ಇದಪ್ಪಾ ತಿರುವು ಅಂದ್ರೆ.. ಉಲ್ಟಾ ಹೊಡೆದ ಸಿಡಿ ಯುವತಿ.. ರಮೇಶ್ ಜಾರಕಿಹೋಳಿ ಬಗ್ಗೆ ಹೇಳಿರುವ ಮಾತು ನೋಡಿ..

0 views

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿ ಹೋಳಿ ಹಾಗೂ ಯುವತಿಯ ವಿಚಾರದಲ್ಲಿಂದು ಬೇರೆಯದ್ದೇ ತಿರುವು ದೊರೆತಿದೆ.. ಹೌದು ಸದ್ಯ ಸಾರಿಗೆ ನೌಕರರ ಪ್ರತಿಭಟನೆ ಹಾಗೂ ಕೊರೊನಾ ಎರಡನೇ ಅಲೆಯ ನಡುವೆ ರಮೇಶ್ ಜಾರಕಿಹೋಳಿ ಅವರ ವಿಚಾರ ಸದ್ದಿಲ್ಲದೆ ಸೈಡಿಗೆ ಹೋಗಿತ್ತು.. ಆದರೆ ಸೈಲೆಂಟಾಗಿಯೇ ವಿಚಾರಕ್ಕೆ ದೊಡ್ಡ ತಿರುವೊಂದು ದೊರೆತಿದ್ದು ರಮೇಶ್ ಜಾರಕಿಹೋಳಿ ಅವರು ಬಹುತೇಕ ಸೇಫ್ ಎನ್ನಲಾಗುತ್ತಿದೆ..

ಹೌದು ಇಂದು ಸಿಡಿ ಯುವತಿ ಇದ್ದಕಿದ್ದ ಹಾಗೆ ಎಸ್ ಐ ಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು ಈ ಹಿಂದೆ ತಾನು ನೀಡಿದ್ದ ಹೇಳಿಕೆಗಳು ಒತ್ತಾಯ ಪೂರ್ವಕ ವಾಗಿ ನೀಡಿದ್ದವು.. ಅದನ್ನು ಪರಿಗಣಿಸಬೇಡಿ.. ನಾನು ನಂಬಿದವರೇ ನನಗೆ ಮೋಸ ಮಾಡಿದ್ರು.. ನಾನು ಈಗ ಹೊಸ ಹೇಳಿಕೆ ನೀಡಬೇಕು.. ನನಗೆ ಅವಕಾಶ ಮಾಡಿಕೊಡಿ ಎಂದಿದ್ದಾರೆ.. ಆದರೆ ಕೆಲ ಸಮಯದ ಬಳಿಕ ಮತ್ತೆ ನನ್ನ ವಕೀಲರು ನನಗೆ ಹೇಳಿಕೆ ನೀಡದಂತೆ ಒತ್ತಾಯ ಮಾಡುತ್ತಿದ್ದಾರೆ.. ಆ ಕಾರಣದಿಂದಾಗಿ ನಾನು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಸ್ವಲ್ಪ ಸಮಯ ನೀಡಿ ಎಂದು ಕೊನೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.. ಆದರೆ

ಆದರೆ ಬೆಳಿಗ್ಗೆ ಎಸ್ ಐ ಟಿ ಅಧಿಕಾರಿಗಳ ಮುಂದೆ ಹಾಜರಾದ ಯುವತಿ ಹೇಳಿರುವ ಮಾತುಗಳು ಮಾತ್ರ ರಮೇಶ್ ಜಾರಕಿಹೋಳಿ ಅವರು ಈ ಕೇಸ್ ನಿಂದ ಸೇಫ್ ಎನ್ನುವಂತಿದೆ.. ಹೌದು ಇಲ್ಲಿದೆ ನೋಡಿ ಯುವತಿ ಅಧಿಕಾರಿಗಳ ಮುಂದೆ ಹೇಳಿದ ಮಾತುಗಳು “ಈಗಾಗಲೇ ನಾನು ಮಾಡದೇ ಇರುವ ತಪ್ಪಿಗೆ ಶಿಕ್ಷ ಅನುಭವಿಸುತ್ತಿದ್ದೇನೆ.. ನನ್ನಿಂದ ಈ ಹಿಂದೆ ಒತ್ತಾಯ ಪೂರ್ವಕವಾಗಿ ಹೇಳಿಕೆಯನ್ನು ಕೊಡಿಸಿದ್ದರು.. ನಾವು ನಂಬಿದವರೇ ನಮಗೆ ಮೋಸ ಮಾಡಿದರು.. ನನ್ನ ಮರ್ಯಾದೆ ಗೌರವವೂ ಹಾಳಾಯ್ತು.. ಈ ಪ್ರಕರಣ ಇಷ್ಟು ದೊಡ್ಡದಾಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ.. ನನಗೆ ತಿಳಿಯದಂತೆ ನನ್ನ ಬೆನ್ನ ಹಿಂದೆ ಕೆಲವು ವಿಚಾರಗಳು ನಡೆದಿವೆ.. ಅದನ್ನೆಲ್ಲಾ ತಿಳಿದುಕೊಳ್ಳಲು ಇಷ್ಟು ದಿನ ಬೇಕಾಯಿತು.. ನನ್ನ ಸ್ನೇಹಿತ ಆಕಾಶ್ ಜೊತೆ ಕೂಡ ನಾವು ನಂಬಿದವರು ಮುಚ್ವು ಮರೆ ಮಾಡಿದ್ದಾರೆ..

