ನನ್ನ ಸ್ನೇಹಿತನ ಜೊತೆ ಹೋಗಿ ಮಲಗು.. ಅವನ ಹೆಂಡತಿ ನನ್ನ ಜೊತೆ ಮಲಗುತ್ತಾಳೆ ಎಂದ ಗಂಡ.. ಇಂತಾ ಸ್ಥಿತಿ ಯಾವ ಹೆಣ್ಣಿಗೂ ಬಾರದಿರಲಿ..‌ ಬೆಂಗಳೂರಿನಲ್ಲಿ ಮನಕಲಕುವ ಘಟನೆ.. ಈ ದಂಪತಿ ನಿಜಕ್ಕೂ ಯಾರು ಗೊತ್ತಾ?

0 views

ಮದುವೆ ಅನ್ನೋದು ಎಲ್ಲಾ ಬಾಂಧವ್ಯಗಳಿಗೂ ಮೀರಿದ್ದು.. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಂತರ ಅಪರಿಚಿತ ಹುಡುಗನನ್ನು ಮದುವೆಯಾಗ್ತಾಳೆ.. ಆದರೆ ಮದುವೆಯಾದ ಮರುಕ್ಷಣ ದಿಂದಲೇ ತನಗೆ ತಾಳಿ‌ ಕಟ್ಟಿದ ಗಂಡನೇ ಸರ್ಬಸ್ವವೆಂದು ಬದುಕುತ್ತಾಳೆ.. ಮುಂದಿನ ಸಂಪೂರ್ಣ ಜೀವನವನ್ನು ಆತನೊಂದಿಗೆ.. ಆತನಿಗಾಗಿ.. ಅತನ ಕುಟುಂಬಕ್ಕಾಗಿ.. ಆತನ ಮುಂದಿನ ಪೀಳಿಗೆಗಾಗಿ ಮುಡಿಪಾಗಿಡುತ್ತಾಳೆ.. ಇತ್ತ ಗಂಡನೂ ಸಹ ಮದುವೆಯಾದ ನಂತರ ವಿಶೇಷ ಸ್ಥಾನವೊಂದನ್ನು ಹೆಂಡತಿಗೆ ನೀಡುತ್ತಾನೆ.. ಮುಂದೆ ತನ್ನ ಜೀವ ಇರುವವರೆಗೂ ತನ್ನ ಹೆಂಡತಿ ಮಕ್ಕಳು ಹಾಗೂ ಕುಟುಂಬಕ್ಕಾಗಿ ತನ್ನ ಜೀವನವನ್ನೇ ಸವೆಸುತ್ತಾನೆ.. ಆದರೆ ಕೆಲ ಗಂಡಸರು ಮಾತ್ರ ಇದಕ್ಕೆ ಹೊರತಾಗಿರುತ್ತಾರೆ.. ಹೌದು ಹೆಣ್ಣನ್ನು ಮದುವೆಯಾಗಿ ತನ್ನತೀ ಟೆಗಳನ್ನು ತೀರಿಸಿಕೊಂಡು ಆಕೆಯನ್ನು ಕಸದಂತೆ ನೋಡುವ ನೀಚ ಮನಸ್ಸಿನ ವ್ಯಕ್ತಿಗಳೂ ಸಹ ಇದ್ದಾರೆ.. ಅದರಲ್ಲಿಯೂ ಈ ಹೆಣ್ಣಿನ ಸ್ಥಿತಿ ನಿಜಕ್ಕೂ ಯಾರಿಗೂ ಬಾರದಿರಲಿ..

