ಕನ್ಮಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಆಗಿಂದ್ದಾಗೆ ಸುದ್ದಿ ಮಾಡುತ್ತಲೇ ಇರುತ್ತಾರೆ.. ಇದೀಗ ಮತ್ತೊಮ್ಮೆ ತನ್ನ ಮನಕದ್ದ ನಟನ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸುದ್ದಿಯಷ್ಟೇ ಅಲ್ಲ ಟ್ರೋಲ್ ಕೂಡ ಆಗುತ್ತಿದ್ದಾರೆ.. ಹೌದು ಎಲ್ಲರಿಗೂ ತಿಳಿದೇ ಇರುವಂತೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರು ಇಬ್ಬರೂ ಸಹ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಕೆಲ ವ್ಯಯಕ್ತಿಕ ಕಾರಣಗಳಿಂದಾಗಿ ತಮ್ಮ ನಿಶ್ಚಿತಾರ್ಥವನ್ನೇ ಮುರಿದು ಹಾಕಿದರು. ಆ ಬಳಿಕ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಟಾಪ್ ನಟಿಯರಲ್ಲಿ ಒಬ್ಬರಾದರು..

ಅಷ್ಟೇ ಅಲ್ಲದೇ ವಿಜಯ್ ಹಾಗೂ ರಶ್ಮಿಕಾ ನಡುವೆ ಪ್ರೀತಿಯಿದೆ ಅದೇ ಕಾರಣಕ್ಕಾಗಿ ರಕ್ಷಿತ್ ಜೊತೆಗಿನ ಸಂಬಂಧ ಮುರಿದುಕೊಂಡರು ಎಂದು ಟಾಲಿವುಡ್ ಅಂಗಳದಲ್ಲಿ ಮಾತು ಕೇಳಿ ಬಂತು.. ಆದರೆ ವಿಜಯ್ ಜೊತೆ ಆಗಾಗ ಜಿಮ್ ಗಳಲ್ಲಿ ಮುಂಬೈ ನ ಹೊಟೆಲ್ ನಲ್ಲಿ ಮಾಧ್ಯಮದ ಕ್ಯಾಮರಾಗೆ ಸಿಕ್ಕಿ ಬೀಳುವ ರಶ್ಮಿಕಾ ಮಂದಣ್ಣ ತಮ್ಮಿಬ್ಬರ ಸಂಬಂಧದ ಕುರಿತು ಯಾವುದೇ ಹೇಳಿಕೆ ನೀಡದೇ ಮುಗುಳು ನಕ್ಕು ಹೊರಟು ಹೋಗುವುದು ಹೊಸ ವಿಚಾರವೇನೂ ಅಲ್ಲ.. ಆದರೆ ಇದೆಲ್ಲದರ ನಡುವೆ ಕೆಲ ತಿಂಗಳುಗಳಲ್ಲಿಯೇ ತಮ್ಮ ಕ್ರಶ್ ಗಳನ್ನು ರಶ್ಮಿಕಾ ಬದಲಿಸುತ್ತಿದ್ದು ಇದೀಗ ಮತ್ತೊಬ್ಬ ನಟನ ಮೇಲೆ ಕ್ರಶ್ ಆಗಿದೆ.. ಆತನ ಜೊತೆ ಡೇಟ್ ಗೆ ಹೋಗಬೇಕು.. ಆತನ ಜೊತೆ ನಟಿಸಬೇಕು ಎಂದು ತಮ್ಮ ಮನದ ಆಸೆಯನ್ನು ತಿಳಿಸಿದ್ದಾರೆ..

