ವಿನಯ್‌ ನ ನಿಜ ಮುಖ ಬಯಲು ಮಾಡಿದ ಕನ್ನಡ ಕಿರುತೆರೆಯ ಖ್ಯಾತ ನಟಿ.. ವಿನಯ್‌ ನಿಂದ ಜೀವನ ಹಾಳಾದ ಆ ನಟಿ ಯಾರು?

0 views

ಬಿಗ್‌ ಬಾಸ್‌ ಸೀಸನ್‌ ಹತ್ತು ಎನ್ನವುದಕ್ಕಿಂತ ಜಗಳದ ಸೀಸನ್‌ ಹತ್ತು ಎನ್ನವಷ್ಟು ಮಟ್ಟಕ್ಕೆ ಈ ಬಾರಿಯ ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಜಗಳಗಳು ನಡೆಯುತ್ತಲೇ ಇದೆ.. ಈ ಎಲ್ಲಾ ಜಗಳಗಳಿಗೂ ಒಂದು ರೀತಿ ವಿನಯ್‌ ಹಾಗೂ ಸಂಗೀತಾ ಮೂಲ ಕಾರಣರು ಎನ್ನಬಹುದು.. ಮನೆಯಲ್ಲಿ ನಡೆದಿರುವ ಬಹುಪಾಲು ಜಗಳಗಳು ಇವರಿಬ್ಬರಿಂದಲೇ ಶುರುವಾಗಿರೋದು ಎಂದರೂ ತಪ್ಪಲ್ಲ.. ಇನ್ನು ವಿನಯ್‌ ಬಿಗ ಬಾಸ್‌ ಮನೆಗೆ ಬಂದಾಗಿನಿಂದಲೂ ಆಟವಾಗಲಿ ಅಥವಾ ಯಾವುದೇ ಚಟುವಟಿಕೆಯಾಗಲಿ ಅಗ್ರೆಷನ್‌ ನಿಂದಲೇ ಆಡಿದವರು.. ಒಂದು ಕಡೆ ಬಿಗ್‌ ಬಾಸ್‌ ಮನೆಯ ಆನೆ ಎನಿಸಿಕೊಂಡ ವಿನಯ್‌ ಬರುಬರುತ್ತಾ ನೆಗಟಿವ್‌ ಆಗೆಯೇ ಹೆಚ್ಚು ಸುದ್ದಿಯಾದರು.. ಬಳೆ ವಿಚಾರವಾಗಿಯಂತೂ ದೊಡ್ಡ ವಿವಾದವನ್ನೇ ಮೈ ಮೇಲೆ ಎಳದುಕೊಂಡ ವಿನಯ್‌ ಕೊನೆಗೆ ರಾಜ್ಯದ ಜನತೆಗೆ ಕ್ಷಮೆ ಕೇಳುವ ಮೂಲಕ ಆ ವಿವಾದವನ್ನು ಮುಕ್ತಾಯ ಮಾಡಿದರು.. ಆದರೆ ಆ ಮನೆಯಲ್ಲಿ ಜಗಳಗಳು ಮಾತ್ರ ಮುಗಿಯಲಿಲ್ಲ.. ನಮ್ರತಾ ಸ್ನೇಹಿತ್‌ ಸಂಗೀತಾ ಕಾರ್ತಿಕ್‌ ತನಿಷಾ ಎಲ್ಲರೂ ಸಹ ಒಂದಲ್ಲಾ ಒಂದು ವಿಚಾರಕ್ಕೆ ಜಗಳಗಳನ್ನು ಆಡಿದವರೇ ಆದರೆ ಹೆಚ್ಚು ಹೈಲೈಟ್‌ ಆಗಿದ್ದು ಮಾತ್ರ ವಿನಯ್..‌ ಬಿಗ ಬಾಸ್‌ ಗೂ ಮುನ್ನ ಹರಹರ ಮಹಾದೇವ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದ ವಿನಯ್‌ ಹಾಗೂ ಸಂಗೀತಾ ಜೋಡಿ ಬಿಗ್‌ ಬಾಸ್‌ ಮನೆಗೆ ಬಂದ ನಂತರ ಈ ರೀತಿ ಒಬ್ಬರಿಗೊಬ್ಬರು ಆಗದೇ ಇರುವವರ ರೀತಿ ಆಡುತ್ತಾರೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.. ಆದರೆ ಹೊರಗೆ ಆದ ಕೆಲ ಮನಸ್ತಾಪಗಳನ್ನು ಬಿಗ್‌ ಬಾಸ್‌ ಮನೆಯೊಳಗೂ ಕ್ಯಾಋಇ ಮಾಡಿಕೊಂಡು ಈ ರೀತಿ ಜಗಳವಾಡುತ್ತಿರೋದು ವಾಹಿನಿಗೆ ಕಂಟೆಂಟ್‌ ಜೊತೆಗೆ ಟಿಆರ್‌ ಪಿ ಯನ್ನೂ ಸಹ ತಂದು ಕೊಡುತ್ತಿದೆ..

