ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತನಾಡಿದ ರಕ್ಷಿತ್ ಶೆಟ್ಟಿ.. ಹುಡುಗರು ಯಾವತ್ತೂ ಪ್ರೀತಿಸಿದ್ದ ಹುಡುಗಿಯನ್ನ ಮರೆಯೋದಿಲ್ಲ..

0 views

ರಕ್ಷಿತ್ ಶೆಟ್ಟಿ ಸಧ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಸಕ್ಸಸ್ ನಲ್ಲಿದ್ದು ಇನ್ನು ಕೆಲವೇ ದಿನಗಳಲ್ಲಿ ಸಪ್ತಸಾಗರದಾಚೆ ಎಲ್ಲೋ 2 ಸಿನಿಮಾ ಕೂಡ ಬಿಡುಗಡೆಯಾಗಲಿದೆ.. ಈ ನಡುವೆಯೇ ತೆಲುಗಿನಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿರುವ ರಕ್ಷಿತ್ ಶೆಟ್ಟಿ ಅಲ್ಲಿಯೂ ಕೂಡ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ.. ಇದೇ ಸಮಯದಲ್ಲಿ ತೆಲುಗು ನೆಲದಲ್ಲಿಯೇ ರಶ್ಮಿಕಾ ಮಂದಣ್ಣ ಬಗ್ಗೆ ಮನಬಿಚ್ಚಿ ಮಾತನಾಡಿರುವ ರಕ್ಷಿತ್ ಶೆಟ್ಟಿ ಅವರ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.. ಹೌದು ಈ ಹಿಂದೆ ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ ಸಕ್ಸಸ್ ಆದ ಕಾರಣ..

ಈಗ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನೂ ಕೂಡ ತೆಲುಗಿನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದು “ಸಪ್ತ ಸಾಗರಾಲು ದಾಟಿ” ಎಂಬ ಹೆಸರಿನ ಮೂಲಕ ಬಿಡುಗಡೆ ಕಾಣುತ್ತಿದೆ.. ಸದ್ಯ ಇದೇ ಸಿನಿಮಾದ ಪ್ರಚಾರದ ಕೆಲಸದಲ್ಲಿ ಬ್ಯುಸಿ ಆಗಿರುವ ರಕ್ಷಿತ್ ಶೆಟ್ಟಿ ತೆಲುಗಿನಲ್ಲಿ ಸಾಕಷ್ಟು ಸಂದರ್ಶನಗಳನ್ನು ಸಹ ನೀಡುತ್ತಿದ್ದಾರೆ.. ಅದೇ ರೀತಿ ಅಲ್ಲಿನ ಯೂಟ್ಯೂಬರ್ ಒಬ್ಬರಿಗೆ ಸಂದರ್ಶನ ನೀಡಿದ್ದು ಆ ಸಂದರ್ಶನದಲ್ಲಿ ರಶ್ಮಿಕಾ ಬಗ್ಗೆ ಮಾತನಾಡಿದ್ದಾರೆ..

ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವಿನ ಪ್ರೀತಿ ಮದುವೆಯ ನಿಶ್ಚಿತಾರ್ಥ ನಂತರ ಆದ ಬ್ರೇಕಪ್ ಎಲ್ಲವೂ ದಿನ ಕಳೆದಂತೆ ಜನರಿಗೆ ಹಳೇ ವಿಚಾರವಾದರೂ ಒಮ್ಮೆ ಮನಸಾರೆ ಪ್ರೀತಿಸಿದ ಜೀವ ಆ ಪ್ರೀತಿಯನ್ನು ಮರೆಯಲು ಒಂದಷ್ಟು ವರ್ಷಗಳೇ ಬೇಕೆಂಬುದು ಸುಳ್ಳಲ್ಲ‌.. ಇನ್ನೂ ಕೆಲವರಿಗೆ ಆ ಪ್ರೀತಿಯನ್ನು ಮರೆಯಲು ಸಾಧ್ಯವೂ ಇಲ್ಲ ಎನ್ನಬಹುದು.. ಇದಕ್ಕೆ ಉದಹಾರಣೆ ಎಂಬಂತೆ ಈ ಹಿಂದೆ ರಕ್ಷಿತ್ ಹಾಗೂ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದ ನಂತರ ರಶ್ಮಿಕಾ ಮಂದಣ್ಣ ತೆಲುಗಿನ ಸಿನಿಮಾಗಳಲ್ಲಿ ಬ್ಯುಸಿ ಆದರು.‌. ಅಲ್ಲಿನ ಸಾಕಷ್ಟು ಸ್ನೇಹಿತರ ಜೊತೆಗಿನ ಒಡನಾಟದಲ್ಲಿದ್ದ ರಶ್ಮಿಕಾ ಮಂದಣ್ಣರಿಗೆ ರಕ್ಷಿತ್ ಪ್ರೀತಿಯನ್ನು ಮರೆಯಲು ಬಹಳ ದಿನಗಳು ಬೇಕಾಗಲಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ..

