ತನಿಷಾ ಒಬ್ಳು ಕಚಡಾ ಎಂದ ವರ್ತೂರ್ ಸಂತೋಷ್..

0 views

ಬಿಗ್ ಬಾಸ್ ಸೀಸನ್ ಹತ್ತರ ಮುಗಿಯಲಾರದ ಜಗಳಗಳು ನಿನ್ನೆಯೂ ಮುಂದುವರೆದಿದೆ.. ಅತ್ತ ಈ ವಾರ ಬಿಗ್ ಬಾಸ್ ಲೋಕ ಎಂಬ ಟಾಸ್ಕ್ ನೀಡಿದ್ದು ಸಂಗೀತಾ ತನಿಷಾ ಪ್ರತಾಪ್ ಅವಿನಾಶ್ ಕಾರ್ತಿಕ್ ಸಿರಿ ಅವರು ಮೊದಲು ರಾಕ್ಷಸರಾದರೆ ಅತ್ತ ವಿನಯ್ ವರ್ತೂರು ಸಂತೋಷ್ ತುಕಾಲಿ ಸಂತೋಷ್ ಮೈಕಲ್ ನಮ್ರತಾ ಪವಿ ಪೂವಪ್ಪ ಅವರು ಗಂಧರ್ವರಾಗಿ ರಾಕ್ಷಸರು ಹೇಳಿದ ಮಾತುಗಳನ್ನು ಕೇಳುತ್ತಿದ್ದರು.. ಇತ್ತ ರಾಕ್ಷಸರು ತಮ್ಮ ರಾಕ್ಷತನವನ್ನು ತೋರಿ ಗಂಧರ್ವರ ಕೈಯಲ್ಲಿ ಕಸ ಎತ್ತಿಸೋದ್ರಿಂದ ಕಾಲು ಒತ್ತಿಸಿಕೊಳ್ಳುವವರೆಗೆ ಕೆಲಸ ಮಾಡುಸಿಕೊಂಡರು.. ಇನ್ನು ಎರಡನೇ ದಿನ ಮುಕ್ತಾಯದ ವೇಳೆಗೆ ಪಾತ್ರಗಳು ಅದಲಿ ಬದಲಿಯಾದವು.. ರಾಕ್ಷಸರೆಲ್ಲರೂ ಗಂಧರ್ವರಾದರು.. ಗಂಧರ್ವರೆಲ್ಲರೂ ರಾಕ್ಷಸರಾದರು.. ಮನಸ್ಸಿನಲ್ಲಿ ಇದ್ದ ಕೋಪವನ್ನೆಲ್ಲಾ ವರ್ತೂರ್ ಸಂತೋಷ್ ಅವರ ತಂಡ ಸಂಗೀತಾ ಅವರ ತಂಡದ ಮೇಲೆ ತೀರಿಸಿಕೊಂಡಿತು.. ಇನ್ನು ಸಂಗೀತಾ ಅವರು ರಾಕ್ಷಸರಾಗಿದ್ದ ಸಮಯದಲ್ಲಿ ಮನೆಯಲ್ಲಿ ಇದ್ದ ಗಂಧರ್ವರ ಪ್ರೋಟೀನ್ ಗಳನ್ನು ಮುಚ್ಚಿಟ್ಟಿದ್ದರು.. ಆ ದಿನ ಮುಗಿದ ಬಳಿಕ ವರ್ತೂರು ಸಂತೋಷ್ ಅವರು ಪ್ರೋಟೀನ್ ಗಳನ್ನು ಕೇಳಿದಾಗ ಒಂದಷ್ಟು ಜಗಳಗಳಿ ನಡೆದು ಮಾತಿನ ಚಕಮಕಿ ಯಾಯಿತು.. ಕೊನೆಗೆ ಸಂಗೀತಾ ಕಣ್ಣೀರಿಟ್ಟು ನಾನೇನು ಮಾಡ್ದೇ ಅಂತ ವರ್ತೂರ್ ಸಂತೋಷ್ ಇಷ್ಟು ಚೀಪ್ ಆಗಿ ಮಾತನಾಡ್ತಾರೆ ಎಂದರು.. ಅದಕ್ಕೆ ತನಿಷಾ ಕೂಡ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು..

ಇತ್ತ ಎಲ್ಲಾ ಮುಗಿದ ಮೇಲೆ ವಿನಯ್ ಅವರ ತಂಡ ಮಾತನಾಡುತ್ತಾ ಕುಳಿತಿದ್ದಾಗ ತನಿಷಾ ಸರಿ ಇಲ್ಲ ಎಂದು ವಿನಯ್ ಹೇಳಿದ್ದು ಚೀಪೆಸ್ಟ್ ಮೈಂಡ್ ಸೆಟ್ ಅವಳು ಎಂದು ಹೇಳಿದ್ದಾರೆ.. ಈ ಮಾತನ್ನು ಕೇಳಿಸಿಕೊಂಡ ವರ್ತೂರ್ ಸಂತೋಷ್ ನಿಜವಾಗಿಯೂ ತನಿಷಾ ಒಬ್ಬ ಕಚಡಾ ಎಂದಿದ್ದಾರೆ.. ಇಷ್ಟು ದಿನ ಬೆಂಕಿ ಬೆಂಕಿ ಎನ್ನುತ್ತಾ ಸ್ನೇಹದಿಂದ ಇದ್ದ ವರ್ತೂರು ಸಂತೋಷ್ ಅವರು ಇದೀಗ ತನಿಷಾ ಅವರನ್ನು ಕಚಡಾ ಎಂದಿದ್ದು ಮುಂದೆ ಈ ವಿಚಾರ ತನಿಷಾಗೆ ತಿಳಿದರೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಜಗಳ ನಡೆಯೋದ್ರಲ್ಲಿ ಸಂಶಯವೇ ಇಲ್ಲ..

ಇನ್ನು ಇತ್ತ ತನಿಷಾ ಕೂಡ ವರ್ತೂರು ಸಂತೋಷ್ ಅವರ ಬಗ್ಗೆ ಮಾತನಾಡಿದ್ದು ಇಷ್ಟು ದಿನ ವರ್ತೂರ್ ಸಂತೋಷ್ ನ್ಯಾಯ ಅಂತ ಮಾತನಾಡ್ತಾ ಇದ್ರು.. ಈಗ ತಂಡ ಅಂತ ಬಂದಾಗ ಏನೂ ಮಾತನಾಡ್ತಿಲ್ಲ.. ಇಷ್ಟು ದಿನ ಅವರು ಇಷ್ಟವಾಗಿದ್ದೇ ನ್ಯಾಯದ ಪರ ಮಾತನಾಡ್ತಾರೆ ಅಂತ.. ಎಂದಿದ್ದಾರೆ.. ಒಟ್ಟಿನಲ್ಲಿ ಪ್ರೀತಿಸ್ನೇಹ ಅಂತ ಶುರುವಾಗಿದ್ದ ತನಿಷಾ ಹಾಗೂ ವರ್ತೂರು ಸಂತೋಷ್ ಅವರ ಬೆಂಕಿಯ ಬಲೆ ಈಗ ಸುಟ್ಟು ಹೋಗುವ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ಸುಳ್ಳಲ್ಲ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.