ಹೌದು ಈ ಮೊದಲೂ ಸಹ ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಸಮಯದಲ್ಲಿ ನನಗೆ ತಮಿಳಿನ ಖ್ಯಾತ ನಟ ವಿಜಯ್ ಎಂದರೆ ನನಗೆ ಬಹಳ ಇಷ್ಟ.. ಅವರ ಮೇಲೆ ಕ್ರಶ್ ಆಗಿದೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು… ಅವರು ಆ ಹೇಳಿಕೆ ಕೊಡುತ್ತಿದ್ದಂತೆ ವಿಜಯ್ ಜೊತೆ ಅಭಿನಯಿಸುವ ಅವಕಾಶವೂ ದೊರೆಯಿತು.. ಆದರೀಗ ಮತ್ತೊಬ್ಬ ಖ್ಯಾತ ನಟನ ಮೇಲೆ ಕ್ರಶ್ ಆಗಿದೆ ಎಂದಿದ್ದಾರೆ.. ಕಳೆದ ಕೆಲ ದಿನಗಳ ಹಿಂದಷ್ಟೇ ತಮಿಳು ಮನೆಯ ಸೊಸೆ ಆಗಬೇಕು ಅಂತ ತುಂಬಾ ಇಷ್ಟ ಇದೆ.. ಅವರ ಮನೆ ಊಟ.. ಅವರ ಸಂಪ್ರದಾಯ ಎಲ್ಲವೂ ಇಷ್ಟ ಎಂದಿದ್ದರೆ.. ಅಷ್ಟೇ ಅಲ್ಲದೇ ತಮಿಳು ಕುಟುಂಬಕ್ಕೆ ಸೊಸೆ ಯಾಗುವುದಾದರೆ ನನಗೆ ಒಪ್ಪಿಗೆ ಎಂದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ರಶ್ಮಿಕಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು..

ಹೌದು ಇದೀಗ ರಶ್ಮಿಕಾಗೆ ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್ ಅವರ ಮೇಲೆ ಕ್ರಶ್ ಆಗಿದೆಯಂತೆ.. ಪ್ರಭಾಸ್ ಜೊತೆ ಡೇಟ್ ಗೆ ಹೋಗಬೇಕು ಎಂದು ತಮ್ಮ ಮನದ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.. ಅಷ್ಟೇ ಅಲ್ಲದೇ ಪ್ರಭಾಸ್ ಜೊತೆ ನಟಿಸುವ ಆಸೆ ಇದೆ ಎಂದಿದ್ದಾರೆ.. ತಮಿಳಿನ ವಿಜಯ್ ಮೇಲೆ ಕ್ರಶ್ ಎಂದಕೂಡಲೇ ಅವಕಾಶ ದೊರೆತಿತ್ತು.. ಇದೀಗ ಪ್ರಭಾಸ್ ಮೇಲೆ ಕ್ರಶ್ ಎಂದಿದ್ದು ಇವರ ಜೊತೆ ಅಭಿನಯಿಸಲು ಅವಕಾಶ ಸಿಗುವುದಾ ಕಾದು ನೋಡಬೇಕಿದೆ.. ಅಕಾಶ ಬೇಕಿದ್ದರೆ ನೇರವಾಗಿ ಕೇಳಿಕೊಳ್ಳಿ ಅದನ್ನು ಬಿಟ್ಟು ತಂಗಳಿಗೊಬ್ಬರನ್ನು ಕ್ರಶ್ ಎಂದು ಸಿನಿಮಾದಲ್ಲಿ ಅವಕಾಶ ಪಡೆಯುವ ನಿಮ್ಮ ಯೋಜನೆ ಸೂಪರ್ ಬಿಡಿ ಎನ್ನುತ್ತಿದ್ದಾರೆ ನೆಟ್ಟಿಗರು..

ಇನ್ನು ಇತ್ತ ಬಾಲಿವುಡ್ ಗೂ ಸಹ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ ಅವರಿಗೆ ಮುಂದೆ ಯಾವ ನಟನ ಮೇಲೆ ಕ್ರಶ್ ಆಗುವುದು.. ಆ ಮಾತನ್ನು ಕೇಳಿ ಯಾವ ಸಿನಿಮಾದಲ್ಲಿ ಅವಕಾಶ ಸಿಗುವುದೋ ಗೊತ್ತಿಲ್ಲ.. ಆದರೆ ಇದೀಗ ಪ್ರಭಾಸ್ ರನ್ನು ಕ್ರಶ್ ಎಂದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ರಕ್ಷಿತ್ ಆಯ್ತು.. ವಿಜಯ್ ದೇವರಕೊಂಡ ಆಯ್ತು.. ತಮಿಳಿನ ವಿಜಯ್ ಆಯ್ತು.. ಇದೀಗ ಪ್ರಭಾಸ್.. ಮುಂದೆ ಇನ್ಯಾರು ಎಂದು ಕಮೆಂಟ್ ಮಾಡುತ್ತಿದ್ದಾರೆ..