ಕೊರೊನಾದಿಂದ ಜೀವ ಕಳೆದುಕೊಂಡ ತಾಯಿ.. ಕೆನಡಾದಿಂದ ಓಡೋಡಿ ಬಂದ ಮಗ.. ಆದರೆ ಕೊನೆಗೆ ನಡೆದದ್ದೇ ಬೇರೆ.. ಈತ ನಿಜಕ್ಕೂ ಯಾರು ಗೊತ್ತಾ.. ಮನಕಲಕುವಂತಿದೆ..

0 views

ಕೊರೊನಾ ಎರಡನೇ ಅಲೆಯಿಂದ ಆಗುತ್ತಿರುವ ನೋವುಗಳು ಒಂದೆರೆಡಲ್ಲ.. ಸಾವಿರಾರು ಕುಟುಂಬಗಳು ಕೆಲಸವಿಲ್ಲದೇ ತಿನ್ನಲು ಊಟವಿಲ್ಲದೇ ಕಷ್ಟ ಪಡುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ.. ಇನ್ನೊಂದೆಡೆ ಕೊರೊನಾದಿಂದ ಪ್ರತಿದಿನವೂ ಸಾವಿರಾರು ಜೀವಗಳು ಇನ್ನಿಲ್ಲವಾಗುತ್ತಿರುವುದು ಆಯಾ ಕುಟುಂಬಗಳ ನೋವು ನಿಜಕ್ಕೂ ಯಾವ ಶತ್ರುಗಳಿಗೂ ಬಾರದಿರಲಿ ಎನಿಸುತ್ತಿದ್ದು ಕೆಲವೊಂದು ಘಟನೆಗಳು ಮನಸ್ಸನ್ನು ತಲ್ಲಣಗೊಳಿಸುತ್ತಿದೆ.. ಹೌದು ಕೊರೊನಾದಿಂದ ಜೀವ ಕಳೆದುಕೊಳ್ಳುತ್ತಿರುವುದು ಸರ್ಕಾರಕ್ಕೆ ಒಂದು ಸಂಖ್ಯೆ.. ಬೇರೆಯವರಿಗೆ ಒಂದು ಸುದ್ದಿ.. ಆದರೆ ಆ ಕುಟುಂಬಗಳಿಗೆ ಆ ಜೀವವೇ ಸರ್ವಸ್ವ.. ಆ ಜೀವವಿಲ್ಲದ ಬದುಕು ಶೂನ್ಯವಷ್ಟೇ.. ಹೌದು ಇಂತಹ ಸಾವಿರಾರು ಕುಟುಂಬಗಳು ಇಂದು ಕೊರೊನಾ ಕಾರಣದಿಂದ ಜೀವನ ಪೂರ ನೋವನ್ನು ಅನುಭವಿಸುವಂತಾಗಿದೆ..

ಆದರೆ ಇದೆಲ್ಲದಕ್ಕೂ ಮೀರಿ ಇಲ್ಲೊಂದು ಘಟನೆ ನಡೆದಿದೆ.. ಹೌದು ಹೆತ್ತ ತಾಯಿ ಕೊರೊನಾ ಸೋಂಕಿಗೆ ಗುರಿಯಾಗಿ ಕೊನೆಗೆ ಆಕೆ ಜೀವವನ್ನೂ ಸಹ ಕಳೆದುಕೊಂಡು ಬಿಟ್ಟಳು.. ಇತ್ತ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದ ಮಗ ತಾಯಿ ಇಲ್ಲವಾದ ಸುದ್ದಿ ಕೇಳಿ ಆಕೆಯನ್ನು ನೋಡಲು ಓಡೋಡಿ ಬಂದ ಆದರೆ ಕೊನೆಗೆ ನಡೆದದ್ದು ಮಾತ್ರ ನಿಜಕ್ಕೂ ದುರ್ಧೈವವೇ ಸರಿ.. ಹೌದು ಆತನ ಹೆಸರು ಶಿವಕಾಂತ್ ಪಾಟೀಲ್.. ಆತನ ತಾಯಿಯ ಹೆಸರು ಪಾರ್ವತಿ.. ಐವತ್ತೈದು ವರ್ಷ ವಯಸ್ಸಾಗಿತ್ತು.. ಬೀದರ್ ನ ಬಸವನಗರದ ನಿವಾಸಿಗಳು‌‌.. ಮೂಲತಹ ಆಂಧ್ರದ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ನವರಾದರೂ ಬೀದರ್ ನಲ್ಲಿ ಬಂದು ನೆಲೆಸಿದ್ದರು.. ಅತ್ತ ಶಿವಕಾಂತ್ ಎರಡು ವರ್ಷಗಳಿಂದ ಕೆನಡಾದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದ..