ಆದರೆ ಇತ್ತ ರಕ್ಷಿತ್ ಶೆಟ್ಟಿ ಮಾತ್ರ ಆ ಘಟನೆ ನಡೆದ ಬಳಿಕ ಅದರಿಂದ ಹೊರ ಬರಲು ಒಂದಷ್ಟು ವರ್ಷಗಳನ್ನೇ ತೆಗೆದುಕೊಂಡರು.. ಹಾಗೆಯೇ ತಮ್ಮ ಸಾಮಾಜಿಕ ಜಾಲತಾಣಗಳಿಂದಲೂ ದೂರಾಗಿಬಿಟ್ಟರು.. ಯಾರ ಸಂಪರ್ಕಕ್ಕೂ ಸಿಗದ ರಕ್ಷಿತ್ ಶೆಟ್ಟಿ ತಮ್ಮ ಕೆಲವು ಸ್ನೇಹಿತರ ಜೊತೆಗೆ ಬಿಟ್ಟರೆ ಮತ್ತೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.. ಅದರ ಜೊತೆಗೆ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ಅಂದುಕೊಂಡಷ್ಟು ಸಕ್ಸಸ್ ನೀಡಲಿಲ್ಲ.. ಕೊನೆಗೆ ಚಾರ್ಲಿ ಸಿನಿಮಾದಲ್ಲಿ ತೊಡಗಿಕೊಂಡ ರಕ್ಷಿತ್ ಶೆಟ್ಟಿ ಎಲ್ಲದರಿಂದಲೂ ಚೇತರಿಸಿಕೊಂಡು ದೊಡ್ಡ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವಲ್ ನಲ್ಲಿಯೇ ಸಕ್ಸಸ್ ಕಂಡರು.. ಅದಾದ ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಬ್ಯುಸಿ ಆದ ರಕ್ಷಿತ್ ಶೆಟ್ಟಿ ಅವರ ಕೈಯಲ್ಲೀಗ ಸಾಲು ಸಾಲು ಸಿನಿಮಾಗಳ ಅವಕಾಶಗಳೂ ಸಹ ಇವೆ.. ವರ್ಷಗಳು ಕಳೆದರೂ ಕೂಡ ರಕ್ಷಿತ್ ಶೆಟ್ಟಿ ಮಾತ್ರ ಮದುವೆ ವಿಚಾರವಾಗಿ ಯಾವುದೇ ಮಾತನಾಡಲಿಲ್ಲ.. ಅವರ ಹೆಸರಿನ ಜೊತೆಗೆ ಒಂದಷ್ಟು ನಟಿಯರ ಹೆಸರು ಕೇಳಿ ಬಂದರೂ ಕೂಡ ಎಲ್ಲವೂ ಗಾಳಿ ಸುದ್ದಿಯಾಗಿತ್ತು..

ಇನ್ನು ಇದೀಗ ಸಪ್ತ ಸಾಗರಾಲು ದಾಟಿ ಸಿನಿಮಾ ತೆಲುಗಿನಲ್ಲಿ ತೆರೆ ಕಾಣುತ್ತಿದ್ದು ಅಲ್ಲಿ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಪ್ರಶ್ನೆ ಕೇಳಿದ್ದಾರೆ.. ರಶ್ಮಿಕಾ ಅದಾಗಲೇ ತೆಲುಗು ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದು ಒಂದಷ್ಟು ಹೆಸರು ಮಾಡಿದ್ದಾರೆ.. ಈಗ ಅಲ್ಲಿಯೇ ಸಿನಿಮಾ ಬಿಡುಗಡೆ ಮಾಡುತ್ತಿರುವ ರಕ್ಷಿತ್ ರಶ್ಮಿಕಾ ಬಗ್ಗೆಯೂ ಮಾತನಾಡಿದ್ದಾರೆ.. ರಶ್ಮಿಕಾ ಜೊತೆ ಮಾತನಾಡ್ತೀರಾ ಅವರು ನಿಮಗೆ ಫೋನ್ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ ರಶ್ಮಿಕಾ ಜೊತೆ ನಾನು ಈಗಲೂ ಸಂಪರ್ಕದಲ್ಲಿದ್ದೇನೆ.. ಆಕೆಯ ಸಕ್ಸಸ್ ಬಗ್ಗೆ ನನಗೆ ಬಹಳ ಖುಷಿ ಇದೆ.. ಆಕೆಗೆ ಸದಾ ದೊಡ್ಡ ಕನಸುಗಳಿದ್ದವು..

ಆ ಕನಸುಗಳನ್ನು ಈಗ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ.‌. ಅವರ ಸಾಧನೆಗೆ ಭೇಷ್ ಎನ್ನಬೇಕು.. ಆಕೆಯ ಸಕ್ಸಸ್ ಬಗ್ಗೆ ಖುಷಿ ಇದೆ ಎಂದಿದ್ದಾರೆ.. ರಕ್ಷಿತ್ ಅವರ ಪ್ರಬುದ್ಧ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.. ಲವ್ ಬ್ರೇಕಪ್ ಆದರೆ ಅಥವಾ ಹುಡುಗಿ ಬಿಟ್ಟು ಹೋದರೆ ಅಥವಾ ಮೋಸ ಮಾಡಿ ಹೋದರೆ ಅವರ ಬಗ್ಗೆ ಕೋಪ ಬರುವುದು ಸಹಜ.. ಆದರೆ ರಕ್ಷಿತ್ ಶೆಟ್ಟಿ ಮಾತ್ರ ಯಾವುದೇ ಕೋಪ ಇಲ್ಲದೇ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದು ಇದನ್ನು ಕಂಡ ಅಭಿಮಾನಿಗಳು ಹುಡುಗರು ಯಾವತ್ತೂ ತಾವು ಮನಸಾರೆ ಪ್ರೀತಿಸಿದ್ದ ಹುಡುಗಿಯನ್ನು ಮರೆಯೋದಿಲ್ಲ ಎಂದಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.