ಸಿಡಿ ಪ್ರಕರಣಕ್ಕೆ ಮತ್ತೊಂದು ತಿರುವು.. ಹೊಸ ಹೇಳಿಕೆ ಕೊಟ್ಟ ಯುವತಿ.. ಮಗಳ ಮಾತು ಕೇಳಿ ಬೆಚ್ಚಿಬಿದ್ದ ಯುವತಿಯ ತಂದೆ..

0 views

ರಮೇಶ್ ಜಾರಕಿಹೋಳಿ ಅವರ ಸಿಡಿ ಪ್ರಕರಣಕ್ಕೆ ಕಳೆದ ಒಂದು ವಾರದಿಂದ ಹೊಸ ಹೊಸ ತಿರುವುಗಳು ದೊರೆಯುತ್ತಿದೆ.. ಹೌದು ಕಳೆದ ವಾರವಷ್ಟೇ ರಮೇಶ್ ಜಾರಕಿಹೋಳಿ ಅವರು ತಮ್ಮ ಸಂಪೂರ್ಣ ಹೇಳಿಕೆಯನ್ನು ಬದಲಿಸಿದ್ದು ನಾನು ಮತ್ತು ಆ ಯುವತಿ ಇಬ್ಬರ ಸಮ್ಮತದಿಂದಲೇ ಒಟ್ಟಾಗಿ ಸೇರಿದ್ದೆವು.. ಇದರಲ್ಲಿ‌ ಇಬ್ಬರ ಒಪ್ಪಿಗೆಯೂ ಇತ್ತು ಎಂದು ಹೇಳಿಕೆ ನೀಡಿದ್ದರು.. ಆದರೀಗ ಯುವತಿ ಮತ್ತೊಂದು ಹೊಸ ಹೇಳಿಕೆ ನೀಡಿದ್ದು ಯುವತಿಯ ತಂದೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.. ಹೌದು ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ರಮೇಶ್ ಜಾರಕಿ ಹೋಳಿ ಹಾಗೂ ಯುವತಿಯಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿ ಕೊನೆಗೆ ಯುವತಿ ಪೊಲೀಸರ ಬಳಿ ದೂರು ದಾಖಲಿಸಲಾಗಿ ಪ್ರಕರಣ ಎಸ್ ಐ ಟಿ ಕೈ ಸೇರಿತ್ತು… ಅತ್ತ ಯುವತಿ ತನ್ನ ಹಾಗೂ ರಮೇಶ್ ಜಾರಕಿಹೋಳಿ ಅವರ ನಡುವೆ ಸಂಬಂಧವಿತ್ತು ಬಹಳಷ್ಟು ಬಾರಿ ನಾವಿಬ್ಬರು ಒಟ್ಟಾಗಿ ಸೇರಿದ್ದೆವು.. ಮಲ್ಲೇಶ್ವರಂ ನಲ್ಲಿರುವ ಅವರ ಅಪಾರ್ಟ್ಮೆಂಟ್ ನಲ್ಲಿಯೂ ನಾವಿಬ್ಬರು ಸೇರಿದ್ದೆವು.. ಹೀಗೆ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಳು..

ರಮೇಶ್ ಜಾರಕಿಹೋಳಿ ಅವರು ಮಾತ್ರ ಇದೆಲ್ಲಾ ಗ್ರಾಫಿಕ್ಸ್.. ಅದು ನಾನೇ ಅಲ್ಲ.. ಆ ಹುಡುಗಿ ಯಾರು ಅಂತಾನೆ ಗೊತ್ತಿಲ್ಲ ಎನ್ನುತ್ತಿದ್ದರು.. ಕೊನೆಗೆ ಕೊರೊನಾ ಕಾರಣ ನೀಡಿ ವಿಚಾರಣೆಗೆ ಹಾಜರಾಗದೇ ಜಾರಿಕೊಂಡಿದ್ದರು.. ಆದರೀಗ ಆ ವೀಡಿಯೋದಲ್ಲಿ ಇರುವುದು ನಾನೆ.. ಇಬ್ಬರ ಸಮ್ಮತಿಯಿಂದ ಸಂಬಂಧವಿತ್ತು ಎಂದು ಹೇಳಿಕೆ ನೀಡುವ ಮೂಲಕ ಪ್ರಕರಣವನ್ನು ಒಂದು ರೀತಿ ಡಮ್ಮಿ‌ ಮಾಡಿದರೆನ್ನಬಹುದು.. ಆದರೆ ಇತ್ತ ರಮೇಶ್ ಜಾರಕಿ ಹೋಳಿ ಅವರು ಆ ರೀತಿ ಹೇಳಿಕೆ ಕೊಟ್ಟ ಬಳಿಕ ಯುವತಿ ಏನು ಹೇಳುವಳೋ ಎಂದು ಸಾಕಷ್ಟು ಕುತೂಹಲವಿತ್ತು.. ಆದರೆ ಇದೀಗ ಆ ಯುವತಿಯೂ ಸಹ ಹೊಸ ಹೇಳಿಕೆಯೊಂದನ್ನು ನೀಡಿದ್ದಾಳೆ.. ಆದರೆ ರಮೇಶ್ ಜಾರಕಿಹೋಳಿ ಅವರ ಕುರಿತಲ್ಲ.. ಬದಲಿಗೆ ಯುವತಿ ತನ್ನ ತಂದೆ ಕುರಿತಾಗಿ ಹೊಸ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ..

