ಎಂಟು ವರ್ಷ ಪ್ರೀತಿಸಿದ ಹುಡುಗಿಯಿಂದ ದೂರಾದ ಕಾರ್ತಿಕ್..‌ ಅಷ್ಟಕ್ಕೂ ಆ ಹುಡುಗಿ ಯಾರು..

0 views

ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಗಳ ಜೀವನದ ಸ್ಟೋರಿ ಒಬ್ಬರಿಗಿಂತ ಒಬ್ಬರದ್ದು ವಿಭಿನ್ನವಾಗಿದೆ.. ಬಿಗ್ ಬಾಸ್ ಮನೆಯಲ್ಲಿ ಎಷ್ಟೋ ವಿಚಾರಗಳು ಹೊರಗೆ ಬರತ್ತೆ..
ಎಷ್ಟೋ ವರ್ಷಗಳಿಂದ ಮನಸ್ಸಿನಲ್ಲಿಯೇ ಇಟ್ಟುಕೊಂಡ ವಿಚಾರಗಳು ಬಯಲಾಗತ್ತೆ.. ಈ ಬಾರಿಯ ಬಿಗ್ ಬಾಸ್ ಸೀಸನ್ ಎಷ್ಟು ಹಿಟ್ ಆಯ್ತೋ ಅಷ್ಟೇ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಫೇಮಸ್ ಆಗಿದ್ದಾರೆ.. ಅವರ ಅಭಿಮಾನಿ ಬಳಗವೂ ದೊಡ್ಡದಾಗ್ತಾ ಇದೆ.. ಈ ಬಾರಿಯ ಸೀಸನ್ ನಲ್ಲಿ ಕಾಣಿಸಿಕೊಂಡು ಹೆಚ್ಚು ಫೇಮಸ್ ಆದ ಹಾಗೆ ಮೊದಲಿನಿಂದ ಇಲ್ಲಿಯವರೆಗೆ ಅತ್ಯುತ್ತಮವಾಗಿ ಆಡುತ್ತಿರುವ ಸ್ಪರ್ಧಿ ಎಂದರೆ ಅದು ಕಾರ್ತಿಕ್ ಮಹೇಶ್.. ಬಿಗ್ ಬಾಸ್ ನಲ್ಲಿ ನಗುನಗುತ್ತಾ ಟಾಸ್ಕ್ ಗಳನ್ನ ಆಡುತ್ತಾ.. ಎಲ್ಲಾ ಸ್ಪರ್ಧಿಗಳೊಂದಿಗೆ ಬೆರೆಯುತ್ತಿರುವ ಕಾರ್ತಿಕ್ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ.. ನೋವುಗಳ ಜೊತೆಯಲ್ಲೇ ಜೀವನವನ್ನ ಸಾಗಿಸ್ತಾ ಇದ್ದಾರೆ.. ಇಂತಹ ಕಾರ್ತಿಕ್ ರಾಷ್ಟ್ರಪ್ರಶಸ್ತಿ ಪಡೆದ ನಟ ಅಂದ್ರೆ ನೀವು ನಂಬಲೇಬೇಕು.. ಹಾಗಾದರೆ ವೀಕ್ಷಕರೆ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಮಹೇಶ್ ನಿಜಕ್ಕೂ ಯಾರು? ಈ ಹಿಂದೆ ಯಾವ ಯಾವ ಧಾರಾವಾಹಿಗಳಲ್ಲಿ ಅಭಿನಯಿಸಿದ್ರು ಗೊತ್ತಾ.. ಅವರ ಜೀವನದ ಕಣ್ಣೀರಿನ ಕತೆಯೇನು? ಪ್ರೀತಿಸಿದ ಹುಡುಗಿ ಕೈಕೊಟ್ಟಿದ್ದೇಕೆ? ಕಾರ್ತಿಕ್ ಅವರ ಹಿನ್ನೆಲೆ ಏನು?
