ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಪವಿ ಪೂವಪ್ಪಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

0 views

ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಪವಿ ಪೂವಪ್ಪ ಇದೀಗ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿ ಹೊರ ನಡೆದಿದ್ದಾರೆ.. ಹೌದು ಬಿಗ್‌ ಬಾಸ್‌ ಸೇಸನ್‌ ಹತ್ತು ಯಶಸ್ವಿಯಾಗಿ ಹತ್ತನೇ ವಾರ ಪೂರೈಸಿದ್ದು ಇದೀಗ ಹನ್ನೊಂದನೇ ವಾರಕ್ಕೆ ಕಾಲಿಟ್ಟಿದೆ.. ಇನ್ನು ಕಳೆದ ವಾರ ಬಿಗ್‌ ಬಾಸ್‌ ಮನೆಯಲ್ಲಿ ಮೈಕಲ್‌ ಸಂಗೀತಾ ಪ್ರತಾಪ್‌ ಕಾರ್ತಿಕ್‌ ಸೇರಿದಂತೆ ಘಟಾನುಘಟಿ ಸ್ಪರ್ಧಿಗಳೇ ನಾಮಿನೇಟ್‌ ಆಗಿದ್ದು ಅದರಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಮನೆಗೆ ಎಂಟ್ರಿ ನೀಡಿದ್ದ ಪವಿ ಪೂವಪ್ಪ ಎಲಿಮಿನೇಟ್‌ ಆಗಿ ಮೂರೇ ವಾರಕ್ಕೆ ಮನೆಯಿಂದ ಹೊರ ನಡೆದಿದ್ದಾರೆ.. ಹೌದು ಪವಿ ಪೂವಪ್ಪ ಒಬ್ಬ ಮಾಡೆಲ್‌ ಆಗಿದ್ದು ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ಐವತ್ತು ದಿನಗಳ ನಂತರ ವೈಲ್ಡ್‌ ಕಾರ್ಡ್‌ ಮೂಲಕ ಅದ್ಧೂರಿಯಾಗಿ ಒಳಗೆ ಹೋಗಿದ್ದರು..

ಆದರೆ ನಿರೀಕ್ಷಿಸಿದಂತೆ ಪವಿ ಪೂವಪ್ಪ ಅವರ ಆಟ ಇರಲಿಲ್ಲ.. ಅವರಿಂದ ಬಿಗ್‌ ಬಾಸ್‌ ಗೆ ಯಾವುದೇ ಟಿ ಆರ್‌ ಪಿ ಕಂಟೆಂಟ್‌ ಆಗಲಿ ಅಥವಾ ಪ್ರೇಕ್ಷಕರಿಗೆ ಮನರಂಜನೆಯಂತಹ ಕಂಟೆಂಟ್‌ ಆಗಲಿ ಸಿಗಲಿಲ್ಲ.. ಇನ್ನು ಮೊದಲ ವಾರ ನಾಮಿನೇಷನ್‌ ನಿಂದ ಹೊರಗಿಟ್ಟು ಅವಕಾಶ ಕೊಟ್ಟಿದ್ದರು ಬಿಗ್‌ ಬಾಸ್..‌ ಆದರೆ ಪವಿ ಪೂವಪ್ಪರಿಂದ ಯಾವುದೇ ಉಪಯೋಗವಾಗದ ಕಾರಣ ಮೂರೇ ವಾರಕ್ಕೆ ಅವರನ್ನು ಎಲಿಮಿನೇಟ್‌ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ.. ಇನ್ನು ಪವಿ ಪೂವಪ್ಪ ಅವರ ಸಂಭಾವನೆಯ ವಿಚಾರಕ್ಕೆ ಬರುವುದಾದರೆ ಇದ್ದದ್ದು ಮೂರೇ ವಾರವಾದರೂ ಒಂದು ದೊಡ್ಡ ಮೊತ್ತದ ಸಂಭಾವನೆ ಪಡೆದು ಹೊರ ಬಂದಿದ್ದಾರೆ.. ಹೌದು ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಬಹುತೇಕರಿಗೆ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗುತ್ತದೆ.. ಇನ್ನು ಕಳೆದ ಸೀಸನ್‌ ಗಳಲ್ಲಿ ಕೆಲವರಿಗೆ ವರ್ಷಕ್ಕೆ ಅಗ್ರಿಮೆಂಟ್‌ ಮಾಡಿಕೊಂಡಿದ್ದೂ ಉಂಟು.. ಆದರೆ ಈ ಬಾರಿ ಎಲ್ಲಾ ಸ್ಪರ್ಧಿಗಳಿಗೂ ವಾರದ ಸಂಭಾವನೆಯೇ ನಿಗಧಿಯಾಗಿದ್ದು ಇದ್ದಷ್ಟು ವಾರಗಳ ಲೆಕ್ಕಾಚಾರ ಮಾಡಿ ಸಂಭಾವನೆ ನೀಡಲಾಗುತ್ತಿದೆ..