ಹೌದು ಅದಾಗಲೇ ಕಳೆದ ಕೆಲ ತಿಂಗಳಿಂದ ನೊಂದು ಹೋಗಿರುವ ಯುವತಿಯ ತಂದೆ ತಾಯಿ ಇದೀಗ ರಮೇಶ್ ಜಾರಕಿಹೋಳಿ ಅವರು ಇಬ್ಬರ ಸಮ್ಮತದಿಂದ ಆ ಕೆಲಸ ನಡೆದಿದೆ ಎಂದು ಹೇಳಿಕೆ ಕೊಟ್ಟ ಬಳಿಕ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದು ಧಾರವಾಡದ ಹೈಕೋರ್ಟ್ ಪೀಠಕ್ಕೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿ ಮಗಳ ಜೊತೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.. ಯುವತಿಯ ತಂದೆಯ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಯುವತಿ ಇರುವ ಜಾಗಕ್ಕೆ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಲು ರಿಜಿಸ್ಟ್ರಾರ್ ಜನರಲ್ ಗೆ ಸೂಚನೆ ನೀಡಿದೆ.. ಸೂಚನೆಯಂತೆ ರಿಜಿಸ್ಟ್ರಾರ್ ಜನರಲ್ ಶಿವಶಂಕರ ಗೌಡ ಅವರು ಜಂಟಿ ರಿಜಿಸ್ಟ್ರಾರ್ ವರಲಕ್ಷ್ಮಿ ಅವರೊಂದಿಗೆ ಯುವತಿಯ ಮನೆಗೆ ಭೇಟಿ ನೀಡಿ ಯುವತಿಯ ತಂದೆಯ ಮನವಿಯಂತೆ ಯುವತಿ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲು ಅವಕಾಶ ಮಾಡಿಕೊಡಲಾಯಿತು..

ಆದರೆ ಇತ್ತ ಯುವತಿ ಮಾಡಿದ ಕೆಲಸವೇ ಬೇರೆ.. ಹೌದು ಯುವತಿಗೆ ನಿನ್ನ ತಂದೆ ನಿನ್ನ ಜೊತೆ ಮಾತನಾಡಬೇಕಂತೆ.. ವೀಡಿಯೋ ಕಾಲ್ ಮೂಲಕ ಮಾತನಾಡು ಎಂದು ತಿಳಿಸಿದರು.. ಆದರೆ ಆಕೆ ಕೊಟ್ಟ ಹೇಳಿಕೆಯೇ ಬೇರೆ.. ಹೌದು ನಾನು ಸಧ್ಯ ನನ್ನ ತಂದೆ ಜೊತೆ ಮಾತನಾಡುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ತಿಳಿಸಿ ಬಿಟ್ಟಿದ್ದಾಳೆ.. ಹೌದು ನಾನು ಯಾವುದೇ ಕಾರಣಕ್ಕೂ ನನ್ನ ತಂದೆಯ ಜೊತೆ ಮಾತನಾಡುವುದಿಲ್ಲ.. ಅಷ್ಟೇ ಅಲ್ಲ ನಾನು ಯಾರ ಬಲವಂತದಲ್ಲಿಯೂ ಇಲ್ಲ.. ಎಂದು ನಿಖರವಾಗಿ ತಿಳಿಸಿದ್ದು ಯುವತಿಯ ಹೇಳಿಕೆ ಪಡೆದ ನ್ಯಾಯಾಲಯ ಯುವತಿಯ ತಂದೆಯ ಅರ್ಜಿಯನ್ನು ಇತ್ಯರ್ಥ ಮಾಡಿದೆ..

ಆದರೆ ಇತ್ತ ಯುವತಿ ತನ್ನ ತಂದೆ ಜೊತೆ ಮಾತನಾಡುವುದಿಲ್ಲ ಎಂಬ ಹೇಳಿಕೆ ಕೇಳಿ ಆಕೆಯ ತಂದೆ ಬೆಚ್ಚಿಬಿದ್ದಿದ್ದು.. ಇಂತಹ ಕಷ್ಟದ ಸಮಯದಲ್ಲಿ ಅಪ್ಪ ಅಮ್ಮನ ಜೊತೆ ನಿಂತು ಎದುರಿಸಬೇಕು.. ಆದರೆ ಆಕೆ ಯಾರ ಬೆಂಬಲದಲ್ಲಿ ಈ ರೀತಿ ನಡೆದುಕೊಳ್ಳುತ್ತಿದ್ದಾಳೆ ಎಂದು ಕಂಗಾಲಾಗಿದ್ದಾರೆ.. ಒಟ್ಟಿನಲ್ಲಿ ಇಂತಹ ಸಮಯದಲ್ಲಿಯೇ ಹುಟ್ಟಿಸಿದ ಅಪ್ಪನ ಜೊತೆಯೇ ಮಾತನಾಡೊಲ್ಲಾ ಎಂದ ಯುವತಿ ಮುಂದೆ ಬಂದು ನಮ್ಮನ್ನು ನೋಡ್ತಾಳಾ ಎಂದು ದುಃಖ ಹೊರ ಹಾಕಿದ್ದಾರೆ.. ಒಟ್ಟಿನಲ್ಲಿ ಕೊರೊನಾ ಎರಡನೇ ಅಲೆಯ ಕಾರಣ ತೆರೆ ಮರೆಗೆ ತೆರಳಿದ್ದ ರಮೇಶ್ ಜಾರಕಿಹೋಳಿ ಅವರ ಸಿಡಿ ಪ್ರಕರಣ ಮತ್ತೊಮ್ಮೆ ಸದ್ದು ಮಾಡುತ್ತಿದ್ದು ಯಾವ ಹಂತಕ್ಕೆ ಹೋಗಿ ನಿಲ್ಲುವುದೋ ಕಾದು ನೋಡಬೇಕಷ್ಟೇ..