ಆ ಒಂದು ಸ್ಟೋರಿ ಇಲ್ಲಿದೆ ನೋಡಿ..  ಹೌದು ವೀಕ್ಷಕರೆ ಎಷ್ಟೋ ಜನರ ಮನಸನ್ನ ಬಿಗ್ ಬಾಸ್ ಮನೆ ಹಗುರ ಮಾಡಿ ಕಳಿಸುತ್ತೆ..ಈಗ ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಸಮಯ ಶುರು ಆಗಿದೆ.. ಬಿಗ್ ಬಾಸ್ ನಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಎರಡಕ್ಕೂ ಟಾಸ್ಕ್ ನೀಡಲಾಗುತ್ತೆ.. ಬಿಗ್ ಬಾಸ್ ಮನೆಯಲ್ಲಿ ಐವತ್ತು ದಿನ ಪೂರೈಸಿ ಬಂದಿರೋರಿಗೆ ಮನಸ್ಸಿನ ಭಾರ ಅದಾಗಲೇ ಹೆಚ್ಚಾಗಿರುತ್ತೆ.. ಬಿಗ್ ಬಾಸ್ ಹಗುರ ಮಾಡಿಕೊಳ್ಳಲು ಅವಕಾಶ ಕೊಟ್ಟ ತಕ್ಷಣವೇ ಹಲವು ಕಷ್ಟಗಳು ಮನಸ್ಸಿನ ಆಸೆಗಳು ಬೇಸರದ ಸಂಗತಿಗಳನ್ನೆಲ್ಲಾ ಇದ್ದಕಿದ್ದ ಹಾಗೆ ಹೊರಗೆ ಹಾಕೇ ಹಾಕ್ತಾರೆ.. ಅದು ಕ್ಯಾಮರಾ ಮುಂದೆ ಎಂಬುದು ಅವರಿಗೆ ನೆನಪಿರೋದಿಲ್ಲ.. ಆ ನೋವಷ್ಟೇ ಕಾಣಿಸುತ್ತಾ ಇರತ್ತೆ.. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಈ ಒಂದು ಟಾಸ್ಕ್ ನಲ್ಲಿ ಕಾರ್ತಿಕ್ ಅವರೂ ಸಹ ತಮ್ಮ ನೋವಿನ ದಿನಗಳನ್ನ ನೆನೆದುಕೊಂಡರು.. ಬಿಗ್ ಬಾಸ್ ನಲ್ಲಿ ತುಂಬಾನೇ ಲವಲವಿಕೆಯಿಂದ ಮೊದಲ ದಿನದಿಂದಲೂ ಆಕ್ಟೀವ್ ಆಗಿ ಮನೆಯ ಚಟುವಟಿಯಲ್ಲಿ ಹಾಗೆ ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡುತ್ತಾ ಬಂದಿದ್ದಾರೆ ಕಾರ್ತಿಕ್ ಮಹೇಶ್.. ಬಿಗ್ ಬಾಸ್ ನವರೆಗೆ ಜೀವನದ ಜರ್ನಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ..