ಆದರೆ ನೋಡುಗರಿಗೆ ಮಾತ್ರಬ ಕಿರಿಕಿರಿಯನ್ನುಂಟು ಮಾಡುತ್ತಿರೋದು ಅಷ್ಟೇ ಸತ್ಯ.. ಇನ್ನು ವಿನಯ್‌ ಬಿಗ್‌ ಬಾಸ್‌ ಮನೆಯೊಳಗೆ ಹೋಗುವ ಮುನ್ನ ಮಾಡಿರುವ ದೊಡ್ಡ ತಪ್ಪೊಂದು ಈಗ ಬಯಲಾಗಿದ್ದು ಖುದ್ದು ವಿನಯ್‌ ಅವರಿಂದ ಅನ್ಯಾಯಕ್ಕೊಳಗಾದ ನಟಿಯೇ ಈ ಬಗ್ಗೆ ಮಾತನಾಡಿದ್ದಾರೆ.. ಹೌದು ವಿನಯ್‌ ಹರಹರ ಮಹಾದೇವ ಧಾರಾವಾಹಿ ಮುಗಿಸಿದ ಬಳಿಕ ಕೆಲವೊಂದು ಧಾರಾವಾಹಿಯಲ್ಲಿ ಹಾಗೂ ಕೆಲವೊಂದು ಶೋಗಳಲ್ಲಿ ಕಾಣಿಸಿಕೊಂಡರು.. ಅಂತಹ ಶೋಗಳಲ್ಲಿ ಒಂದು ಸುವರ್ಣ ಸೂಪರ್‌ ಜೋಡಿ.. ಈ ಶೋನಲ್ಲಿ ಭಾಗವಹಿಸಿದ್ದ ಮತ್ತೊಂದು ಜೋಡಿ ನಟಿ ಇಳಾ ವಿಟ್ಲ ಅವರೇ ಇದೀಗ ವಿನಯ್‌ ಅವರ ಬಗ್ಗೆ ಗಂಬೀರ ಆರೋಪವೊಂದನ್ನು ಮಾಡಿದ್ದಾರೆ.. ಹೌದು ವಿನಯ್‌ ಈ ಹಿಂದೆ ಕಾಣಿಸಿಕೊಂಡ ಸೂಪರ್‌ ಜೋಡಿ ಶೋನಲ್ಲಿ ತನ್ನ ಕೋಪಕ್ಕೆ ಒಬ್ಬರ ಜೀವನವನ್ನೇ ಹಾಳು ಮಾಡಿದ್ದರು ಎನ್ನಲಾಗುತ್ತಿದೆ.. ಈ ಬಗ್ಗೆ ಖುದ್ದು ನಟಿ ಇಳಾ ವಿಟ್ಲ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ..

ಬಿಗ್ ಬಾಸ್ ಸೀಸನ್ 10.. ನಾನೊಬ್ಳು ಆರ್ಟಿಸ್ಟ್ ಆಗಿ ರಿಯಾಲಿ ಟೀ ಶೋ ಗಳನ್ನ ಮಾಡಿದ್ದಕ್ಕೆ ಹಾಗೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಪೋಸ್ಟ್ ಮಾಡ್ತಿದೀನಿ.. ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು.. ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ 🙏🏻 ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ.. ರಿಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದಾನು ಇಷ್ಟ..  ನಮ್ಮ ಕಿರುತೆರೆ ಹೆಮ್ಮೆ.. ಮೊದ್ಲು ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ.. ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆ..

ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡುಬಂದು ನಮ್ಮತ್ರ ಹೇಳ್ತಾ ಇದ್ರು ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು.. ಆಮೇಲೆ ಅಂತ ಕೆಲಸ ಅವರೇ ಮಾಡೋದು.. ಅವತ್ತು ವಿನಯ್ ಜೊತೆ ನಮ್ಮೆಜಮಾನ್ರು ಆಡಿದಾಗ ಆಟದಲ್ಲಿ ದವಡೆ ಹಲ್ಲು ಮುರಿದ್ರು ಅಷ್ಟು ಸಾಲದು ಅಂತ ರಿಬ್ಬು ಫ್ಯಾಕ್ಚರ್ ಮಾಡಿದ್ರು, ಆದ್ರೂ ಅವರಿಗೆ ನಾವು ಒಂದು ಮಾತು ಏನು ಹೇಳಿಲ್ಲ,, ಶೋ ಮುಗಿದ್ ಮೇಲೆ ನೋವು ಜಾಸ್ತಿ ಆಯ್ತು,, ಆರು ತಿಂಗಳು ಸರಿಯಾಗಿ ಕೆಲಸ ಮಾಡಕ್ಕಾಗ್ದೆ ಆರ್ಯನ್ಸರು ಒದ್ದಾಡಿದ್ದಾರೆ ಡಾಕ್ಟ್ರು ಏನು ಮಾಡಬಾರದು ರೆಸ್ಟ್ ಮಾಡಿ ಅಂತ ಹೇಳಿದ್ರು.. ಅವತ್ತು ನಾನು ಎಷ್ಟು ಕಣ್ಣೀರು ಹಾಕ್ತ ಕೂತಿದ್ದೆ ಅನ್ನೋದು ಭಗವಂತನಿಗೆ ಮಾತ್ರ ಗೊತ್ತು.. ಇದೇ ಪರಿಸ್ಥಿತಿ ಅವರಿಗೆ ಬಂದಿದ್ರೆ ಏನ್ ಮಾಡ್ತಿದ್ರು.. ನಾವು ಕಲಾವಿದರು ಆಗಿ ಹೋಗಿರೋ ಘಟನೆಗಳಿಗೆ ರಿಯಾಕ್ಷನ್ ಕೊಡೋದು,, ದುರಹಂಕಾರದ ಮಾತುಗಳನ್ನ ಆಡೋದು ಒಬ್ಬರಿಗೊಬ್ರು ಜಗಳ ಮಾಡ್ಕೊಂಡು ಲೈಫ್ ಹಾಳ್ ಮಾಡ್ಕೊಳೋದು ಬೇಡ ಎಲ್ಲರೂ ಚೆನ್ನಾಗಿರ್ಲಿ ಅಂತ ಸುಮ್ನೆ ಇದ್ವಿ ಅದ್ರಲ್ಲೂ ಅವರ ತಾಯಿ ತುಂಬಾ ಒಳ್ಳೆ ಮನಸ್ಸು ಇರೋರು ಯಾರ್ ಗೆದ್ರು ಪರ್ವಾಗಿಲ್ಲ ಎಲ್ಲಾ ನನ್ನ ಮಕ್ಕಳೇ ಅಂತ ಹೇಳಿರೋ ಮಾತು ಈಗಲೂ ನನಗೆ ನೆನಪಿದೆ.. ಸೋ ಸ್ವಲ್ಪ ದಿನ ನೋವಿರುತ್ತೆ,ಆಮೇಲೆ ಇರೋದೇ ಜೀವನ ಅಂತ ಸುಮ್ಮನೆ ಇದ್ವಿ..

