ರಾಜ್ಯದ ಪ್ರಮುಖ ಸುದ್ದಿವಾಹಿನಿ ಟಿವಿ 5 ಮಾಡಿರುವ ಕೆಲಸ ನೋಡಿ..

0 views

ಎಲ್ಲೆಲ್ಲೂ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದೆ.. ಕೊರೊನಾದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದಕ್ಕಿಂತ ಕೊರೊನಾ ಬಂದವರಿಗೆ ಸರಿಯಾದ ಚಿಕಿತ್ಸೆ ಸಿಗದೆ ಜನರ ಜೀವಗಳು ಗಾಳಿಗೆ ತರಗೆಲೆ ಗಳು ಉದುರಿದಂತೆ ಉದುರಿ ಹೋಗುತ್ತಿದೆ ಎನ್ನಬಹುದು.. ಸರಿಯಾದ ಬೆಡ್ ವ್ಯವಸ್ಥೆ ಇಲ್ಲ.ಮ್ ರೆಮಿಡಿಸಿವರ್ ಸಿಗೋದಿಲ್ಲ.. ಆಕ್ಸಿಜಮ್ ಇಲ್ಲ.. ಇಂತ ಅತ್ಯಂತ ಕೆಟ್ಟ ಅವ್ಯವಸ್ಥೆಯನ್ನು ನಿಜಕ್ಕೂ ಎಂದೂ ಕಂಡಿರಲಿಲ್ಲ.. ದಯಮಾಡಿ ಯಾರೂ ರಾಜಕೀಯ ಪಕ್ಷಗಳ ಸಮರ್ಥನೆ ಮಾಡಿಕೊಳ್ಳಬೇಡಿ.. ಅಮೂಲ್ಯ ಜೀವಗಳನ್ನು ಕಳೆದುಕೊಂಡ ಸಾವಿರಾರು ಕುಟುಂಬದವರು ಬೀದಿ ಬೀದಿಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಜಾಗಗಳಲ್ಲಿ‌ ನಿಂತು ರೋಧಿಸುತ್ತಿರುವುದನ್ನು ಹತ್ತಿರದಿಂದ ನೋಡಿದಾಗ ಮಾತ್ರವೇ ನಿಜವಾದ ಪರಿಸ್ಥಿತಿ ಅರ್ಥವಾಗುತ್ತದೆ..

ಅದರಲ್ಲಿಯೂ ಈ ರೀತಿ ಪರಿಸ್ಥಿತಿ ಆಗಲಿದೆ ಎಂದು ಅದಾಜಿಸಿದ್ದರು ಸಹ ಸಾಲು ಸಾಲು ರಾಜಕೀಯ ಸಮಾವೇಶಗಳು ಎಲಿಕ್ಷನ್ ಕ್ಯಾಂಪೆನ್ ಗಳು.. ಸಾವಿರಾರು ಜನರನ್ನಿ ಒಟ್ಟಿಗೆ ಸೇರಿಸಿ ನಡೆಸಿದ ರ್ಯಾಲಿಗಳು.. ನಿಜಕ್ಕೂ ರಾಜಕಾರಣಿಗಳು ನಾಯಕರು ಕೇವಲ ಚುನಾವಣೆಯಲ್ಲಿ ಗೆಲ್ಲುವುದಕ್ಕೋಸ್ಕರ ಇಷ್ಟೊಂದು ಸ್ವಾರ್ಥಿಗಳಾಗಿ ಬಿಟ್ಟರಾ? ಜನರ ಜೀವಗಳೂ ಅವರಿಗೆ ಲೆಕ್ಕಕ್ಕೆ ಇಲ್ಲವಾ ಎನಿಸುತ್ತದೆ.. ಆಗ ರ್ಯಾಲಿಗಳನ್ನು ಮಾಡಿದರು.. ಈಗ ಲಾಕ್ ಡೌನ್ ಮಾಡಿ ದಿನಗೂಲಿ ಮಾಡುವ ಜನರ ಹೊಟ್ಟೆಯ ಮೇಲೆ ಹೊಡೆದರಷ್ಟೇ.. ಒಂದು ವರ್ಷದಿಂದ ಸರಿಯಾದ ಯೋಜನೆಗಳನ್ನು ರೂಪಿಸಿಕೊಂಡು ಮತ್ತೊಂದು ಕಡೆ ಮುಂದಾಗಬಹುದಾದ ಪರಿಸ್ಥಿತಿಗೆ ಎಲ್ಲಾ ಆರೋಗ್ಯ ಸೇವೆಗಳನ್ನು ಸರೊಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದೇ ನಿಜವಾದ ಆಡಳಿತ.. ಆದರೆ ಇಲ್ಲಿ ಆಗುತ್ತಿರುವುದೇ ಬೇರೆ.. ಲಕ್ಷಾಂತರ ಜನರ ಜೀವಗಳು ಬೆಂಕಿಯಲ್ಲಿ ಬೆಂದು ಗಾಳಿಯಲ್ಲಿ ಹಾವಿಯಾಗೆ ಹೋಗುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ.. ಆ ಎಲ್ಲಾ ಕುಟುಂಬದವರ ನಿಟ್ಟುಸಿರು ನಾಲಾಯಕ್ ರಾಜಕಾರಣಿಗಳಿಗೆ ತಟ್ಟದೇ ಬಿಡದು ಎನಿಸುತ್ತದೆ..

ಯಾವುದೇ ಪಕ್ಷವಾಗಲಿ ಇಂತಹ ಸಮಯದಲ್ಲಿ ಒಟ್ಟಾಗಿ ನಿಂತು ಎಲ್ಲರೂ ಸೇರಿ.. ತಮ್ಮ ಎಲ್ಲರಲ್ಲಿಯೂ ಇರುವ ಬುದ್ದಿಯನ್ನು ಉಪಯೋಗಿಸಿ ಪರಿಸ್ಥಿತಿಯನ್ನು ಸುಧಾರಿಸಿ ಜನರಿಗೆ ನೆರವಾಗಿ ನಿಲ್ಲುವುದೇ ನಿಜವಾದ ರಾಜಕೀಯ.. ನಿಜವಾದ ರಾಜಕಾರಣಿ.. ಆದರೆ ಇಂತಹ ಸಮಯವನ್ನೇ ಬಳಸಿಕೊಂಡು ಮತ್ತೊಂದು ಮಾಡಬಾರದಷ್ಟೇ.. ಇನ್ನು ಇದೆಲ್ಲದರ ಜೊತೆಗೆ ಔಷಧಿ ಬೆಡ್ಡುಗಳು ಎಲ್ಲವೂ ಸಹ ಸಾವಿರಗಟ್ಟಲೆಗೆ ಕಾಳಸಂತೆಯಲ್ಲಿ ಸಿಗುತ್ತಿರುವುದು ನಿಜಕ್ಕೂ ಅತ್ಯಂತ ಕೆಟ್ಟ ಅವ್ಯವಸ್ಥೆಗೆ ಮತ್ತೊಂದು ಉದಾಹರಣೆ.. ಹೌದು ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ.. ಆದರೆ ಕಾಳಸಂತೆಯ ಮೂಲಕ ಫೋನ್ ಮಾಡಿದರೆ ಬೆಡ್ ಸಹ ಸಿಗುತ್ತದೆ.. ಆಕ್ಸಿಜನ್ ಸಹ ಸಿಗುತ್ತದೆ.. ದಿನಕ್ಕೆ ಎಪ್ಪತ್ತರಿಂದ ಒಂದು ಲಕ್ಷದ ಮೇಲೆಯೇ ಹಣ ಕೊಡಬೇಕು.. ನಿಜಕ್ಕೂ ಇದೊಂದು ನಾಚಿಕೆಗೇಡಿನ ಸಂಗತಿ ಎನ್ನಬಹುದು..