ಕಾರ್ತಿಕ್ ಮಹೇಶ್ ಮೂಲತಃ ಚಾಮರಾಜನಗರದವರು.. ಚಾಮರಾಜನಗರದಲ್ಲಿ ಹುಟ್ಟಿರುವ ಅವರು ಓದಿದ್ದು ಬೆಳೆದಿದ್ದು ಮೈಸೂರಿನಲ್ಲಿ.. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಕಡೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ರು.. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ ಎಸ್ ಸಿ ಮಾಡಿದ್ದಾರೆ.. ಕಾಲೇಜು ದಿನಗಳಿಂದಲೂ ಅವರಿಗೆ ನಟನೆ ಮೇಲೆ ಸಾಕಷ್ಟು ಒಲವಿತ್ತು.. ನಾಟಕ ಮೂಕಾಭಿನಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಾರ್ತಿಕ್ ಆಸಕ್ತಿಯನ್ನ ಹೊಂದಿದ್ರು.. ಆದರೆ ಬಣ್ಣದ ಜಗತ್ತಿಗೆ ಬರೋದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ.. ನಟನಾಗಿ ಗುರುತಿಸಿಕೊಳ್ಳಬೇಕು.. ಹೆಸರು ಮಾಡಬೇಕು ಅಂತ ಆಸೆ ಇಟ್ಟುಕೊಂಡು ಮನರಂಜನಾ ಕ್ಷೇತ್ರಕ್ಕೆ ಕಾಲಿಡ್ತಾರೆ.. ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದು ಸೀರಿಯಲ್ ಗಳಿಗೆ ಹಲವಾರು ಆಡಿಷನ್ ಕೊಡ್ತಾರೆ.. ಹಲವಾರು ಪ್ರಯತ್ನದ ನಂತರ ಐಕ್ಕಿದ್ದೇ ಖುಷಿ ಎನ್ನುವ ಕನ್ನಡ ಸೀರಿಯಲ್.. ಹೌದು ಮಾಡ್ವ್ಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿ ನಟನಾಗಿಯೂ ಎಂಟ್ರಿ ಕೊಡ್ತಾರೆ.. ಇದುವರೆಗೆ ಕಾರ್ತಿಕ್ ಅವರು ಹತ್ತಕ್ಕಿಂತ ಅಧಿಕ ಕನ್ನಡ ಧಾರಾವಾಹಿಯಲ್ಲಿ ನಟಿಸಿದ್ದಾರೆ.. ಕನ್ನಡದ ಹಿಟ್ ಧಾರಾವಾಹಿಗಳಾದ ಅಕ್ಕ.. ಬಂಗಾರಿ.. ಇಂತಿ ನಿಮ್ಮ ಆಶಾ.. ರಾಜಿ.. ಪುಟ್ಟಕ್ಕನ ಮಕ್ಕಳು.. ಖುಷಿ.. ಮಹಾಕಾಳಿ.. ದೇವಯಾನಿ.. ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.. ಈ ಎಲ್ಲಾ ಧಾರಾವಾಹಿಗಳಲ್ಲೂ ಕಾರ್ತಿಕ್ ಮೆಚ್ಚುಗೆಯನ್ನ ಗಳಿಸಿದ್ದಾರೆ.. ತಮ್ಮ ನಟನೆಯ ಮೂಲಕವಾಗಿ.. ತಮ್ಮ ಪಾತ್ರದ ಮೂಲಕವಾಗಿ ಧಾರಾವಾಹಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.. ಸ್ಟಾರ್ ಗಳ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಿ ಖುಷಿ ಪಟ್ಟಿರುವ ಕಾರ್ತಿಕ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ತಾನೂ ಒಂದು ಸಿನಿಮಾ ಮಾಶ್ಬೇಕು.. ಆ ಸಿನಿಮಾ ಹಿಟ್ ಆಗಿ ತನ್ನ ಹೆಸರನ್ನೂ ಕೂಡ ಜನರು ಕೂಗ್ಬೇಕು.. ಅನ್ನೋ ಆಸೆಯನ್ನ ಇಟ್ಕೊಂಡಿದ್ದಾರೆ.. ಅದೇ ಹಾದಿಯಲ್ಲಿರುವ ಕಾರ್ತಿಕ್ ಅವರು.. ಈಗಾಗಲೇ ಒಂದು ಸಿನಿಮಾದಲ್ಲಿಯೂ ಸಹ ಕಾಣಿಸಿಕೊಂಡಿದ್ದಾರೆ.. ಖ್ಯಾತ ನಟ ಸುನೀಲ್ ಪುರಾಣಿಕ್ ಅವರ ಪುತ್ರ.. ಸಾಗರ್ ಪುರಾಣಿಕ್ ನಿರ್ದೇಶನ ಮಾಡಿರುವ ಡೊಳ್ಳು ಸಿನಿಮಾದಲ್ಲಿ ನಾಯಕನಟನಾಗಿ ಕಾರ್ತಿಕ್ ನಟಿಸಿದ್ದಾರೆ.. ಇವರು ಡೊಳ್ಳು ಅನ್ನುವ ಚಿತ್ರಕ್ಕಾಗಿ ಸ್ವತಃ ತಾವೇ ಡೊಳ್ಳು ಬಡಿಯೋದನ್ನ ಸಹ ಕರಗತ ಮಾಡಿಕೊಂಡಿದ್ರು.. ವಿಶೇಷ ಅಂದ್ರೆ.. ಕಾರ್ತಿಕ್ ಅಭಿನಯಿಸಿರುವ ಅವರ ಮೊದಲ ಚಿತ್ರಕ್ಕೇನೆ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ.. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.. ಇತ್ತೀಚೆಗೆ ಅವರು ಕಲರ್ಸ್ ಕನ್ನಡ ವಾಹಿನಿಯ ಅಂತರಪಟ ಧಾರಾವಾಹಿಯಲ್ಲಿರವಿ ಪಾತ್ರವನ್ನ ಮಾಡ್ತಾ ಇದ್ರು..

