ಅತ್ತ ರೂಪೇಶ್ ಶೆಟ್ಟಿಗಾಗಿ ಅಳುತ್ತಿರುವ ಸಾನ್ಯಾ ಅಯ್ಯರ್.. ತನ್ನ ಹೆತ್ತ ತಾಯಿಯ ಬಗ್ಗೆ ಆಡಿದ ಮಾತು ನೋಡಿ..

0 views

ಬಿಗ್ ಬಾಸ್ ಕನ್ನಡ ಸೀಸನ್ 9 ಇದೀಗ ಶುರುವಾಗಿ ಯಶಸ್ವಿಯಾಗಿ 6 ವಾರಗಳನ್ನು ಪೂರೈಸಿದೆ. ಇನ್ನು ಈ ಬಿಗ್ ಬಾಸ್ ಕಾರ್ಯದಲ್ಲಿ ಸ್ಪರ್ಧಿಗಳು ಪ್ರೇಕ್ಷಕರ ಮನ ಒಲಿಸಿಕೊಳ್ಳಲು ಸದಾ ಒಂದೆಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ನಾವು ಪ್ರತಿ ಸೀಸನ್ ನಲ್ಲಿಯೂ ಸಹ ಪ್ರಣಯ ಪಕ್ಷಿಗಳನ್ನು ನೋಡುತ್ತೇವೆ. ಇನ್ನು ಬಿಗ್ ಬಾಸ್ ಕನ್ನಡ 9 ಸೀಸನ್ ನಲ್ಲಿಯೂ ಸಹ ತಮ್ಮ ಆಪ್ತ ಬಾಂಧವ್ಯದ ಮೂಲಕವೇ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿರುವ ಜೋಡಿ ಎಂದರೆ ಅದು ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ.

ಬಿಗ್ ಬಾಸ್ ಓಟಿಟಿಯಲ್ಲಿ ಉತ್ತಮ ಸ್ನೇಹಿತರಾಗಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದ್ದ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ಜೋಡಿ, ಬಿಗ್ ಬಾಸ್ ಟಿವಿ ಸೀಸನ್ ನಲ್ಲಿಯೂ ಸಹ ಮುಂದುವರೆದಿದೆ. ಈ ಜೋಡಿ ಎಂದರೆ ಪ್ರಕ್ಷಕರಿಗೂ ಸಹ ತುಂಬಾ ಇಷ್ಟ. ತಮ್ಮ ಆಟದ ಮೂಲಕ ಸಾನ್ಯಾ ಹಾಗೂ ರೂಪೇಶ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಇನ್ನು ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಮ್ಮ ಮನೆಯವರ ಬಗ್ಗೆ ಸ್ಫರ್ಧಿಗಳು ಮಾತನಾಡಿದ್ದಾರೆ. ಇನ್ನು ಈ ವೇಳೆ ಸಾನ್ಯಾ ಕೂಡ ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ.

ಹೌದು ಸಾನಿಯಾ ಅವರ ತಾಯಿ ಬೇರೆ ಯಾರು ಅಲ್ಲ, ಅವರು ಕೂಡ ಒಬ್ಬ ಸ್ಟಾರ್ ಕಲಾವಿದೆ. ಸಾನ್ಯಾ ಅಯ್ಯರ್ ಅವರ ತಾಯಿಯ ಹೆಸರು ದೀಪಾ ಅಯ್ಯರ್. ಕನ್ನಡ ಕಿರುತೆರೆಯ ಅನೇಕ ಧಾರವಾಹಿಗಳಲ್ಲಿ ದೀಪಾ ಅಯ್ಯರ್ ಬಣ್ಣ ಹಚ್ಚಿದ್ದಾರೆ. ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ನಾಯಕಿಯ ತಾಯಿಯ ಪಾತ್ರದಲ್ಲಿ ನಟಿ ದೀಪಾ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಇನ್ನು ಈ ಪಾತ್ರದ ಮೂಲಕ ದೀಪಾ ಅಯ್ಯರ್ ಸಾಕಷ್ಟು ಜನಪ್ರಿಯತೆ ಸಹ ಪಡೆದುಕೊಂಡಿದ್ದಾರೆ. ಸದ್ಯ ತಮ್ಮ ತಾಯಿ ದೀಪಾ ಅಯ್ಯರ್ ಬಗ್ಗೆ ಸಾನ್ಯಾ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