ಯಾಕೆಂದ್ರೆ ನಮ್ಮಿಂದಾಗಿ ಎಲ್ಲ ಫ್ಯಾಮಿಲಿಯವರು ಅನುಭವಿಸುವುದು ಒಳ್ಳೆ ಲಕ್ಷಣ ಅಲ್ಲ.. ಅವರ ಫ್ಯಾಮಿಲಿ ಮಾತ್ರ ಚೆನ್ನಾಗಿರಬೇಕು ಉಳಿದವರು ಯಕ್ಕುಟ್ ಹೋದ್ರು ಅವರಿಗೆ ತೊಂದರೆ ಇಲ್ಲಅನ್ಸುತ್ತೆ, ಈ ತರ ಹೆದ್ರಿಸೋರಿಗೆ ನಂದೊಂದು ಮಾತು, ಒಂದು ವೇಳೆ ನೀವೇನಾದ್ರೂ ಮಾಡಿದ್ರೆ ಬೇರೆಯವರು ಕಡ್ಲೆಪುರಿ ತಿನ್ಕೊಂಡು ಕೂತಿರ್ತಾರಾ.. ಗೊತ್ತಿಲ್ಲದೆ ಆಟದಲ್ಲಿ ಏನೋ ಒಂದಾದರೆ ಈ ಮನುಷ್ಯನ ಯೋಗ್ಯತೆನೆ ಇಷ್ಟು ಹಾಳಾಗೋಗ್ಲಿ ಅಂತ ಬಿಡಬಹುದು ಆಟದಿಂದ ಹೊರಗೆ ಬಂದ ಮೇಲೆನೂ ಇವ್ರು ನಾ ನಿನ್ನ ಹೊರಗ್ ಹೋದ್ಮೇಲೆ ಸುಮ್ನೆ ಬಿಡಲ್ಲ ನಾನು ಸುಮ್ಮನೆ ಬಿಡಲ್ಲ ಅಂದ್ರೆ ಎದುರುಗಡೆಯವರು ಕೈಕಟ್ಟಿ ಕೂತ್ಕೊಂಡಿರ್ತಾರಾ, ಐಯೋ ದೇವ್ರೇ ಅವರು ಅದಕ್ಕಿಂತ ದೊಡ್ಡ ರೌಡಿಗಳಾಗಿರುತ್ತಾರೆ ಬಿಡ್ತಾರಾ.. ಇವರೆಲ್ಲ ಲೈಫ್ ಹಾಳ್ ಮಾಡ್ಕೊಳಕ್ ಬಂದಿದ್ದಾರಾ ಜೀವನ ಮಾಡ್ಕೊಳ್ಳೋಕೆ ಬಂದಿದ್ದರೋ ಒಂದು ಅರ್ಥ ಆಗ್ತಿಲ್ಲ ಫ್ಯಾಮಿಲಿ ಮುಖ್ಯ ಅಂತ 50ಸರಿ ಹೇಳ್ತಿರಲ್ಲ, ಒಂದು ವೇಳೆ ನೀವೇನಾದರೂ ಮಾಡಿದ್ರಿ ಅಂತ ಇಟ್ಕೊಳಿ ಎದ್ರುಗಡೆ ಅವ್ರು ನಿಮ್ಮನ್ ಏನೋ ಒಂದು ಮಾಡ್ತಾರೆ ಅಲ್ಲಿಗೆ ಯಾರಿಂದ ಯಾರು ಫ್ಯಾಮಿಲಿ ಹಾಳ್ ಮಾಡುದ್ರು ಅಷ್ಟು ತಲೆ ಇಲ್ವಾ ಇವರಿಗೆ ಖರ್ಮ,ಎಲ್ಲಾ ಆದ್ಮೇಲೆ ಏನು ಗೊತ್ತಿಲ್ಲದಂಗೆ ಸಾರಿ ಸರ್ ಸಾರಿ ಸರ್ ಅಂತ ಹೇಳೋದು ಅಷ್ಟೇ..