ಇನ್ನು ಹೊರಗೆ ಮಾಡೆಲ್‌ ಆಗಿ ಗುರುತಿಸಿಕೊಂಡು ಒಂದಷ್ಟು ನಿರೀಕ್ಷೆಯ ಜೊತೆಗೆ ಬಿಗ್‌ ಬಾಸ್‌ ಮನೆಗೆ ಕಾರ್‌ ನಲ್ಲಿಯೇ ಅದ್ದಧೂರಿಯಾಗಿ ಕಳುಹಿಸಿದ್ದ ಪವಿ ಪೂವಪ್ಪ ಅವರಿಗೂ ದೊಡ್ಡ ಮಟ್ಟದ ಸಂಭಾವನೆಯನ್ನೇ ಆಫರ್‌ ಮಾಡಿದ್ದರು.. ಹೌದು ಪವಿ ಪೂವಪ್ಪ ಅವರಿಗೆ ಒಂದು ವಾರಕ್ಕೆ ಬರೋಬ್ಬರಿ ನಲವತ್ತು ಸಾವಿರ ರೂಪಾಯಿ ಸಂಭಾವನೆಯನ್ನು ನಿಗಧಿ ಮಾಡಿದ್ದರು.. ಆದರೆ ಪವಿ ಪೂವಪ್ಪ ಇದ್ದದ್ದು ಮೂರೇ ವಾರವಾದ ಕಾರಣ ಅವರಿಗೆ ಮೂರು ವಾರಗಳಿಗೆ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ದೊರೆತ್ತಿದ್ದು ಆ ಸಂಭಾವನೆಯ ಜೊತೆಗೆ ಮನೆಗೆ ತೆರಳಿದ್ದಾರೆ.. ಇನ್ನು ಬಿಗ್‌ ಬಾಸ್‌ ಗೆ ಹೋಗಿ ಬಂದ ಸ್ಪರ್ಧಿಗಳು ಸಾಮಾನ್ಯವಾಗಿ ಕಲರ್ಸ್‌ ಕನ್ನಡ ವಾಹಿನಿಯ ಶೋಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಮುಂಬರುವ ದಿನಗಳಲ್ಲಿ ಪವಿ ಪೂವಪ್ಪ ಅವರೂ ಕೂಡ ಕಲರ್ಸ್‌ ಕನ್ನಡ ವಾಹಿನಿಯ ಶೋಗಳಲ್ಲಿ ಕಾಣಿಸಿಕೊಂಡರೆ ಅಚ್ಚರಿ ಇಲ್ಲ..

ಇನ್ನು ಬಿಗ್‌ ಬಾಸ್‌ ಗೆ ಹೋಗಿ ಬಂದ ಸ್ಪರ್ಧಿಗಳು ಒಂದಷ್ಟು ಜನ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಲಾವಿದರಾಗಿ ಬೇರೆ ಬೇರೆ ಧಾರಾವಾಹಿ ಸಿನಿಮಾಗಳಲ್ಲಿ ಅವಕಾಶ ಪಡೆದು ಬದುಕು ಕಟ್ಟಿಕೊಂಡರೆ ಮತ್ತೆ ಕೆಲ ಬಿಗ್‌ ಬಾಸ್‌ ಸದಸ್ಯರು ಹೆಸರೂ ಸಹ ನೆನಪಿಲ್ಲದ ಹಾಗೆ ಮಾಯವಾಗಿ ಹೋದರು.. ಇನ್ನು ಸಿನಿಮಾ ರಂಗದಲ್ಲಿ ನಾಯಕಿಯಾಗಬೇಕು ಎಂದು ಕನಸು ಇಟ್ಟುಕೊಂಡು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಪವಿ ಪೂವಪ್ಪ ಅವರು ಬಿಗ್‌ ಬಾಸ್‌ ನಿಂದ ಸಿಕ್ಕ ಹೆಸರನ್ನು ಸರಿಯಾಗಿ ಉಪಯೋಗಿಸಿಕೊಂಡು ಸಿನಿಮಾಗಳಲ್ಲಿ ಅವಕಾಶ ಪಡೆದು ಮಿಂಚುವರಾ.. ಅಥವಾ ಮತ್ತೆ ತಮ್ಮ ಮಾಡೆಲಿಂಗ್‌ ಕ್ಷೇತ್ರವೇ ಸಾಕೆಂದು ಸುಮ್ಮನಾಗುವರಾ ಕಾದು ನೋಡಬೇಕಷ್ಟೇ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.