ನನ್ನ ತಾಯಿ ದೀಪಾ ಅಯ್ಯರ್ ಒಬ್ಬ ಕಲಾವಿದೆ ಎನ್ನುವ ವಿಷಯ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಅವರಿಗೆ ಯಾವಾಗಲೂ ತಾನು ಕಪ್ಪಾಗಿದ್ದೇನೆ ಎನ್ನುವ ಕೀಳರಿಮೆ ಇತ್ತು ಎಂದು ಸಾನ್ಯಾ ತಮ್ಮ ತಾಯಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಇಂದು ಇಷ್ಟು ಕನ್ನಡ ಮಾತನಾಡುತ್ತೇನೆ ಎಂದರೆ ಅದಕ್ಕೆ ನಮ್ಮ ತಾಯಿಯೇ ಕಾರಣ. ನಾನು ಅತಿ ಹೆಚ್ಚು ಜಗಳ ಮಾಡ್ತೀನಿ, ಅವರ ಮೇಲೆ ಕೂಗಾಡುತ್ತೇನೆ, ಅವರ ಮೇಲೆ ಕೋಪ ಮಾಡಿಕೊಳ್ಳುತ್ತೇನೆ, ಅದೆಲ್ಲಾ ಆದಮೇಲು ಸಹ ಮೊದಲು ನಾನೇ ಹೋಗಿ ಸಾರಿ ಕೇಳುತ್ತೇನೆ.

ನನ್ನ ಅಮ್ಮನಿಗೆ ತಾನು ಕಪ್ಪಾಗಿದ್ದೀನಿ ಎನ್ನುವ ಕೀಳರಿಮೆ ಇದೆ. ಇನ್ನೊಂದು ಚೂರು ತಾನು ಬೆಳ್ಳಾಗಿದ್ದಿದ್ದರೆ, ತಾನು ಹೀರೋಯಿನ್ ರೋಲ್ ಗಳಲ್ಲಿ ಅಭಿನಯಿಸಬಹುದಿತ್ತು ಎನ್ನುವ ಆಸೆ ಅವರಿಗೆ ಮೊದಲಿನಿಂದಲೂ ಇತ್ತು. ಇನ್ನು ಅವರು ಹೇಗೆ ಇದ್ದರೂ ಸಹ ಅವರೆ ನನ್ನ ಲೈಫ್ ಗೆ ದೊಡ್ಡ ಹೀರೋಯಿನ್. ಇನ್ನು ನಮ್ಮ ಅಮ್ಮ ಮೊದಲು ಬೆಳ್ಳಗಿದ್ದರೂ, ಆದರೆ ಒಮ್ಮೆ ಅವರು ಚೆನ್ನೈಗೆ ಹೋದಾಗ ಅವರಿಗೆ ಅದೇನೋ ಪಿಗ್ಮೆಂಟೇಶನ್ ಆಗಿ ಕಪ್ಪಾದರು. ಅದೊಂದು ಕೀಳರಿಮೆ ಅವರಿಗೆ ಇಂದಿಗೂ ಸಹ ಇದೆ. ಇನ್ನು ಇದೀಗ ಅವರ ಬಣ್ಣವೇ ಅವರಿಗೆ ಅವಕಾಶ ಮಾಡಿಕೊಟ್ಟಿದೆ, ಲಕ್ಷಣ ಎನ್ನುವ ಧಾರವಾಹಿಯ ಆಫ್ಹರ್ ಅವರಿಗೆ ಸಿಕ್ಕಿ, ಇದೀಗ ಜನ ಮೆಚ್ಚಿದ ಅಮ್ಮನಾಗಿ ಗುರುತಿಸಿಕೊಂಡಿದ್ದಾರೆ. ಐ ಲವ್ ಯೂ ಸೋ ಮಚ್ ಅಮ್ಮ ಎಂದಿದ್ದಾರೆ ಸಾನ್ಯಾ.

ಇನ್ನು ಸದ್ಯ ಸಾನ್ಯಾ ಬಿಗ್ ಬಾಸ್ ಮನೆಯಿಂದ ಆರನೇ ವಾರಕ್ಕೆ ತಮ್ಮ ಆಟ ಮುಗಿಸಿ ಮನೆಯಿಂದ ಹೊರ ಬಂದಿದ್ದಾರೆ. ಸದ್ಯ ಸಾನ್ಯಾ ಎಲಿಮಿನೇಷನ್ ಎಲ್ಲರಿಗೂ ಸಹ ಬಹಳ ಬೇಸರ ಹಾಗೂ ಶಾಕ್ ನೀಡಿದೆ. ಇನ್ನು ಸಾನ್ಯಾ ಅವರ ಎಲಿಮಿನೇಷನ್ ವಿಷಯ ರೂಪೇಶ್ ಶೆಟ್ಟಿ ಅವರಿಗೆ ಬಹಳ ಬೇಸರ ಉಂಟು ಮಾಡಿದೆ. ಇಷ್ಟು ದಿನ ಸಾನ್ಯಾ ಹಾಗೂ ರೂಪೇಶ್ ಜೊತೆಗಿದ್ದು, ಒಬ್ಬರಿಗೊಬ್ಬರು ಬಲವಾಗಿದ್ದರು, ಆದರೆ ಇದೀಗ ಸಾನಿಯಾ ಇಲ್ಲದೆ ರೂಪೇಶ್ ಯಾವ ರೀತಿ ತಮ್ಮ ಆಟ ಮುಂದುವರೆಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…