ಮದುವೆಯಾದ ಮರುದಿನವೇ ಈ ಜೋಡಿ ಮಾಡಿರುವ ಕೆಲಸ ನೋಡಿ‌‌‌‌..

0 views

ಮದುವೆಯಾದ ನಂತರ ನೂತನ ಜೋಡಿ ಪ್ರವಾಸಕ್ಕೆ ಹೋಗೋದು ಸಾಮಾನ್ಯ ಸಂಗತಿ.. ಇಲ್ಲವಾದರೆ ದೇವಸ್ಥಾನ ಪೂಜೆ ಪುನಸ್ಕಾರ ಅಂತ ಬ್ಯುಸಿ ಆಗುವರು.. ಮದುವೆಯ ನಂತರ ಎಲ್ಲಿ ಹೋಗಬೇಕು.. ಹೊರ ರಾಜ್ಯವಾ.. ಹೊರ ದೇಶವಾ.. ಅಥವಾ ಮತ್ತೆಲ್ಲಿ.. ಹೀಗೆ ಸಾಕಷ್ಟು ಯೋಚಿಸಿ ಯೋಜಿಸಿ ಪ್ರವಾಸ ಕೈಗೊಳ್ಳುವರು.. ಆದರೆ ಇಲ್ಲೊಂದು ಜೋಡಿ ಇದೆಲ್ಲವನ್ನು ಮೀರಿ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದೆ.. ಮಾಡಿದ ಕೆಲಸಕ್ಕೆ ಜನರಿಂದ ಮೆಚ್ಚುಗೆಯನ್ನೂ ಸಹ ಪಡೆದು ಇದೀಗ ತಮ್ಮ ಮದುವೆಯ ದಿನ ಚಿರಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿದೆ..

ಹೌದು ಸಾಮಾಜಿಕ ಕಳಕಳಿಯುಳ್ಳ ಈ ನೂತನ ಜೋಡಿ ಮದುವೆಯಾದ ಮರು ದಿನವೇ ಮಾಡಿರುವ ಕೆಲಸ ನಿಜಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. ಮದುವೆಯಾದ ನಂತರ ಅದು ಇದು ಕೆಲಸದಲ್ಲಿ ಬ್ಯುಸಿ ಆಗುವ ಜನರ ನಡುವೆ ಈ ಜೋಡಿ ಮಾದರಿಯಾಗಿದೆ ಎನ್ನಬಹುದು‌.. ಹೌದು ಕಿಶೋರ್ ಕಲ್ಲುಗಡ್ಡೆ ಎಂಬ ಯುವಕ ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ನಿನ್ನೆ ಪತ್ನಿ ಜೊತೆ ಸೇರಿಕೊಂಡು ಕಡೂರಿನ ಸರ್ಕಾರಿ ಶಾಲೆಯನ್ನು ಸ್ವಚ್ಛಗೊಳಿಸಿದ್ದಾರೆ.. ಹೌದು ತಮ್ಮ ಮದುವೆಯನ್ನು ಅರ್ಥಪೂರ್ಣಗೊಳಿಸಿದ ಕಿಶೋರ್ ತಮ್ಮ ಜೀವನದ ಅವಿಸ್ಮರಣೀಯ ದಿನವನ್ನು ಮತ್ತಷ್ಟು ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ.. ಇವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಅಷ್ಟೇ ಅಲ್ಲದೇ

ಅಷ್ಟೇ ಅಲ್ಲದೇ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಚಕ್ರವರ್ತಿ ಸೂಲಿಬೆಲೆ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭ ಹಾರೈಸಿದ್ದಾರೆ.. “ಈ ಹುಡುಗ ಕಿಶೋರ್ ಕಲ್ಲುಗುಡ್ಡೆ. ಮತ್ತವನ ಜೊತೆ ಇರುವ ಹುಡುಗಿ ಭವ್ಯ. ಅವನ‌ ಕೈ ಹಿಡಿದಾಕೆ. ನಿನ್ನೆಯೇ ಮದುವೆಯಾಗಿದ್ದು. ಇಂದು ಇಬ್ಬರೂ ಸೇರಿ ಕಡಬದ ಸರ್ಕಾರಿ ಶಾಲೆಯೊಂದರ ಸ್ವಚ್ಛತೆಗೆ ಕಾರ್ಯಕರ್ತರಾಗಿ ಭಾಗವಹಿಸಿ ಎಂದಿನಂತೆ ಸೇವಾಕಾರ್ಯದಲ್ಲಿ ದುಡಿದಿದ್ದಾರೆ. ಮದುವೆಯಾದ ಮೇಲೆ ಸೇವಾಕಾರ್ಯ ಕಷ್ಟ ಎಂದು ಅನೇಕರು ಹೇಳುವಾಗ ಮದುವೆಯಾದ ಮರುದಿನವೇ ಇವರಿಬ್ಬರೂ ನಡೆದುಕೊಂಡಿರುವ ರೀತಿ ನಿಜಕ್ಕೂ ಅಭಿನಂದನೀಯ. ಸಂಘಟನೆಯೊಂದು ಬಲಗೊಳ್ಳುವುದು ಈ ರೀತಿಯ ಜನರ ಶ್ರದ್ಧೆಯಿಂದಲೇ. ರಾಷ್ಟ್ರ ಶ್ರೇಷ್ಠವಾಗುವುದೂ ಈ ರೀತಿಯ ತ್ಯಾಗಗಳಿಂದಲೇ. ಇಬ್ಬರಿಗೂ ಅಭಿನಂದನೆಗಳು. ಅವರ ಗೃಹಸ್ಥಾಶ್ರಮ ಸಾರ್ಥಕವಾಗಲಿ ಎಂದು ಹಾರೈಸೋಣ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಮದುವೆಯ ಶುಭ ಸಮಯದಲ್ಲಿ ಸಾಮಾಜಿಕ ಕಳಕಳಿ ತೋರಿ ಸರ್ಕಾರಿ ಶಾಲೆಯೊಂದಕ್ಕೆ ಮೆರುಗು ತಂದ ಈ ಜೋಡಿಗೆ ಶುಭವಾಗಲಿ.. ಇವರ ದಾಂಪತ್ಯ ಜೀವನ ಸಂತೋಷವಾಗಿರಲಿ.. ಇನ್ನು ಕೆಲ ತಿಂಗಳ ಹಿಂದಷ್ಟೇ ಮಂಗಳೂರು ಮೂಲದ ಜೋಡಿಯೊಂದು ಹನಿಮೂನ್ ಗೆ ತೆರಳದೆ ಅವರೂ ಸಹ ಸಮುದ್ರ ತೀರದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದನ್ನು ನಾವಿಲ್ಲಿ ನೆನೆಯಬಹುದು.. ಒಟ್ಟಿನಲ್ಲಿ ಮದುವೆಯಾಗಲಿ ಅಥವಾ ಮತ್ಯಾವುದೇ ಶುಭ ಸಮಾರಂಭವಾಗಲಿ.. ಜನರು ತಮ್ಮ ಆ ವಿಶೇಷ ದಿನವನ್ನು ಮತ್ತಷ್ಟು ವಿಶೇಷಗೊಳಿಸಲು ಸಾಮಾಜಿಕ ಕಳಕಳಿಯುಳ್ಳ ಕಾರ್ಯಗಳತ್ತ ಮುಖ ಮಾಡುತ್ತಿರುವುದು ಮೆಚ್ಚುವ ವಿಚಾರ..