ಇನ್ನು ಇಂತಹ ಸಮಯದಲ್ಲಿ ರಾಜ್ಯದ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಒಂದಾಗಿರುವ ಟಿ ವಿ 5 ಮಾಡಿರುವ ಕೆಲಸ ನೋಡಿ.. ಹೌದು ಟಿ ವಿ 5 ಈ ಮೊದಲು ಸಹ ರಾಜಕಾರಣಿಗಳಿಗೆ ಉಗಿದು ಉಪ್ಪಾಕ್ಕಿತ್ತು.. ಅವ್ಯವಸ್ಥೆಗಳ ಆಗರದ ಬಗ್ಗೆ ಸುದ್ದಿ ಮಾಡಿ ಪ್ರತಿದಿನವೂ ಬಿತ್ತರಿಸುತ್ತಲೇ ಇದೆ.. ಇದರ ಜೊತೆಗೆ ಇದೀಗ ಟಿ ವಿ 5 ತೆಗೆದುಕೊಂಡಿರುವ ದಿಟ್ಟ ಹೆಜ್ಜೆ ನಿಜಕ್ಕೂ ಮೆಚ್ಚಲೇ ಬೇಕು.. ಹೌದು ಅದಾಗಲೇ ಪಂಚರಾಜ್ಯದ ಚುನಾವಣೆ ನಡೆದು ಫಲಿತಾಣ್ಶ ಘೋಷಣೆಯಾಗಲಿದೆ. ಚುನಾವಣೆ ಹಾಗೂ ಫಲಿತಾಂಶ ಅನ್ನೋದು ಮಾದ್ಯಮಗಳಿಗೆ ದೊಡ್ಡ ಸರಕೆನ್ನಬಹುದು.. ಆದರೆ ಇಣ್ತಹ ಸರಕನ್ನು ಟಿವಿ 5 ನಿರಾಕರಿಸಿದೆ.. ಹೌದು ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇರುವಾಗ ನಾವು ಪಂಚರಾಜ್ಯದ ಚುನಾವಣೆಯ ಫಲಿತಾಂಶವನ್ನು ಪ್ರಸಾರ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ..

ಹೌದು ಈ ಬಗ್ಗೆ ನೇರವಾಗಿ ಖಾರವಾಗಿಯೇ ತಿಳಿಸಿರುವ ಟಿ ವಿ 5 ವಾಹಿನಿ “ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಕವರೇಜ್ ಮಾಡಲ್ಲ.. ವೀಕ್ಷಕರೇ.. ಪ್ರಸ್ತುತ ನಮ್ಮ ದೇಶದಲ್ಲಿ ಆರೋಗ್ಯ ಎಮರ್ಜೆನ್ಸಿ ತಲೆದೋರಿದೆ.. ಹೀಗಾಗಿ ಟಿವಿ 5 ಕನ್ಮಡ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶವನ್ನು ಕವರೇಜ್ ಮಾಡುವ ಬದಲು ಎಂದಿನಂತೆ ಕೊರೊನಾ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ.. ಎಂದಿನಂತೆ ನಮ್ಮ ವೀಕ್ಷಕರು ಕೊರೊನಾಗೆ ಸಂಬಂಧಪಟ್ಟ ಸುದ್ದಿಗಳನ್ನು ನೋಡಬಹುದಾಗಿದೆ.. ಆಸ್ಪತ್ರೆಗಳಲ್ಲಿನ ಬೆಡ್ ಸಮಸ್ಯೆ ಸೋಂಕಿತರಿಗೆ ಆಕ್ಸಿಜನ್ ಕೊರತೆ.. ಐಸಿಯು ಬೆಡ್ ಅಭಾವ.. ರೆಮಿಡಿಸಿವರ್ ಔಷಧಿಯ ಅಲಭ್ಯತೆ ಕುರಿತು ನಿಮ್ಮ ಮುಂದೆ ಸರ್ಕಾರದ ವೈಫಲ್ಯವನ್ನು ಬಿಚ್ಚಡಲಿದ್ದೇವೆ.. ರಾಜ್ಯದ ಜನರಿಗೆ ಲಸಿಕೆ ಸಿಗದಿರುವುದು.. ತುರ್ತಾಗಿ ವೈದ್ಯರು.. ನರ್ಸ್ ಗಳ ವ್ಯವಸ್ಥೆ ಆಗದಿರುವುದಕ್ಕೆ ಜನಪ್ರತಿನಿಧಿಗಳೇ ಕಾರಣ.. ಹೀಗಾಗಿ ಪಂಚರಾಜ್ಯಗಳ ಫಲಿತಾಂಶವನ್ನು ಬಹಿಷ್ಕರಿಸಿ ಎಂದಿನಂತೆ ಕೊರೊನಾ ಕುರಿತಾದ ಸುದ್ದಿ ಸೇರಿ ದೇಶದ ಇತರೆ ಪ್ರಮುಖ ವಿಚಾರಗಳನ್ನು ಟಿವಿ 5 ಪ್ರಸಾರ ಮಾಡಲಿದೆ..” ಎಂದು ತಿಳಿಸಿದ್ದಾರೆ..