ಡೊಳ್ಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಬಂದ ನಂತರ ಏನ್ ಮಾಶ್ಬೇಕು ಅಂತ ಯೋಚನೆ ಮಾಡ್ತಿದ್ದಾಗ ಬಿಗ್ ಬಾಸ್ ಅವಕಾಶ ಸಿಕ್ಕಿದೆ.. ಬಿಗ್ ಬಾಸ್ ಮೂಲಕವಾಗಿ ಕಾರ್ತಿಕ್ ಅವರ ಅಭಿಮಾನಿ ಬಳಗ ಮತ್ತಷ್ಟು ದೊಡ್ಡದಾಗಿದೆ ಅಂತ ಹೇಳಬಹುದು‌‌.. ಬಿಗ್ ಬಾಸ್ ನಲ್ಲೂ ಕಾರ್ತಿಕ್ ಅವರು ಕಮಾಲ್ ಮಾಡಿದ್ದಾರೆ.. ಇನ್ನು ಇದೇ ಬಿಗ್ ಬಾಸ್ ನಲ್ಲಿ ಟಾಸ್ಕ್ ಒಂದರಲ್ಲಿ ಕಾರ್ತಿಕ್ ಅವರು ತಮ್ಮ ಜೀವನದ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ.. ತಮ್ಮ ಜೀವನದ ನೋವಿನ ಘಟನೆಗಳನ್ನ ನೆನಪಿಸಿಕೊಂಡಿದ್ದಾರೆ.. ತಮ್ಮ ಹಳೆಯ ಪ್ರೀತಿಯ ಬಗ್ಗೆಯೂ ಮಾತನಾಡಿದ್ದಾರೆ.. ಕಾರ್ತಿಕ್ ಅವರಿಗೆ ಈಗಾಗಲೇ ಲವ್ ಆಗಿದ್ದು ಬ್ರೇಕಪ್ ಕೂಡ ಆಗಿದೆಯಂತೆ.. ಈ ಬಗ್ಗೆ ಅವರು ಮಾತನಾಡ್ತಾ 2021 ನನ್ನ ಬದುಕನ್ನು ಬದಲಿಸಿದ ವರ್ಷ.. ನಾನು ಪ್ರೀತಿಸಿದ ಹುಡುಗಿ.. ನನ್ನಿಂದ ದೂರ ಆದ್ಳು.. ನಾವಿಬ್ರು ಒಂಭತ್ತು ವರ್ಷದಿಂದ ಪ್ರೀತಿ ಮಾಡ್ತಾ ಇದ್ವಿ.. ನಾನು ಅದೊಂದು ವಿಷ್ಯಕ್ಕೆ ಅವಳಿಗೆ ಕ್ಷಮೆ ಕೇಳಿದ್ದೆ.. ನಾನೇ ತಪ್ಪು ಮಾಡಿರಬಹುದು.. ಅವಳೇ ತಪ್ಪು ಮಾಡಿರಬಹುದು.. ಆದರೆ ನಾನು ಅವಳಿಗೆ ಹೊಡೆದಿದ್ದೆ.. ಅದಕ್ಕೆ ಈ ಹಿಂದೆಯೂ ಅವಳಿಗೆ ಕ್ಷಮೆ ಕೇಳಿದ್ದೆ.. ಈಗಲೂ ಕ್ಷಮೆ ಕೇಳ್ತೀನಿ ಅಂತ ಕಾರ್ತಿಕ್ ಅವರು ಹೇಳಿಕೊಂಡಿದ್ದಾರೆ.. ಆದರೆ ಕಾರ್ತಿಕ್ ಅವರು ಪ್ರೀತಿ ಮಾಡಿರುವ ಹುಡುಗಿ ಯಾರು ಅಂತ ಹೇಳಿಲ್ಲ.. ಆದರೆ ಆ ಒಂದು ಪ್ರೀತಿ ಬ್ರೇಕಪ್ ಆದ ಕೆಲವೇ ದಿನಗಳಲ್ಲಿ ಕಾರ್ತಿಕ್ ಅವರಿಗೆ ಮತ್ತೆರೆಡು ಶಾಕ್ ಎದುರಾಗಿತ್ತು.. ಕಾರ್ತಿಕ್ ಅವರು ಹದಿಮೂರು ವರ್ಷಗಳಿಂದ ಸಾಕಿದ್ದ ಮುದ್ದಿನ ಶ್ವಾನವೂ ಕೂಡ ಅದೇ ಸಮಯದಲ್ಲಿ ತೀರಿಕೊಳ್ಳುತ್ತೆ.. ಅಷ್ಟೇ ಅಲ್ಲ.. ಅದಾದ ಕೆಲವೇ ತಿಂಗಳಲ್ಲಿ ಕಾರ್ತಿಕ್ ಅವರು ತಂದೆಯನ್ನೂ ಕೂಡ ಕಳೆದುಕೊಳ್ತಾರೆ.. ಈ ಬಗ್ಗೆ ಮಾತನಾಡಿದ್ದ ಅವರು ಅಪ್ಪನಿಗೆ ಖುಷಾರಿಲ್ಲದಿದ್ದಾಗ ಆಸ್ಪತ್ರೆಯಿಂದ ಅವರನ್ನ ಹುಷಾರಾಗಿ ಕರೆದುಕೊಂಡು ಬರ್ತೀನಿ ಅಂತ ಅಮ್ಮನಿಗೆ ಹೇಳಿದ್ದೆ.. ಆದರೆ ಅಪ್ಪ ಆರೋಗ್ಯವಾಗಿ ಮನೆಗೆ ಬರ್ಲಿಲ್ಲ.. ನಾನು ಅಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗ್ಲಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.. ನನ್ನ ತಾಯಿ ಯಾವಾಗ್ಲೂ ಒಂಟಿಯಾಗಿರ್ಲಿಲ್ಲ.. ಈಗ ಅವರು ಒಂಟಿಯಾಗುವ ಹಾಗೆ ಆಯ್ತು ಅಂತ ಕಾರ್ತಿಕ್ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.. ಇನ್ನು ಕಾರ್ತಿಕ್ ಅವರು ತನ್ನ ತಂದೆಯ ಬಗ್ಗೆ ಮಾತನಾಡುತ್ತಾ ನನ್ನ ತಂದೆಗೆ ಇನ್ನು ಅರ್ಧ ಗಂಟೆಯಲ್ಲಿ ಹೃದಯಾಘಾತ ಆಗತ್ತೆ ಅಂತ ವೈದ್ಯರು ಹೇಳುತ್ತಲೇ ಬಂದಿದ್ರು.. ಮಧ್ಯ ರಾತ್ರಿ ಬೆಳಗಿನ ಜಾವ ನನಗೆ ಈ ರೀತಿ ಫೋನ್ ಕರೆ ಬರ್ತಾ ಇತ್ತು..