ಹೌದು ತನ್ನ ಗಂಡನೇ ಹೆಂಡತಿಯನ್ನು ಸ್ನೇಹಿತನ ಜೊತೆ ಹೋಗಿ ಮಲಗು ಎನ್ನುವ ಗಂಡಸು ನಿಜಕ್ಕೂ ಎಲ್ಲಿಯೂ ಸಿಗಲಾರನು.. ಹೌದು ನನ್ನ ಸ್ನೇಹಿತನ ಹೆಂಡತಿ ನನ್ನ ಜೊತೆ ಮಲಗುತ್ತಾಳೆ.. ನೀನು ಅವನ ಬಳಿ ಹೋಗಿ ಮಲಗು ಎಂದು ಹೆಂಡತಿಯನ್ನು ಒತ್ತಾಯ ಮಾಡಿರುವ ಘಟನೆ ನಮ್ಮದೇ ಬೆಂಗಳೂರಿನಲ್ಲಿ ನಡೆದು ಹೋಗಿದ್ದು ಸಧ್ಯ ನೊಂದ ಯುವತಿ ತನ್ನ ಗಣ್ಡ ನಡೆದುಕೊಂಡ ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಆಕೆಯ ಕತೆ ನಿಜಕ್ಕೂ ಮನಕಲಕುವಂತಿದೆ.. ಹೌದು ಈತ ವಾಸಿಮ್ ಷರೀಫ್.‌ ಬಿಟಿಎಂ ಲೇಔಟ್ ನಿವಾಸಿ.. ಈತ ಕಳೆದ 2018 ರಲ್ಲಿ ಬನಶಂಕರಿ ಮೂಲದ ಯುವತಿಯನ್ನು ಮದುವೆಯಾಗಿದ್ದ.. ಮದುವೆಯಾದ ನಂತರ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಆತ ಹೆಂಡತಿಯನ್ನು ಪ್ರವಾಸ ಅನ್ನೋ ನೆಪ ಮಾಡಿ ಬೇರೆ ಬೇರೆ ಊರುಗಳಿಗೆ ಕರೆದುಕೊಂಡು ಹೋಗುತ್ತಿದ್ದ..

ಮೊದಲಿಗೆ ಗೋವಾಗೆ ಕರೆದುಕೊಂಡ ಹೋದ ಸಮಯದಲ್ಲಿ ಹೆಂಡತಿಗೆ ಕುಡಿ ಎಂದು ಬಹಳ ಒತ್ತಾಯ ಮಾಡಿ ಆಕೆಗೆ ನೋವು ನೀಡಿದ್ದ.. ಆದರೆ ಆಕೆ ಅದಕ್ಕೆ ನಿರಾಕರಿಸಿದ ಸಮಯದಲ್ಲಿ ಆಕೆಯ ಮೇಲೆ ಕೈಮಾಡಲು ಸಹ ಮುಂದಾಗಿದ್ದನು.. ನಂತರ ವಾಪಸ್ ಬೆಂಗಳೂರಿಗೆ ಬಂದು ಎರಡನೇ ಬಾರಿಗೆ ಊಟಿಗೆ ಕರೆದುಕೊಂಡು ಹೋಗಿದ್ದನು.. ಅಲ್ಲಿ ಸ್ನೇಹಿತರನ್ನು ಸಹ ಕರೆಸಿಕೊಂಡಿದ್ದು ಅಲ್ಲಿ ಪಾರ್ಟಿ ಮಾಡಿದ್ದನು.. ಪಾರ್ಟಿಯಲ್ಲಿ ತನ್ನ ಹೆಂಡತಿಯನ್ನೇ ಎಲ್ಲವನ್ನೂ ಸಪ್ಲೈ ಮಾಡು ಎಂದು ಒತ್ತಾಯ ಮಾಡಿ ಮಾಡಿಸಿಕೊಂಡಿದ್ದನು.. ಆ ಸಮಯದಲ್ಲಿ ಪತ್ನಿಗೆ ತನ್ನ ಸ್ನೇಹಿತನ ಜೊತೆ ಹೋಗಿ ಮಲಗು.. ಅವನ ಹೆಂಡತಿ ನನ್ನ ಜೊತೆ ಬಂದು ಮಲಗುತ್ತಾಳೆ ಎಂದಿದ್ದನು.. ಆದರೆ ಅದಕ್ಕೆಲ್ಲಾ ಒಪ್ಪದ ಪತ್ನಿಗೆ ಪ್ರತಿದಿನವೂ ಒಂದಲ್ಲಾ ಒಂದು ನೋವು ನೀಡುತ್ತಲೇ ಇದ್ದನು..