ನಾನು ಒಳ್ಳೆಯ ಮಗಳು ಆಗಬೇಕು ಅಂತ ನನ್ನ ತಂದೆ ನಿರೀಕ್ಷೆ ಮಾಡಿದ್ದರು.. ಆದರೆ ನಾನು ಅಪ್ಪ ಅಮ್ಮನಿಗೆ ನೋವು ನೀಡಿದ್ದೇನೆ.. ನನ್ನನ್ನು ಬೇರೆ ಇಟ್ಟು ನನ್ನ ಬೆನ್ನ ಹಿಂದೆ ಕೆಲವರು ಮಾತುಕತೆ ನಡೆಸಿದ್ದಾರೆ.. ನಿಜಕ್ಕೂ ಅನ್ಯಾಯ ಆಗಿರುವುದು ನನಗೆ.. ನಾನು ಇಂದು ಸತ್ಯವನ್ನು ಮಾತ್ರ ಹೇಳುತ್ತೇನೆ.. ನನಗೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲು ಅವಕಾಶ ಮಾಡಿಕೊಡಿ ಎಂದಿದ್ದಾರೆ.. ಅಷ್ಟೇ ಅಲ್ಲದೆ ನಾನು ಇಂದು ನೀಡುವ ಹೇಳಿಕೆಗಳಿಗೆ ನಾನು ಬದ್ಧವಾಗಿರ್ತೀನಿ ಎಂದಿದ್ದಾರೆ.. ಆದರೆ ಕೆಲ ಸಮಯದ ಬಳಿಕ ಮತ್ತೆ ನನ್ನ ವಕೀಲರು ಇಂದು ನಾನು ಹೇಳಿಕೆ ನೀಡದಂತೆ ಒತ್ತಾಯ ಹೇರಿದ್ದಾರೆ.. ನನಗೆ ಹೇಳಿಕೆ ನೀಡಲು ಸಮಯಾವಕಾಶ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಒಟ್ಟಿನಲ್ಲಿ ದಿನಕ್ಕೊಂದು ಬಣ್ಣ ಪಡೆಯುತ್ತಿದ್ದ ಸಿಡಿ ವಿಚಾರ ಇದೀಗ ಗಂಟೆಗೊಂದು ಬಣ್ಣ ಪಡೆಯುವಂತಾಗಿದೆ..

ಇನ್ನು ಅತ್ತ ರಮೇಶ್ ಜಾರಕಿಹೋಳಿ ಅವರಿಗೆ ಕೊರೊನಾ ಪಾಸಿಟಿವ್ ಆಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ.. ಇತ್ತ ಯುವತಿ ಹೊಸ ಹೇಳಿಕೆ ನೀಡಲು ಎಸ್‌ ಐ ಟಿ ಅಧಿಕಾರಿಗಳ ಮುಂದೆ ಧಿಡೀರ್‌ ಪ್ರತ್ಯಕ್ಷವಾಗಿ ಮನವಿ ಮಾಡಿದ್ದು ಮತ್ತೆ ಕೆಲವೇ ಹೊತ್ತಿನಲ್ಲಿ ಹೊಸ ಹೇಳಿಕೆ ನೀಡಲು ಸಮಯಾವಕಾಶ ಕೇಳಿದ್ದು ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುವುದೋ ಯಾವ ತಿರುವು ಪಡೆಯುವುದೋ ಕಾದು ನೋಡಬೇಕಷ್ಟೇ..