ಸುಂದರ ಸಂಸಾರಕ್ಕೆ ಯಾವುದೇ ಕೊರತೆ ಇರಲಿಲ್ಲ.. ಆದರೆ ದುರ್ವಿಧಿ ಇತ್ತ ಶಿವಕಾಂತ್ ಅವರ ತಾಯಿ ಪಾರ್ವತಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಇದೇ ಮೇ 22 ರಂದು ಇಹಲೋಕ ತ್ಯಜಿಸಿದ್ದರು.. ಈ ವಿಚಾರ ಕೆನಡಾದಲ್ಲಿನ ಮಗನನ್ನು ಒಮ್ಮೆಲೆ ಕುಗ್ಗಿಸಿಬಿಟ್ಟಿತು.. ತಾಯಿಯೆಂದರೆ ಜೀವ ಎನ್ನುತ್ತಿದ್ದ ಮಗ ವಿಷಯ ತಿಳಿದು ತಕ್ಷಣ ಕೆನಡಾದಿಂದ ಓಡೋಡಿ ಬಂದನು.. ತಾಯಿಯ ಮುಖವನ್ನು ನೋಡಲಾಗದೆ ಕೊರಗಿದನು.. ಆದರೆ ಬಹುಶಃ ತನ್ನ ತಾಯಿಯನ್ನು ನೋಡಲೇ ಬೇಕೆನಿಸಿತೋ ಏನೋ ಅತಿ ಚಿಕ್ಕ ವಯಸ್ಸಿನಲ್ಲಿಯೇ ಈತನೂ ಸಹ ಕೊರೊನಾದಿಂದಲೇ ಜೀವ ಕಳೆದುಕೊಂಡುಬಿಟ್ಟನು..

ಹೌದು ಕೆನಡಾದಿಂದ ಬಂದ ಶಿವಕಾಂತ್ ಗೂ ಸಹ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತು.. ಶಿವಕಾಂತ್ ನನ್ನು ಬ್ರಿಂಸ್ ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.. ಆದರೆ ಪರಿಸ್ಥಿತಿ ಗಂಭೀರವಾದ ಕಾರಣ ಶಿವಕಾಂತ್ ನನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಾನೂ ಸಹ ಕೊನೆಯುಸಿರೆಳೆದು ತನ್ನ ತಾಯಿಯ ಬಳಿಯೇ ಸೇರಿಬಿಟ್ಟ.. ಅಮ್ಮ ಮಗ ಇಬ್ಬರನ್ನೂ ಸಹ ಕೊರೊನಾ ಬಲಿ ಪಡೆದುಬಿಟ್ಟಿತು.. ಶಿವಕಾಂತ್ ಗೆ ಕೇವಲ ಮೂವತ್ತು ವರ್ಷ ವಯಸ್ಸಾಗಿದ್ದು ತಾಯಿಯನ್ನು ಬಿಟ್ಟಿರಲು ಸಾಧ್ಯವಾಗದು ಎನ್ನುತ್ತಿದ್ದ ಮಗ ಕೊನೆಗೆ ತಾಯಿಯ ಬಳಿಗೇ ಹೋಗಿಬಿಟ್ಟ. ಅಮ್ಮ ಮಗ ಇಬ್ಬರನ್ನು ಒಂದೇ ವಾರದಲ್ಲಿ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.. ತಾಯಿಯನ್ನು ನೋಡಲು ಬಂದು ತಾನೇ ಕೊನೆಯಾಗಿ ಹೋಗಿದ್ದು ನಿಜಕ್ಕೂ ದುರ್ದೈವವೇ ಸರಿ..