ನಾನು ಬದಲಾಗಿದ್ದಾರೆ ಅನ್ಕೊಂಡಿದ್ದೆ ಯಾಕೆಂದ್ರೆ ಒಬ್ಬ ಮನುಷ್ಯ ಅಂದಮೇಲೆ ತಪ್ಪು ಮಾಡೋದು ಸಹಜ ಒಂದು ಸಲ ಮಾಡಿದ್ಮೇಲೆ ಮತ್ತೆ ಅದೇ ತಪ್ಪನ್ನು,ಇವರು ಬದಲಾಗಲ್ಲ ಯಾಕೆಂದ್ರೆ ಇಂಥ ಬಿಗ್ ಬಾಸ್ ಅಂತ ಶೋದಲ್ಲೂನು ಕಂಟ್ರೋಲ್ ಇಲ್ದೆ ಮಾತಾಡ್ತಿದ್ದಾರೆ ಅಂದ್ರೆ ಹೊರಗಡೆ ಹೇಗಿರಬಹುದು ಅಷ್ಟೇ ನನ್ನ ಪ್ರಶ್ನೆ, ಭಾಗವಂತ ಇನ್ನಾದರೂ ಒಳ್ಳೆ ಬುದ್ದಿ ಕೊಡ್ಲಿ.. ನನ್ ಜೀವನದಲ್ಲಿ ನಾನು ಯಾರಿಗೂ ಹೆದರೋ ಮಾತಿಲ್ಲ ನನ್ ಯಾರ್ ಸುದ್ದಿಗೂ ಹೋಗಲ್ಲ ಯಾಕೆಂದ್ರೆ ಎಲ್ಲರ ಫ್ಯಾಮಿಲಿ ನು ಚೆನ್ನಾಗಿರಬೇಕು ಹೋಗುವಾಗ ಏನು ತಗೊಂಡ್ ಹೋಗಲ್ಲ ನಾವು ಅಂತ ತಿಳ್ಕೊಂಡಿರೋಳು ಬದುಕಿರೋದು ಇಷ್ಟು ದಿನ ಪ್ರೀತಿ ವಿಶ್ವಾಸ ನಂಬಿಕೆ ಇಂದಾನೆ ಜೀವನ ಮಾಡಬೇಕು ಅನ್ನೋದು,ನನ್ ಸುದ್ದಿಗೆ ಬಂದ್ರೆ ಡು ಆರ್ ಡೈ ಕೆಟ್ಟ ಕೆಲಸ ಮಾಡಿ ನೂರು ದಿನ ಬದುಕುವುದಕ್ಕಿಂತ ಒಳ್ಳೆ ಕೆಲಸ ಮಾಡಿ ಒಂದಿನ ಬದುಕೋದು ಗ್ರೇಟ್..  ಮನ್ಸಲ್ಲಿರೋದನ್ನ ಹೇಳಲೇಬೇಕು ಆಗಲೇ ನಂಗೆ ಸಮಾಧಾನ.. ಎಂದು ಬರೆದುಕೊಂಡಿದ್ದು ಈ ವಿನಯ್‌ ಮೊದಲಿನಿಂದಲೂ ಮತ್ತೊಬ್ಬರ ಜೊತೆ ಬರಿ ಜಗಳ ಕಾಯೋದೇ ಎಂದು ಕೆಲವರು ಅಭಿಪ್ರಾಯ ವ್ಯಕ್ತ ಪಡಿಸಿದರೆ ಮತ್ತೆ ಕೆಲವರು ವಿನಯ್‌ ಅವರು ಇರೋದೇ ಸರಿ ಎನ್ನುತ್ತಿದ್ದಾರೆ.. ಒಟ್ಟಿನಲ್ಲಿ ಬಿಗ್‌ ಬಾಸ್‌ ಮನೆಯ ಆನೆ ಎನಿಸಿಕೊಂಡಿರುವ ವಿನಯ್‌ ಈ ಬಾರಿಯ ಬಿಗ್‌ ಬಾಸ್‌ ಗೆಲ್ತಾರಾ ಅಥವಾ ಫಿನಾಲೆವರೆಗೂನ ಇದ್ದು ಬಿಗ್‌ ಬಾಸ್‌ ಮನೆಯಿಂದ ಹೊರ ಬರ್ತಾರಾ ಕಾದುನೋಡಬೇಕಿದೆ.. ವಿನಯ್‌ ಅವರ ಬಗ್ಗೆ ಅವರ ಆಟದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮೂಲಕ ತಿಳಿಸಿ..