ಆಸ್ಪತ್ರೆ ಮುಂದೆ ಬಂದು ನಿಂತ್ರೆ ನಿಮ್ಮ ತಂದೆಗೆ ಇನ್ನು ಹೃದಯಾಘಾತ ಆಗಿಲ್ಲ ಅಂತ ಹೇಳ್ತಿದ್ರು ಅಂತ ಮನಸ್ಸಿನ ನೋವನ್ನ ಕಾರ್ತಿಕ್ ಹೊರಗಡೆ ಹಾಕಿದ್ದಾರೆ.. ಅದು 2೦16 ರ ಸಮಯ.. ಆ ಸಮಯದಲ್ಲಿ ಅಕ್ಕ ಎನ್ನುವ ಸೀರಿಯಲ್ ನಲ್ಲಿ ಕಾರ್ತಿಕ್ ನಟಿಸ್ತಾ ಇದ್ರು.. ಅದೇ ಸಮಯದಲ್ಲಿ ಕಾರ್ತಿಕ್ ಅವರ ತಂದೆಗೆ ಸ್ಟ್ರೋಕ್ ಆಗಿತ್ತು.. ಕಿಡ್ನಿ ಕಣ್ಣು ಲಿವರ್ ಎಲ್ಲದಕ್ಕೂ ಸಮಸ್ಯೆ ಬಂದಿತ್ತು.. ಆನಂತರದಲ್ಲಿ ಅವರು ಕುಡಿಯೋದನ್ನೇ ಬಿಟ್ಟಿದ್ದರು.. ಇದಾಗಿ ಹುಷಾರಾದ ಕಾರ್ತಿಕ್ ಅವರ ತಂದೆ ಮೂರ್ನಾಲ್ಕು ವರ್ಷ ಪೇನ್ ಕಿಲ್ಲರ್ ತೆಗೆದುಕೊಂಡೇ ಮಲಗ್ತಾ ಇದ್ರು.‌‌. ಆದರೆ ಅದರಿಂದ ಮತ್ತಷ್ಟು ಅಡ್ಡ ಪರಿಣಾಮಗಳು ಎದುರಾಯ್ತು.. ಕಿಡ್ನಿ ಡಯಾಲಿಸಿಸ್ ಮಾಡುವವರೆಗೂ ಸಮಸ್ಯೆ ಜಾಸ್ತಿ ಆಯ್ತು.. ಅದೇ ಸಮಯದಲ್ಲಿ ದೇಶದೆಲ್ಲೆಡೆ ಕೊರೊನಾ ಹಬ್ಬೋದಕ್ಕೆ ಶುರುವಾಗಿತ್ತು.. ಹೀಗಾಗಿ ಕಾರ್ತಿಕ್ ಅವರ ತಂದೆಯ ಆರೋಗ್ಯ ತೀರಾ ಅಂದರೆ ತೀರಾ ಹದಗೆಟ್ಟು ಹೋಗಿತ್ತು.. ಒಂದು ಕಡೆ ಕಾರ್ತಿಕ್ ಅವರ ತಂದೆ ಎಮರ್ಜೆನ್ಸಿ ವಾರ್ಡ್ ನಲ್ಲಿದ್ರೆ.. ಅವರನ್ನ ನೋಡೋದಕ್ಕೆ ಕಾರ್ತಿಕ್ ಅವರು ಬರ್ತಾ ಇದ್ರು.. ಹೇಗಾದರು ಮಾಡಿ ತಂದೆಯನ್ನ ಉಳಿಸಿಕೊಡಿ ಅಂತ ಡಾಕ್ಟರ್ ಕಾಲಿಗೂ ಬಿದ್ದಿದ್ರಂತೆ.. ಆ ಸಮಯದಲ್ಲಿ ಕಾರ್ತಿಕ್ ಅವರು ಆರ್ಥಿಕವಾಗಿಯೂ ಕಷ್ಟದಲ್ಲಿದ್ರು.. ಅಂತಿಮವಾಗಿ ಕಾರ್ತಿಕ್ ಅವರಿಗೆ ತಮ್ಮ ತಂದೆಯನ್ನ ಉಳಿಸಿಕೊಳ್ಳಲು ಸಾಧ್ಯ ಆಗ್ಲಿಲ್ಲ.. ಆ ಸಮಯದಲ್ಲಿ ಕಾರ್ತಿಕ್ ಅವರು ಎದುರಿಸಿದ್ದ ಮತ್ತೊಂದು ಕಷ್ಟ ಅಂತ ಹೇಳಿದ್ರೆ ಅದು ಕೊರೊನಾ ಸಮಯ.. ಹೀಗಾಗಿ ಅಂತಿಮ ಸಂಸ್ಕಾರ ಮಾಡೋದಕ್ಕೂ ಸರಿಯಾದ ಅವಕಾಶ ಸಿಗ್ಲಿಲ್ಲ.. ದೂರದಿಂದ ಹಾರ ಹಾಕಿ ಕಳುಹಿಸಿ ಕೊಟ್ಟಿದ್ದನ್ನ ಕಾರ್ತಿಕ್ ಅವರು ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.. ಎಲ್ಲಾ ಕಷ್ಟಗಳನ್ನ ಎದುರಿಸಿದ ನಂತರದಲ್ಲಿ ಸಧ್ಯ ಕಾರ್ತಿಕ್ ಅವರು ಬಿಗ್ ಬಾಸ್ ಮನೆವರೆಗೂ ಬಂದಿದ್ದಾರೆ.. ಇನ್ನು ಒಂಭತ್ತು ವರ್ಷದ ಬ್ರೇಕಪ್ ನಂತರ ಮತ್ತೊಂದು ಹುಡುಗಿಯ ಜೊತೆ ಲವ್ ನಲ್ಲಿ ಇರುವಂತೆ ಕಾಣಿಸ್ತಾ ಇದೆ.. ಕಾರ್ತಿಕ್ ಗಾಗಿ ಆ ಹುಡುಗಿ ಹೊರಗಡೆ ಹರಕೆ ಹೊತ್ತು ಕಾಯ್ತಿದ್ದಾರಂತೆ..

ಈ ವಿಚಾರವನ್ನ ಸ್ನೇಹಿತ್ ಒಂದು ಟಾಸ್ಕ್ ನಲ್ಲಿ ಕಾರ್ತಿಕ್ ಅವರ ವ್ಯಯಕ್ತಿಕ ವಿಚಾರವನ್ನ ಮಾತನಾಡಿದ್ರು.. ಈ ವೇಳೆ ಕಾರ್ತಿಕ್ ಅವರ ಈ ಒಂದು ಲವ್ ವಿಚಾರವನ್ನ ಸ್ನೇಹಿತ್ ಬಿಚ್ಚಿಟ್ಟಿದ್ದಾರೆ.. ಅದೇನೇ ಆಗಿದ್ರೂ ಕಾರ್ತಿಕ್ ಅವರು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ.. ಕೆಲ ಧಾರಾವಾಹಿ ಸಿನಿಮಾಗಳಲ್ಲಿ ನಟಿಸಿರುವ ಕಾರ್ತಿಕ್ ಅವರು ಒಂದು ಸಣ್ಣ ಬ್ರೇಕ್ ಗೋಸ್ಕರ ಕಾಯ್ತಿದ್ದಾರೆ.. ಅವರಿಗೆ ಸಿನಿಮಾ ಮಾಡಬೇಕೆನ್ನುವ ಆಸೆ ತುಂಬಾನೆ ಇದೆ.‌. ಸಧ್ಯ ಅವರ ಮನೆಯಲ್ಲಿ ತಾಯಿ ಇದ್ದಾರೆ.. ತಂಗಿಗೆ ಮದುವೆ ಆಗಿದ್ದು ಅವರೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ತಂಗಿಗೆ ಸೀಮಂತ ಶಾಸ್ತ್ರ ಮಾಡಿದ ಫೋಟೋಗಳನ್ನ ಬಿಗ್ ಬಾಸ್ ಮನೆಯೊಳಗಿರುವ ಅಣ್ಣ ಕಾರ್ತಿಕ್ ಗೆ ಬಿಗ್ ಬಾಸ್ ವಿಶೇಷವಾಗಿ ಫೋಟೋಗಳನ್ನ ಕಳುಹಿಸಿಕೊಟ್ಟಿದ್ರು.. ಇದು ಕಾರ್ತಿಕ್ ಅವರ ಜೀವನದ ಏಳು ಬೀಳಿನ ರಿಯಲ್ ಲವ್ ಸ್ಟೋರಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.