಫೋಟೋ ಹಂಚಿಕೊಂಡಿದ್ದಾರೆ.. ಯಶ್ ತಮ್ಮ ಮಗನೊಟ್ಟಿಗೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ ಮಗನ ಎಕ್ಸ್ಪ್ರೆಶನ್ ನೋಡಿ.. ಕೂದಲು ಇಲ್ಲ ಎಂದು ತಿಳಿದಾಗ ಅವನ ಪ್ರತಿಕ್ರಿಯೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದ್ದು ಅಭಿಮಾನಿಗಳು ಯಥರ್ವನಿಗೆ ಶುಭ ಹಾರೈಸಿದ್ದಾರೆ..