ಬಳಿಕ ಆಕೆ ಈ ಎಲ್ಲಾ ವಿಚಾರವನ್ನು ತನ್ನ ಸ್ವಂತ ಗಂಡನೇ ಮತ್ತೊಬ್ಬನ ಜೊತೆ ಹೋಗಿ ಮಲಗು ಎನ್ನುವ ವಿಚಾರವನ್ನು ತನ್ನ ಅತ್ತೆ ಮಾವನಿಗೆ ತಿಳಿಸುತ್ತಾಳೆ.. ಆದರೆ ಇದಕ್ಕೆಲ್ಲಾ ಪ್ರತಿಕ್ರಿಯೆ ನೀಡದ ಅತ್ತೆ ಮಾವ ಆಕೆಯದ್ದೇ ತಪ್ಪು ಎನ್ನುವಂತೆ ಆಕೆಗೆ ಬೈದಿದ್ದಾರೆ.. ಇಷ್ಟಕ್ಕೇ ಮುಗಿಯದ ಕತೆ ಆತ ಬಿಟಿಎಂ ಲೇಔಟ್ ನಲ್ಲಿ ಇರುವ ತನ್ನ ಮನೆಗೆ ತನ್ನ ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡಿ ಹೆಂಡತಿಯನ್ನು ಕೆಲಸದವಳಂತೆ ನಡೆಸಿಕೊಳ್ಳುತ್ತಿರಿತ್ತಾನೆ.. ಮಾನಸಿಕವಾಗಿಯೂ ನೋವು ನೀಡುತ್ತಿರುತ್ತಾನೆ.. ನಂತರ ಈಕೆ ಎರಡು ಬಾರಿ ಗರ್ಭಿಣಿಯಾಗಿದ್ದು ಎರಡೂ ಬಾರಿಯೂ ಆತ ಒತ್ತಾಯ ಮಾಡಿ ಅದನ್ನು ತೆಗೆಸಿಬಿಟ್ಟಿದ್ದಾನೆ..

ಆದರೆ ಆ ಬಳಿಕ ಮತ್ತೊಮ್ಮೆ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಆಕೆ ಜನ್ಮ ನೀಡಿದ್ದಾಳೆ.. ಮಗು ಹುಟ್ಟಿದ ನಂತರವೂ ಬದಲಾಗದ ಗಂಡ ಆ ಮಗು ನನ್ನ ರೀತಿ ಇಲ್ಲ.. ಅದು ನನ್ನದಲ್ಲ ಎಂದು ಬಹಳಷ್ಟು ನೋವು ನೀಡಿದ್ದಾನೆ.. ಪತ್ನಿ ಹಾಗೂ ಮಗುವನ್ನು ಮನೆಯಿಂದ ಹೊರ ಹಾಕಿದ್ದಾನೆ.. ನಂತರ ಆಕೆ ಶಿವಾಜಿನಗರದ ಮಹಿಳಾ ಠಾಣೆಯಲ್ಲಿ ಗಂಡನ ವಿರುದ್ಧ ದೂರು ದಾಖಲು ಮಾಡಿದ್ದಾಳೆ.. ಆದರೆ ಪ್ರಕರಣ ದಾಖಲು ಮಾಡಿಕೊಂಡು ಹತ್ತು ದಿನಗಳು ಕಳೆದರೂ ಸಹ ಆತನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.. ಇನ್ನಾದರೂ ಆ ಹೆಣ್ಣು ಮಗಳಿಗೆ ನ್ಯಾಯ ಸಿಗುವಂತಾಗಲಿ.. ಈ ರೀತಿ ಹೆಂಡತಿಗೆ ನೋವು ನೀಡುವ ಗಂಡಂದಿರಿಗೆ ಇದೊಂದು ಪಾಠವಾಗುವಂತಾಗಲಿ..